ಮಕ್ಕಳಿಂದ ವೃದ್ಧರವರೆಗೆ ಕಾಡುತ್ತಿದೆ ಹಾರ್ಟ್‌ ಅಟ್ಯಾಕ್; ಹೃದಯದ ಜೋಪಾನಕ್ಕೆ ಡಾಕ್ಟರ್ ಹೇಳುವ ಈ ಸಲಹೆ ಪಾಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳಿಂದ ವೃದ್ಧರವರೆಗೆ ಕಾಡುತ್ತಿದೆ ಹಾರ್ಟ್‌ ಅಟ್ಯಾಕ್; ಹೃದಯದ ಜೋಪಾನಕ್ಕೆ ಡಾಕ್ಟರ್ ಹೇಳುವ ಈ ಸಲಹೆ ಪಾಲಿಸಿ

ಮಕ್ಕಳಿಂದ ವೃದ್ಧರವರೆಗೆ ಕಾಡುತ್ತಿದೆ ಹಾರ್ಟ್‌ ಅಟ್ಯಾಕ್; ಹೃದಯದ ಜೋಪಾನಕ್ಕೆ ಡಾಕ್ಟರ್ ಹೇಳುವ ಈ ಸಲಹೆ ಪಾಲಿಸಿ

Heart Attack: ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಹಾರ್ಟ್‌ ಅಟ್ಯಾಕ್ ಆಗಿ ಹಲವರು ಸಾಯುತ್ತಿದ್ದಾರೆ. ಈ ಬೆಳವಣಿಗೆ ತೀರಾ ಆತಂಕಕಾರಿಯಾಗಿದೆ. ಜನರು ಮೊದಲೇ ಎಚ್ಚೆತ್ತುಕೊಂಡು ತಮ್ಮ ದಿನಚರಿಯನ್ನು ಸರಿಪಡಿಸಿಕೊಂಡರೆ ಮಾತ್ರ ಈ ಅಪಾಯ ತಪ್ಪುತ್ತದೆ. ಇಲ್ಲವಾದಲ್ಲಿ ಸಮಸ್ಯೆ ಎನ್ನುವುದು ಕಟ್ಟಿಟ್ಟ ಬುತ್ತಿ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಟಿವಿ ನಟ ವಿಕಾಸ್ ಸೇತಿಯವರು ತಮ್ಮ 48 ವಯಸಿನಲ್ಲಿ ಮೃತರಾಗಿದ್ದಾರೆ. ಇದು ಇತ್ತೀಚಿಗೆ ನಡೆದ ಘಟನೆ. ಇನ್ನು ಇದೇ ರೀತಿ ನಿಮ್ಮ ಸುತ್ತಮುತ್ತಲು ಹತ್ತಾರು ಜನ ಇದೇ ರೀತಿ ಚಿಕ್ಕ ವಯಸ್ಸಿನಲ್ಲೇ ತೀರಿ ಹೋದ ಸಂಗತಿಯನ್ನು ನೀವು ಕಣ್ಣಾರೆ ಕಂಡಿರುತ್ತೀರಾ. ಆರೋಗ್ಯ ಪರಿಸ್ಥಿತಿ ಮೇಲ್ನೋಟಕ್ಕೆ ಸರಿಯಾಗಿದ್ದರೂ ರಾತ್ರಿ ಮಲಗಿದ್ದಲ್ಲಿಯೇ ಎಷ್ಟೋ ಜನ ಪ್ರಾಣ ಬಿಡುತ್ತಾರೆ. ಇತ್ತೀಚಿನ ದಿನದಲ್ಲಿ ಹಾರ್ಟ್‌ ಅಟ್ಯಾಕ್ ಎಂಬುದು ಒಂದು ಗಂಭೀರವಾದ ಸಮಸ್ಯೆಯಾಗಿದೆ. ಕೆಲವು ಸಂದರ್ಭಗಳಲ್ಲಿ ನಾವೇನು ತಪ್ಪು ಮಾಡುತ್ತಿದ್ದೇವೆ ಎಂದು ತಿಳಿದಿದ್ದರು ಮತ್ತೆ ಮತ್ತೆ ಅದನ್ನೇ ಮಾಡುತ್ತಾರೆ.

