ಪವರ್ ಆಫ್ ಕಂಪೌಂಡಿಂಗ್: 1 ಲಕ್ಷ ರೂ ಈ ಮ್ಯೂಚುಯಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದ್ರೆ 17 ವರ್ಷದಲ್ಲಿ 14 ಲಕ್ಷ ಗಳಿಕೆ
ಕನ್ನಡ ಸುದ್ದಿ  /  ಜೀವನಶೈಲಿ  /  ಪವರ್ ಆಫ್ ಕಂಪೌಂಡಿಂಗ್: 1 ಲಕ್ಷ ರೂ ಈ ಮ್ಯೂಚುಯಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದ್ರೆ 17 ವರ್ಷದಲ್ಲಿ 14 ಲಕ್ಷ ಗಳಿಕೆ

ಪವರ್ ಆಫ್ ಕಂಪೌಂಡಿಂಗ್: 1 ಲಕ್ಷ ರೂ ಈ ಮ್ಯೂಚುಯಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದ್ರೆ 17 ವರ್ಷದಲ್ಲಿ 14 ಲಕ್ಷ ಗಳಿಕೆ

ಮ್ಯೂಚುಯಲ್‌ ಪಂಡ್‌ವೊಂದರಲ್ಲಿ ಹೂಡಿಕೆ ಮಾಡುವ ಮುನ್ನ ಹಲವು ಮ್ಯೂಚುಯಲ್‌ ಫಂಡ್‌ಗಳ ಕುರಿತು ಅಧ್ಯಯನ ಮಾಡಬೇಕು. DSP ELSS Tax Saver Fundನಲ್ಲಿ ಹದಿನೇಳು ವರ್ಷಗಳ ಹಿಂದೆ ಹೂಡಿಕೆ ಮಾಡಿದವರಿಗೆ ಪವರ್‌ ಆಫ್‌ ಕಂಪೌಂಡಿಂಗ್‌ನಿಂದ 14 ಲಕ್ಷ ರೂಪಾಯಿ ರಿಟರ್ನ್‌ ದೊರಕಿದೆ.

1 ಲಕ್ಷ ರೂ ಈ ಮ್ಯೂಚುಯಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದ್ರೆ 17 ವರ್ಷದಲ್ಲಿ 14 ಲಕ್ಷ ಗಳಿಕೆ
1 ಲಕ್ಷ ರೂ ಈ ಮ್ಯೂಚುಯಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದ್ರೆ 17 ವರ್ಷದಲ್ಲಿ 14 ಲಕ್ಷ ಗಳಿಕೆ

ಈಗ ಸಾಕಷ್ಟು ಜನರು ಮ್ಯೂಚುಯಲ್‌ ಫಂಡ್‌ ಹೂಡಿಕೆ ಮಾಡುತ್ತಾರೆ. ನೀವು ಕೂಡ ಈ ರೀತಿ ಹೂಡಿಕೆ ಮಾಡುವುದಾರೆ ವಿವಿಧ ಮ್ಯೂಚುಯಲ್‌ ಫಂಡ್‌ಗಳ ಕುರಿತು ತಿಳಿದುಕೊಳ್ಳುವುದು ಉತ್ತಮ. ಈ ಹಿಂದೆ ಯಾವ ಮ್ಯೂಚುಯಲ್‌ ಫಂಡ್‌ ಅತ್ಯುತ್ತಮವಾಗಿ ಲಾಭ ತಂದುಕೊಟ್ಟಿದೆ ಎಂದು ತಿಳಿಯುವುದು ಕಲಿಕೆಯ ಉದ್ದೇಶದಿಂದ ಮಹತ್ವದ ವಿಚಾರ. ಸಾಕಷ್ಟು ಜನರು ಒಂದು ಅಥವಾ ಎರಡು ವರ್ಷಗಳಲ್ಲಿ ನಿರ್ದಿಷ್ಟ ಮ್ಯೂಚುಯಲ್‌ ಫಂಡ್‌ ಎಷ್ಟು ಲಾಭ ತಂದುಕೊಟ್ಟಿದೆ ಎಂದು ನೋಡುತ್ತಾರೆ. ಆದರೆ, ಹೆಚ್ಚು ವರ್ಷಗಳ ಅವಲೋಕನ ಮಾಡಿದರೆ ಇನ್ನಷ್ಟು ಹೊಳಹು ದೊರಕುತ್ತದೆ.

