ಕನ್ನಡ ಸುದ್ದಿ  /  ಜೀವನಶೈಲಿ  /  ಗಂಡು ಹೆಣ್ಣಿನ ಲಿಂಗ ತಾರತಮ್ಯ ನಿವಾರಣೆಗೆ ಪೋಷಕರ ವ್ಯಕ್ತಿತ್ವ, ಆಲೋಚನಾ ಕ್ರಮ ಹೇಗಿರಬೇಕು? ಮಕ್ಕಳ ಉತ್ತಮ ಮನಸ್ಥಿತಿಗೆ ಅಗತ್ಯ ವಿಧಾನಗಳಿವು

ಗಂಡು ಹೆಣ್ಣಿನ ಲಿಂಗ ತಾರತಮ್ಯ ನಿವಾರಣೆಗೆ ಪೋಷಕರ ವ್ಯಕ್ತಿತ್ವ, ಆಲೋಚನಾ ಕ್ರಮ ಹೇಗಿರಬೇಕು? ಮಕ್ಕಳ ಉತ್ತಮ ಮನಸ್ಥಿತಿಗೆ ಅಗತ್ಯ ವಿಧಾನಗಳಿವು

ಹೆಣ್ಣುಮಕ್ಕಳು ಹೀಗಿಯೇ ಇರಬೇಕು, ಗಂಡುಮಕ್ಕಳು ಹೀಗಿದ್ದರೆ ಮಾತ್ರವೇ ಸಮಾಜ ಒಪ್ಪಿಕೊಳ್ಳುವುದೆಂಬ ಹೇರಿಕೆಯಿಂದಾಗಿ ಮಕ್ಕಳು ಬೆಳೆಯುವ ಹಂತದಲ್ಲೇ ಅನೇಕ ಗೊಂದಲಗಳಿಗೆ ಒಳಗಾಗುತ್ತಾರೆ. ಅದರಿಂದ ಹೊರಬರುವುದು ಹೇಗೆ? ಇಲ್ಲಿದೆ ಪರಿಣಾಮಕಾರಿ ಉತ್ತರ.

 ಮಕ್ಕಳ ಆಲೋಚನೆ ಸರಿಯಾದ ದಿಕ್ಕಿನತ್ತ ಸಾಗಲು ಪೋಷಕರ ಜವಾಬ್ದಾರಿಗಳೇ? ಲಿಂಗ ತಾರತಮ್ಯ ನಿವಾರಣೆಗೆ ಅನುಸರಿಸಬೇಕಾದ ವಿಧಾನಗಳು ಯಾವುವು ಅನ್ನೋದರ ವಿವರ ಇಲ್ಲಿದೆ.
ಮಕ್ಕಳ ಆಲೋಚನೆ ಸರಿಯಾದ ದಿಕ್ಕಿನತ್ತ ಸಾಗಲು ಪೋಷಕರ ಜವಾಬ್ದಾರಿಗಳೇ? ಲಿಂಗ ತಾರತಮ್ಯ ನಿವಾರಣೆಗೆ ಅನುಸರಿಸಬೇಕಾದ ವಿಧಾನಗಳು ಯಾವುವು ಅನ್ನೋದರ ವಿವರ ಇಲ್ಲಿದೆ.

ಮಕ್ಕಳ ಪೋಷಣೆಯಲ್ಲಿ ಪೋಷಕರ ಪಾತ್ರ ಮತ್ತು ಜವಾಬ್ದಾರಿ ಮಹತ್ವಪೂರ್ಣವಾದುದು. ಈ ಪ್ರಯಾಣ ಬಹಳ ಕಠಿಣ ಹಾದಿಯಾಗಿರುತ್ತದೆ. ಹೆತ್ತವರು ಇದರಲ್ಲಿ ಯಶಸ್ಸನ್ನು ಕಾಣುವ ಮುನ್ನ ಅನೇಕ ಏರಿಳಿತಗಳನ್ನು ಕಾಣುತ್ತಾರೆ. ಮಕ್ಕಳು ಉತ್ತಮ ಮಾರ್ಗದಲ್ಲಿ ಸಾಗುವಂತೆ ಮಾಡಿ ಪೋಷಕರು ಮಾದರಿಯಾಗಬೇಕಾಗುತ್ತದೆ. ಲಿಂಗತ್ವ ಪೂರ್ವಾಗ್ರಹ ಅಥವಾ ಲಿಂಗತಾರತಮ್ಯ ಮಕ್ಕಳ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದ್ದು, ಬೆಳೆಯುವ ಹಂತದಲ್ಲಿಯೇ ಮಕ್ಕಳ ಮೇಲೂ ಇದರ ಪ್ರಭಾವ ಬೀರುತ್ತದೆ.

