Karnataka News Live November 26, 2024 : SSLC Exam 2025 Time Table: ಕರ್ನಾಟಕದಲ್ಲಿ ಮಾರ್ಚ್24ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಾಧ್ಯತೆ, ಹೀಗಿದೆ ವೇಳಾಪಟ್ಟಿ, ಯಾವ ದಿನ ಯಾವ ವಿಷಯ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 26 Nov 202404:16 PM IST
- SSLC Exam 2025 Time Table: ಕರ್ನಾಟಕದ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯು 2025ರ ಮಾರ್ಚ್ 24ರಿಂದ ಅರಂಭಗೊಂಡು ಏಪ್ರಿಲ್ 17ವರೆಗೂ ಇರಲಿದೆ. ತಾತ್ಕಾಲಿಕ ವೇಳಾಪಟ್ಟಿ ಎರಡು ದಿನದಲ್ಲಿ ಬಿಡುಗಡೆಯಾಗಲಿದ್ದು, ಅಂತಿಮ ವೇಳಾಪಟ್ಟಿ ಡಿಸೆಂಬರ್ ಎರಡನೇ ವಾರ ಪ್ರಕಟವಾಗಲಿದೆ.
Tue, 26 Nov 202402:51 PM IST
- Dharmsthala Laksh Deepotsav 2024: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಡಗರ. ಉಜಿರೆಯಿಂದ ಧರ್ಮಸ್ಥಳದವರೆಗೂ ನಡೆದುಕೊಂಡೇ ಬಂದ ಭಕ್ತರು,ಮಕ್ಕಳ ಖುಷಿ ಹೀಗಿತ್ತು.
- ವರದಿ: ಹರೀಶಮಾಂಬಾಡಿ, ಮಂಗಳೂರು
Tue, 26 Nov 202402:13 PM IST
- ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ ಎನ್ನುವ ಆಶಯದೊಂದಿಗೆ 5 ದಶಕದ ಹಿಂದೆ ಕಾಯಿದೆ ತಂದವರು ಇಂದಿರಾಗಾಂಧಿ. ಇದರ ಬಲದಲ್ಲಿಯೇ ಬಂಡೀಪುರ, ನಾಗರಹೊಳೆಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧವಿದೆ. ಕೇರಳ ಚುನಾವಣೆ ವೇಳೆ ಪ್ರಿಯಾಂಕಾಗಾಂಧಿ ನಿಷೇಧ ತೆರವು ಕುರಿತು ಮಾತನಾಡಿ ಅಜ್ಜಿ ಆಶಯವನ್ನೇ ಪ್ರಶ್ನಿಸಿದರು. ಈ ವಾರದ ಕಾಡಿನ ಕಥೆಯಲ್ಲಿ ಪ್ರಿಯಾಂಕ ಮರೆತ ಕಾಡಿನ ಹಿತ.
Tue, 26 Nov 202401:38 PM IST
- Bangalore Power Cut: ಬೆಂಗಳೂರು ನಗರದ ಹಲವು ಭಾಗಗಳಲ್ಲಿ 2024 ನವೆಂಬರ್ 27 ಮತ್ತು 28ರ ಬುಧವಾರ ಹಾಗೂ ಗುರುವಾರ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
Tue, 26 Nov 202401:11 PM IST
- Pan 2.0 updates: ಈಗಾಗಲೇ ಬಳಕೆಯಲ್ಲಿರುವ ಪ್ಯಾನ್ ಕಾರ್ಡ್ ನ ನವೀಕರಣ ಮಾಡುವ ಪ್ಯಾನ್ 2.0 ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ತೆರಿಗೆದಾರರ ಸೇವೆಗಳನ್ನು ಸರಳೀಕರಿಸಿ, ಕಾರ್ಡ್ ಅನ್ನು ತಂತ್ರಜ್ಞಾನ ಬಲದೊಂದಿಗೆ ಉನ್ನತೀಕರಿಸುವುದು ಯೋಜನೆಯ ಆಶಯ.
Tue, 26 Nov 202411:50 AM IST
- ಧರ್ಮಸ್ಥಳ ಲಕ್ಷದೀಪೋತ್ಸವ 2024: ಲಕ್ಷದೀಪೋತ್ಸವ ಹಿನ್ನೆಲೆ ರಾಜ್ಯಮಟ್ಟದ 45ನೇ ವರ್ಷದ ವಸ್ತುಪ್ರದರ್ಶನ ಮಂಗಳವಾರ ಧರ್ಮಸ್ಥಳದಲ್ಲಿ ಆರಂಭಗೊಂಡಿದೆ. ಸುಮಾರು 318 ವೈವಿಧ್ಯಮಯ ಮಳಿಗೆಗಳು ಈ ವಾರಾಂತ್ಯದವರೆಗೆ ಇಲ್ಲಿರಲಿವೆ.
