Mosquito Magnet Soap: ಸ್ನಾನಕ್ಕೆ ಸೋಪ್‌ ಬಳಸುವ ಮುನ್ನ ಇಲ್ಲೊಮ್ಮೆ ನೋಡಿ; ಸೊಳ್ಳೆ ಕಡಿತಕ್ಕೂ ಸೋಪ್‌ಗೂ ಉಂಟಂತೆ ನಂಟು; ಅಧ್ಯಯನ
ಕನ್ನಡ ಸುದ್ದಿ  /  ಜೀವನಶೈಲಿ  /  Mosquito Magnet Soap: ಸ್ನಾನಕ್ಕೆ ಸೋಪ್‌ ಬಳಸುವ ಮುನ್ನ ಇಲ್ಲೊಮ್ಮೆ ನೋಡಿ; ಸೊಳ್ಳೆ ಕಡಿತಕ್ಕೂ ಸೋಪ್‌ಗೂ ಉಂಟಂತೆ ನಂಟು; ಅಧ್ಯಯನ

Mosquito Magnet Soap: ಸ್ನಾನಕ್ಕೆ ಸೋಪ್‌ ಬಳಸುವ ಮುನ್ನ ಇಲ್ಲೊಮ್ಮೆ ನೋಡಿ; ಸೊಳ್ಳೆ ಕಡಿತಕ್ಕೂ ಸೋಪ್‌ಗೂ ಉಂಟಂತೆ ನಂಟು; ಅಧ್ಯಯನ

Soap Choice Could make You a Mosquito Magnet: ದೇಹದ ನೈಸರ್ಗಿಕ ಪರಿಮಳಕ್ಕಿಂತ ಸೋಪ್‌ ಬಳಸಿದ ನಂತರ ಸೊಳ್ಳೆಗಳು ಹೆಚ್ಚು ಕಡಿಯುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ. ದೇಹದ ಪರಿಮಳಕ್ಕಿಂತ ಶೇ 60 ರಷ್ಟು ಹೆಚ್ಚು ಸೋಪ್‌ ಬಳಸಿದ ನಂತರ ಸೊಳ್ಳೆಗಳು ದೇಹದತ್ತ ಆಕರ್ಷಿತವಾಗುತ್ತವೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

ಸೋಪ್‌ ಬಳಕೆಯಿಂದ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ
ಸೋಪ್‌ ಬಳಕೆಯಿಂದ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ

ಸ್ನಾನ ಮಾಡುವಾಗ, ಮುಖ ತೊಳೆಯುವಾಗ ಸೋಪ್‌ ಬಳಕೆ ಮಾಡುವುದು ಸಾಮಾನ್ಯ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ಸೋಪ್‌ ಬಳಸುವುದರಿಂದ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತದೆ ಎಂಬ ಅಂಶವೊಂದು ಹೊರಬಿದ್ದಿದೆ. ಸೋಪ್‌ನಲ್ಲಿ ಕಂಡುಬರುವ ಸುಗಂಧವು ಸೊಳ್ಳೆಗಳನ್ನು ಆಕರ್ಷಿಸುತ್ತದೆ ಎಂದು ಸಂಶೋಧಕರು ಪ್ರಸ್ತಾಪಿಸುತ್ತಾರೆ. ಸೋಪುಗಳಲ್ಲಿ ಹೂವಿನ ಮಕರಂದದ ಅಂಶ ಇರುತ್ತದೆ, ಇದು ಸೊಳ್ಳೆಗಳನ್ನು ಸೆಳೆಯುತ್ತವೆ ಎಂದಿದ್ದಾರೆ.

