ಭವಿಷ್ಯದಲ್ಲಿ ಗಂಡುಮಕ್ಕಳೇ ಇರೋದಿಲ್ಲ ಎನ್ನುತ್ತಿದೆ ಅಧ್ಯಯನ; ಕ್ಷೀಣಿಸುತ್ತಿದೆ Y Chromosomes ಸಂಖ್ಯೆ, ಏನಿದು ವರದಿ-health news disappearing y chromosome are men to go extinct could the future of humanity be at risk rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಭವಿಷ್ಯದಲ್ಲಿ ಗಂಡುಮಕ್ಕಳೇ ಇರೋದಿಲ್ಲ ಎನ್ನುತ್ತಿದೆ ಅಧ್ಯಯನ; ಕ್ಷೀಣಿಸುತ್ತಿದೆ Y Chromosomes ಸಂಖ್ಯೆ, ಏನಿದು ವರದಿ

ಭವಿಷ್ಯದಲ್ಲಿ ಗಂಡುಮಕ್ಕಳೇ ಇರೋದಿಲ್ಲ ಎನ್ನುತ್ತಿದೆ ಅಧ್ಯಯನ; ಕ್ಷೀಣಿಸುತ್ತಿದೆ Y Chromosomes ಸಂಖ್ಯೆ, ಏನಿದು ವರದಿ

Disappearing Y chromosome: ಪುರುಷ ಲಿಂಗ ನಿರ್ಣಯಕ್ಕೆ ಅಗತ್ಯವಾದ ವೈ ಕ್ರೋಮೊಸೋಮ್‌ಗಳ (Y chromosomes) ಸಂಖ್ಯೆ ನಿಧಾನಕ್ಕೆ ಕ್ಷೀಣಿಸುತ್ತಿದೆ. ಇನ್ನು ಕೆಲವು ಮಿಲಿಯನ್ ವರ್ಷಗಳಲ್ಲಿ ಅದು ಸಂಪೂರ್ಣವಾಗಿ ಕಣ್ಮರೆಯಾಗಬಹುದು ಎಂಬ ಆಘಾತಕಾರಿ ಅಂಶವನ್ನು ಅಧ್ಯಯನವೊಂದು ತಿಳಿಸಿದೆ. ಭವಿಷ್ಯದಲ್ಲಿ ಕೇವಲ ಹೆಣ್ಣುಮಕ್ಕಳು ಮಾತ್ರ ಜನಿಸುತ್ತಾರೆ ಎನ್ನಲಾಗುತ್ತಿದೆ.

ಕ್ಷೀಣಿಸುತ್ತಿದೆ Y Chromosomes ಸಂಖ್ಯೆ
ಕ್ಷೀಣಿಸುತ್ತಿದೆ Y Chromosomes ಸಂಖ್ಯೆ

ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈ ಕ್ರೋಮೋಸೋಮ್‌ನದ್ದೇ ಸುದ್ದಿ. ವೈ ಕ್ರೋಮೋಸೋಮ್‌ಗಳ ಸಂಖ್ಯೆ ನಿಧಾನಕ್ಕೆ ಕ್ಷೀಣಿಸುತ್ತಿದ್ದು ಕೆಲವು ಮಿಲಿಯನ್ ವರ್ಷಗಳಲ್ಲಿ ಇದು ಸಂಪೂರ್ಣ ಕಣ್ಮರೆಯಾಗುತ್ತದೆ, ಇದರಿಂದ ಇನ್ನು ಮುಂದೆ ಪ್ರಪಂಚದಲ್ಲಿ ಗಂಡುಮಕ್ಕಳು ಜನಿಸುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾದರೆ ಏನಿದು ವೈ ಕ್ರೋಮೋಸೋಮ್‌, ಇದು ಕ್ಷೀಣಿಸುತ್ತಿರುವುದು ನಿಜವೇ, ಇನ್ನು ಸಾವಿರಾರು ವರ್ಷಗಳ ನಂತರ ಹೆಣ್ಣುಮಕ್ಕಳು ಮಾತ್ರ ಜನಿಸುತ್ತಾರಾ, ಪ್ರಪಂಚದಲ್ಲಿ ಗಂಡುಮಕ್ಕಳು ಇರುವುದಿಲ್ವಾ ಎಂಬೆಲ್ಲಾ ಪ್ರಶ್ನೆ ಜನರನ್ನು ಕಾಡುತ್ತಿದೆ.  

