Health Tips: ನಿಮ್ಮ ಆರೋಗ್ಯ ನಿಮ್ಮ ಉಗುರಿನಲ್ಲಿ; ಉಗುರು ನೋಡಿದ್ರೆ ಗೊತ್ತಾಗುತ್ತೆ ಹೆಲ್ತ್‌ ಸ್ಟೇಟಸ್‌
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ನಿಮ್ಮ ಆರೋಗ್ಯ ನಿಮ್ಮ ಉಗುರಿನಲ್ಲಿ; ಉಗುರು ನೋಡಿದ್ರೆ ಗೊತ್ತಾಗುತ್ತೆ ಹೆಲ್ತ್‌ ಸ್ಟೇಟಸ್‌

Health Tips: ನಿಮ್ಮ ಆರೋಗ್ಯ ನಿಮ್ಮ ಉಗುರಿನಲ್ಲಿ; ಉಗುರು ನೋಡಿದ್ರೆ ಗೊತ್ತಾಗುತ್ತೆ ಹೆಲ್ತ್‌ ಸ್ಟೇಟಸ್‌

Health Tips: ಉಗುರು ಸೌಂದರ್ಯದ ಸಂಕೇತ ಮಾತ್ರವಲ್ಲ ನಮ್ಮ ಆರೋಗ್ಯವನ್ನೂ ಸೂಚಿಸುತ್ತದೆ. ಅರ್ಧ ಚಂದ್ರಾಕೃತಿಯ ಉಗುರು, ಹಳದಿ, ಕಂದು ಬಣ್ಣದ ಉಗುರುಗಳು ಏನನ್ನು ಸೂಚಿಸುತ್ತದೆ ಎಂದು ಎಲ್ಲರೂ ತಿಳಿದಿರಬೇಕು.

ಆರೋಗ್ಯವನ್ನು ಪ್ರತಿನಿಧಿಸುವ ಉಗುರುಗಳು
ಆರೋಗ್ಯವನ್ನು ಪ್ರತಿನಿಧಿಸುವ ಉಗುರುಗಳು (PC: Freepik)

Health Tips: ಉಗುರುಗಳು ಸುಂದರವಾಗಿ ಕಾಣಲು ನೈಲ್‌ ಪಾಲಿಶ್‌, ನೈಲ್‌ ಆರ್ಟ್‌ ಮಾಡಿಸುತ್ತೇವೆ. ಆದರೆ ಉಗುರುಗಳು ನಮ್ಮ ಸೌಂದರ್ಯದ ಪ್ರತೀಕ ಮಾತ್ರವಲ್ಲ, ಅವು ಆರೋಗ್ಯದ ಸೂಚಕ ಕೂಡಾ. ಉಗುರುಗಳು ವಿಟಮಿನ್ ಕೊರತೆ ಮತ್ತು ಇತರ ದೀರ್ಘಕಾಲದ ಪರಿಸ್ಥಿತಿ ಸೇರಿದಂತೆ ನಮಗಿರುವ ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತದೆ. ಆದ್ದರಿಂದ ಉಗುರುಗಳ ಆರೋಗ್ಯವು ನಿಮ್ಮ ದೇಹದ ಇತರ ಭಾಗಗಳಷ್ಟೇ ಮುಖ್ಯವಾಗಿದೆ.

ಕೆರಾಟಿನ್‌ನಿಂದ ಮಾಡಲ್ಪಟ್ಟ ಉಗುರುಗಳು

ನಮ್ಮ ಕೈ ಬೆರಳಿನ ಉಗುರುಗಳು ಮತ್ತು ಕಾಲ್ಬೆರಳ ಉಗುರುಗಳು ಚರ್ಮದ ಕೋಶಗಳು, ಕೆರಾಟಿನ್ ಎಂಬ ಗಟ್ಟಿಯಾದ ವಸ್ತುವಿನಿಂದ ಮಾಡಲ್ಪಟ್ಟಿದೆ. ಆರೋಗ್ಯವಾದ ಉಗುರುಗಳು ಸಾಮಾನ್ಯವಾಗಿ ಗುಲಾಬಿ ಬಣ್ಣದಲ್ಲಿರುತ್ತವೆ, ಅಂಚಿನಲ್ಲಿ ಸ್ವಲ್ಪ ವಕ್ರರೇಖೆ ಇರುತ್ತದೆ. ಬಣ್ಣ, ವಿನ್ಯಾಸ ಮತ್ತು ಆಕಾರದಲ್ಲಿನ ಬದಲಾವಣೆಗಳು ಪೋಷಕಾಂಶಗಳ ಕೊರತೆ, ಸೋಂಕುಗಳು ಅಥವಾ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಸಾಮಾನ್ಯವಾಗಿ ಎಲ್ಲರ ಬೆರಳುಗಳಲ್ಲಿ ಅರ್ಧ ಚಂದ್ರಾಕಾರದ ಗುರುತು ಇರುತ್ತದೆ. ಈ ಅರ್ಧವೃತ್ತಗಳನ್ನು 'ಲುನುಲಾ' ಎನ್ನಲಾಗುತ್ತದೆ. ತಜ್ಞರ ಪ್ರಕಾರ ಲೂನುಲಾ ಹೇಗಿದೆ ಎನ್ನುವುದರ ಮೇಲೆ ನಮ್ಮ ಆರೋಗ್ಯದ ಸಮಸ್ಯೆಗಳನ್ನು ಊಹಿಸಬಹುದು. ಲುನುಲಾಗೆ ಹಾನಿಯಾದರೆ ಉಗುರುಗಳ ಬೆಳವಣಿಗೆಯೂ ನಿಲ್ಲುತ್ತದೆ.