ಟ್ರೆಂಡಿಂಗ್​ ಸುದ್ದಿ

ಲಿಂಗತಾರತಮ್ಯ ಪ್ರತಿಪಾದಿಸುವ ಮನಸ್ಥಿತಿಗಳಿಂದ ಸಮಾಜದಲ್ಲಿ ಮಕ್ಕಳ ನಡವಳಿಕೆ, ಹೆಚ್ಚಾಗಿ ಅಸಮಾನತೆ ಹಾಗೂ ಪೂರ್ವಾಗ್ರಹಗಳಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮಕ್ಕಳ ಮನಸ್ಸು, ಆಲೋಚನೆಗಳು ಸರಿಯಾದ ದಿಕ್ಕಿನತ್ತ ಕೊಂಡೊಯ್ಯುವ ಜವಾಬ್ದಾರಿ ಪೋಷಕರದ್ದು. ಸಮಾಜದಲ್ಲಿ ತೊಡೆದುಹಾಕಬೇಕಿರುವ ಲಿಂಗತ್ವ ಪೂರ್ವಾಗ್ರಹಗಳು ಯಾವುದು? ಅನುಸರಿಸಬೇಕಾದ ವಿಧಾನಗಳು ಇಲ್ಲಿವೆ.

ಗಂಡು ಮಕ್ಕಳು ಭಾವನಾತ್ಮಕವಾಗಿ ಹೆಚ್ಚು ಸದೃಢರು

ಗಂಡು ಮಕ್ಕಳು ತಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡು ಸದೃಢರಂತೆ ತೋರಿಸಿಕೊಳ್ಳಬೇಕು. ಹೆಣ್ಮಕ್ಕಳು ಭಾವನಾತ್ಮಕವಾಗಿರಬೇಕು ಎಂಬ ಹೇರಿಕೆಯನ್ನು ಖುದ್ದು ಸಮಾಜ ಹೇರುತ್ತಲೇ ಬಂದಿದೆ. ವಾಸ್ತವದಲ್ಲಿ, ಹೆಣ್ಣಾಗಲೀ, ಗಂಡಾಗಲೀ ಎಲ್ಲರಿಗೂ ಭಾವನೆಗಳಿರುತ್ತವೆ. ಆ ಭಾವನೆಗಳನ್ನು ವ್ಯಕ್ತಪಡಿಸಲು ವಿಭಿನ್ನ ದಾರಿಗಳೂ ಇರುತ್ತವೆ. ಅದನ್ನು ಪ್ರಶ್ನಿಸುವುದು ಸರಿಯಾದ ವಿಧಾನವಲ್ಲ. ಅದಕ್ಕೆ ಬದಲಾಗಿ ಗಂಡುಮಕ್ಕಳನ್ನೂ ಸಹ ಭಾವನೆಗಳನ್ನು ಸರಾಗವಾಗಿ ವ್ಯಕ್ತಪಡಿಸಿ ಮನಸ್ಸನ್ನು ಹಗುರಾಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು.

