ಕನ್ನಡ ಸುದ್ದಿ  /  ಜೀವನಶೈಲಿ  /  Best Bridal Juices: ಮದುವೆಯಾಗಲಿರುವ ಯುವತಿಯರ ತ್ವಚೆ ಮೇಕಪ್‌ ಇಲ್ಲದೇ ಪಳಪಳ ಹೊಳೆಯುವಂತೆ ಮಾಡುವ ಜ್ಯೂಸ್‌ಗಳಿವು

Best Bridal Juices: ಮದುವೆಯಾಗಲಿರುವ ಯುವತಿಯರ ತ್ವಚೆ ಮೇಕಪ್‌ ಇಲ್ಲದೇ ಪಳಪಳ ಹೊಳೆಯುವಂತೆ ಮಾಡುವ ಜ್ಯೂಸ್‌ಗಳಿವು

ಮದುವೆಯ ದಿನಗಳು ಹತ್ತಿರ ಬರುತ್ತಿದ್ದಂತೆ ಹೆಣ್ಣುಮಕ್ಕಳು ತಮ್ಮ ತ್ವಚೆಯ ಆರೈಕೆಯ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಈ ಸಂದರ್ಭದಲ್ಲಿ ಸುಂದರವಾಗಿ ಕಾಣಬೇಕು ಎಂದು ಬಯಸುವುದು ಸಹಜ. ಅದಕ್ಕಾಗಿ ಸಿಕ್ಕಿದ್ದನ್ನು ಹಚ್ಚುವ ಬದಲು ಈ ಕೆಲವು ಜ್ಯೂಸ್‌ ಕುಡಿಯುವ ಅಭ್ಯಾಸ ಮಾಡಿ. ಇದರಿಂದ ನಿಮ್ಮ ಚರ್ಮ ಪಳಪಳ ಹೊಳೆಯುತ್ತದೆ.

ಮೇಕಪ್‌ ಇಲ್ಲದೇ ತ್ವಚೆ ಪಳಪಳ ಹೊಳೆಯುವಂತೆ ಮಾಡುವ ಜ್ಯೂಸ್‌ಗಳಿವು
ಮೇಕಪ್‌ ಇಲ್ಲದೇ ತ್ವಚೆ ಪಳಪಳ ಹೊಳೆಯುವಂತೆ ಮಾಡುವ ಜ್ಯೂಸ್‌ಗಳಿವು

ತ್ವಚೆ ಸದಾ ನಕ್ಷತ್ರಗಳಂತೆ ಹೊಳೆಯುತ್ತಿರಬೇಕು ಎಂದು ಹೆಣ್ಣುಮಕ್ಕಳು ಬಯಸುವುದು ಸಹಜ. ಅದಕ್ಕಾಗಿ ಬ್ಯೂಟಿ ಪ್ರಾಡಕ್ಟ್‌ಗಳು, ಬ್ಯೂಟಿಪಾರ್ಲರ್‌ಗಳ ಮೊರೆ ಹೋಗುತ್ತಾರೆ. ಆದರೆ ಇದ್ಯಾವುದೂ ಇಲ್ಲದೇ ನೈಸರ್ಗಿಕ ಹಣ್ಣುಗಳ ಮೂಲಕ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ಹಲವರಿಗೆ ತಿಳಿದಿಲ್ಲ.

ಟ್ರೆಂಡಿಂಗ್​ ಸುದ್ದಿ

ಅದರಲ್ಲೂ ಮದುವೆಯ ಸಂದರ್ಭ ಹೆಣ್ಣುಮಕ್ಕಳ ತ್ವಚೆಯ ಹೊಳಪು ಹೆಚ್ಚಲು ಈ ಜ್ಯೂಸ್‌ಗಳು ಹೇಳಿ ಮಾಡಿಸಿದವು. ಈ ಜ್ಯೂಸ್‌ಗಳನ್ನು ಕುಡಿದರೆ ವಧುವಿನ ತ್ವಚೆಯ ಕಾಂತಿ ವೃದ್ಧಿಸುವುದು ಸುಳ್ಳಲ್ಲ. ಮೇಕಪ್ ಇಲ್ಲದೆ ತ್ವಚೆ ಹೊಳೆಯುವಂತೆ ಮಾಡಲು ಈ ಹಣ್ಣಗಳ ರಸವನ್ನು ಸೇವಿಸಬಹುದು. ಅಂತಹ ಜ್ಯೂಸ್‌ಗಳು ಯಾವುದು ನೋಡಿ.

