Karnataka News Live October 8, 2024 : ಅಪ್ರಾಪ್ತ ವಯಸ್ಸಿನ ಮಗಳಿಂದ ಗೇರ್ ಸೈಕಲ್ ಕಳ್ಳತನ ಮಾಡಿಸ್ತಿದ್ದವ ಅಂದರ್; ಪಾಲಿಷ್ ನೆಪದಲ್ಲಿ 1.25 ಕೆಜಿ ಚಿನ್ನ ಎಗರಿಸಿದ್ದ ಭೂಪ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 08 Oct 202404:48 PM IST
- Bengaluru Police: ಅಪ್ರಾಪ್ತ ವಯಸ್ಸಿನ ಮಗಳ ಮೂಲಕ ಗೇರ್ ಸೈಕಲ್ ಕಳ್ಳತನ ಮಾಡಿಸುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಪಾಲಿಷ್ ಮಾಡಿಕೊಡುವ ನೆಪದಲ್ಲಿ 1.25 ಕೆಜಿ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. (ವರದಿ-ಎಚ್.ಮಾರುತಿ)
Tue, 08 Oct 202404:34 PM IST
- ದಸರಾಕ್ಕೂ ಆನೆಗಳಿಗೂ ಶತಮಾನದ ನಂಟು. ಎಲ್ಲೆಡೆ ಹೊಸ ಪೀಳಿಗೆ ಪ್ರವೇಶಿಸಿದಂತೆ ಮೈಸೂರು ದಸರಾ ಆನೆಗಳಲ್ಲೂ ಬದಲಾವಣೆ ಆಗುತ್ತಿದೆ. ಅಭಿಮನ್ಯು ಮುಂದಿನ ಒಂದೆರಡು ವರ್ಷ ಅಂಬಾರಿ ಹೊತ್ತರೆ ಆನಂತರ ಹೊಸ ಜಮಾನದ ಆನೆಗಳ ಕಾಲ. ಇದರ ಆಸಕ್ತಿದಾಯಕ ಹಾದಿ ಹೀಗಿದೆ.
Tue, 08 Oct 202404:26 PM IST
- Dog Bite: ಧಾರವಾಡದ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ 15ಕ್ಕೂ ಹೆಚ್ಚು ಮಂದಿಗೆ ಹುಚ್ಚು ನಾಯಿ ಕಡಿದಿದ್ದು, ಆತಂಕದ ವಾತಾವರಣ ಸೃಷ್ಟಿಸಿದೆ.
Tue, 08 Oct 202403:56 PM IST
- DCM DK Shivakumar: ಹರಿಯಾಣ ಚುನಾವಣೆ ನಮಗೆಲ್ಲ ಪಾಠ. ಅಲ್ಲಿಯ ಮತದಾರರು ಕೈ ಹಿಡಿಯುತ್ತಾರೆ ಎಂದು ಭಾವಿಸಿದ್ದೆವು. ಆದರೆ, ಕೈ ಹಿಡಿದಿಲ್ಲ. ನಮ್ಮ ವಿರುದ್ಧವಾಗಿ ಮತಗಳು ಬಂದಿವೆ ಎಂದು ಹರಿಯಾಣದಲ್ಲಿ ಬಿಜೆಪಿ ಗೆಲುವಿನ ಕುರಿತು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
Tue, 08 Oct 202401:25 PM IST
Bengaluru Boy Dies: ಸ್ವಿಗ್ಗಿಯಲ್ಲಿ ಆರ್ಡರ್ ಕ್ಯಾನ್ಸಲ್ ಮಾಡಿದ್ದನ್ನು ತಂದೆ ತಂದಿದ್ದ ಕೇಕ್ ಅನ್ನು ತಿಂದು 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲದೆ, ಪೋಷಕರ ಸ್ಥಿತಿ ಗಂಭೀರವಾಗಿದೆ.
Tue, 08 Oct 202401:08 PM IST
- ದಸರಾ ಪ್ರಯುಕ್ತ ಬೆಂಗಳೂರು, ಮೈಸೂರು, ಹುಬ್ಬಳ್ಳಿ,ಚಾಮರಾಜನಗರ ಹಾಗೂ ಬೆಳಗಾವಿಗೆ ವಿಶೇಷ ರೈಲುಗಳ ಸಂಚಾರ ಬುಧವಾರದಿಂದ ಆರಂಭವಾಗಲಿವೆ.