ವೈ ಕ್ರೋಮೋಸೋಮ್‌ಗಳು ಮಾನವ ಹಾಗೂ ಇತರ ಸಸ್ತನಿಗಳ ಗಂಡು ಲಿಂಗವನ್ನು ನಿರ್ಧರಿಸುವ ಜೀನ್ ಅಥವಾ ವರ್ಣತಂತುಗಳಾಗಿವೆ. ಗಂಡುಮಕ್ಕಳ ಲಿಂಗ ನಿರ್ಧಾರ ಮಾಡುವ ಈ ವೈ ಕ್ರೋಮೋಸೋಮ್‌ಗಳ ಸಂಖ್ಯೆ ನಿಧಾನಕ್ಕೆ ಕ್ಷೀಣಿಸುತ್ತಿದೆ. ಮಾತ್ರವಲ್ಲ ಇನ್ನು ಕೆಲವು ಮಿಲಿಯನ್ ವರ್ಷಗಳಲ್ಲಿ ಈ ಕ್ರೋಮೋಸೋಮ್‌ ಸಂಪೂರ್ಣವಾಗಿ ಕಣ್ಮರೆಯಾಗಲಿದೆ ಎಂದು ಅಧ್ಯಯನ ತಿಳಿಸುತ್ತದೆ. ಹೊಸ ಲಿಂಗ-ನಿರ್ಧರಿಸುವ ಜೀನ್ ವಿಕಸನಗೊಳ್ಳದ ಹೊರತು ನಮ್ಮ ಮನುಕುಲಕ್ಕೆ ಕಂಟಕವಾಗಬಹುದು, ಮುಂದಿನ ದಿನಗಳಲ್ಲಿ ಗಂಡುಮಕ್ಕಳೇ ಇರದಿರಬಹುದು ಎಂದು ಈ ಅಧ್ಯಯನ ಹೇಳಿದೆ.

ಕ್ರೋಮೊಸೋಮ್‌

ಹೆಣ್ಣೊಬ್ಬಳು ಗರ್ಭಿಣಿಯಾದ ತಕ್ಷಣ ಗಂಡು ಮಗು ಹುಟ್ಟಬಹುದೋ ಅಥವಾ ಹೆಣ್ಣು ಮಗು ಹುಟ್ಟಬಹುದೋ ಎಂದು ಚರ್ಚೆ ಆರಂಭವಾಗುತ್ತದೆ. ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ ಆ ಮಗು ತಂದೆಯಿಂದ ಬರುವ ವರ್ಣತಂತುಗಳನ್ನು ಅವಲಂಬಿಸಿರುತ್ತದೆ. ಹೆಣ್ಣುಮಕ್ಕಳಲ್ಲಿ ಎಕ್ಸ್ ಕ್ರೋಮೋಸೋಮ್‌ ಇರುತ್ತದೆ. ಗಂಡುಮಕ್ಕಳಲ್ಲಿ ಎಕ್ಸ್ ಹಾಗೂ ವೈ ಎರಡೂ ಕ್ರೋಮೋಸೋಮ್‌ಗಳಿರುತ್ತವೆ. ಪತಿಯಿಂದ ವೈ ಕ್ರೋಮೋಸೋಮ್ ಪತ್ನಿಗೆ ಸೇರಿದರೆ ಹೆಣ್ಣುಮಗು, ಹಾಗೆಯೇ ಎಕ್ಸ್ ಮತ್ತು ವೈ ಕ್ರೋಮೋಸೋಮ್ ಜೊತೆಯಾಗಿ ಸೇರಿ ಗಂಡು ಮಗು ಜನಿಸುತ್ತದೆ. ಆದರೆ ಪುರುಷರಲ್ಲಿ ವೈ ಕ್ರೋಮೋಸೋಮ್‌ಗಳು ಕಡಿಮೆಯಾಗುವ ಅಪಾಯವಿದ್ದು ಭವಿಷ್ಯದಲ್ಲಿ ಗಂಡುಮಕ್ಕಳೇ ಇಲ್ಲದಂತಾಗಬಹುದು ಎಂದು ಈ ಅಧ್ಯಯನ ಹೇಳುತ್ತಿದೆ.

ಆದರೆ ಈ ವಿಚಾರವಾಗಿ ಖುಷಿ ಪಡಬೇಕಾದ ಸುದ್ದಿ ಎಂದರೆ ಪ್ರಪಂಚದಲ್ಲಿರುವ ಒಂದು ಜಾತಿಯ ಇಲಿಗಳಲ್ಲಿ ಈಗಾಗಲೇ ವೈ ಕ್ರೋಮೋಸೋಮ್‌ ಸಂಪೂರ್ಣ ಕಣ್ಮರೆಯಾಗಿದೆ. ಆದರೂ ಅವುಗಳ ಸಂಖ್ಯೆ ಅಳಿದಿಲ್ಲ. ಪೀರ್‌ ರಿವ್ಯೂ ಜರ್ನಲ್ 'ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್' ನಲ್ಲಿ 2022ರಲ್ಲಿ ಪ್ರಕಟವಾದ ಅಧ್ಯಯನವು ಸ್ಪೈನಿ ಇಲಿಯು ಹೊಸ ಪುರುಷ-ನಿರ್ಧರಿಸುವ ಜೀನ್ ಅನ್ನು ಯಶಸ್ವಿಯಾಗಿ ವಿಕಸನಗೊಳಿಸಿದೆ ಎಂದು ತಿಳಿಸುತ್ತದೆ. ಆ ಕಾರಣಕ್ಕೆ ಮನುಷ್ಯನಲ್ಲಿ ಹೊಸ ಜೀನ್‌ಗಳ ವಿಕಸನ ಆಗಬಹುದು ಎಂಬ ಭರವಸೆ ಮೂಡುವಂತೆ ಮಾಡಿದೆ.