ಸೌತೆಕಾಯಿ, ಅಲೋವೆರಾ ರಸ

ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವಿದೆ. ಇದು ನಿಮ್ಮ ಚರ್ಮಕ್ಕೆ ಅಗತ್ಯವಿರುವ ತೇವಾಂಶವನ್ನು ನೀಡುತ್ತದೆ. ಅಲೋವೆರಾ ಚರ್ಮದ ಉರಿಯೂತ ಮತ್ತು ಅಸಮತೋಲನವನ್ನು ಕಡಿಮೆ ಮಾಡುತ್ತದೆ. ಈ ಎರಡನ್ನೂ ಸೇರಿಸಿ ಜ್ಯೂಸ್‌ ತಯಾರಿಸಿ ಕುಡಿಯುವುದರಿಂದ ತ್ವಚೆಯ ಹೊಳಪು ಹೆಚ್ಚುತ್ತದೆ.

ಟೊಮೆಟೊ ಮತ್ತು ತರಕಾರಿ ರಸ

ಟೊಮೆಟೊದಲ್ಲಿ ಲೈಕೋಪೀನ್ ಎಂಬ ಸಂಯುಕ್ತವು ಅಧಿಕವಾಗಿದೆ. ಇದು ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಇದು ನಮ್ಮ ದೇಹದಲ್ಲಿ ಕಾಲಜನ್ ಉತ್ಪಾದನೆಗೂ ಕಾರಣವಾಗುತ್ತದೆ. ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಹಸಿರು ತರಕಾರಿಗಳು ಮತ್ತು ಟೊಮೆಟೊಗಳು ಚರ್ಮಕ್ಕೆ ಅಗತ್ಯವಾದ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಅವು ಒಟ್ಟಾರೆ ಆರೋಗ್ಯಕ್ಕೂ ಒಳ್ಳೆಯದು.

ಲೆಟಿಸ್, ನಿಂಬೆ ರಸ

ಹಸಿರು ತರಕಾರಿಗಳು ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ನಮ್ಮ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಇದು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಸೊಪ್ಪಿನ ರಸಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸುವುದರಿಂದ ದೇಹಕ್ಕೆ ಬೇಕಾದ ವಿಟಮಿನ್ ಸಿ ದೊರೆಯುತ್ತದೆ. ಕಾಲಜನ್ ಉತ್ಪಾದನೆಗೆ ಇದು ಮುಖ್ಯವಾಗಿದೆ.

ಎಬಿಸಿ ಜ್ಯೂಸ್

ಸೇಬು, ಬೀಟ್ರೂಟ್ ಮತ್ತು ಕ್ಯಾರೆಟ್ ಜ್ಯೂಸ್ ಸಂಯೋಜನೆಯು ಉತ್ಕರ್ಷಣ ನಿರೋಧಕಗಳು ಮತ್ತು ವಿವಿಧ ಜೀವಸತ್ವಗಳನ್ನು ಹೊಂದಿರುತ್ತದೆ. ಇದು ನಮ್ಮ ಚರ್ಮಕ್ಕೆ ಆರೋಗ್ಯಕರ ಹೊಳಪನ್ನು ನೀಡುತ್ತದೆ. ಕ್ಯಾರೆಟ್‌ನಲ್ಲಿ ಬೀಟಾ ಕ್ಯಾರೋಟಿನ್ ಅಂಶ ಅಧಿಕವಾಗಿದೆ. ಬೀಟ್ರೂಟ್ ಕಬ್ಬಿಣ, ವಿಟಮಿನ್ ಸಿ, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ 6 ಅನ್ನು ಹೊಂದಿರುತ್ತದೆ. ಸೇಬುಹಣ್ಣು ನಿಮ್ಮ ದೇಹಕ್ಕೆ ಅಗತ್ಯವಾದ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ. ಯುವತಿಯರು ತಮ್ಮ ಚರ್ಮವನ್ನು ಸುಂದರವಾಗಿಸಲು ಈ ಎಬಿಸಿ ಜ್ಯೂಸ್ ಅನ್ನು ಕುಡಿಯಬೇಕು.