ಈ ರೀತಿ ಅವಲೋಕನ ಮಾಡುವುವರಿಗೆ ಅನುಕೂಲವಾಗುವಂತೆ ಒಂದು ಮ್ಯೂಚುಯಲ್‌ ಫಂಡ್‌ನ ಹಿಂದಿನ ರಿಟರ್ನ್‌ಗಳ ಕುರಿತು ತಿಳಿದುಕೊಳ್ಳೋಣ. ಈ ಮ್ಯೂಚುಯಲ್‌ ಫಂಡ್‌ ಹೆಸರು DSP ELSS Tax Saver Fund.ಇದು ಜನವರಿ 2007ರಲ್ಲಿ ಲಾಂಚ್‌ ಆಗಿತ್ತು. ಪವರ್‌ ಆಫ್‌ ಕಂಪೌಂಡಿಂಗ್‌ನ ನೆರವಿನಿಂದ ಹದಿನೇಳು ವರ್ಷಗಳಲ್ಲಿ ಇದು ಒಂದು ಲಕ್ಷಕ್ಕೆ ಹದಿನಾಲ್ಕು ಲಕ್ಷ ರೂಪಾಯಿ ತಂದುಕೊಟ್ಟಿದೆ. ಇದು ಪವರ್‌ ಆಫ್‌ ಕಂಪೌಂಡಿಂಗ್‌ ಪ್ರತಿಫಲವೂ ಹೌದು.

ಪವರ್‌ ಆಫ್‌ ಕಂಪೌಂಡಿಂಗ್‌ ಎಂದರೇನು?

