ವಧುವಿನ ಮೇಕಪ್ ಕಿಟ್‌ನಲ್ಲಿ ಈ ವಸ್ತುಗಳು ಇರಲೇಬೇಕು: ಅವು ಯಾವ್ಯಾವು, ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ವಧುವಿನ ಮೇಕಪ್ ಕಿಟ್‌ನಲ್ಲಿ ಈ ವಸ್ತುಗಳು ಇರಲೇಬೇಕು: ಅವು ಯಾವ್ಯಾವು, ಇಲ್ಲಿದೆ ನೋಡಿ

ವಧುವಿನ ಮೇಕಪ್ ಕಿಟ್‌ನಲ್ಲಿ ಈ ವಸ್ತುಗಳು ಇರಲೇಬೇಕು: ಅವು ಯಾವ್ಯಾವು, ಇಲ್ಲಿದೆ ನೋಡಿ

ಮದುವೆ ಅಂದ್ರೆ ಸಾಕಷ್ಟು ಸಿದ್ಧತೆಗಳು ಅಗತ್ಯವಿರುತ್ತದೆ. ಅದರಲ್ಲೂ ವಧುಗಳಂತೂ ಮದುವೆಗಾಗಿ ತುಂಬಾನೇ ಶಾಪಿಂಗ್ ಮಾಡುತ್ತಾರೆ. ನೀವು ಶೀಘ್ರದಲ್ಲೇ ಮದುವೆಯಾಗುತ್ತಿದ್ದರೆ,ಈ 5 ವಸ್ತುಗಳನ್ನು ನಿಮ್ಮ ವಧುವಿನ ಕಿಟ್‌ನಲ್ಲಿ ಇರಿಸಿಕೊಳ್ಳಿ. ಅನಿರೀಕ್ಷಿತ ತೊಂದರೆ ಬಂದರೆ ಈ ಚಿಕ್ಕ-ಪುಟ್ಟ ವಸ್ತುಗಳು ನಿಮಗೆ ಬಹಳ ಉಪಯುಕ್ತವಾಗಬಲ್ಲದು.

ಈ 5 ವಸ್ತುಗಳನ್ನು ನಿಮ್ಮ ವಧುವಿನ ಮೇಕಪ್ ಕಿಟ್‌ನಲ್ಲಿ ಇರಿಸಿಕೊಳ್ಳಿ.
ಈ 5 ವಸ್ತುಗಳನ್ನು ನಿಮ್ಮ ವಧುವಿನ ಮೇಕಪ್ ಕಿಟ್‌ನಲ್ಲಿ ಇರಿಸಿಕೊಳ್ಳಿ. (PC: Canva)

