Health Tips: ಬೆಳಗಿನ ಉಪಹಾರವನ್ನು ಬಿಟ್ಟಿದ್ದೀರಾ? ಹೃದ್ರೋಗದ ಜೊತೆಗೆ ಈ ಅಪಾಯಗಳು ಹೆಚ್ಚಾಗಬಹುದು ಜಾಗ್ರತೆ-health tips importance of breakfast morning food is must for everyone to avoid increasing heart issue rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ಬೆಳಗಿನ ಉಪಹಾರವನ್ನು ಬಿಟ್ಟಿದ್ದೀರಾ? ಹೃದ್ರೋಗದ ಜೊತೆಗೆ ಈ ಅಪಾಯಗಳು ಹೆಚ್ಚಾಗಬಹುದು ಜಾಗ್ರತೆ

Health Tips: ಬೆಳಗಿನ ಉಪಹಾರವನ್ನು ಬಿಟ್ಟಿದ್ದೀರಾ? ಹೃದ್ರೋಗದ ಜೊತೆಗೆ ಈ ಅಪಾಯಗಳು ಹೆಚ್ಚಾಗಬಹುದು ಜಾಗ್ರತೆ

Breakfast: ಸಮಯದ ಅಭಾವದಿಂದಲೋ, ಖರ್ಚು ಉಳಿಸಲೆಂದೋ ಬೆಳಗ್ಗಿನ ಉಪಹಾರದ ಬಗ್ಗೆ ನಿರ್ಲಕ್ಷ್ಯ ತೋರುವವರ ಸಂಖ್ಯೆಯೇ ಹೆಚ್ಚು. ಆದರೆ ಈ ಅಭ್ಯಾಸದ ಮೂಲಕ ನೀವು ನಿಮ್ಮ ಆರೋಗ್ಯಕ್ಕೆ ಎಂಥಾ ದೊಡ್ಡ ಹಾನಿ ಮಾಡಿಕೊಳ್ಳುತ್ತಿದ್ದೀರಿ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಬೆಳಗಿನ ಉಪಹಾರವನ್ನು ತ್ಯಜಿಸುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು
ಬೆಳಗಿನ ಉಪಹಾರವನ್ನು ತ್ಯಜಿಸುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು (PC: unsplash)

ಬೆಳಗಿನ ಉಪಹಾರದ ಮಹತ್ವ: ಯಾವುದೇ ಕಾರಣಕ್ಕೂ ಬೆಳಗ್ಗಿನ ಉಪಹಾರ ತಪ್ಪಿಸಬಾರದು ಎಂದು ಬಹಳ ಜನರು ಹೇಳುವುದನ್ನು ನೀವು ಕೇಳಿರಬಬಹುದು. ಅನೇಕರು ಬೆಳಗ್ಗಿನ ಉಪಹಾರವನ್ನು ನಿರ್ಲಕ್ಷಿಸುತ್ತಾರೆ. ಈ ರೀತಿ ಬೆಳಗ್ಗೆ ತಿಂಡಿಯನ್ನು ತಿನ್ನದೇ ಇರುವುದು ಸರಿಯೇ..? ಉಪಹಾರವನ್ನು ತ್ಯಜಿಸಿದರೆ ಏನಾದರೂ ಸಮಸ್ಯೆ ಆಗುತ್ತದೆಯೇ..? ಈ ರೀತಿಯ ಗೊಂದಲ ನಿಮ್ಮಲ್ಲಿಯೂ ಮೂಡಿರಬಹುದು. ಅಮೆರಿಕದಲ್ಲಿ ಸುಮಾರು 25 ಪ್ರತಿಶತ ಜನರು ಬೆಳಗ್ಗಿನ ಉಪಹಾರವನ್ನೇ ಸೇವಿಸುವುದಿಲ್ಲವಂತೆ..! ಈ ರೀತಿ ಉಪಹಾರವನ್ನು ತ್ಯಜಿಸುವುದರಿಂದ ಆಗುವ ಸಾಧಕ ಬಾಧಕಗಳ ಬಗ್ಗೆ ತಿಳಿದುಕೊಳ್ಳೋಣ.

ನಾವೇಕೆ ಬೆಳಗ್ಗಿನ ಉಪಹಾರವನ್ನು ಸೇವಿಸಬೇಕು..?

