ಕನ್ನಡ ಸುದ್ದಿ  /  ಜೀವನಶೈಲಿ  /  ರಸಂಗೆ ಇನ್ನಷ್ಟು ರುಚಿ ಸಿಗ್ಬೇಕಾ, ಹಾಗಿದ್ರೆ ಮನೆಯಲ್ಲೇ ಸಾರಿನ ಪುಡಿ ಮಾಡಿ; ಹತ್ತೇ ನಿಮಿಷದಲ್ಲಿ ತಯಾರಾಗುವ ರಸಂ ಪುಡಿ ಇದು

ರಸಂಗೆ ಇನ್ನಷ್ಟು ರುಚಿ ಸಿಗ್ಬೇಕಾ, ಹಾಗಿದ್ರೆ ಮನೆಯಲ್ಲೇ ಸಾರಿನ ಪುಡಿ ಮಾಡಿ; ಹತ್ತೇ ನಿಮಿಷದಲ್ಲಿ ತಯಾರಾಗುವ ರಸಂ ಪುಡಿ ಇದು

ಯಾವುದೇ ಭೋಜನ ಕಾರ್ಯಕ್ರಮವಿರಲಿ ರಸಂ ಇಲ್ಲ ಎಂದರೆ ಊಟ ಪರಿಪೂರ್ಣವಾಗುವುದಿಲ್ಲ. ಎಷ್ಟೇ ಬಗೆಯ ಖಾದ್ಯಗಳಿದ್ದರೂ ರಸಂ ಅನ್ನ ತಿಂದರೆ ಮಾತ್ರ ಹೊಟ್ಟೆ ತುಂಬುತ್ತೆ. ಇದು ದಕ್ಷಿಣ ಭಾರತೀಯರ ಐಕಾನಿಕ್‌ ಡಿಶ್‌ ಕೂಡ. ನೀವು ಮನೆಯಲ್ಲಿ ಮಾಡುವ ರಸಂಗೆ ಎಕ್ಸ್ಟ್ರಾ ರುಚಿ ಬರ್ಬೇಕು ಅಂದ್ರೆ ಸಾರಿನ ಪುಡಿಯನ್ನು ಮನೆಯಲ್ಲೇ ತಯಾರಿಸಬೇಕು. ಇಲ್ಲಿದೆ ರಸಂ ಪುಡಿ ತಯಾರಿಸುವ ವಿಧಾನ.

ರಸಂಗೆ ಇನ್ನಷ್ಟು ರುಚಿ ಬರ್ಬೇಕಾ,  ಹತ್ತೇ ನಿಮಿಷದಲ್ಲಿ ತಯಾರಾಗುವ ರಸಂ ಪುಡಿ ಇದು
ರಸಂಗೆ ಇನ್ನಷ್ಟು ರುಚಿ ಬರ್ಬೇಕಾ, ಹತ್ತೇ ನಿಮಿಷದಲ್ಲಿ ತಯಾರಾಗುವ ರಸಂ ಪುಡಿ ಇದು

ದಕ್ಷಿಣ ಭಾರತದಲ್ಲಿ ಆಹಾರ ಖಾದ್ಯಗಳಲ್ಲಿ ಸಾಂಬಾರು, ಸಾರು ಭಿನ್ನ ರುಚಿಯನ್ನ ಹೊಂದಿರುತ್ತವೆ. ಸಾಂಬಾರು, ಸಾರು ಇಲ್ಲದೇ ಇಲ್ಲಿ ಊಟ ಆಗುವುದೇ ಇಲ್ಲ. ಇನ್ನು ವಿಶೇಷ ಸಂದರ್ಭಗಳಲ್ಲಿನ ಭೋಜನ ಎಂದರೆ ಇದರಲ್ಲಿ ಸಾರು ಹಾಗೂ ಸಾಂಬಾರ್‌ ಎರಡೂ ಮಸ್ಟ್‌. ಬಗೆ ಬಗೆ ಖಾದ್ಯಗಳ ನಡುವೆ ರಸಂ ಇಲ್ಲ ಎಂದರೆ ಊಟ ಪರಿಪೂರ್ಣವಾಗುವುದೇ ಇಲ್ಲ. ಇತ್ತೀಚಿಗೆ ಮಾಂಸಾಹಾರದ ಊಟದಲ್ಲೂ ರಸಂ ಅನ್ನು ಕುಡಿಯಲು ಕೊಡುತ್ತಾರೆ. ಈ ರಸಂಗೆ ರುಚಿ ನೀಡುವುದೇ ರಸಂ ಪುಡಿ. ನಿಮ್ಮನೆಯಲ್ಲಿ ತಯಾರಿಸುವ ರಸಂಗೆ ಭಿನ್ನ ರುಚಿ ಸಿಗಬೇಕು ಅಂದ್ರೆ ಮನೆಯಲ್ಲೇ ರಸಂ ಪುಡಿ ತಯಾರಿಸಬೇಕು.