ಭಾವನಾತ್ಮಕವಾಗಿ ಬೆಸುಗೆ ಗಟ್ಟಿಗೊಳಿಸಬೇಕು

"ಗಂಡು ಮಕ್ಕಳು ಅಳುವುದಿಲ್ಲ" ̤̤ಅಳುವುದೇನಿದ್ದರೂ ಹೆಣ್ಮಕ್ಕಳ ಲಕ್ಷಣ ಎಂಬುದು ಹಿಂದಿನಿಂದಲೂ ಬಂದಿರುವ ರೂಢಿ ಮಾತು. ಆದರೆ ಈ ಸಾಮಾಜಿಕ ನಿರೀಕ್ಷೆಯಿಂದಾಗಿ ಭಾವನೆಗಳನ್ನು ಹತ್ತಿಕ್ಕುವ ಗಂಡಮಕ್ಕಳಲ್ಲಿ ಒತ್ತಡ ಹೆಚ್ಚುತ್ತದೆ. ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುವುದರಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ತಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಮತ್ತು ಅಗತ್ಯವಿದ್ದಾಗ ಬೆಂಬಲವನ್ನು ಪಡೆಯಲು ಗಂಡು ಮಕ್ಕಳು ಮತ್ತು ಪುರುಷರನ್ನು ಪ್ರೋತ್ಸಾಹಿಸುವುದರಿಂದ ಭಾವನಾತ್ಮಕವಾಗಿ ಬೆಸುಗೆ ಗಟ್ಟಿಗೊಳ್ಳುವುದಲ್ಲದೆ, ಲಿಂಗ ರೂಢಿಗಳನ್ನು ಕಿತ್ತುಹಾಕಲು ನೆರವಾಗುತ್ತದೆ.

ಗಂಡು ಮಕ್ಕಳಷ್ಟೇ ನಾಯಕರು, ಹೆಣ್ಮಕ್ಕಳು ಅವರನ್ನು ಅನುಸರಿಸುವವರು

ಗಂಡು ಮಕ್ಕಳು ಸಮರ್ಥರು, ನಿರ್ಣಯಗಳನ್ನು ಕೈಗೊಳ್ಳುವಲ್ಲಿ ನಿಸ್ಸೀಮರು, ನಾಯಕತ್ವ ಗುಣವನ್ನು ಹೊಂದಿರುವವರು. ಆದರೆ ಹೆಣ್ಮಕ್ಕಳು ನಾಯಕತ್ವ ಗುಣಗಳನ್ನು ಹೊಂದಲು ವಿಫಲರು ಹಾಗೂ ನಾಯಕರ ಅನುಯಾಯಿಗಳಾಗಬಹುದಷ್ಟೇ ಎಂಬ ನಂಬಿಕೆಗಳಿವೆ. ಆದರೆ ನಾಯಕತ್ವವೆಂಬುದು ವ್ಯಕ್ತಿಯಾಧಾರಿತವಾಗಿದೆಯೇ ಹೊರತು ಅದಕ್ಕೂ ಹೆಣ್ಣು ಅಥವಾ ಗಂಡು ಎಂಬ ತಾರತಮ್ಯಕ್ಕೂ ಎಲ್ಲಿಯ ಸಂಬಂಧ? ಹೆಣ್ಮಕ್ಕಳು ಗಂಡು ಮಕ್ಕಳಂತೆಯೇ ಸಮರ್ಥ ಮತ್ತು ಪರಿಣಾಮಕಾರಿ ನಾಯಕರಾಗಬಹುದು. ಈ ನಂಬಿಕೆಗಳನ್ನು ಪ್ರಶ್ನಿಸುವ ಮೂಲಕ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ನಾಯಕತ್ವ ವಹಿಸಿಕೊಳ್ಳಲು ಹೆಣ್ಮಕ್ಕಳಿಗೆ ಅವಕಾಶಗಳನ್ನು ಸೃಷ್ಟಿಸಬಹುದು.