ಪವರ್‌ ಆಫ್‌ ಕಂಪೌಂಡಿಂಗ್‌ ಅಂದ್ರೆ ಗೊತ್ತಿರಬಹುದು. ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ವರ್ಷ ವರ್ಷ ಬರುವ ರಿಟರ್ನ್‌ ಅನ್ನು ತೆಗೆಯದೆ ಅದನ್ನೂ ಬೆಳೆಸುತ್ತಾ ಹೋಗುವುದನ್ನೂ ಕಂಪೌಂಡಿಂಗ್‌ ಎನ್ನಬಹುದು. ಈ ವರ್ಷ ಒಂದು ಹತ್ತು ಸಾವಿರ ಹೂಡಿಕೆ ಮಾಡಿದ್ರೆ, ಅದಕ್ಕೆ ಐನೂರು ರೂಪಾಯಿ ಬಡ್ಡಿ ಬಂದಿದ್ರೆ ಆ ಐನೂರು ರೂಪಾಯಿ ಬಡ್ಡಿಯನ್ನು ತೆಗೆಯದೇ ಹತ್ತು ಸಾವಿರದ ಐನೂರು ರೂಪಾಯಿಯನ್ನು ಅಲ್ಲೇ ಉಳಿಸುವುದು. ಅರ್ಥ ಆಗಿರಬಹುದು. ಅರ್ಥ ಆಗಿಲ್ಲ ಅಂದರೆ ಇನ್ನೊಂದು ಸಿಂಪಲ್‌ ಅನಧಿಕೃತ ಉದಾಹರಣೆ ನೀಡುವೆ. ಇದನ್ನು ತಮಾಷೆಯಾಗಿ ಪರಿಗಣಿಸಿ. ಮನೆಯಲ್ಲಿ ಒಂದು ಬೆಕ್ಕು 4 ಮರಿ ಹಾಕ್ತು ಅಂದುಕೊಳ್ಳೋಣ. ಆ ಬೆಕ್ಕಿನ ಮರಿಗಳನ್ನು ಬೇರೆಯವರಿಗೆ ಕೊಡದೆ ಮನೆಯಲ್ಲೇ ಇಟ್ಟುಕೊಳ್ಳಿ. ಮುಂದಿನ ವರ್ಷ ತಾಯಿ ಬೆಕ್ಕು ಮತ್ತು ಮರಿ ಬೆಕ್ಕುಗಳು (ಎಲ್ಲವೂ ಹೆಣ್ಣು ಬೆಕ್ಕುಗಳಾಗಿದ್ದರೆ) ಅವೂ ಮರಿ ಹಾಕ್ತು ಎಂದಿರಲಿ. ಮತ್ತೊಂದು ವರ್ಷ ಉಳಿದ ಬೆಕ್ಕುಗಳು ಮತ್ತು ಹಿಂದಿನ ವರ್ಷ ಹುಟ್ಟಿದ ಮರಿಗಳು ದೊಡ್ಡದಾಗಿ ಮರಿ ಹಾಕ್ತು ಎಂದಿರಲಿ. ಹೀಗೆಯೇ ಪ್ರತಿವರ್ಷ ಎಲ್ಲವೂ ಮರಿ ಹಾಕ್ತ ಹೋಗಲಿ. ಮನೆ ತುಂಬಾ ಬೆಕ್ಕಿನ ಸಾಮ್ರಾಜ್ಯವೇ ಇರುತ್ತದೆ. ನೀವು ಮನೆ ಬಿಟ್ಟು ಹೋಗಬೇಕಾಗುವಷ್ಟು ಬೆಕ್ಕುಗಳು ಮರಿ ತುಂಬಬಹುದು. ಆ ಬೆಕ್ಕುಗಳು ಹಣವಾಗಿದ್ರೆ ನಿಮ್ಮ ಸಂಪತ್ತು ಹಲವು ಪಟ್ಟು ಹೆಚ್ಚಿರುತ್ತದೆ.

ಈಗ ಡಿಎಸ್‌ಪಿ ಇಎಲ್‌ಎಸ್‌ಎಸ್‌ ಟ್ಯಾಕ್ಸ್‌ ಸೇವರ್‌ ಮ್ಯೂಚುಯಲ್‌ ಫಂಡ್‌ ವಿಚಾರಕ್ಕೆ ವಾಪಸ್‌ ಬರೋಣ. ಇದು ಈಕ್ವಿಟಿ ಲಿಂಕ್ಡ್‌ ಸೇವಿಂಗ್‌ ಸ್ಕೀಮ್‌ ಆಗಿದೆ. ಇದರ ಲಾಕ್‌ ಇನ್‌ ಅವಧಿ 3 ವರ್ಷಗಳು. ಆದಾಯ ತೆರಿಗೆ ಕಾಯಿದೆಯ ಪ್ರಕಾರ 1.5 ಲಕ್ಷ ರೂ.ವರೆಗೆ ತೆರಿಗೆ ಉಳಿತಾಯ ಮಾಡಲು ಇದರಿಂದ ಸಾಧ್ಯವಿತ್ತು.

ಆದಾಯ ತೆರಿಗೆ ಕಾಯಿದೆ 1961ರ 80ಸಿಯಡಿಯಲ್ಲಿ ಇಎಲ್‌ಎಸ್‌ಎಸ್‌ ಎಂಬ ವೈವಿಧ್ಯಮಯ ಈಕ್ವಿಟಿ ಮ್ಯೂಚುಯಲ್‌ ಪಂಡ್‌ನಲ್ಲಿ ತೆರಿಗೆ ಉಳಿತಾಯ ಮಾಡಬಹುದು.