ಟ್ರೆಂಡಿಂಗ್​ ಸುದ್ದಿ

ರಸಂ ಕೇವಲ ಬಾಯಿ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಇದು ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ಕಾಳುಮೆಣಸು, ಈರುಳ್ಳಿ, ಬೆಳ್ಳುಳ್ಳಿ ಎಲ್ಲವನ್ನೂ ಬಳಸುವ ಕಾರಣ ಆರೋಗ್ಯ ವರ್ಧಕವಾಗುತ್ತದೆ. ಮಲಬದ್ಧತೆ ಕಡಿಮೆಯಾಗಲು ರಸಂ ಸೇವನೆ ಉತ್ತಮ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಚಿಕ್ಕ ಮಕ್ಕಳಿಗೂ ಅನ್ನದೊಂದಿಗೆ ರಸಂ ಕಲಿಸಿ ತಿನ್ನಿಸುತ್ತಾರೆ. ಮನೆಯಲ್ಲೇ ಡಿಫ್ರೆಂಟ್‌ ರುಚಿಯ ಸಾರಿನ ಪುಡಿಯನ್ನು ತಯಾರಿಸಿ ಇಟ್ಟುಕೊಂಡರೆ, ಪ್ರತಿದಿನ ರುಚಿಕರವಾದ ರಸಂ ಮಾಡಿ ಸವಿಯಬಹುದು. ಇದನ್ನು ಮಾಡುವುದು ತುಂಬಾ ಸುಲಭ. ಒಮ್ಮೆ ತಯಾರಿಸಿದರೆ 6 ತಿಂಗಳವರೆಗೆ ಸಂಗ್ರಹಿಸಬಹುದು. ಹಾಗಾದ್ರೆ ರಸಂ ಪೌಡರ್ ಮಾಡುವುದು ಹೇಗೆ, ಅದನ್ನು ತಯಾರಿಸಲು ಯಾವೆಲ್ಲಾ ಸಾಮಗ್ರಿಗಳು ಎಂಬಿತ್ಯಾದಿ ವಿವರ ಇಲ್ಲಿದೆ.

ರಸಂ ಪೌಡರ್ ರೆಸಿಪಿಗೆ ಬೇಕಾಗುವ ಸಾಮಗ್ರಗಿಳು

ಮೆಣಸು - 1 ಚಮಚ, ಧನಿಯಾ - 1 ಕಪ್, ಉದ್ದಿನಬೇಳೆ - ಒಂದು ಚಮಚ, ಇಂಗು - ಕಾಲು ಚಮಚ, ಕರಿಮೆಣಸು - 8, ಬೆಳ್ಳುಳ್ಳಿ - ಹತ್ತು ಎಸಳು, ಜೀರಿಗೆ - 1 ಚಮಚ, ಕರಿಬೇವು - ಸ್ವಲ್ಪ,

