Karnataka News Live October 6, 2024 : ಮುಡಾ ಕಡತ ನಾಪತ್ತೆ ಪ್ರಕರಣ: ಸಚಿವ ಭೈರತಿ ಸುರೇಶ್ ವಿರುದ್ಧವೂ ಸ್ನೇಹಮಯಿ ಕೃಷ್ಣ ದೂರು
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 06 Oct 202402:29 PM IST
- ಭೈರತಿ ಸುರೇಶ್ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಮುಡಾದಿಂದ ದಾಖಲೆ ಕೊಂಡೊಯ್ದಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಈ ದಾಖಲೆಗಳನ್ನು ಇಟ್ಟುಕೊಂಡು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
Sun, 06 Oct 202401:36 PM IST
- ವಿಜಯಪುರ ಜಿಲ್ಲೆ ಸಿಂದಗಿಯ ಸಾರಂಗಮಠವು ವಿಜ್ಞಾನ ಹಾಗೂ ಕೃಷಿ ಕ್ಷೇತ್ರದ ಸಾಧಕರಿಗೆ ಭಾಸ್ಕರಾಚಾರ್ಯ ಪ್ರಶಸ್ತಿ ನೀಡುತ್ತಾ ಬಂದಿದ್ದು. ಈ ಬಾರಿ ಕೃಷಿ ವಿಜ್ಞಾನಿ ಡಾ.ಎಸ್.ಅಯ್ಯಪ್ಪನ್ ಅವರನ್ನು ಆಯ್ಕೆ ಮಾಡಿದೆ.
Sun, 06 Oct 202412:58 PM IST
- ದಸರಾ ಹಾಗೂ ದೀಪಾವಳಿ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಹುಬ್ಬಳ್ಳಿ ವಲಯವು ಬೆಂಗಳೂರು ಹಾಗೂ ಮೈಸೂರಿನಿಂದ ಬೆಳಗಾವಿ, ವಿಜಯಪುರಕ್ಕೆ ವಿಶೇಷ ರೈಲು ಓಡಿಸಲಿದೆ. ಇದರ ವಿವರ ಇಲ್ಲಿದೆ.
Sun, 06 Oct 202411:12 AM IST
- ಒಳ್ಳೆಯ ಸಂಬಳದ ಉದ್ಯೋಗ ಬೇಕು ಅಂದ್ರೆ ಅಷ್ಟು ಸುಲಭವಿಲ್ಲ. ಕೆಲವೊಮ್ಮೆ ಅದೃಷ್ಟವಿದ್ದರೆ ದೊಡ್ಡ ಕಂಪನಿಯಿಂದ ಅನಿರೀಕ್ಷಿತ ಆಫರ್ ಬಂದುಬಿಡುತ್ತದೆ. ಇಲ್ಲಿ ಕಂಪ್ಯೂಟರ್ ಸೈನ್ಸ್ ಓದದ ಟೆಕ್ಕಿಯೊಬ್ಬರಿಗೆ ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆಗೆ ಬಂದಿರುವ ಆಫರ್ ನೆಟ್ಟಿಗರ ಗಮನ ಸೆಳೆದಿದೆ.
Sun, 06 Oct 202410:07 AM IST
- Bengaluru Marathahalli Bridge: ಬೆಂಗಳೂರು ನಗರದ ಮಾರತ್ತಹಳ್ಳಿ ಬ್ರಿಡ್ಜ್ ಮೇಲೆ 10 ಗಂಟೆಗಳ ನಿರ್ಬಂಧ ಹೇರಲಾಗಿದೆ. ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಬೆಂಗಳೂರು ಪೊಲೀಸರು ಸೂಚಿಸಿದ್ದಾರೆ. ನಿರ್ಬಂಧದ ಸಮಯ ಮತ್ತು ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ.
Sun, 06 Oct 202409:38 AM IST
- ಬೆಂಗಳೂರಿನ ಸೋಸಲೆ ವ್ಯಾಸರಾಜ ಮಠದಲ್ಲಿ ನವರಾತ್ರಿ ಸಡಗರ ಜೋರಾಗಿದೆ. ಭಾನುವಾರ ಸಂಜೆ ಯುವ ಪ್ರತಿಭೆಗಳ ಕಛೇರಿ ವಿಶೇಷವಾಗಿರಲಿದೆ. ಇದರ ವಿವರ ಇಲ್ಲಿದೆ.
Sun, 06 Oct 202408:48 AM IST
- Mangaluru News: ಮಂಗಳೂರಿನ ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸಹೋದರ ಮುಮ್ತಾಜ್ ನಾಪತ್ತೆಯಾಗಿದ್ದಾರೆ. ಆದರೆ ಮುಮ್ತಾಜ್ ಕಾರು ಕೂಳೂರಿನ ಸೇತುವೆ ಮೇಲಿದ್ದರೂ ಅವರು ಎಲ್ಲೂ ಕಂಡಿಲ್ಲ. ಹೀಗಾಗಿ, ಅವರು ಸೇತುವೆಯಿಂದ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.
Sun, 06 Oct 202408:25 AM IST
- Shivajinagar Metro Station: ಬೆಂಗಳೂರಿನ ಶಿವಾಜಿನಗರ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣದ ಮೇಲೆ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಾಣವಾಗಲಿದೆ. ಇದರಲ್ಲಿ ನಾಗರಿಕರಿಗೆ ಸಾಂಸ್ಕೃತಿಕ ಸೌಲಭ್ಯ ಸಿಗಲಿದೆ. ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಬೆನ್ನಲ್ಲೇ ಈ ಕೆಲಸ ಶುರುವಾಗಲಿದೆ.