ಉಗುರುಗಳ ಮೇಲೆ ಅರ್ಧಚಂದ್ರಾಕೃತಿ ಇಲ್ಲದಿದ್ದರೆ, ಅಂತವರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ, ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಅರ್ಥ. ಒಂದು ವೇಳೆ ನಿಮ್ಮ ಉಗುರು ಸಂಪೂರ್ಣ ಬಿಳಿ ಬಣ್ಣದಲ್ಲಿದ್ದರೆ ಅದು ಬಹಳ ಒಳ್ಳೆಯದು. ಅಥವಾ ಉಗುರುಗಳು ಬಿಳಿಯಾಗಿಲ್ಲದಿದ್ದರೂ ಉಗುರಿನ ಮೇಲೆ ಲುನುಲಾ ಇಲ್ಲದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

ಹಾರ್ಮೋನ್‌ ಕೊರತೆ

ಅಗಲವಾದ ಉಗುರುಗಳು ಹಾರ್ಮೋನ್‌ಗಳ ಅಸ್ವಸ್ಥತೆಯಿಂದ ಉಂಟಾಗಬಹುದು. ಚಪ್ಪಟೆಯಾದ, ತೆಳುವಾದ ಉಗುರುಗಳು ಸಾಕಷ್ಟು ವಿಟಮಿನ್ ಬಿ 12 ಅನ್ನು ಸೂಚಿಸಬಹುದು. ಮಾಂಸ, ಡೈರಿ, ಮೊಟ್ಟೆಗಳು, ಹಸಿರು ಎಲೆಗಳ ತರಕಾರಿಗಳು ಮತ್ತು ನಟ್ಸ್‌ನಂತ ಕಬ್ಬಿನಾಂಶ ಆಹಾರಗಳೊಂದಿಗೆ ಸಿಟ್ರಸ್ ಹಣ್ಣುಗಳನ್ನು ಸೇವಿಸಿದರೆ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ.

ಕೆರಾಟಿನ್ ರಕ್ಷಣಾತ್ಮಕ ಪದರಗಳು ಹಾನಿಗೊಳಗಾದಾಗ ಉಗುರುಗಳಲ್ಲಿ ಸಿಪ್ಪೆ ಸುಲಿಯುತ್ತದೆ. ಬಿಸಿ ಗಾಳಿ, ನೀರು ಅಥವಾ ತಂಪಾದ ಗಾಳಿಗೆ ಒಡ್ಡಿಕೊಳ್ಳುವುದರಿಂದ ಉಗುರು ಸಿಪ್ಪೆ ಸುಲಿಯುವುದಕ್ಕೆ ಕಾರಣವಾಗಬಹುದು. ಈ ಸಮಸ್ಯೆಯು ಸಾಮಾನ್ಯವಾಗಿ ಒಮೆಗಾ -3 ಕೊಬ್ಬಿನಾಮ್ಲಗಳ ಕೊರತೆಯನ್ನು ಸೂಚಿಸುತ್ತದೆ. ಈ ಸಮಸ್ಯೆ ಇರುವವವರು ವಾಲ್‌ನಟ್ಸ್, ಅಗಸೆ ಬೀಜಗಳು, ಬಾದಾಮಿ, ಬೀಜಗಳು, ಸೂರ್ಯಕಾಂತಿ ಬೀಜಗಳಂತ ಆಹಾರವನ್ನು ಸೇವಿಸಬಹುದು.

ಹಳದಿ ಬಣ್ಣದ ಉಗುರು

ಕೆಲವರಿಗೆ ಉಗುರು ಹಳದಿ ಬಣ್ಣದಲ್ಲಿರುತ್ತದೆ. ಅಂತವರು ಮಧುಮೇಹ, ಉಸಿರಾಟ ಅಥವಾ ಯಕೃತ್ತಿನಂತ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ಉಗುರುಗಳ ಮೇಲೆ ಹಳದಿ ಕಲೆಗಳು ಶಿಲೀಂಧ್ರ ಅಥವಾ ಸೋರಿಯಾಸಿಸ್‌ನ ಸೂಚಕವೂ ಆಗಿರಬಹುದು.

ಇನ್ನೂ ಕೆಲವರಿಗೆ ಉಗುರಿನ ಮೇಲೆ ಬಿಳಿ ಕಲೆಗಳಿರುತ್ತವೆ. ಹಾಗೇ ಅಡ್ಡಲಾಗಿ ಬಿಳಿ ಗೆರೆಗಳಿರುತ್ತವೆ. ಈ ಚಿಹ್ನೆ ಜ್ವರ, ಯಕೃತ್ತು ಅಥವಾ ಹೃದ್ರೋಗ, ಮೂತ್ರಪಿಂಡದ ಸಮಸ್ಯೆಯನ್ನು ತೋರಿಸುತ್ತದೆ. ಅಥವಾ ನಿಮ್ಮ ಆಹಾರದಲ್ಲಿ ಕಬ್ಬಿಣ ಅಥವಾ ಸತುವಿನ ಕೊರತೆಯನ್ನು ಸೂಚಿಸುತ್ತಿದೆ.

ನೀಲಿ ಬಣ್ಣದ ಉಗುರು ಶ್ವಾಸಕೋಶದ ತೊಂದರೆಯ ಸಂಕೇತವಾಗಬಹುದು. ಹಾಗೇ ಕೆಂಪು ಕಂದು ಬಣ್ಣದ ಚುಕ್ಕೆಗಳು ಫೋಲಿಕ್ ಆಮ್ಲ, ಪ್ರೋಟೀನ್ ಅಥವಾ ವಿಟಮಿನ್ ಸಿ ಕೊರತೆಯನ್ನು ಸೂಚಿಸಬಹುದು.

Whats_app_banner