ರಸಂ ಪುಡಿ ತಯಾರಿಸುವ ವಿಧಾನ

ಒಲೆಯ ಮೇಲೆ ಬಾಣಲೆ ಇಟ್ಟು ಧನಿಯಾ, ಕಾಳುಮೆಣಸು, ಜೀರಿಗೆ ಮತ್ತು ಉದ್ದಿನಬೇಳೆ ಹುರಿದಿಟ್ಟುಕೊಳ್ಳಿ. ಅವು ತಣ್ಣದಾಗ ಮೇಲೆ ಮಿಕ್ಸಿಂಗ್ ಜಾರ್‌ನಲ್ಲಿ ಹಾಕಿ. ಈಗ ಅದೇ ಬಾಣಲೆಗೆ ಅರ್ಧ ಚಮಚ ಎಣ್ಣೆ ಹಾಕಿ ಒಣ ಮೆಣಸನ್ನು ಹುರಿದು ತೆಗೆದು ಮಿಕ್ಸಿ ಜಾರ್‌ಗೆ ಹಾಕಿ. ಬೆಳ್ಳುಳ್ಳಿ ಎಸಳನ್ನು ಸಿಪ್ಪೆ ತೆಗೆಯದೇ ಸೇರಿಸಿ. ಇಂಗು ಹಾಗೂ ಕರಿಬೇವು ಸೇರಿಸಿ ಮತ್ತು ಎಲ್ಲವನ್ನೂ ನುಣ್ಣಗೆ ರುಬ್ಬಿಕೊಳ್ಳಿ. ಈಗ ನಿಮ್ಮ ಮುಂದೆ ರಸಂ ಪುಡಿ ಸವಿಯಲು ಸಿದ್ಧ. ಇದನ್ನು ಗಾಳಿಯಾಡದ ಡಬ್ಬದಲ್ಲಿ ಇಟ್ಟರೆ ಬಹಳ ದಿನಗಳವರೆಗೆ ಸಂಗ್ರಹಿಸಿ ಇಡಬಹುದು. ಇಲ್ಲಿ ನಾವು ಒಂದು ವಾರಕ್ಕೆ ಮಾತ್ರ ಅಳತೆಗಳನ್ನು ನೀಡಿದ್ದೇವೆ. ಇದನ್ನೇ ಎರಡು ಪಟ್ಟು ಮಾಡಿಕೊಂಡು ತಿಂಗಳಿಗಾಗುವಷ್ಟು ರಸಂ ಪುಡಿ ಮಾಡಿಟ್ಟುಕೊಂಡರೆ ಗಡಿಬಿಡಿ ತಪ್ಪುತ್ತದೆ ಮಾತ್ರವಲ್ಲ ನಿಮ್ಮ ಮನೆಯ ಸಾರಿಗೆ ಬೇರೆ ರುಚಿಯೇ ಸಿಗುತ್ತದೆ.

ಪ್ರತಿನಿತ್ಯ ಹಾಗೂ ವಾರದಲ್ಲಿ ಎರಡು ಮೂರು ದಿನ ರಸಂ ಮಾಡುವವರಿಗೆ ಇದು ಹೇಳಿ ಮಾಡಿಸಿದ್ದು. ಯಾವುದೇ ಊಟದ ಕೊನೆಯಲ್ಲಿ ಸಾರು ಜೊತೆ ಅನ್ನವನ್ನು ತಿನ್ನುವುದರಿಂದ ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆ ಉಂಟಾಗುವುದಿಲ್ಲ. ಅನ್ನಕ್ಕೆ ರಸಂ ಸೇರಿಸುವುದರಿಂದ ಜೀರ್ಣಕ್ರಿಯೆ ತೊಂದರೆಗಳು ನಿವಾರಣೆಯಾಗುತ್ತವೆ. ಇದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಇದು ನೆಗಡಿ ಮತ್ತು ಕೆಮ್ಮಿನಂತಹ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ರಸಂ ಕೆಲವು ಸಾವಿರ ವರ್ಷಗಳ ಹಿಂದಿನಿಂದಿಲೂ ದಕ್ಷಿಣ ಭಾರತದ ಪಾಕಪದ್ಧತಿಯ ಭಾಗವಾಗಿತ್ತು ಎಂದು ಹೇಳಲಾಗುತ್ತದೆ. ಈ ರಸಂ ಅನ್ನು ಅನ್ನೊಂದಿಗೆ ತಿನ್ನುವುದು ಮಾತ್ರವಲ್ಲ, ಹಾಗೆಯೇ ಕುಡಿಯಬಹುದು. ಮಳೆಗಾಲಕ್ಕಂತೂ ರಸಂ ಹೇಳಿ ಮಾಡಿಸಿದ್ದು.

ವಿಭಾಗ