Health Tips: ಬೇಸಿಗೆಯಲ್ಲಿ ಮಧುಮೇಹಿಗಳಿಗೆ ಹೇಳಿ ಮಾಡಿಸಿದಂಥ ಆಹಾರ ಪದಾರ್ಥಗಳಿವು; ಪಟ್ಟಿಯಲ್ಲಿ ಯಾವುದೆಲ್ಲಾ ಇವೆ ನೋಡಿ-health tips best food to deal with diabetes in summer season sugar patients food rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ಬೇಸಿಗೆಯಲ್ಲಿ ಮಧುಮೇಹಿಗಳಿಗೆ ಹೇಳಿ ಮಾಡಿಸಿದಂಥ ಆಹಾರ ಪದಾರ್ಥಗಳಿವು; ಪಟ್ಟಿಯಲ್ಲಿ ಯಾವುದೆಲ್ಲಾ ಇವೆ ನೋಡಿ

Health Tips: ಬೇಸಿಗೆಯಲ್ಲಿ ಮಧುಮೇಹಿಗಳಿಗೆ ಹೇಳಿ ಮಾಡಿಸಿದಂಥ ಆಹಾರ ಪದಾರ್ಥಗಳಿವು; ಪಟ್ಟಿಯಲ್ಲಿ ಯಾವುದೆಲ್ಲಾ ಇವೆ ನೋಡಿ

Health Tips: ಬೇಸಿಗೆಯಲ್ಲಿ ಮಧುಮೇಹಿಗಳು ಹೆಚ್ಚಿನ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಅತಿಯಾದ ಶಾಖದಿಂದಾಗಿ ದೇಹದಲ್ಲಿ ಸಕ್ಕರೆ ಪ್ರಮಾಣದಲ್ಲಿ ಏರಿಳಿತಗಳು ಉಂಟಾಗುತ್ತದೆ. ಇವುಗಳನ್ನು ತಪ್ಪಿಸಲು ಮಧುಮೇಹಿಗಳು ಬೇಸಿಗೆ ಕಾಲದಲ್ಲಿ ಯಾವ ರೀತಿಯಲ್ಲಿ ಆಹಾರ ಕ್ರಮವನ್ನು ಬದಲಿಸಿಕೊಳ್ಳಬೇಕು ಎಂಬುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಬೇಸಿಗೆಯಲ್ಲಿ ಮಧುಮೇಹಿಗಳು ಸೇವಿಸಬಹುದಾದ ಆಹಾರಗಳು (ಸಾಂದರ್ಭಿಕ ಚಿತ್ರ)
ಬೇಸಿಗೆಯಲ್ಲಿ ಮಧುಮೇಹಿಗಳು ಸೇವಿಸಬಹುದಾದ ಆಹಾರಗಳು (ಸಾಂದರ್ಭಿಕ ಚಿತ್ರ) (PC: Freepik)

Health Tips: ನಾವು ಯಾವ ರೀತಿಯ ಆಹಾರ ಸೇವಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ನಿರ್ಧಾರವಾಗುತ್ತದೆ. ಅತಿಯಾಗಿ ಜಂಕ್‌ ಫುಡ್‌ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಬಹುದು. ಹೀಗಾಗಿ ಆಹಾರ ಸೇವನೆಯ ಬಗ್ಗೆ ಆದಷ್ಟು ಜಾಗ್ರತೆಯಿಂದ ಇರುವುದು ತುಂಬಾನೇ ಮುಖ್ಯವಾಗಿದೆ.

ಆಹಾರದಲ್ಲಿ ಏರುಪೇರಾಗುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹ ಕೂಡ ಒಂದು. ಮಧುಮೇಹದಿಂದ ಬಳಲುತ್ತಿರುವವರಿಗೆ ಬೇಸಿಗೆಯ ಸಂದರ್ಭದಲ್ಲಿ ರೋಗದ ವಿರುದ್ಧ ಹೋರಾಡುವುದು ತುಂಬಾನೇ ಕಷ್ಟವೆನಿಸುತ್ತದೆ. ದೇಹದಲ್ಲಿ ದ್ರವಾಂಶದ ಕೊರತೆ ಉಂಟಾಗುವ ಹಿನ್ನೆಲೆ ನರಗಳಿಗೆ ಹಾನಿ, ಹೃದಯಾಘಾತ, ಮೂತ್ರಪಿಂಡದ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ರೀತಿಯ ಅನಾರೋಗ್ಯವನ್ನು ಎದುರಿಸಬೇಕಾಗಿ ಬರುತ್ತದೆ. ಮಧುಮೇಹದ ಸಮಸ್ಯೆಯಿಂದ ಬಳಲುತ್ತಿರುವವರು ಏನಿಲ್ಲವೆಂದರೂ ದಿನನಿತ್ಯ 1.5 ರಿಂದ 2 ಲೀಟರ್ ನೀರು ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಮಜ್ಜಿಗೆ, ಎಳನೀರು, ಕಲ್ಲಂಗಡಿ, ನಿಂಬೆ ಜ್ಯೂಸ್, ಮೊಸರು ಮುಂತಾದ ಪದಾರ್ಥಗಳನ್ನು ಸೇವಿಸುವ ಮೂಲಕವೂ ದೇಹದಲ್ಲಿ ದ್ರವಾಂಶದ ಪ್ರಮಾಣದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಿದೆ.

