ತ್ವಚೆಯಲ್ಲಿನ ಕಲೆ ತೊಡೆದುಹಾಕಲು, ಗ್ಲೋ ಹೆಚ್ಚಿಸಲು ಬಳಸಿ ಪಪ್ಪಾಯಿ ಫೇಸ್ ಪ್ಯಾಕ್: ಹೊಳೆಯುವ, ಮೃದು ಚರ್ಮ ನಿಮ್ಮದಾಗುತ್ತೆ
ತ್ವಚೆ ಸುಕ್ಕುಗಟ್ಟಿದ್ದರೆ ಅಥವಾ ವಯಸ್ಸಾದಂತೆ ಕಾಣಿಸುತ್ತಿದ್ದರೆ ಪಾರ್ಲರ್ ಹೋಗುವ ಬದಲು ಪಪ್ಪಾಯಿಫೇಸ್ ಪ್ಯಾಕ್ ಬಳಸಬಹುದು. ಪಪ್ಪಾಯಿಯಲ್ಲಿ ಅನೇಕ ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ತ್ವಚೆಗೆ ಪಪ್ಪಾಯಿಯನ್ನು ಹೇಗೆ ಬಳಸುವುದು ಎಂಬುದನ್ನು ಇಲ್ಲಿ ತಿಳಿಯಿರಿ.
ಯಾವುದೇ ಹಬ್ಬವಿರಲಿ, ಶುಭ ಕಾರ್ಯಕ್ರಮವಿರಲಿ ಹೆಂಗಳೆಯರು ಮನೆಕೆಲಸ, ಅಡುಗೆ, ಹಬ್ಬದೂಟ ತಯಾರಿಸುವುದು ಹೀಗೆ ಎಲ್ಲದರಲ್ಲೂ ಬ್ಯುಸಿಯಾಗುತ್ತಾರೆ. ಈ ಕೆಲಸಗಳಿಂದಾಗಿ ಅನೇಕ ಬಾರಿ ಮಹಿಳೆಯರಿಗೆ ತಮಗಾಗಿ ಸಮಯವನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಯಾವುದೇ ಹಬ್ಬ ಅಥವಾ ಶುಭ ಕಾರ್ಯಕ್ರಮ ಹತ್ತಿರ ಬಂದಾಗ, ತನ್ನ ತ್ವಚೆಗೆ ಏನೂ ಫೇಸ್ ಪ್ಯಾಕ್ ಹಚ್ಚಲು ಸಾಧ್ಯವಾಗಿಲ್ಲವಲ್ಲ ಎಂದು ಬೇಸರಗೊಳ್ಳುವವರು ಹಲವರು. ಬ್ಯೂಟಿಪಾರ್ಲರ್‌ಗೂ ಹೋಗಲು ಸಮಯವಿಲ್ಲದಿದ್ದರೆ, ಮನೆಯಲ್ಲೇ ಸುಲಭವಾಗಿ, ಸಿಂಪಲ್ ಆಗಿ ಈ ಫೇಸ್ ಪ್ಯಾಕ್ ಅನ್ನು ಹಚ್ಚಿಕೊಳ್ಳಬಹುದು. ಮನೆಯಲ್ಲಿಯೇ ತಯಾರಿಸಿದ ಫೇಸ್ ಪ್ಯಾಕ್‍ನಿಂದ ಹೊಳೆಯುವ ಮೈಬಣ್ಣವನ್ನು ಶೀಘ್ರದಲ್ಲೇ ಹೇಗೆ ಪಡೆಯಬಹುದು.