Tue, 26 Nov 202410:07 AM IST
- Karnataka Golden Chariot 2024-25: ಕರ್ನಾಟಕದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಕರ್ನಾಟಕ ಗೋಲ್ಡನ್ ಚಾರಿಯಟ್ ರೈಲಿನ ಪ್ರವಾಸ ವೇಳಾ ಪಟ್ಟಿಯನ್ನು ಐಆರ್‌ಸಿಟಿಸಿ ಪ್ರಕಟಿಸಿದೆ.
Tue, 26 Nov 202407:48 AM IST
- ಧರ್ಮಸ್ಥಳ ಲಕ್ಷ ದೀಪೋತ್ಸವ 2024 ಸಂಭ್ರಮದ ನಡುವೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಾಧನೆಯೊಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುಟ ಸೇರಿದೆ. ಒಬ್ಬನೆ ವ್ಯಕ್ತಿ ಕಳೆದ 50 ವರ್ಷಗಳಲ್ಲಿ ಅಪೂರ್ವ ಪ್ರಾಚೀನ ಕಲಾತ್ಮಕ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಸಾರ್ವಜನಿಕರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿರುವುದು ದಾಖಲೆಯಾಗಿದೆ ಎಂದು ಪ್ರಮಾಣಪತ್ರ ನೀಡಲಾಗಿದೆ.
Tue, 26 Nov 202406:02 AM IST
SSLC Question paper: ಎಸ್‌ಎಸ್‌ಎಲ್‌ಸಿ ಪ್ರಶ್ನೆಪತ್ರಿಕೆ ವಿನ್ಯಾಸದಲ್ಲಿ ಬದಲಾವಣೆ ಕುರಿತು ತೀರ್ಮಾನ ಆಗಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿಯ ಅಧ್ಯಕ್ಷರಿಂದ ಸ್ಪಷ್ಠೀಕರಣ ಬಂದಿರುವುದಾಗಿ ಕರ್ನಾಟಕ ವಾರ್ತಾ ಇಲಾಖೆ ತಿಳಿಸಿದೆ. ಅದರ ವಿವರ ಇಲ್ಲಿದೆ.
Tue, 26 Nov 202405:35 AM IST
Dharmasthala Laksha Deepotsava 2024: ಇಂದಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ನಡೆಯಲಿದೆ. ಶ್ರೀ ಮಂಜುನಾಥ ಸ್ವಾಮಿ ನೆಲೆವೀಡು ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದು, ಹಬ್ಬದ ವಾತಾವರಣ ಕಂಡುಬಂದಿದೆ. ಈ ದಿನದ ಕಾರ್ಯಕ್ರಮ ವಿವರ ಹೀಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Tue, 26 Nov 202401:57 AM IST
ಬೆಂಗಳೂರಲ್ಲಿ ಸಂಚಾರ ನಿಯಮ ಪಾಲಿಸದೇ ಇದ್ರೆ ದಂಡ ಬೀಳುತ್ತೆ ಎಚ್ಚರ. ಬೆಂಗಳೂರು ಸಂಚಾರ ಪೊಲೀಸರು ನವೆಂಬರ್ 17ರಿಂದ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು, 11340 ಕೇಸ್ ದಾಖಲಿಸಿ 69 ಲಕ್ಷ ರೂ ಸಂಗ್ರಹಿಸಿದ್ದಾರೆ. (ವರದಿ-
ಎಚ್.ಮಾರುತಿ, ಬೆಂಗಳೂರು)
Tue, 26 Nov 202401:29 AM IST
ಬಿಜೆಪಿ ಶಾಸಕ ಮುನಿರತ್ನಗೆ ಮತ್ತೆ ಸಂಕಷ್ಟ ಎದುರಾಗಿದೆ. ಜಾತಿ ನಿಂದನೆ ಪ್ರಕರಣದಲ್ಲಿ ಸಿಕ್ಕ ಆಡಿಯೋ ಕ್ಲಿಪ್‌ನಲ್ಲಿರುವ ಧ್ವನಿ ಮುನಿರತ್ನ ಧ್ವನಿ ಎಂಬುದು ಎಫ್ ಎಸ್ ಎಲ್ ಪರೀಕ್ಷೆಯಲ್ಲಿ ದೃಢವಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
Tue, 26 Nov 202401:10 AM IST
Karnataka Weather Forecast: ಭಾರತೀಯ ಹವಾಮಾನ ಇಲಾಖೆಯ ಹವಾಮಾನ ವರದಿ ಪ್ರಕಾರ ಕರ್ನಾಟಕ ಹವಾಮಾನ ಇಂದು ಬಹುತೇಕ ಒಣಹವೆ ಇರಲಿದೆ. ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು ಇರಲಿದ್ದು, ಮೋಡಕವಿದ ವಾತಾವರಣ ಇರಲಿದೆ. ಬೀದರ್ ಚಳಿ ಹೆಚ್ಚು ಕಾಡಲಿದ್ದು, ಕರ್ನಾಟಕದ ಉಳಿದೆಡೆ ಸಾಮಾನ್ಯಕ್ಕಿಂತ ಕಡಿಮೆ ಉಷ್ಣಾಂಶ, ಒಣಹವೆ ಎಂದಿದೆ.