ಔಷಧಗಳಿಂದ ಸಮಸ್ಯೆ

ಬೇಸಿಗೆಯ ಅತಿಯಾದ ಧಗೆಯು ಮಧುಮೇಹಿಗಳ ಮೇಲೆ ಯಾವ ರೀತಿಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ..? ಮಧುಮೇಹಿಗಳು ಬೇಸಿಗೆಯ ಸಂದರ್ಭದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಅತಿಯಾದ ಶಾಖದಿಂದಾಗಿ ರಕ್ತದಲ್ಲಿ ಗ್ಲುಕೋಸ್ ಮಟ್ಟ ಹಾನಿಗೊಳಗಾಗುತ್ತದೆ. ದೇಹವು ಇನ್ಸುಲಿನ್‌ ಯಾವ ರೀತಿಯಲ್ಲಿ ಚಯಾಪಚಯಗೊಳಿಸುತ್ತದೆ ಎನ್ನುವುದರ ಮೇಲೆ ಮಧುಮೇಹಿಗಳ ಆರೋಗ್ಯ ನಿರ್ಧಾರವಾಗುತ್ತದೆ. ಅಲ್ಲದೇ ಮಧುಮೇಹಿಗಳು ಸೇವಿಸುವ ಡಯರೆಟಿಕ್‌ನಂತಹ ಡಯಾಬಿಟೀಸ್ ಔಷಧಿಗಳು ಮಧುಮೇಹಿಗಳಿಗೆ ನಿರ್ಜಲೀಕರಣದಂತಹ ಸಮಸ್ಯೆಗಳನ್ನು ತಂದೊಡ್ಡುತ್ತದೆ .

ಮಧುಮೇಹ ಹೊಂದಿರುವ ರೋಗಿಗೆ ಅತಿಯಾದ ಶಾಖವು ತೀವ್ರವಾದ ಅಪಾಯವನ್ನುಂಟು ಮಾಡಬಹುದು. ಏಕಂದರೆ ಶಾಖವು ನೇರವಾಗಿ ರಕ್ತದಲ್ಲಿ ಗ್ಲುಕೋಸ್ ಅಂಶದ ಮೇಲೆ ಪರಿಣಾಮ ಬೀರುತ್ತದೆ. ಶಾಖ ಹೆಚ್ಚಿದಂತೆಲ್ಲ ದೇಹವು ಹೆಚ್ಚು ಹೆಚ್ಚು ಬೆವರುತ್ತಾ ಹೋಗುತ್ತದೆ.ಇದರಿಂದ ರಕ್ತದಲ್ಲಿ ಗ್ಲುಕೋಸ್ ಮಟ್ಟ ಹೆಚ್ಚಾಗಬಹುದು. ಮಧುಮೇಹ ಹೆಚ್ಚಾದಂತೆಲ್ಲ ರಕ್ತನಾಳಗಳು ಹಾನಿಗೆ ಒಳಗಾಗಬಹುದು. ಹೀಗಾಗಿ ದೇಹದಲ್ಲಿ ನೀರಿನ ಅಂಶವನ್ನು ಸರಿದೂಗಿಸಿಕೊಳ್ಳಲು ಮಧುಮೇಹಿಯು ಸರಿಯಾದ ಆಹಾರವನ್ನು ಸೇವಿಸಬೇಕು.

ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿಕೊಳ್ಳುವಲ್ಲಿ ಆಹಾರ ಕ್ರಮವು ಯಾವ ರೀತಿಯಲ್ಲಿ ಸಹಕರಿಸುತ್ತದೆ..?

ಬೇಸಿಗೆಯಲ್ಲಿ ಬಿಸಿಲಿನ ಧಗೆಯನ್ನು ತಪ್ಪಿಸಲು ನಮ್ಮಿಂದ ಸಾಧ್ಯವಿಲ್ಲದಿದ್ದರೂ ಸಹ ಈ ಋತುಮಾನದಲ್ಲಿ ಲಭ್ಯವಿರುವ ಹಣ್ಣುಗಳು ಹಾಗೂ ತರಕಾರಿಗಳು ಹೆಚ್ಚಿನ ತೇವಾಂಶವನ್ನು ಹೊಂದಿರುತ್ತದೆ. ಇವುಗಳನ್ನು ಸೇವಿಸುವ ಮೂಲಕ ದೇಹದಲ್ಲಿ ಅಗತ್ಯ ಮಟ್ಟದ ದ್ರವಾಂಶದ ಪ್ರಮಾಣವನ್ನು ನಿರ್ವಹಣೆ ಮಾಡಿಕೊಳ್ಳಬಹುದಾಗಿದೆ. ಬೇಸಿಗೆಯಲ್ಲಿ ಹೆಚ್ಚಾಗಿ ಸಿಗುವ ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ ಹಣ್ಣುಗಳನ್ನು ಸೇವನೆ ಮಾಡುವ ಮೂಲಕ ನಿರ್ಜಲೀಕರಣದ ಸಮಸ್ಯೆಯಿಂದ ಪಾರಾಗಬಹುದಾಗಿದೆ.