ಹೂಡಿಕೆದಾರರು ಪ್ರತಿವರ್ಷ 1.5 ಲಕ್ಷ ತೆರಿಗೆ ಡಿಡಕ್ಷನ್‌ ಕ್ಲೇಮ್‌ ಮಾಡಬಹುದು. ಈ ಸ್ಕೀಮ್‌ನಲ್ಲಿ ಕನಿಷ್ಠ ಶೇಕಡ 80 ಭಾಗವು ಷೇರುಗಳಲ್ಲಿ ಹೂಡಿಕೆ ಮಾಡಲಾಗಿರುತ್ತದೆ.

ವರ್ಷ
ವಾರ್ಷಿಕ ರಿಟರ್ನ್‌ (ಶೇಕಡ)1 ಲಕ್ಷ ರೂ ಎಷ್ಟಾಯ್ತು? ರೂಗಳಲ್ಲಿ
1 ವರ್ಷ49.09      1,49,410
3 ವರ್ಷಗಳು                   21.04     1,77,410
5 ವರ್ಷಗಳು                     23.97    2,93,120
10 ವರ್ಷಗಳು                    17.55       5,03,763
ಇಲ್ಲಿಯವರೆಗೆ 17 ವರ್ಷ16.27      14,44,760

(ಮಾಹಿತಿ ಮೂಲ: dspim.com and AMFI; ಸೆಪ್ಟೆಂಬರ್‌  30, 2024 ತನಕದ ರಿಟರ್ನ್‌)

 

ಒಂದು ವರ್ಷದ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಶೇಕಡ 49 ರಿಟರ್ನ್‌ ದೊರಕುತ್ತಿತ್ತು. 1.49 ಲಕ್ಷ ರೂಪಾಯಿ ಆಗುತ್ತಿತ್ತು.

ಇದೇ ಹೂಡಿಕೆಯನ್ನು ಮೂರು ವರ್ಷದ ಹಿಂದೆ ಮಾಡಿದ್ದರೆ ಅದು 1.77 ಲಕ್ಷ ರೂಪಾಯಿ ಆಗಿರುತ್ತಿತ್ತು. ರಿಟರ್ನ್‌ 21.04 ಆಗುತ್ತಿತ್ತು.

ಆದರೆ, ಯಾರಾದರೂ ಐದು ವರ್ಷದ ಹಿಂದೆಯೇ ಈ ಮ್ಯೂಚುಯಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದರೆ ಅವರ ಹೂಡಿಕೆ ಮೊತ್ತ 2.93 ಲಕ್ಷ ರೂಪಾಯಿಗೆ ತಲುಪುತ್ತಿತ್ತು.

ಒಂದು ದಶಕದ ಹಿಂದೆ ಹೂಡಿಕೆ ಮಾಡಿದ್ದರೆ ಆ ಮೊತ್ತ 5.03 ಲಕ್ಷ ರೂಪಾಯಿಗೆ ತಲುಪುತ್ತಿತ್ತು.

ಈ ಸ್ಕೀಮ್‌ ಆರಂಭವಾದ ಸಮಯದಲ್ಲಿಯೇ ಹೂಡಿಕೆ ಮಾಡುತ್ತಿದ್ದರೆ ಈ ಹೂಡಿಕೆಗೆ 16.26ರಷ್ಟು ರಿಟರ್ನ್‌ ದೊರಕುತ್ತಿತ್ತು. ಅಂದರೆ, ನಿಮ್ಮ ಮೊತ್ತ 14.44 ಲಕ್ಷ ರೂಪಾಯಿಗೆ ತಲುಪುತ್ತಿತ್ತು.

ಗಮನಿಸಿ: ಇದು ಮಾಹಿತಿಗಾಗಿ ನೀಡಿದ ಬರಹ. ಸ್ವಯಂ ವಿವೇಚನೆಯಿಂದ ಹೂಡಿಕೆ ಕೈಗೊಳ್ಳಿ.

Whats_app_banner