ಉಪಹಾರ ಹೆಸರೇ ಹೇಳುವಂತೆ ನೀವು ರಾತ್ರಿ ಭೋಜನ ಸೇವನೆ ಮಾಡಿದ ಬಳಿಕ ಸಂಭವಿಸುವ ನೈಸರ್ಗಿಕ ಉಪವಾಸವನ್ನು ಮುರಿಯಲು ಸೇವಿಸುವ ಆಹಾರವಾಗಿದೆ. ಇದು ನಿಮ್ಮ ದೇಹಕ್ಕೆ ಶಕ್ತಿಯ ಮೂಲವಾದ ಗ್ಲೂಕೋಸ್‌ ಒದಗಿಸುತ್ತದೆ. ಈ ಶಕ್ತಿಯನ್ನು ಬಳಸಿಕೊಂಡು ನಿಮ್ಮ ದೇಹ ಹಾಗೂ ಮೆದುಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

ಬೆಳಗಿನ ಉಪಹಾರವು ನಿಮ್ಮ ಜೀವನಶೈಲಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೀವು ಪೋಷಕಾಂಶಯುಕ್ತ ಉಪಹಾರ ಸೇವಿಸಿದಲ್ಲಿ ಇಡೀ ದಿನ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯಯುತವಾಗಿ ಇರಲಿದ್ದೀರಿ. ನೀವು ಸೇವಿಸುವ ಪ್ರತಿಯೊಂದು ಆಹಾರವು ಪೋಷಕಾಂಶಗಳಿಂದ ಸಮೃದ್ಧವಾಗಿರಬೇಕು. ಇದರಲ್ಲಿ ಉಪಹಾರದಲ್ಲಿ ನೀವು ಉತ್ತಮ ಪ್ರೊಟೀನ್, ಆರೋಗ್ಯಕರ ಕೊಬ್ಬು, ಫೈಬರ್ ಹಾಗೂ ಆಂಟಿಆಕ್ಸಿಡಂಟ್ ಅಂಶಗಳು ಒಳಗೊಂಡಿರುವಂತೆ ನೋಡಿಕೊಳ್ಳಬೇಕು.

ಬೆಳಗ್ಗಿನ ಉಪಹಾರವನ್ನು ತಯಾರಿಸುವುದು ಹಾಗೂ ತಿನ್ನುವುದು ಹೆಚ್ಚು ಸಮಯ ಹಾಗೂ ಶ್ರಮವನ್ನು ತೆಗೆದುಕೊಳ್ಳುತ್ತದೆ. ಬೆಳಗ್ಗೆ ಬೇಗನೆ ಉಪಹಾರ ಸೇವಿಸಬೇಕು ಎಂದರೆ ಬೆಳಗ್ಗೆ ಬೇಗ ಏಳಲೂಬೇಕು. ಹೀಗಾಗಿ ಅನೇಕರು ಈ ಜಂಜಾಟವೇ ಬೇಡವೆಂದು ಉಪಹಾರ ತಿನ್ನುವುದನ್ನೇ ನಿಲ್ಲಿಸಿಬಿಡುತ್ತಾರೆ. ಇನ್ನು ಕೆಲವರಿಗೆ ಬೆಳಗ್ಗಿನ ಉಪಹಾರದ ರೂಪದಲ್ಲಿ ಸೇವಿಸುವ ಆಹಾರವು ಇಷ್ಟವಿಲ್ಲದೇ ಇರಬಹುದು. ಹೀಗಾಗಿ ಅನೇಕರು ಉಪಹಾರ ಸೇವಿಸುವು ಗೋಜಿಗೇ ಹೋಗುವುದಿಲ್ಲ. ಇನ್ನು ಕೆಲವರಿಗೆ ಬೆಳಗ್ಗಿನ ತಿಂಡಿಯನ್ನು ಹೋಟೆಲ್‌ನಲ್ಲಿ ಸೇವಿಸಬೇಕಾದ ಅನಿವಾರ್ಯತೆ ಇರುತ್ತದೆ. ದುಡ್ಡು ಉಳಿಯುತ್ತೆ ಎಂಬ ಕಾರಣಕ್ಕೆ ಕೆಲವರು ತಿಂಡಿ ಸೇವನೆ ಬಿಟ್ಟು ಬಿಡುತ್ತಾರೆ. ಆದರೆ ಬೆಳಗ್ಗಿನ ಹೊತ್ತು ಉಪಹಾರ ಸೇವಿಸದೇ ಇರುವುದರಿಂದ ಏನೆಲ್ಲ ಅಪಾಯ ಕಾದಿದೆ ಎಂಬುದನ್ನು ತಿಳಿದುಕೊಳ್ಳೋಣ.