ವರ್ಜೀನಿಯಾ ಟೆಕ್‌ ಕಾಲೇಜ್‌ ಆಫ್‌ ಆಗ್ರಿಕಲ್ಚರ್‌ ಮತ್ತು ಸೈನ್ಸ್‌ನ ಸಂಶೋಧಕರು ಐಸೈನ್ಸ್‌ ನಿಯತಕಾಲಿಕೆಯಲ್ಲಿ ಈ ಅಧ್ಯಯನವನ್ನು ಪ್ರಕಟಿಸಿದ್ದಾರೆ. ನಾವು ಬಳಸುವ ನಿರ್ದಿಷ್ಟ ರೀತಿಯ ಸೋಪುಗಳು ಸೊಳ್ಳೆಯನ್ನು ಹೆಚ್ಚು ಆಕರ್ಷಿಸಬಹುದು ಎಂದು ಈ ಅಧ್ಯಯನ ಬಹಿರಂಗ ಪಡಿಸಿದೆ.

ಅಧ್ಯಯನದ ಪ್ರಮುಖ ಸಂಶೋಧಕರಾದ ಕ್ಲಮೆಂಟ್‌ ವಿನೌಗರ್‌ ʼಸೋಪ್‌ ಬಳಕೆಯು ಸೊಳ್ಳೆಗಳ ಕಡಿತವನ್ನು ಹೆಚ್ಚಿಸ ಸಾಧ್ಯತೆ ಅಧಿಕ. ಆದರೆ ಕೆಲವು ಸೋಪುಗಳು ಸೊಳ್ಳೆ ಕಡಿತವನ್ನು ಕಡಿಮೆ ಮಾಡಬಹುದು. ಆದರೆ ಸೋಪ್‌ ಬಳಕೆಯಿಂದ ಸೊಳ್ಳೆ ಕಡಿತದ ಪ್ರಮಾಣ ಹೆಚ್ಚುʼ ಎಂದಿದ್ದಾರೆ. 

ʼಇನ್ನೊಂದು ಅಂಶವೆಂದರೆ ಸೋಪ್‌ ದೇಹಕ್ಕೆ ಪರಿಮಳವನ್ನು ನೀಡುವುದು ಮಾತ್ರವಲ್ಲ, ಇದು ದೇಹದ ಕೆಲವು ರಾಸಾಯನಿಕ ಅಂಶಗಳನ್ನು ಬದಲಿಸುತ್ತದೆ ಮತ್ತು ಇನ್ನೂ ಕೆಲವನ್ನು ತೊಡೆದು ಹಾಕುತ್ತದೆ. ಆ ಕಾರಣಕ್ಕೆ ನಮ್ಮ ದೇಹದ ನೈಸರ್ಗಿಕ ರಾಸಾಯನಿಕಗಳು ಹಾಗೂ ಸೋಪಿನ ರಾಸಾಯನಿಕಗಳ ನಡುವೆ ಸಾಕಷ್ಟು ರಾಸಾಯನಿಕ ಸಂವಹನವಿದೆʼ ಎಂದು ಅವರು ಹೇಳುತ್ತಾರೆ.

ಡಯಲ್‌, ಡವ್‌, ನೇಟಿವ್‌, ಸಿಂಪಲ್‌ ಟ್ರುಥ್‌ ಮುಂತಾದ ಸೋಪ್‌ಗಳ ಬಳಕೆಯನ್ನು ಅಧ್ಯಯನಕ್ಕೆ ಬಳಸಲಾಗಿತ್ತು. ಈ ಸಾಬೂನುಗಳನ್ನು ಬಳಸಿದ ನಂತರ ಹಾಗೂ ಬಳಸುವ ಮೊದಲು ಸೊಳ್ಳೆಗಳ ಆಕರ್ಷಣೆಯ ಬಗ್ಗೆ ಪರಿಶೀಲಿಸಲಾಗಿತ್ತು.

ದೇಹದ ನೈಸರ್ಗಿಕ ಪರಿಮಳಕ್ಕಿಂತ ಸೋಪ್‌ ಬಳಸಿದ ನಂತರ ಶೇ 60 ರಷ್ಟು ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ ಎಂದು ಅಧ್ಯಯನ ಕಂಡುಕೊಂಡಿದೆ. 