Sun, 06 Oct 202408:22 AM IST
- ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಕುರಿತು ಚರ್ಚೆ ನಡೆಯಲಿದೆ. ಹುತ್ತಕ್ಕೆ ಕೈ ಹಾಕಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ? ಮತ್ತೆ ವೀರಶೈವ ಒಕ್ಕಲಿಗರ ಹೋರಾಟ ಖಚಿತವೇ? ಇಲ್ಲಿದೆ ವಿವರ. (ವರದಿ-ಎಚ್.ಮಾರುತಿ)
Sun, 06 Oct 202408:15 AM IST
- Mysore Dasara 2024 pet Show ಮೈಸೂರು ದಸರಾದಲ್ಲಿ ವೈಯ್ಯಾರದಿಂದ ಬಳುಕುವ ಭಿನ್ನ ತಳಿಯ ಶ್ವಾನಗಳದ್ದೇ ಆಕರ್ಷಣೆ. ನಾನಾ ಭಾಗಗಳಿಂದ ತಮ್ಮ ಪ್ರೀತಿಯ ನಾಯಿಗಳನ್ನು ಕರೆದು ತಂದಿದ್ದರು. ಸ್ವತಃ ಸುಧಾಮೂರ್ತಿ ಅವರೂ ತಮ್ಮ ಶ್ವಾನದೊಂದಿಗೆ ಬಂದದ್ದು ವಿಶೇಷ.
Sun, 06 Oct 202407:47 AM IST
- ಬೆಂಗಳೂರು ಸಂಚಾರ ದಟ್ಟಣೆಯಿಂದ ನಿತ್ಯ ಸಂಚರಿಸುವವರಿಗೆ ಕಿರಿಕಿರಿ ಆಗುವುದು ಒಂದು ಕಡೆಯಾದರೂ ಇದರಿಂದ ಆರ್ಥಿಕವಾಗಿಯೂ ನಷ್ಟವಾಗುತ್ತಿದೆ. ಇದರ ಪ್ರಮಾಣ ಎಷ್ಟು ಎನ್ನುವುದನ್ನು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Sun, 06 Oct 202406:54 AM IST
- Ashwini Vaishnaw: ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನಲ್ಲಿ ಉಪನಗರ ರೈಲ್ವೆ ನೆಟ್‌ವರ್ಕ್‌ಗೆ ಸಂಬಂಧಿಸಿ ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿದರು.
Sun, 06 Oct 202406:08 AM IST
- Indian Railways Namo Bharat Train ಕರ್ನಾಟಕದಲ್ಲೂ ಸೆಮಿ ಹೈ ಸ್ಪೀಡ್ ನಮೋ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಸಿದ್ದತೆ ನಡೆದಿದ್ದು. ಬೆಂಗಳೂರಿನಿಂದ ಮೈಸೂರು ಹಾಗೂ ತುಮಕೂರು ನಗರಗಳಿಗೆ ಈ ರೈಲುಗಳು ಸಂಚರಿಸಲು ಯೋಜಿಸಲಾಗುತ್ತಿದೆ.
Sun, 06 Oct 202404:29 AM IST
- Bengaluru Rains: ಬೆಂಗಳೂರಿನಲ್ಲಿ ಕಳೆದ ಎರಡ್ಮೂರು ದಿನಗಳಿಂದ ಭರ್ಜರಿ ಮಳೆಯಾಗುತ್ತಿದೆ. ಅಪಾರ್ಟ್ಮೆಂಟ್ಗೆ ನೀರು ನುಗ್ಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಸರಾಸರಿ 36 ಮಿಲಿ ಮೀಟರ್ ಮಳೆ ದಾಖಲಾಗಿದೆ.
Sun, 06 Oct 202404:23 AM IST
Mysore Heritage Walk: ಪುರಭವನದಿಂದ ಪ್ರಾರಂಭವಾಗಿ ದೊಡ್ಡ ಗಡಿಯಾರ, ಮೇಸನ್ ಕ್ಲಬ್, ಚಾಮರಾಜ ಒಡೆಯರ್ ವೃತ್ತ ಅರಮನೆ, ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ ಕೃಷ್ಣರಾಜೇಂದ್ರ ಆಸ್ಪತ್ರೆ, ಮೈಸೂರು ಮೆಡಿಕಲ್ ಕಾಲೇಜು, ಸರ್ಕಾರಿ ಆಯುರ್ವೇದ ಕಾಲೇಜು, ಗಾಂಧಿ ವೃತ್ತ ಹಾದು ರಂಗಾಚಾರ್ಲು ಪುರಭವನ ಹತ್ತಿರ ಪಾರಂಪರಿಕನಡಿಗೆ ಮುಕ್ತಾಯಗೊಂಡಿತು.
Sun, 06 Oct 202403:14 AM IST
- Mangaluru News: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ದೇವಶ್ಯ ಮೂಡೂರು ಎಂಬಲ್ಲಿ 69 ವರ್ಷಗಳ ಹಿಂದೆ ಆರಂಭಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳಿಸಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ತಂಡವೇ ‘ಶಾರ್ದೂಲ ವೇಷ’ ಧರಿಸಿ ಹಣ ಸಂಗ್ರಹಿಸುತ್ತಿರುವುದು ವಿಶೇಷ.
Sun, 06 Oct 202402:06 AM IST
- Heavy Rainfall in Karnataka: ಕರ್ನಾಟಕದಲ್ಲಿ ಅಕ್ಟೋಬರ್ 6ರಿಂದ ಅಕ್ಟೋಬರ್ 12ರವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.