ಮದುವೆ ಫಿಕ್ಸ್ ಆದ್ರೆ ಸಾಕು ಮದುಮಗಳು ತುಂಬಾ ಬ್ಯುಸಿಯಾಗಿಬಿಡುತ್ತಾರೆ. ಮದುವೆಗೆ ಯಾವ ರೀತಿ ಸಿದ್ಧವಾಗಬೇಕು, ಏನೆಲ್ಲಾ ಖರೀದಿಸಬೇಕು ಎಂದೆಲ್ಲಾ ಚಿಂತಿಸುತ್ತಾರೆ. ಬಹುತೇಕ ವಧುಗಳು ಸಾಕಷ್ಟು ವಸ್ತುಗಳನ್ನು ಬಹಳ ಬೇಗನೆ ಖರೀದಿ ಕೂಡ ಮಾಡುತ್ತಾರೆ. ಆದರೆ, ಇನ್ನೂ ಕೆಲವು ವಸ್ತುಗಳನ್ನು ಮದುವೆ ಹತ್ತಿರ ಇರುವಾಗಲೇ ಖರೀದಿಸಬೇಕಾಗುತ್ತದೆ. ಆದರೆ, ಮದುವೆ ಹತ್ತಿರ ಬರುತ್ತಿದ್ದಂತೆ ಗಡಿಬಿಡಿ ಶುರುವಾಗುತ್ತದೆ. ಏನೇ ಖರೀದಿಸಿದ್ರೂ ಕೆಲವೊಂದು ವಸ್ತುಗಳು ಮರೆತು ಬಿಡುವ ಸಾಧ್ಯತೆ ಇರುತ್ತದೆ. ಅದರಲ್ಲೂ ವಧುಗಳು ವಿಶೇಷವಾಗಿ ಮೇಕಪ್ ಕಿಟ್ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಮೇಕಪ್‌ ಮಾತ್ರವಲ್ಲ, ನಿಮಗೆ ಉಪಯುಕ್ತವಾದ ಕೆಲವು ವಸ್ತುಗಳನ್ನು ಸಹ ನೀವು ಇಟ್ಟುಕೊಳ್ಳಲೇಬೇಕು. ಅನಿರೀಕ್ಷಿತ ತೊಂದರೆ ಬಂದರೂ ಈ ಚಿಕ್ಕ-ಪುಟ್ಟ ವಸ್ತುಗಳು ನಿಮಗೆ ಬಹಳ ಉಪಯುಕ್ತವಾಗಬಲ್ಲದು. ಅವು ಯಾವ್ಯಾವು, ಇಲ್ಲಿದೆ ಮಾಹಿತಿ.

ಬಿಂದಿ: ವಧುವಿನ ಮುಖಕ್ಕೆ ಬಿಂದಿ ಅತ್ಯಂತ ಮುಖ್ಯ. ಮೇಕಪ್ ನೋಟವನ್ನು ಬದಲಾಯಿಸುತ್ತದೆ. ನಿಮ್ಮ ಮುಖದ ಆಕಾರಕ್ಕೆ ಅನುಗುಣವಾಗಿ ಸರಿಯಾದ ಬಿಂದಿಯನ್ನು ಆರಿಸಿ. ನಿಮ್ಮ ವಧುವಿನ ಕಿಟ್‌ನಲ್ಲಿಯೂ ಬಿಂದಿ ಪ್ಯಾಕೆಟ್ ಇರಿಸಿ. ಸ್ಟಿಕ್ಕರ್ ಪ್ಯಾಕೆಟ್‌ಗಿಂತ ಬಿಂದಿ ಪ್ಯಾಕೆಟ್ ಉತ್ತಮ ಎಂದು ತೋರುತ್ತದೆ. ಯಾಕೆಂದರೆ ಇದು ವಿವಿಧ ಆಕಾರಗಳು ಮತ್ತು ಬಣ್ಣಗಳ ಸ್ಟಿಕ್ಕರ್‌ಗಳನ್ನು ಹೊಂದಿರುತ್ತದೆ. ಅಗತ್ಯಕ್ಕೆ ತಕ್ಕಂತೆ ನಿಮಗೆ ಇಷ್ಟವಾದ ಬಿಂದಿಯನ್ನು ನೀವು ಆರಿಸಬಹುದು.

ಡಬಲ್ ಸೈಡೆಡ್ ಟೇಪ್: ಡಬಲ್ ಸೈಡೆಡ್ ಟೇಪ್ ಬಳಕೆಯನ್ನು ಮಾಡಲಾಗುವ ಕಾರಣ ಇದನ್ನೂ ಇಟ್ಟುಕೊಳ್ಳಬೇಕು. ಯಾಕೆಂದರೆ ತಲೆಯಲ್ಲಿ ಹಾಕಿರುವ ಬೈತಲೆ ಆಚೆ, ಈಚೆ ಹೋಗುವುದು, ಅಥವಾ ಉಲ್ಟಾ ಆಗುವುದು ಆಗುತ್ತಿರುತ್ತದೆ. ಹೀಗಾಗಿ ಇದನ್ನು ಆಗಾಗ ಸರಿಮಾಡಬೇಕಾಗುತ್ತದೆ. ಇದಕ್ಕಾಗಿ ಡಬಲ್ ಸೈಡೆಡ್ ಟೇಪ್ ಅನ್ನು ಅಂಟಿಸಬಹುದು. ಇದರಿಂದ ಬೈತಲೆ ಸರಿ ಇದೆಯೇ ಎಂದು ನೋಡುತ್ತಾ ಇರಬೇಕೆಂದಿಲ್ಲ. ಈ ಟೇಪ್ ಸಹಾಯದಿಂದ, ಆಭರಣಗಳನ್ನು ಸಹ ಚಲಿಸದೆ ಒಂದೇ ಸ್ಥಳದಲ್ಲಿ ಇಡಬಹುದು.