ಇಲ್ಲಿ ನಾವು ತಿಳಿಸುತ್ತಿರುವ ಫೇಸ್ ಪ್ಯಾಕ್ ಅನ್ನು ಬಳಸುವುದರಿಂದ ಟ್ಯಾನಿಂಗ್ ಅನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ, ಇದು ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ. ಪಪ್ಪಾಯಿ ಫೇಸ್ ಮಾಸ್ಕ್‌ನಿಂದ ನೀವು ಹೊಳೆಯುವ ಮತ್ತು ಮೃದುವಾದ ಚರ್ಮವನ್ನು ಪಡೆಯಬಹುದು. ಅಲ್ಲದೆ, ತ್ವಚೆ ಸುಕ್ಕುಗಟ್ಟಿದ್ದರೆ ಅಥವಾ ವಯಸ್ಸಾದಂತೆ ಕಾಣಿಸುತ್ತಿದ್ದರೆ ಪಾರ್ಲರ್ ಹೋಗುವ ಬದಲು ಪಪ್ಪಾಯಿ ಬಳಸಬಹುದು. ಪಪ್ಪಾಯಿ ಫೇಸ್ ಪ್ಯಾಕ್ ಅನ್ನು ಬಳಸುವುದರಿಂದ ತ್ವಚೆಯನ್ನು ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ. ಪಪ್ಪಾಯಿ ತ್ವಚೆಯನ್ನು ಹೈಡ್ರೇಟ್ ಮಾಡುವುದರ ಜೊತೆಗೆ ಕಲೆಗಳು ಮತ್ತು ಸತ್ತ ಚರ್ಮ (dead skin) ಅನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಪಪ್ಪಾಯಿಯಲ್ಲಿ ಅನೇಕ ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ತ್ವಚೆಗೆ ಪಪ್ಪಾಯಿಯನ್ನು ಹೇಗೆ ಬಳಸುವುದು ಎಂಬುದನ್ನು ಇಲ್ಲಿ ತಿಳಿಯಿರಿ.
ತ್ವಚೆ ಕಾಂತಿಯುತವಾಗಿ ಹೊಳೆಯಲು ಪಪ್ಪಾಯಿಯನ್ನು ಹೀಗೆ ಬಳಸಿ
ಪಪ್ಪಾಯಿ ಮತ್ತು ಅರಿಶಿನ ಫೇಸ್ ಪ್ಯಾಕ್: ಪಪ್ಪಾಯಿಯು ತ್ವಚೆಯ ಟ್ಯಾನಿಂಗ್ ಹೋಗಲಾಡಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಪಪ್ಪಾಯಿಯನ್ನು ಮ್ಯಾಶ್ ಮಾಡಿ, ಅದಕ್ಕೆ ಆಲಿವ್ ಎಣ್ಣೆ, ಚಿಟಿಕೆ ಅರಿಶಿನ ಮತ್ತು ಕೆಲವು ಹನಿ ನಿಂಬೆರಸ ಸೇರಿಸಿ. ನಂತರ ಇದನ್ನು ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯ ಹಾಗೆಯೇ ಬಿಟ್ಟು ನಂತರ ತೊಳೆಯಿರಿ. ಈ ಫೇಸ್ ಪ್ಯಾಕ್ ನಿಮ್ಮ ಟ್ಯಾನಿಂಗ್ ಅನ್ನು ಸುಲಭವಾಗಿ ತೆಗೆದುಹಾಕುತ್ತದೆ. ಇದರಿಂದ ನಿಮ್ಮ ತ್ವಚೆಯು ಸುಂದರವಾಗಿ ಹೊಳೆಯುವಂತೆ ಮಾಡಲು ಸಹಕಾರಿಯಾಗಿದೆ.
ಬಾಳೆಹಣ್ಣು-ಪಪ್ಪಾಯಿ ಮಾಸ್ಕ್: ಅತ್ಯಂತ ಮೃದುವಾದ ಚರ್ಮವನ್ನು ಪಡೆಯಲು, ಬಾಳೆಹಣ್ಣನ್ನು ಪಪ್ಪಾಯಿಯ ತಿರುಳಿನೊಂದಿಗೆ ಬೆರೆಸಿ. ಎರಡನ್ನೂ ಚೆನ್ನಾಗಿ ಮ್ಯಾಶ್ ಮಾಡಿ. ನಂತರ ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ಪೇಸ್ಟ್ ಅನ್ನು ಹಚ್ಚುವುದರಿಂದ ನಿಮ್ಮ ಮುಖವು ಮೃದುವಾಗುವುದಲ್ಲದೆ, ಚಂದ್ರನಂತೆ ಹೊಳೆಯುತ್ತದೆ.
ಪಪ್ಪಾಯಿ-ಮುಲ್ತಾನ್ ಮಿಟ್ಟಿ ಫೇಸ್‌ಪ್ಯಾಕ್: ಇದರ ಮಿಶ್ರಣವನ್ನು ಮಾಡಲು, 1 ಚಮಚ ಹಿಸುಕಿದ ಪಪ್ಪಾಯಿಗೆ 1 ಚಮಚ ಮುಲ್ತಾನಿ ಮಿಟ್ಟಿ ಮತ್ತು ಸ್ವಲ್ಪ ಹನಿ ರೋಸ್ ನೀರನ್ನು ಸೇರಿಸಿ ಮಿಕ್ಸ್ ಮಾಡಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ನೀರಿನಿಂದ ತೊಳೆಯಿರಿ.
ವಿಭಾಗ