ಹೆಣ್ಮಕ್ಕಳು ದುರ್ಬಲರು ಮತ್ತು ಅವಲಂಭಿತರು

ಈ ಲಿಂಗತಾರತಮ್ಯ ಪ್ರತಿಪಾದಿಸುವ ಮನಸ್ಥಿತಿ ಹೇಳುವಂತೆ ಪುರುಷರು ದೈಹಿಕವಾಗಿ ಬಲಶಾಲಿಗಳು ಮತ್ತು ಸ್ವತಂತ್ರರು. ಆದರೆ ಸ್ತ್ರೀಯರು ಅಥವಾ ಹೆಣ್ಮಕ್ಕಳು ದುರ್ಬಲರಾಗಿದ್ದಾರೆ ಮತ್ತು ರಕ್ಷಣೆ, ಬೆಂಬಲಕ್ಕಾಗಿ ಇತರರ ಮೇಲೆ ಅವಲಂಬಿತರಾಗಿದ್ದಾರೆ. ವಾಸ್ತವವಾಗಿ, ದೈಹಿಕ ಶಕ್ತಿ ಮತ್ತು ಸ್ವಾತಂತ್ರ್ಯವನ್ನು ಲಿಂಗದಿಂದ ನಿರ್ಧರಿಸಲಾಗುವುದಿಲ್ಲ. ಎಲ್ಲರೂ ತಮ್ಮದೇ ಆದ ರೀತಿಯಲ್ಲಿ, ವಿಧದಲ್ಲಿ ಶಕ್ತಿವಂತರು ಮತ್ತು ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಈ ಲಿಂಗತ್ವ ಪೂರ್ವಾಗ್ರಹವನ್ನು ತಿರಸ್ಕರಿಸುವ ಮೂಲಕ, ನಾವು ಎಲ್ಲರಿಗೂ ಅವರ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಲಿಂಗ ಮಾನದಂಡಗಳನ್ನು ಲೆಕ್ಕಿಸದೆ ಅವರ ಸ್ವಾತಂತ್ರ್ಯವನ್ನು ಪ್ರತಿಪಾದಿಸಲು ಅಧಿಕಾರ ನೀಡಬಹುದು.

ಗಂಡು ಮಕ್ಕಳು STEM ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಹೆಣ್ಮಕ್ಕಳು ಕಲಾವಿಭಾಗಕ್ಕೆ ಸೂಕ್ತರು

ಈ ಲಿಂಗತ್ವ ಪೂರ್ವಾಗ್ರಹವು ಹೇಳುವುದೇನೆಂದರೆ ಗಂಡುಮಕ್ಕಳು ನೈಸರ್ಗಿಕವಾಗಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಮತ್ತು ಗಣಿತ (STEM) ಕ್ಷೇತ್ರಗಳ ಕಡೆಗೆ ಹೆಚ್ಚು ಒಲವು ತೋರುತ್ತಾರೆ. ಹೆಣ್ಮಕ್ಕಳಿಗೆ ಕಲಾ ವಿಭಾಗ ಹೆಚ್ಚು ಸೂಕ್ತವಾಗಿದೆ ಎಂಬ ರೂಢಿ ಮಾತುಗಳಿವೆ. ಆದರೆ ವ್ಯಕ್ತಿಗಳ ನಡುವೆ ಆಸಕ್ತಿಗಳು ಮತ್ತು ಯೋಗ್ಯತೆಗಳು ಬದಲಾಗುತ್ತವೆ. ಹೆಣ್ಣುಮಕ್ಕಳೂ ಸಹ ಇಂದು ಪುರುಷರಂತೆ ಸ್ಟೆಮ್ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲು ಸಮರ್ಥರಾಗಿದ್ದಾರೆ. ಈ ಲಿಂಗತ್ವ ಪೂರ್ವಾಗ್ರಹವನ್ನು ಪ್ರಶ್ನಿಸುವ ಮೂಲಕ ನಾವು ಹೆಣ್ಣುಮಕ್ಕಳನ್ನು ಸ್ಟೆಮ್ ವಿಭಾಗಗಳಲ್ಲಿ ತಮ್ಮ ಆಸಕ್ತಿಗಳು ಮತ್ತು ಪ್ರತಿಭೆಗಳನ್ನು ತೋರಲು ಅವಕಾಶ ನೀಡಬೇಕು ಮತ್ತು ವಿದ್ಯಾಭ್ಯಾಸ ರಂಗದಲ್ಲಿ ಲಿಂಗ ಅಸಮಾನತೆಗಳನ್ನು ಪರಿಹರಿಸಬಹುದು.