ಮಧುಮೇಹ ನಿರ್ವಹಣೆ ಮಾಡಬೇಕು ಎಂದರೆ ಅದಕ್ಕೆ ಇರುವುದು ಒಂದೇ ದಾರಿ. ನಿಮ್ಮ ಆಹಾರ ಕ್ರಮದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವುದು. ಮಧುಮೇಹದ ಸಮಸ್ಯೆ ಇರುವವರು ಕಲ್ಲಂಗಡಿ, ಟೊಮೆಟೋ, ಪಾಲಕ್, ಸೌತೆಕಾಯಿಯಂತಹ ಆಹಾರಗಳನ್ನು ಹೆಚ್ಚು ಸೇವನೆ ಮಾಡಬೇಕು. ಇವುಗಳು ದೇಹಕ್ಕೆ ಮೆಗ್ನಿಷಿಯಂ, ಪೊಟ್ಯಾಷಿಯಂ, ಕ್ಯಾಲ್ಸಿಯಂ, ವಿಟಮಿನ್ ಕೆ, ವಿಟಮಿನ್ 2 ಸೇರಿದಂತೆ ಆಂಟಿಆಕ್ಸಿಡಂಟ್ ಅಂಶವನ್ನೂ ಸಹ ದೇಹಕ್ಕೆ ನೀಡುತ್ತವೆ .

ಗ್ಲೂಕೋಸ್‌ ಮಟ್ಟ ನಿಯಂತ್ರಣದಲ್ಲಿರುತ್ತದೆ

ಬೇಸಿಗೆಗಾಲದಲ್ಲಿ ಫೈಬರ್‌ನಿಂದ ಸಮೃದ್ಧವಾದ ಆಹಾರವನ್ನು ಬೆಳಗ್ಗಿನ ಉಪಹಾರದ ರೂಪದಲ್ಲಿ ಸೇವನೆ ಮಾಡಬೇಕು. ಇವುಗಳು ನಿಮ್ಮ ರಕ್ತಕ್ಕೆ ನಿಧಾನವಾಗಿ ಸಕ್ಕರೆಯನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತವೆ. ಇದರಿಂದ ಗ್ಲೂಕೋಸ್ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ. ಅಲ್ಲದೇ ಈ ಸಮಯಕ್ಕೆ ಹೆಚ್ಚಾಗಿ ಗ್ಲೈಸಮಿಕ್ ಇಂಡೆಕ್ಸ್ ಹೊಂದಿರುವ ಆಹಾರವನ್ನೇ ಸೇವಿಸಬೇಕು. ಉದಾಹರಣೆಗೆ ಪಿಷ್ಟದ ಅಂಶವನ್ನು ಹೊಂದಿಲ್ಲದ ಹಣ್ಣುಗಳು, ತರಕಾರಿಗಳು , ದ್ವಿದಳ ಧಾನ್ಯಗಳು, ಡೈರಿ ಉತ್ಪನ್ನಗಳು ಇತ್ಯಾದಿ ಆಹಾರವನ್ನು ಸೇವನೆ ಮಾಡಬೇಕು. ಎಣ್ಣೆಯಲ್ಲಿ ಕರಿದ ಹಾಗೂ ಸಕ್ಕರೆ ಅಂಶವನ್ನು ಹೊಂದಿರುವಂತಹ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಕು.

ನೀರಿನಲ್ಲಿ ಶೂನ್ಯ ಪ್ರಮಾಣದ ಕ್ಯಾಲೋರಿ ಇರುತ್ತದೆ. ಇದು ಮಧುಮೇಹಿಗಳು ಕುಡಿಯಲೇಬೇಕಾದ ಪಾನೀಯವಾಗಿದೆ. ಸಕ್ಕರೆ ಹಾಕದ ನಿಂಬು ಜ್ಯೂಸ್‌, ಎಳನೀರನ್ನು ನೀವು ಹೆಚ್ಚು ಸೇವಿಸಬೇಕು. ಹಣ್ಣುಗಳಲ್ಲಿ ನೈಸರ್ಗಿಕ ಸಕ್ಕರೆಯಂಶ ಇರುವುದರಿಂದ ಹಣ್ಣುಗಳಿಗಿಂತಲೂ ತರಕಾರಿ ಜ್ಯೂಸ್‌ಗಳಿಗೆ ನೀವು ಆದ್ಯತೆ ನೀಡುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ಕೃತಕ ಪಾನೀಯಗಳನ್ನು ಕುಡಿಯಲೇಬೇಡಿ. ಇನ್ನುಳಿದಂತೆ ಮಜ್ಜಿಗೆ, ಮೊಸರನ್ನೂ ಸಹ ಸೇವಿಸಬಹುದಾಗಿದೆ.

mysore-dasara_Entry_Point