ಹೃದ್ರೋಗದ ಅಪಾಯ ಹೆಚ್ಚಬಹುದು

ಬೆಳಗ್ಗಿನ ಉಪಹಾರ ಸೇವನೆಯನ್ನು ತಿನ್ನುವುದರಿಂದ ಹಸಿವನ್ನು ತಡೆಯುವುದರ ಜೊತೆಯಲ್ಲಿ ದೇಹದಲ್ಲಿ ಇನ್ಸುಲಿನ್ ನಿರ್ವಹಣೆ ಕೂಡ ಸರಿಯಾಗಿ ಇರುತ್ತದೆ. ಆದರೆ ಬೆಳಗ್ಗಿನ ಉಪಹಾರವನ್ನು ತ್ಯಜಿಸುವುದರಿಂದ ಇನ್ಸುಲಿನ್ ನಿರ್ವಹಣೆ ದುರ್ಬಲಗೊಳ್ಳುತ್ತಾ ಹೋಗುತ್ತದೆ. ಇದು ಅಧಿಕ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದರಿಂದ ಅಪಾಯಕಾರಿ ಹೃದ್ರೋಗಗಳು ಸಂಭವಿಸಬಹುದು.

ಹಸಿವು ಉಲ್ಬಣ

ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಿಲ್ಲವೆಂದರೆ ಹಸಿವಾಗುವುದು ಸಹಜ. ಆದರೆ ಬೆಳಗ್ಗಿನ ಉಪಹಾರದ ವಿಚಾರದಲ್ಲಿ ಹಸಿವು ಇನ್ನೂ ಹೆಚ್ಚುತ್ತದೆ. ಏಕೆಂದರೆ ನೀವು ಭೋಜನದ ಬಳಿಕ ರಾತ್ರಿಯಿಡೀ ಉಪವಾಸ ಇರುತ್ತೀರಿ. ಈ ದೀರ್ಘ ಅವಧಿಯಲ್ಲಿ ನಿಮ್ಮ ದೇಹದಲ್ಲಿ ಸತ್ವಗಳು ಕಡಿಮೆಯಾಗಿರುತ್ತವೆ. ಹಾರ್ಮೋನ್‌ಗಳ ಏರುಪೇರಿನಿಂದ ಹಸಿವು ವಿಪರೀತವಾಗುತ್ತದೆ. ಹೀಗಾಗಿ ಇಡೀ ದಿನ ನಿಮ್ಮ ಚೈತನ್ಯ ಕಡಿಮೆಯಾಗಿರುತ್ತದೆ.

ರಕ್ತದಲ್ಲಿ ಸಕ್ಕರೆ ಮಟ್ಟದಲ್ಲಿ ಏರುಪೇರು

ಬೆಳಗ್ಗಿನ ಉಪಹಾರವನ್ನು ತ್ಯಜಿಸುವುದರಿಂದ ಇನ್ಸುಲಿನ್ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಯಾರು ಬೆಳಗ್ಗಿನ ಉಪಹಾರವನ್ನು ತ್ಯಜಿಸುತ್ತಾರೋ ಅಂಥವರಲ್ಲಿ ಗ್ಲುಕೋಸ್ ಮಟ್ಟ ಹೆಚ್ಚುತ್ತದೆ. ಹೀಗಾಗಿ ಯಾರು ಬೆಳಗ್ಗಿನ ಉಪಹಾರವನ್ನು ಬಿಡುತ್ತಾರೋ ಅವರಲ್ಲಿ ಪ್ರಿಡಯಾಬಿಟಿಸ್‌ನ ಅಪಾಯ ಇರುತ್ತದೆ ಎಂದು ಅಧ್ಯಯನ ತಿಳಿಸಿದೆ.