ಹೀಗಿತ್ತು ಅಧ್ಯಯನ

ಅಧ್ಯಯನದ ಪ್ರಕಾರ, ಕೆಲವು ಸೋಪುಗಳು ಸೊಳ್ಳೆಗಳಿಗೆ ಅತಿಥೇಯಗಳ ಆಕರ್ಷಣೆಯನ್ನು ಹೆಚ್ಚಿಸಬಹುದು, ಆದರೆ ಕೆಲವು ಸೋಪುಗಳು ಸೊಳ್ಳೆ ಕಡಿಯುವುದನ್ನು ತಡೆಯಬಹುದು. ಸೊಳ್ಳೆಗಳು ಪೋಷಕಾಂಶಗಳ ಮೂಲಗಳನ್ನು ಪತ್ತೆಹಚ್ಚಲು ಸಸ್ಯಗಳು ಮತ್ತು ಪ್ರಾಣಿ ಸಂಕುಲಗಳಿಂದ ಹೊರಸೂಸುವ ಬಾಷ್ಪಶೀಲ ಸಾವಯವ ಸಂಯುಕ್ತಗಳನ್ನು (VOCs) ಅವಲಂಬಿಸಿವೆ. ವಿಭಿನ್ನ ವಾಸನೆಗಳ ಪರಿಣಾಮಗಳನ್ನು ತನಿಖೆ ಮಾಡಲು, ಸಂಶೋಧಕರು ಎರಡು ಕಪ್ ವಾಸನೆಯ ಸಾರಗಳನ್ನು ಹೊಂದಿರುವ ಮೆಶ್ಡ್ ಪಂಜರವನ್ನು ಬಳಸಿಕೊಂಡು ಪ್ರಯೋಗಗಳನ್ನು ನಡೆಸಿದರು. 

ಸೊಳ್ಳೆಗಳಿಗೆ ಮನುಷ್ಯ ದೇಹದ ವಾಸನೆ ಮತ್ತು ಸಾಬೂನಿನಿಂದ ತೊಳೆದ ನಂತರದ ದೇಹದ ಪರಿಮಳಗಳ ನಡುವೆ ಸಂಶೋಧನೆ ನಡೆಸಲಾಗಿತ್ತು. ಸಂಶೋಧಕರು ಪರಿಮಳಗಳ ವಿವಿಧ ಸಂಯೋಜನೆಗಳೊಂದಿಗೆ ಪುನರಾವರ್ತಿತ ಪರೀಕ್ಷೆಗಳನ್ನು ನಡೆಸದ್ದರು. ಸುಗಂಧದ ಆದ್ಯತೆಗಳಿಗೆ ಸಂಬಂಧಿಸಿದಂತೆ, ನಾಲ್ಕು ಸಾಬೂನುಗಳಲ್ಲಿ ಮೂರು ಸೊಳ್ಳೆಗಳ ಆಕರ್ಷಣೆಯನ್ನು ಹೆಚ್ಚಿಸುವುದು ಕಂಡುಬಂದಿದೆ, ಆದರೆ ಒಂದು ಸೋಪ್ ವಿರುದ್ಧ ಪರಿಣಾಮವನ್ನು ಬೀರಿತ್ತು. 

ಅಧ್ಯಯನದಲ್ಲಿ ಮೌಲ್ಯಮಾಪನ ಮಾಡಲಾದ ಎಲ್ಲಾ ಸಾಬೂನುಗಳು ಹಣ್ಣಿನ ಅಥವಾ ಹೂವಿನ ಸುಗಂಧವನ್ನು ಹೊಂದಿದ್ದವು, ತೆಂಗಿನೆಣ್ಣೆಯ ಪರಿಮಳ ಹೊಂದಿರುವ ಸೋಪ್‌ ಮಾತ್ರ ಸೊಳ್ಳೆಗಳ ಆಕರ್ಷಣೆಯನ್ನು ಕಡಿಮೆ ಮಾಡಿತ್ತು ಎಂದು ಸಂಶೋಧಕರು ಒತ್ತಿ ಹೇಳಿದರು.

Whats_app_banner