ಮುಖದ ರೇಜರ್: ಮದುವೆಗೂ ಮುನ್ನ ಎಲ್ಲಾ ಹೆಣ್ಮಕ್ಕಳು ವ್ಯಾಕ್ಸ್ ಮಾಡಿಸಿಕೊಳ್ಳುತ್ತಾರೆ. ಆದರೆ, ಅಂತರ ಸ್ವಲ್ಪ ಹೆಚ್ಚಾದರೆ ಮದುವೆಯ ದಿನ ಕೂದಲು ಸ್ವಲ್ಪ ಬೆಳೆಯಬಹುದು. ಮೇಕ್ಅಪ್ ಅನ್ನು ಅನ್ವಯಿಸುವಾಗ ಇದು ವಿಶೇಷವಾಗಿ ಸ್ಪಷ್ಟವಾಗಿ ಕಂಡುಬರುತ್ತದೆ. ಹೀಗಾಗಿ ಸಣ್ಣ ಪೋರ್ಟಬಲ್ ಫೇಸ್ ರೇಜರ್ ಅನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.

ಫೇಸ್‍ವಾಶ್ ಜತೆ ಇರಲಿ: ಅನೇಕ ಬಾರಿ ವೈವಾಹಿಕ ಒತ್ತಡ ಮತ್ತು ಆಯಾಸದಿಂದ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ನಿಮ್ಮೊಂದಿಗೆ ಆಂಟಿ ಮೊಡವೆ ಕ್ರೀಮ್ ಅಥವಾ ಫೇಸ್‍ವಾಶ್ ಅನ್ನು ಇಟ್ಟುಕೊಳ್ಳಿ. ಇದು ನಿಮ್ಮ ಚರ್ಮವನ್ನು ಮೊಡವೆಗಳಿಂದ ರಕ್ಷಿಸುತ್ತದೆ. ಮೊಡವೆ ಸಮಸ್ಯೆ ಇರುವವರು ಮೇಕಪ್ ಮಾಡುವಾಗಲೂ ಇವುಗಳನ್ನು ಬಳಸಿದರೆ ಚರ್ಮವು ಆರೋಗ್ಯಕರವಾಗಿರುತ್ತದೆ.

ನೈಲ್ ಎಕ್ಸ್‌ಟೆನ್ಶನ್: ನೈಲ್ ಎಕ್ಸ್‌ಟೆನ್ಶನ್ ಅನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಲು ಎಂದಿಗೂ ಮರೆಯದಿರಿ. ತಾತ್ಕಾಲಿಕ ಉಗುರು ಎಕ್ಸ್‌ಟೆನ್ಶನ್ ಈಗ ಸುಲಭವಾಗಿ ಲಭ್ಯವಿವೆ. ಆಕಸ್ಮಿಕವಾಗಿ ಉಗುರು ಒಡೆಯುವ ಸಂದರ್ಭದಲ್ಲಿ ಈ ಉಗುರುಗಳು ತುಂಬಾ ಉಪಯೋಗಕ್ಕೆ ಬರುತ್ತವೆ. ಅಲ್ಲದೆ, ನಿಮ್ಮ ಕೈಗಳು ತುಂಬಾ ಸುಂದರವಾಗಿ ಕಾಣುತ್ತವೆ.

Whats_app_banner