Tue, 08 Oct 202412:39 PM IST
ಬೆಂಗಳೂರಿನ ಮಾರತಹಳ್ಳಿ ಭಾಗದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಸಂಚಾರ ಪೊಲೀಸರು ಹಲವಾರು ಸುಧಾರಣಾ ಕ್ರಮ, ಮಾರ್ಗ ಬದಲಾವಣೆ ನಿಯಮಗಳನ್ನು ಜಾರಿಗೊಳಿಸಿದ್ದಾರೆ.
Tue, 08 Oct 202411:51 AM IST
- ಮೈಸೂರು ದಸರಾದ ಕವಿಗೋಷ್ಠಿ ಅವ್ಯವಸ್ಥೆ ಆಗಿರುವ ನಡುವೆಯೇ ಕೆಲವರ ಆಯ್ಕೆ ಸಂಭ್ರಮಕ್ಕೆ ಕಾರಣವಾಗುತ್ತದೆ. ಅದು ಹೇಗೆ. ಇದನ್ನು ತಮ್ಮ ಬರಹದಲ್ಲಿ ವಿವರಿಸಿದ್ದಾರೆ ಲೇಖಕ ಅರುಣ್ ಜೋಳದ ಕೂಡ್ಲಿಗಿ.
Tue, 08 Oct 202411:06 AM IST
- Satish Jarakiholi: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ವರ್ಷ ಇರುತ್ತಾರೋ, 3 ವರ್ಷ ಇರುತ್ತಾರೋ ಅದು ನನಗೆ ಗೊತ್ತಿಲ್ಲ. ನೀವು ಅದನ್ನು ಹೈಕಮಾಂಡ್ಗೆ ಕೇಳಿ ಎಂದು ಹೇಳುವ ಮೂಲಕ ತಾನೇ ಮುಂದಿನ ಸಿಎಂ ಎಂಬ ಸುಳಿವನ್ನು ಸತೀಶ್ ಜಾರಕಿಹೊಳಿ ಅವರು ನೀಡಿದ್ದಾರೆ.
Tue, 08 Oct 202410:08 AM IST
ಮಹಿಷ ಪಂಥ ಒಂದು ಕಾಲ್ಪನಿಕ ಪಂಥವಲ್ಲ, ಪಶ್ಚಿಮ ಕರಾವಳಿಯಲ್ಲಿ ಇಂದಿಗೂ ಜೀವಂತ ಪಂಥವಾಗಿಯೇ ಇದೆ. ದೇಶದ ಏಕೈಕ ಮಹಿಷಾ ದೇವಾಲಯ ತುಳುನಾಡಿನ ರಾಜಧಾನಿ ಎಂದು ಪ್ರಖ್ಯಾತವಾದ ಬಾರ್ಕೂರಿನಲ್ಲಿದೆ ಎಂದು ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ. ಟಿ.ಮುರುಗೇಶಿ ಹೇಳಿದ್ದಾರೆ. (ಹರೀಶ ಮಾಂಬಾಡಿ, ಮಂಗಳೂರು)
Tue, 08 Oct 202408:01 AM IST
- ಬೆಂಗಳೂರಿನ ಹೆಸರಘಟ್ಟವನ್ನು ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಬೇಕು ಎಂಬುದು ಬಹು ದಿನಗಳ ಬೇಡಿಕೆಯಾಗಿತ್ತು. ಈ ಬಗ್ಗೆ ಆಂದೋಲನವೂ ನಡೆದಿತ್ತು. ಪ್ರಕೃತಿ ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿರುವ ಸರ್ಕಾರ ಇಂದು ಈ ಮಹತ್ವದ ತೀರ್ಮಾನ ಕೈಗೊಂಡಿದೆ.