ಹೆಣ್ಮಕ್ಕಳಂತಲ್ಲ, ಗಂಡು ಮಕ್ಕಳು ಮಹತ್ವಾಕಾಂಕ್ಷೆಯುಳ್ಳವರು

ಗಂಡು ಮಕ್ಕಳು ಮಹತ್ವಾಕಾಂಕ್ಷೆಯುಳ್ಳವರು ಎನ್ನುವ ಮೂಲಕ ಅವರಿಗೆ ತಮ್ಮ ದುರ್ಬಲತೆಯನ್ನು ವ್ಯಕ್ತಪಡಿಸಲು ಹಾಗೂ ಅಗತ್ಯ ಬಂದಾಗ ನೆರವನ್ನು ಪಡೆಯುವ ಅವಕಾಶವನ್ನು ಕಿತ್ತುಕೊಂಡಾತಾಗುತ್ತದೆ. ಅಲ್ಲದೆ ಹೆಣ್ಮಕ್ಕಳು ತಮ್ಮ ಜೀವನದ ಗುರಿಯನ್ನು ತಲುಪುವಲ್ಲಿ ವಿರೋಧಿಸಿದಂತಾಗುತ್ತದೆ. ವಾಸ್ತವದಲ್ಲಿ, ದುರ್ಬಲತೆ ಮತ್ತು ಮಹತ್ವಾಕಾಂಕ್ಷೆಗಳೆಂಬ ಲಕ್ಷಣಗಳು ಲಿಂಗಗಳ ಮೇಲೆ ಅವಲಂಭಿತವಾಗಿರುವುದಿಲ್ಲ. ಆದ್ದರಿಂದ ಲಿಂಗ ಭೇದವಿಲ್ಲದೆ ಎಲ್ಲರಿಗೂ ಸ್ವಯಂ ಅಭಿವ್ಯಕ್ತಿಗೆ ವೇದಿಕೆಯನ್ನು ಕಲ್ಪಿಸಿಕೊಡುವುದರಿಂದ ವೈಯಕ್ತಿಕ ಬೆಳವಣಿಗೆಗೆ ಕಾರಣವಾಗಬಹುದು.

ಗಂಡು ಮಕ್ಕಳು ಪ್ರೀತಿಯನ್ನು ವ್ಯಕ್ತಪಡಿಸಬಾರದು

ಈ ರೂಢಿ ಮಾತಿನಂತೆ, ಗಂಡು ಮಕ್ಕಳು ಪ್ರೀತಿ ಅಥವಾ ದುರ್ಬಲತೆಯನ್ನು ತೋರಿಸಕೂಡದು. ಅದೇನಿದ್ದರೂ ಹೆಣ್ಮಕ್ಕಳ ಕೆಲಸವಂತೆ. ಆದರೆ, ಹೆಣ್ಣು ಮಕ್ಕಳಂತೆ ಗಂಡು ಮಕ್ಕಳೂ ಸಹ ಪ್ರೀತಿಯನ್ನು ವ್ಯಕ್ತಪಡಿಸಬಲ್ಲರು. ವಾತ್ಸಲ್ಯ, ಸಹಾನುಭೂತಿಯನ್ನು ತೋರಲು ಸಮರ್ಥರಾಗಿದ್ದಾರೆ. ಈ ಮನೋಭಾವವನ್ನು ಪ್ರಶ್ನಿಸುವ ಮೂಲಕ ಗಂಡು, ಹೆಣ್ಣೆಂಬ ತಾರತಮ್ಯವನ್ನು ಕೊನೆಗಾಣಿಸಿ, ಸಂಬಂಧಗಳಿಗಷ್ಟೇ ಬೆಲೆಕೊಡುವಂತೆ ಮಾಡಬಹುದು. ಸಮಾಜದ ಮನಸ್ಥಿತಿಯು ಬದಲಾಗಬೇಕಾದರೆ ಲಿಂಗತ್ವ ಪೂರ್ವಾಗ್ರಹ ಅಥವಾ ಲಿಂಗತಾರತಮ್ಯ ಪ್ರತಿಪಾದಿಸುವ ಮನಸ್ಥಿತಿಯಿಂದ ಪೋಷಕರಾಗಿ ಮೊದಲು ನಾವು ಹೊರಬರಬೇಕು. ಉತ್ತಮ ವ್ಯಕ್ತಿತ್ವವನ್ನು, ನಡತೆ ಹಾಗೂ ಅಲೋಚನಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಪೋಷಕರನ್ನೇ ಅನುಸರಿಸುವ ಮಕ್ಕಳಿಗೆ ಮಾದರಿಯಾಗಬೇಕು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)