Jayamangali River; ಮಳೆರಾಯನ ಅಬ್ಬರಕ್ಕೆ ಮೈದುಂಬಿ ಹರಿಯುತ್ತಿದೆ ಜಯಮಂಗಲಿ ನದಿ, ದೃಶ್ಯ ವೈಭವ ಕಣ್ತುಂಬಿಕೊಳ್ಳುತ್ತಿರುವ ಜನ-tumakuru news jayamangali river is overflowing due to heavy rain tumkur district madhugiri news esp ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Jayamangali River; ಮಳೆರಾಯನ ಅಬ್ಬರಕ್ಕೆ ಮೈದುಂಬಿ ಹರಿಯುತ್ತಿದೆ ಜಯಮಂಗಲಿ ನದಿ, ದೃಶ್ಯ ವೈಭವ ಕಣ್ತುಂಬಿಕೊಳ್ಳುತ್ತಿರುವ ಜನ

Jayamangali River; ಮಳೆರಾಯನ ಅಬ್ಬರಕ್ಕೆ ಮೈದುಂಬಿ ಹರಿಯುತ್ತಿದೆ ಜಯಮಂಗಲಿ ನದಿ, ದೃಶ್ಯ ವೈಭವ ಕಣ್ತುಂಬಿಕೊಳ್ಳುತ್ತಿರುವ ಜನ

Heavy Rain in Tumakuru; ತುಮಕೂರು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಹಲವೆಡೆ ವ್ಯಾಪಕ ಮಳೆಯಾಗಿದೆ. ಇದರಿಂದಾಗಿ ಮಧುಗಿರಿ ಭಾಗದ ಜೀವನದಿಯಾಗಿರುವ ಜಯಮಂಗಲಿ ನದಿ ಮೈದುಂಬಿ ಹರಿಯತೊಡಗಿದೆ. ಈ ದೃಶ್ಯ ವೈಭವವನ್ನು ಜನ ಕಣ್ತುಂಬಿಕೊಂಡರು. (ವರದಿ- ಈಶ್ವರ್, ತುಮಕೂರು)

ಮೈದುಂಬಿ ಹರಿಯತ್ತಿರುವ ಜಯಮಂಗಲಿ ನದಿಯ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಸೇತುವೆ ಮೇಲೆ ನಿಂತ ಜನ.
ಮೈದುಂಬಿ ಹರಿಯತ್ತಿರುವ ಜಯಮಂಗಲಿ ನದಿಯ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಸೇತುವೆ ಮೇಲೆ ನಿಂತ ಜನ.

ತುಮಕೂರು: ಮಧುಗಿರಿ ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ಜೀವ ನದಿಯಾದ ಜಯಮಂಗಲಿ ನದಿ ಚನ್ನಸಾಗರದ ಬಳಿ ರಸ್ತೆಯ ಮೇಲೆ ಹರಿದಿದ್ದು, ಈ ದೃಶ್ಯ ವೈಭವ ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬರುತ್ತಿದೆ. ತಾಲ್ಲೂಕಿನ ಕೊಡಿಗೇನಹಳ್ಳಿ ಬಳಿ ಸೇತುವೆ ಜಯಮಂಗಲಿ ನದಿ ಹರಿಯುತ್ತಿರುವುದನ್ನು ನೂರಾರು ರೈತರು ಹಾಗೂ ಸಾರ್ವಜನಿಕರು ಕಂಡು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕದ ಎಲ್ಲೆಡೆ ಮಳೆ ಆಗುತ್ತಿದ್ದರೂ ಮಧುಗಿರಿ ತಾಲೂಕಲ್ಲಿ ಮಾತ್ರ ವಾಡಿಕೆಯ ಮಳೆಯಾಗಿತ್ತು, ಇದು ರೈತರಲ್ಲಿ ಆತಂಕ ಮೂಡಿಸಿತ್ತಾದರೂ ಇದೀಗ ಎರಡು ದಿನದಿಂದ ಸುರಿಯುತ್ತಿರುವ ಮಳೆಯ ಕಾರಣ ಜೀವನದಿ ಜಯಮಂಗಲಿ ನದಿ ಚನ್ನಸಾಗರದಿಂದ ಕೊಡಿಗೇನಹಳ್ಳಿವರೆಗೂ ಮೈದುಂಬಿ ಹರಿದಿದೆ.

ಮಧುಗಿರಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಚೋಳೆನಳ್ಳಿ ಕೆರೆಗೆ ಗಿಡದಲ್ಲಿ ಮಳೆಯಾದರೆ ಹಳ್ಳ ಹರಿಯುವುದು ಸಹಜ ಎಂಬ ಮಾತಿದೆ, ಅದೇ ರೀತಿ ಕಮ್ಮನ ಕೋಟೆ ಮತ್ತು ಮಾರಿ ಬೀಳು ಸುತ್ತಮುತ್ತಲು ಉತ್ತಮ ಮಳೆಯಾಗಿದ್ದು ಹರಿಹರೇಶ್ವರ ದೇವಸ್ಥಾನ ಸಮೀಪದಿಂದ ಹಳ್ಳ ಹರಿದು ರಾತ್ರಿ ಮಧುಗಿರಿ- ತುಮಕೂರು ಸೇತುವೆ ತುಂಬಾ ನೀರು ಹರಿಯುತ್ತಿದ್ದು, ಈ ದೃಶ್ಯ ನೋಡುವುದೇ ಕಣ್ಣಿಗೆ ಹಬ್ಬವಾಗಿದೆ.

