ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live October 20, 2024 : Rain Alert: ನಿಲ್ಲುತ್ತಿಲ್ಲ ವರುಣನ ಆರ್ಭಟ, ಈ ಜಿಲ್ಲೆಗಳಲ್ಲಿ ನಾಳೆಯೂ ಗುಡುಗು ಸಹಿತ ಮಳೆ; ಕರ್ನಾಟಕ ಹವಾಮಾನ ಹೀಗಿದೆ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 20 Oct 202402:46 PM IST
ಕರ್ನಾಟಕ News Live: Rain Alert: ನಿಲ್ಲುತ್ತಿಲ್ಲ ವರುಣನ ಆರ್ಭಟ, ಈ ಜಿಲ್ಲೆಗಳಲ್ಲಿ ನಾಳೆಯೂ ಗುಡುಗು ಸಹಿತ ಮಳೆ; ಕರ್ನಾಟಕ ಹವಾಮಾನ ಹೀಗಿದೆ
- ಕರ್ನಾಟಕದಲ್ಲಿ ಹಿಂಗಾರು ಮಳೆಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯಕ್ಕೆ ವರುಣನ ಅಬ್ಬರ ಕಡಿಮೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಅದರಂತೆ ಸೋಮವಾರೂ ಇದೇ ಮಳೆ ಮುಂದುವರಿಯಲಿದ್ದು, ಜನರು ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಅಕ್ಟೋಬರ್ 22ರವರೆಗೂ ರಾಜ್ಯದ ಉತ್ತರ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
Sun, 20 Oct 202410:53 AM IST
ಕರ್ನಾಟಕ News Live: ಮುಡಾದಲ್ಲಿ 30 ಗಂಟೆ ದಾಖಲೆಗಳ ಜಾಲಾಡಿದ ಇಡಿ; ವೈಟ್ನರ್ ಹಾಕಿ ತಿದ್ದಿದ್ದ ಸಿಎಂ ಪತ್ನಿ ಪತ್ರ ವಶಕ್ಕೆ ಪಡೆದ ಅಧಿಕಾರಿಗಳು
- ಮುಡಾ ಹಗರಣಕ್ಕೆ ಸಂಬಂಧಿಸಿ ಕಚೇರಿಯಲ್ಲಿ ಎರಡು ದಿನಗಳ ಕಾಲ ತಲಾಶ್ ನಡೆಸಿದ ಇ.ಡಿ ಅಧಿಕಾರಿಗಳು, ಕಳೆದ ತಡರಾತ್ರಿವರೆಗೂ ಶೋಧ ನಡೆಸಿದರು. ತನಿಖೆಗೆ ಬೇಕಿರುವಂತಹ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
Sun, 20 Oct 202408:06 AM IST
ಕರ್ನಾಟಕ News Live: ಬೆಂಗಳೂರಿನಲ್ಲಿ ಮತ್ತೆ ಮಳೆ ಆರಂಭ; ತಡ ರಾತ್ರಿ ಆರಂಭವಾದ ಮಳೆಗೆ ಸಿಲಿಕಾನ್ ಸಿಟಿ ತತ್ತರ, ಎಚ್ಚರ.. ಕಟ್ಟೆಚ್ಚರ..
- ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು ವರುಣ ರಾಯಣಿಗೆ ಹಿಡಿ ಶಾಪ ಹಾಕುವಂತಾಗಿದೆ. ಇಂದೂ ಸಹ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ವರದಿ-ಎಚ್. ಮಾರುತಿ)
Sun, 20 Oct 202404:47 AM IST
ಕರ್ನಾಟಕ News Live: ಮತ್ತೊಂದು ಚಂಡಮಾರುತದ ಆತಂಕ, ಉತ್ತರ-ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ; ಕರ್ನಾಟಕದ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
- Heavy Rain In Karnataka: ಭಾನುವಾರವಾದ ಇಂದು (ಅಕ್ಟೋಬರ್ 20) ಕೂಡ ಹೆಚ್ಚಿನ ಮಳೆಯಾಗಲಿದ್ದು, ಬೆಂಗಳೂರು ಸೇರಿದಂತೆ ಒಟ್ಟು 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
Sun, 20 Oct 202404:24 AM IST
ಕರ್ನಾಟಕ News Live: Bengaluru Weather: ಊಟಿಯಂತಾದ ಉದ್ಯಾನನಗರಿ, ಹಳದಿ ಅಲರ್ಟ್ ಘೋಷಣೆ, ಅಕ್ಟೋಬರ್ 23-25ರಂದು ಭಾರಿ ಮಳೆ ಮುನ್ಸೂಚನೆ
- Bengaluru weather: ಅಕ್ಟೋಬರ್ 20ರಿಂದ 25ರವರೆಗೆ ಬೆಂಗಳೂರಿನ ಮಳೆಯ ಕುರಿತು ಹವಾಮಾನ ಇಲಾಖೆ ವಾರದ ಮುನ್ಸೂಚನೆ ಪ್ರಕಟಿಸಿದೆ. ಭಾನುವಾರ ಮತ್ತು ಸೋಮವಾರ ಗುಡುಗು ಸಹಿತ ಸಾಧಾರಣ ಮಳೆ ಸುರಿಯಲಿದೆ. ಅಕ್ಟೋಬರ್ 23-25ರಂದು ನಗರದಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ.