ಕನ್ನಡ ಸುದ್ದಿ  /  ಜೀವನಶೈಲಿ  /  ದಿನ ಕಳೆದಂತೆ ನಡಿಗೆ ನಿಧಾನವಾಗುತ್ತಿದೆಯೇ? ವಾಕಿಂಗ್ ವೇಗವಾಗಲು ಈ ಸಲಹೆ ಪಾಲಿಸಿ ನೋಡಿ

ದಿನ ಕಳೆದಂತೆ ನಡಿಗೆ ನಿಧಾನವಾಗುತ್ತಿದೆಯೇ? ವಾಕಿಂಗ್ ವೇಗವಾಗಲು ಈ ಸಲಹೆ ಪಾಲಿಸಿ ನೋಡಿ

ಹೆಚ್ಚಾಗಿ ನಗರಗಳಲ್ಲಿ ವಾಸಿಸುವ ಜನರು ಬೆಳಗ್ಗೆ ಅಥವಾ ಸಂಜೆ ವೇಳೆ ವಾಕಿಂಗ್ ಮಾಡುವುದನ್ನು ರೂಢಿಸಿಕೊಂಡಿರುತ್ತಾರೆ. ನಡಿಗೆ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳೂ ಇವೆ. ಕೆಲವರು ತಮ್ಮ ನಡಿಗೆ ನಿಧಾನವಾಗುತ್ತಿದೆ ಎಂಬ ಬೇಸರದಲ್ಲಿರುತ್ತಾರೆ. ವಾಕಿಂಗ್ ವೇಗವಾಗಿ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಸಲಹೆ.

ದಿನ ಕಳೆದಂತೆ ನಡಿಗೆ ನಿಧಾನವಾಗುತ್ತಿದೆಯೇ? ವಾಕಿಂಗ್ ವೇಗವಾಗಲು ಈ ಸಲಹೆ ಪಾಲಿಸಿ ನೋಡಿ
ದಿನ ಕಳೆದಂತೆ ನಡಿಗೆ ನಿಧಾನವಾಗುತ್ತಿದೆಯೇ? ವಾಕಿಂಗ್ ವೇಗವಾಗಲು ಈ ಸಲಹೆ ಪಾಲಿಸಿ ನೋಡಿ (Pixabay)

ಬಹುತೇಕ ಮಂದಿ ವಾಕಿಂಗ್ ಮಾಡುವುದನ್ನು ನಿತ್ಯ ಜೀವನದ ಭಾಗವಾಗಿಸಿಕೊಂಡಿರುತ್ತಾರೆ. ಬೆಳಗ್ಗೆ ಅಥವಾ ಸಂಜೆಯ ಸಮಯವನ್ನು ಇದಕ್ಕಾಗಿ ಮೀಸಲಿಡುತ್ತಾರೆ. ಕೆಲವರು ಬೆಳಗ್ಗೆ ಬೇಗನೆ ಎದ್ದು ವಾಕಿಂಗ್ ಹೊರಟರೆ ಇನ್ನು ಕೆಲವರು ಮುಸ್ಸಂಜೆಯ ಹೊತ್ತಿಗೆ ಅಥವಾ ರಾತ್ರಿ ಊಟವಾದ ಬಳಿಕ ವಾಕ್ ಮಾಡಲು ಇಷ್ಟಪಡುತ್ತಾರೆ. ವಾಕಿಂಗ್ ಮಾಡುವುದರಿಂದ ಹೃದಯ ಆರೋಗ್ಯಕ್ಕೂ ಕೂಡ ಒಳ್ಳೆಯದು ಎಂಬುದು ತಜ್ಞರು ಅಭಿಪ್ರಾಯ. ಆದರೆ, ಕೆಲವರಿಗೆ ವಾಕಿಂಗ್ ಮಾಡುವಾಗ ತಮಗೆ ವೇಗವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ನಡಿಗೆಯು ನಿಧಾನಗತಿಯಲ್ಲಿದೆ ಎಂಬ ಚಿಂತೆ ಕಾಡುತ್ತದೆ. ಹೀಗಾಗಿ ವೇಗವಾಗಿ ನಡೆಯುವುದು ಹೇಗೆ ಎಂಬುದರ ಕುರಿತು ಇಲ್ಲಿದೆ ಕೆಲವು ಸಲಹೆಗಳು.

ಟ್ರೆಂಡಿಂಗ್​ ಸುದ್ದಿ

ನಡಿಗೆಯ ವೇಗವನ್ನು ಹೆಚ್ಚಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬ ಮಾಹಿತಿ ಇಲ್ಲಿದೆ.

  • ವೇಗದ ನಡಿಗೆಯು ಹೆಚ್ಚಿನ ಕ್ಯಾಲರಿಗಳನ್ನು ಕಡಿಮೆ ಮಾಡಲು ಕಾರಣವಾಗುತ್ತದೆ.
  • ನಿಮ್ಮ ಫಿಟ್‌ನೆಸ್ ಮಟ್ಟ ಹೆಚ್ಚಿಸುತ್ತದೆ.
  • ಕಡಿಮೆ ಅವಧಿಯಲ್ಲಿ ಬೇಗ ನಡಿಗೆಯನ್ನು ಪೂರ್ಣಗೊಳಿಸುವುದರಿಂದ ಸಮಯ ಉಳಿಸಬಹುದು.
  • ವೇಗದ ನಡಿಗೆಯು ನಿಮ್ಮ ಹೃದಯ ಬಡಿತವನ್ನು ತೀವ್ರತೆಯ ವ್ಯಾಯಾಮದ ಮಟ್ಟಕ್ಕೆ ಏರಿಸುತ್ತದೆ. ನಿಮ್ಮ ಹೃದಯವನ್ನು ಬಲಪಡಿಸುತ್ತದೆ. ರಕ್ತವನ್ನು ಪಂಪ್ ಮಾಡುವಲ್ಲಿ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ | ಜಾನ್ವಿ ಕಪೂರ್‌ ಮಿನಿ ಸ್ಕರ್ಟ್‌ ಫೋಟೋಶೂಟ್‌ಗೆ ಕಾಮೆಂಟ್‌ ಸೆಕ್ಷನ್‌ನಲ್ಲಿ ಹೆಚ್ಚಾಯ್ತು ಪೋಲಿತನ PHOTOS

ಉತ್ತಮ ವಾಕಿಂಗ್ ವೇಗ ಎಂದರೇನು?

ಅಧ್ಯಯನವೊಂದರ ಪ್ರಕಾರ, ಉತ್ತಮ ಫಿಟ್‌ನೆಸ್ ಮಟ್ಟವನ್ನು ಹೊಂದಿರುವ ವ್ಯಕ್ತಿಯ ಅಂದಾಜು ಮಧ್ಯಮ ವಾಕಿಂಗ್ ವೇಗವು ಪ್ರತಿ ಮೈಲಿಗೆ 15 ನಿಮಿಷಗಳು ಅಥವಾ ಪ್ರತಿ ಕಿಲೋಮೀಟರಿಗೆ 9 ನಿಮಿಷಗಳಾಗಿವೆ. ಒಬ್ಬ ವ್ಯಕ್ತಿಯು ಪ್ರತಿ ಮೈಲಿಗೆ 12 ನಿಮಿಷಗಳ ಕಾಲ ನಡೆಯಲು ಅಥವಾ ಪ್ರತಿ ಕಿಲೋಮೀಟರಿಗೆ ಕೇವಲ 7.5 ನಿಮಿಷಗಳಲ್ಲಿ ಗುರಿ ತಲುಪಿದಾಗ ವೇಗದ ನಡಿಗೆ ಎಂದು ಪರಿಗಣಿಸಲಾಗುತ್ತದೆ. ಆದರೂ, ಇದು ಫಿಟ್‌ನೆಸ್ ಮಟ್ಟ, ವಯಸ್ಸು ಮತ್ತು ಆರೋಗ್ಯ ಸ್ಥಿತಿಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.

ವಾಕಿಂಗ್ ವೇಗವನ್ನು ಹೆಚ್ಚಿಸುವುದು ಹೇಗೆ?

ಅನೇಕ ಮಾರ್ಗಗಳು ನಿಮಗೆ ವೇಗವಾಗಿ ನಡೆಯಲು ಸಹಾಯ ಮಾಡುತ್ತವೆ. ನಿಮಗಾಗಿ ಇಲ್ಲಿವೆ ಕೆಲವು ಸಲಹೆಗಳು.

  • ನೇರವಾಗಿ ನಿಲ್ಲಿ

ನಿಲ್ಲುವಾಗ ಅಥವಾ ಏನಾದರೂ ಕೆಲಸ ಮಾಡುವಾಗ ಆದಷ್ಟು ನೇರವಾಗಿ ನಿಲ್ಲಲು ಪ್ರಯತ್ನಿಸಿ. ನೇರವಾಗಿ ನಿಲ್ಲುವುದರಿಂದ ಉಸಿರಾಟವನ್ನು ಸುಲಭಗೊಳಿಸುತ್ತದೆ ಹಾಗೂ ನೀವು ವೇಗವಾಗಿ ನಡೆಯಲು ಸಾಧ್ಯವಾಗುತ್ತದೆ. ಇದು ಸರಳವಾದರೂ ಪರಿಣಾಮಕಾರಿಯಾಗಿದೆ.

  • ನಿಮ್ಮ ತೋಳುಗಳನ್ನು ಸ್ವಿಂಗ್ ಮಾಡಿ

ವ್ಯಾಯಾಮ ಮಾಡುವಾಗ ತೋಳುಗಳನ್ನು ಸ್ವಿಂಗ್ ಮಾಡುವುದರ ಬಗ್ಗೆ ನಿಮಗೆ ಗೊತ್ತಿರಬಹುದು. ಈ ತಾಲೀಮನ್ನು ಮಾಡುವುದರಿಂದ ವಾಕಿಂಗ್ ವೇಗವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

  • ಸಣ್ಣ ಹೆಜ್ಜೆಗಳನ್ನು ತೆಗೆದುಕೊಳ್ಳಿ

ಸಣ್ಣ ಹೆಜ್ಜೆಗಳನ್ನು ತೆಗೆದುಕೊಳ್ಳುವುದರಿಂದ ನಡಿಗೆಯ ವೇಗವನ್ನು ಹೇಗೆ ಹೆಚ್ಚಿಸಲು ಸಾಧ್ಯ ಎಂಬುದನ್ನು ನೀವು ಯೋಚಿಸಬಹುದು. ಆದರೆ, ಚಿಕ್ಕದಾದ ಹಾಗೂ ತ್ವರಿತವಾದ ಹೆಜ್ಜೆಗಳು ನಿಮ್ಮನ್ನು ವೇಗವಾಗಿ ನಡೆಯುವಂತೆ ಮಾಡುತ್ತದೆ. ಸಣ್ಣ, ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ನಿಮಗೆ ಬೇಗ ಆಯಾಸವಾಗುವುದಿಲ್ಲ, ಆದ್ದರಿಂದ ನೀವು ಹೆಚ್ಚು ನಡೆಯಲು ಸಾಧ್ಯವಾಗುತ್ತದೆ.

  • ವ್ಯಾಯಾಮ ಮಾಡಿ

ವ್ಯಾಯಾಮಗಳನ್ನು ಮಾಡುವುದರಿಂದ ಕಾಲಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ನಿಮ್ಮ ನಡಿಗೆಗೆ ಹೆಚ್ಚಿನ ಶಕ್ತಿ ನೀಡುತ್ತದೆ. ನೀವು ಇಡುವ ಪ್ರತಿ ಹೆಜ್ಜೆಯೂ ವೇಗವಾಗಿಡಲು ಸಾಧ್ಯವಾಗುತ್ತದೆ.

ಉತ್ತಮ ವಾಕಿಂಗ್ ಶೂ ಧರಿಸಿ

ನಿಮ್ಮ ನಿಧಾನಗತಿ ನಡಿಗೆಗಾಗಿ ನಿಮ್ಮನ್ನು ನೀವೇ ದೂಷಿಸುತ್ತಿರಬಹುದು. ಆದರೆ, ನೀವು ಹಾಕಿರುವ ಚಪ್ಪಲಿ ಅಥವಾ ಶೂಗಳಿಂದಲೂ ನಿಮ್ಮ ನಡಿಗೆ ನಿಧಾನವಾಗಿರಬಹುದು. ವೇಗವಾಗಿ ನಡೆಯಲು ನೀವು ಸರಿಯಾದ ಶೂಗಳನ್ನು ಧರಿಸಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಶೂಗಳು ಹಗುರವಾಗಿರಬೇಕು. ಅಲ್ಲದೆ, ದೀರ್ಘ ನಡಿಗೆಗಾಗಿ ನಿಮಗೆ ಹೆಚ್ಚು ಮೆತ್ತನೆಯ ಶೂಗಳು ಬೇಕಾಗುತ್ತವೆ.

ಒಟ್ಟಿನಲ್ಲಿ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಉತ್ತಮ. ಆದರೆ, ನಿಮ್ಮ ನಡಿಗೆಯನ್ನು ನಿಧಾನಗೊಳಿಸದೆ ಕೊಂಚ ವೇಗವಾಗಿ ನಡೆಯಲು, ಮೇಲೆ ತಿಳಿಸಿದ ಕ್ರಮಗಳನ್ನು ಅಳವಡಿಸಿ.