ಮೈದುಂಬಿ ಹರಿಯುತ್ತಿರುವ ಜಯಮಂಗಲಿ ನದಿಯ ದೃಶ್ಯ ವೈಭವವನ್ನು ಸೇತುವೆ ಮೇಲೆ ನಿಂತುಕೊಂಡು ಕಣ್ತುಂಬಿಕೊಂಡ ಜನ.
ಮೈದುಂಬಿ ಹರಿಯುತ್ತಿರುವ ಜಯಮಂಗಲಿ ನದಿಯ ದೃಶ್ಯ ವೈಭವವನ್ನು ಸೇತುವೆ ಮೇಲೆ ನಿಂತುಕೊಂಡು ಕಣ್ತುಂಬಿಕೊಂಡ ಜನ.

ಮಧುಗಿರಿ ಫಾಲ್ಸ್‌ಗೆ ಜೀವ ಕಳೆ

ಹರೇಹರಶ್ವೆರ ದೇವಸ್ಥಾನದ ಸಮೀಪ ಇರುವ ಮದುಗಿರಿ ಫಾಲ್ಸ್‌ಗೆ ಮಳೆಯಿಂದಾಗಿ ನೀರು ದುಮ್ಮಿಕ್ಕುತ್ತಿದ್ದ ದೃಶ್ಯ ನೋಡುಗರನ್ನು ಸೆಳೆಯುತ್ತಿದೆ, ಮಧುಗಿರಿಯ ಊಟಿ ಎಂದೆ ಕರೆಸಿಕೊಳ್ಳುವ ಕುಪ್ಪಚಾರಿ ರೊಪ್ಪ ಸುತ್ತಮುತ್ತಲು ಉತ್ತಮ ಮಳೆಯಾಗಿರುವುದರಿಂದ ಪ್ರಕೃತಿ ಸೊಬಗು ಸವಿಯಲು ಉತ್ತಮ ಸಮಯವಾಗಿದೆ.

ಮಧುಗಿರಿ ಫಾಲ್ಸ್‌ಗೆ ಹೋಗಬೇಕಾದರೆ ತುಮಕೂರು 50 ಕಿ.ಮೀ., ಮಧುಗಿರಿ ಪಟ್ಟಣದಿಂದ 10 ಕಿ.ಮೀ. ಆಗಬಹುದು. ಈಗ ಜಯಮಂಗಲಿ ನದಿ ಮೈದುಂಬಿ ಹರಿಯುತ್ತಿರುವ ಕಾರಣ, ಜಲಪಾತಕ್ಕೂ ಜೀವಕಳೆ ಬಂದಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯತೊಡಗಿದೆ.

ಒಟ್ಟಾರೆ ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದ್ದು, ಕೆರೆ ಕಟ್ಟೆಗಲು ತುಂಬಿ ಹರಿಯುತ್ತಿವೆ, ಮಧುಗಿರಿ ತಾಲ್ಲೂಕಿನ ಜಯಮಂಗಲಿ ನದಿ ಕೂಡ ತುಂಬಿ ಹರಿಯುತ್ತಿರುವುದು ಈ ಭಾಗದ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.

ಪ್ರವಾಹ ಭೀತಿ- ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮಳೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಜಯಮಂಗಲಿ ನದಿ ಪ್ರವಾಹ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಜನ- ಜಾನುವಾರುಗಳ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಯಮಂಗಲಿ ನದಿ ಮೈದುಂಬಿ ಹರಿಯತ್ತಿರುವ ಕಾರಣ ಸ್ಥಳಕ್ಕಾಗಮಿಸಿದ ಜಿಲ್ಲಾ ವರಿಷ್ಠಾಧಿಕಾರಿಗಳು.
ಜಯಮಂಗಲಿ ನದಿ ಮೈದುಂಬಿ ಹರಿಯತ್ತಿರುವ ಕಾರಣ ಸ್ಥಳಕ್ಕಾಗಮಿಸಿದ ಜಿಲ್ಲಾ ವರಿಷ್ಠಾಧಿಕಾರಿಗಳು.

ಪ್ರವಾಹ ಉಂಟಾಗಬಹುದಾದ ಜಿಲ್ಲೆಯ ಮಧುಗಿರಿ ತಾಲ್ಲೂಕು ಕೋಡಗದಾಲ ಗ್ರಾಮ ಪಂಚಾಯತಿ ವ್ಯಾಪ್ತಿ ಚನ್ನಸಾಗರ, ನಂಜಾಪುರ ಗ್ರಾಮಗಳಿಗಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಹಾಗೂ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಕಳೆದ 2 ವರ್ಷಗಳ ಹಿಂದೆ ಭಾರಿ ಮಳೆಯಿಂದ ಉಂಟಾದ ಜಯಮಂಗಲಿ ನದಿ ಪ್ರವಾಹದಿಂದ ಚನ್ನಸಾಗರ ಗ್ರಾಮ ಸಂಪೂರ್ಣ ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು.

ಇದೇ ರೀತಿ ಧಾರಾಕಾರ ಮಳೆ ಮುಂದುವರೆದರೆ ನದಿ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನದಿ ಪಾತ್ರದಲ್ಲಿರುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿ ಮಾಡಬೇಕೆಂದು ತಹಶೀಲ್ದಾರ್ ಮಂಜುನಾಥ್ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮುತ್ತುರಾಜ್ ಅವರಿಗೆ ಸೂಚನೆ ನೀಡಿದರು.

(ವರದಿ- ಈಶ್ವರ್, ತುಮಕೂರು)