ದಾಳಿಂಬೆ, ಕಿತ್ತಳೆ ರಸ

ದಾಳಿಂಬೆ ಫ್ರಿ ರಾಡಿಕಲ್ ವಿರುದ್ಧ ಹೋರಾಡುವ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ನಮ್ಮ ತ್ವಚೆಯನ್ನು ಸದಾ ಯೌವನದಿಂದ ಇಡಲು ಸಹಾಯ ಮಾಡುತ್ತದೆ. ಕಿತ್ತಳೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ನಮ್ಮ ಚರ್ಮಕ್ಕೆ ಹೊಳಪನ್ನು ನೀಡುತ್ತದೆ.

ಕಲ್ಲಂಗಡಿ ಮತ್ತು ಪುದೀನ ರಸ

ಹೊಳೆಯುವ ಚರ್ಮಕ್ಕೆ ಹೈಡ್ರೇಷನ್‌ ಅಥವಾ ಜಲಸಂಚಯನ ಅತ್ಯಗತ್ಯ. ಕಲ್ಲಂಗಡಿ ಖಂಡಿತವಾಗಿಯೂ ಇದನ್ನು ಮಾಡುತ್ತದೆ. ಪುದೀನವನ್ನು ಸೇರಿಸುವುದರಿಂದ ಚರ್ಮವನ್ನು ರಿಫ್ರೆಶ್ ಮಾಡುತ್ತದೆ. ಇದು ಚರ್ಮದ ಕಿರಿಕಿರಿಯನ್ನು ಸಹ ನಿಯಂತ್ರಿಸುತ್ತದೆ.

ಸೇಬು, ಕಿವಿ ರಸ

ಸೇಬುಗಳು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು ಅದು ಚರ್ಮಕ್ಕೆ ಒಳ್ಳೆಯದು. ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಇ ಹೇರಳವಾಗಿದೆ. ನಮ್ಮ ಚರ್ಮವು ಆರೋಗ್ಯಕರವಾಗಿರಲು ಇದು ಅತ್ಯಗತ್ಯ. ಈ ಎರಡು ಹಣ್ಣಿನ ರಸಗಳ ಸಂಯೋಜನೆಯು ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.

ಕ್ರಾನ್‌ಬೆರ್ರಿ ರಸ

ಕ್ರಾನ್‌ಬೆರ್ರಿಗಳು ಫ್ಲೇವನಾಯ್ಡ್‌ಗಳು, ಪಾಲಿಫಿನಾಲ್‌ಗಳು, ವಿಟಮಿನ್ ಸಿ ಮತ್ತು ವಿಟಮಿನ್ ಇ ನಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಹೊಳೆಯುವ ಚರ್ಮಕ್ಕೆ ಇದು ಅತ್ಯಗತ್ಯ. ಈ ಜ್ಯೂಸ್ ಕೂಡ ತೂಕ ಇಳಿಸಲು ಸಹಾಯ ಮಾಡುತ್ತದೆ.

ಇದು ಜ್ಯೂಸ್‌ಗಳು ಮದುಮಗಳಿಗೆ ಮಾತ್ರವಲ್ಲ, ನಿಮ್ಮ ತ್ವಚೆಯ ಸದಾ ಹೊಳೆಯುತ್ತಿರಬೇಕು ಎಂದರೆ ನೀವು ಈ ಜ್ಯೂಸ್‌ಗಳನ್ನು ಕುಡಿಯಬಹುದು. ಇದರಿಂದ ಅಂದ ಹೆಚ್ಚುವುದರಲ್ಲಿ ಎರಡು ಮಾತಿಲ್ಲ.