ಸಂಶೋಧನೆ ಹೇಳೋದೇನು?

ಇತ್ತೀಚಿಗೆ ನಡೆದ ಈ ಸಂಶೋಧನಾ ವರದಿಯ ಪ್ರಕಾರ ವೈ ಕ್ರೋಮೋಸೋಮ್ ಈಗ ಪುರುಷರಲ್ಲಿ ಕಡಿಮೆಯಾಗುತ್ತಿದೆ ಅಥವಾ ದುರ್ಬಲವಾಗುತ್ತಿದೆ. ಸಂಶೋಧನೆಯ ಪ್ರಕಾರ, ಕಳೆದ 166 ಮಿಲಿಯನ್ ವರ್ಷಗಳಲ್ಲಿ, ಸರಿಸುಮಾರು 900 ಸಕ್ರಿಯ ಜೀನ್‌ಗಳಲ್ಲಿ 55 Y ಕ್ರೋಮೋಸೋಮ್‌ನಿಂದ ಬಂದವು. 11 ಮಿಲಿಯನ್ ವರ್ಷಗಳಲ್ಲಿ, Y ಕ್ರೋಮೋಸೋಮ್ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ಇದು ವಿಜ್ಞಾನಿಗಳ ನಡುವೆ ಚರ್ಚೆಗೆ ಕಾರಣವಾಗಿದೆ, ಕೆಲವರು ವೈ ಕ್ರೋಮೋಸೋಮ್ ಅನಿರ್ದಿಷ್ಟವಾಗಿ ಉಳಿಯುತ್ತದೆ ಎಂದು ಹೇಳುತ್ತಾರೆ, ಆದರೆ ಇತರರು ಕೆಲವು ಸಾವಿರ ವರ್ಷಗಳಲ್ಲಿ ಅದು ಕಣ್ಮರೆಯಾಗುತ್ತದೆ ಎಂದು ಹೇಳುತ್ತಾರೆ. 

ವೈ ಕ್ರೋಮೋಸೋಮ್ 1438 ಜೀನ್‌ಗಳನ್ನು ಒಳಗೊಂಡಿದೆ. ಆದರೂ ಇದರ ಸಂಖ್ಯೆ ಕಾಲ ಕಾಲಕ್ಕೆ ಕುಸಿತವಾಗುತ್ತಲೇ ಇದೆ. 1438 ರಷ್ಟಿದ್ದ ಜೀನ್‌ಗಳಲ್ಲಿ ಈಗ ಕೇವಲ 45 ರಷ್ಟು ಉಳಿದಿದೆ. ಹಾಗಾಗಿ ಆ 45 ವಂಶವಾಹಿಗಳು ಕಣ್ಮರೆಯಾಗಲು ಕೆಲವು ಸಾವಿರ ವರ್ಷಗಳೇ ಬೇಕು.ಅದರ ನಂತರ ಮಾನವ ಸಂಕುಲದಲ್ಲಿ ಬರೀ ಹೆಣ್ಣುಮಕ್ಕಳೇ ಜನಿಸುತ್ತಾರೆ ಎಂದು ಹೇಳಲಾಗುತ್ತಿದೆ. ಖ್ಯಾತ ತಳಿಶಾಸ್ತ್ರ ವಿಜ್ಞಾನಿ ಜೆನ್ನಿಫರ್ ಮಾರ್ಷಲ್ ಗ್ರೇವ್ಸ್ ಅವರು ಹೊಸ ಅಧ್ಯಯನದ ನೇತೃತ್ವ ವಹಿಸಿದ್ದಾರೆ.

ಪುರುಷ ಕ್ರೋಮೋಸೋಮ್‌ಗಳು ಕಡಿಮೆಯಾಗುತ್ತಿರುವುದು ಆತಂಕಕಾರಿಯಾದರೂ, ಹೊಸ ಜೀನ್‌ಗಳು ಹುಟ್ಟುವ ಸಾಧ್ಯತೆಯೂ ಇದೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿರುವುದು ನೆಮ್ಮದಿಗೆ ಕಾರಣವಾಗಿದೆ.