Tue, 08 Oct 202405:19 AM IST
ಇತ್ತೀಚಿನ ಸರ್ಕಾರದ ಅಂಕಿ ಅಂಶಗಳ ಪ್ರಕಾರ 14 ಲಕ್ಷ ಅಂದರೆ ಒಟ್ಟು ಪಡಿತರ ಚೀಟಿದಾರರಲ್ಲಿ ಶೇ. 12.4ರಷ್ಟು ಅನರ್ಹ ಎನ್ನುವುದು ಕಂಡು ಬಂದಿದೆ. ಸರ್ಕಾರ ಇಂತಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವಲ್ಲಿ ನಿರತವಾಗಿದೆ. ಇಷ್ಟೂ ಸಂಖ್ಯೆಯ ಪಡಿತರ ಚೀಟಿಗಳು ರದ್ದಾದರೆ ಸರ್ಕಾರಕ್ಕೆ ಭಾರಿ ಉಳಿತಾಯವಾಗಲಿದೆ. (ವರದಿ: ಎಚ್.ಮಾರುತಿ, ಬೆಂಗಳೂರು)
Tue, 08 Oct 202404:40 AM IST
- ಮಂಗಳೂರು ನಗರಕ್ಕೆ ಹಾಗೂ ಇತರ ರಾಜ್ಯಗಳಿಗೆ ಎಂಡಿಎಂಎ ಮಾದಕ ವಸ್ತುಗಳನ್ನು ನೈಜೀರಿಯಾ ದೇಶದ ಪ್ರಜೆ ಪೂರೈಕೆ ಮಾಡುತ್ತಿದ್ದ. ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ಬಂಧಿತನಿಂದ 6 ಕೋಟಿ ರೂಪಾಯಿ ಮೌಲ್ಯದ 6.300 ಕೆಜಿ ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಗಿದೆ.
Tue, 08 Oct 202404:11 AM IST
ಮೈಸೂರು ದಸರಾದಲ್ಲಿ ನೃತ್ಯ, ಸಂಗೀತ, ಕಲೆಯ ಜತೆಗೆ ಕೃಷಿಕರಿಗೂ ಹಲವು ವೇದಿಕೆಯಿದೆ. ಅದರಲ್ಲೂ ಹೈನುಗಾರಿಕೆಗೆ ಪ್ರೋತ್ಸಾಹಿಸುವ ಹಾಲು ಕರೆಯುವ ಸ್ಪರ್ಧೆಯೂ ನಡೆಯುತ್ತದೆ. ಮೊದಲ ಬಾರಿಗೆ ಬಹುಮಾನದ ಮೊತ್ತವನ್ನು ಒಂದು ಲಕ್ಷ ರೂ.ಗೆ ಏರಿಸಿದ್ದು, ಸ್ಪರ್ಧೆಯೂ ಉತ್ತಮವಾಗಿತ್ತು.
Tue, 08 Oct 202403:49 AM IST
- Uttara Kannada: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಂತೂ ಇಲ್ಲ. ಆದರೆ ಆಂಬುಲೆನ್ಸ್ ಸೇವೆಯೂ ಸರಿಯಾಗಿಲ್ಲ ಎಂಬ ಆರೋಪವಿದೆ. ಆಂಬುಲೆನ್ಸ್ ಬಂದರೂ ಅದರಲ್ಲಿ ಪ್ಯಾರಾ ಮೆಡಿಕಲ್ ಸಿಬ್ಬಂದಿ ಇರುವುದಿಲ್ಲ ಎಂಬ ದೂರು ಜಿಲ್ಲೆಯ ಜನರದ್ದು.
Tue, 08 Oct 202402:59 AM IST
- ರಾಜ್ಯದ ಹಲವು ಭಾಗಗಳಲ್ಲಿ ಅಕ್ಟೋಬರ್ 7ರ ಸೋಮವಾರ ಮಳೆಯಾಗಿದೆ. ಸಂಭ್ರಮದ ಮೈಸೂರು ದಸಾರಗೂ ವರುಣ ಅಡ್ಡಿಯಾಗಿದ್ದಾನೆ. ಮಂಗಳವಾರವೂ ಕರಾವಳಿ, ಮಲೆನಾಡು ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಮುನ್ಸೂಚನೆ ಇದೆ. ಕರ್ನಾಟಕ ಹವಾಮಾನ ವರದಿ ಹೀಗಿದೆ.