ಹಾರ್ಟ್‌ ಅಟ್ಯಾಕ್ ಲಕ್ಷಣಗಳು

ಎದೆನೋವು, ವಾಕರಿಕೆ, ವಾಂತಿಯಂತಹ ಲಕ್ಷಣ ಕಂಡು ಬಂದರೆ ಬೇಗನೆ ಎಚ್ಚೆತ್ತುಕೊಳ್ಳಬೇಕು ಮುಖ್ಯವಾಗಿ ಉಸಿರುಗಟ್ಟಿದಂತಾಗುವುದು, ಆಯಾಸವಾಗುವುದು ಮೈ ಬೆವರುವುದು, ಅಸ್ವಸ್ಥತೆ, ವಾಕರಿಕೆ ಉಸಿರಾಟದ ತೊಂದರೆ, ಇವುಗಳೆಲ್ಲವೂ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ನಿದ್ರೆಯಿಂದ ಎದ್ದ ತಕ್ಷಣ ಅಥವಾ ನಿದ್ರೆಯಲ್ಲಿ ಹೃದಯ ಸ್ತಂಭನ ಆಗುವುದು ಹೆಚ್ಚು. ಹೃದಯಕ್ಕೆ ರಕ್ತದ ಹರಿವು ತಟ್ಟನೆ ನಿಂತಾಗ ಈ ರೀತಿ ಆಗುತ್ತದೆ.

ಒತ್ತಡ ಹೃದಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಅತಿಯಾದ ಒತ್ತಡ ಆತಂಕ, ಖಿನ್ನತೆ, ಜಠರ ಅಥವಾ ಕರುಳಿನ ಸಮಸ್ಯೆಗಳು ಆಹಾರದಲ್ಲಿ ವಿಷ ಇರುವುದು ಹೀಗೆ ಹಲವಾರು ಸಮಸ್ಯೆಗಳನ್ನೊಳಗೊಂಡಂತೆ ಸಾಕಷ್ಟು ವಿಶ್ರಾಂತಿ ಇಲ್ಲದಿರುವುದು ಸಹ ಇದಕ್ಕೆ ಕಾರಣವಾಗುತ್ತದೆ.

ಕೆಲವರಿಗೆ ಎದೆ ನೋವು ಕೂಡ ಕಾಣಿಸಿಕೊಳ್ಳುವುದಿಲ್ಲ ಅದು ವಿಳಂಬವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ರೋಗ ಲಕ್ಷಣಗಳು ಮಾತ್ರ ನಾವು ಈ ಮೇಲೆ ತಿಳಿಸಿದಂತೆ ಇರುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡ ಹಾಗೆ ಅಧಿಕ ಕೊಲೆಸ್ಟ್ರಾಲ್ ಇರುವ ಜನರಲ್ಲಿ ಸಾಮಾನ್ಯವಾಗಿ ಹೃದಯಘಾತದ ಅಪಾಯ ಹೆಚ್ಚು. ಧೂಮಪಾನಿಗಳು, ಪುರುಷರು ಇವರು ಸಹ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆ ಹೊಂದಿರುತ್ತಾರೆ.

ಪ್ರಸಿದ್ಧ ಹೃದ್ರೋಗ ತಜ್ಞರು ಮತ್ತು SAAOL ಹಾರ್ಟ್ ಸೆಂಟರ್ ಸಂಸ್ಥಾಪಕ ಡಾ ಬಿಮಲ್ ಛಾಜೇರ್ ಅವರೊಂದಿಗೆ ಮಾತನಾಡಿದಾಗ ಅವರು ಹರ್‌ಜಿಂದಗಿ ವೆಬ್‌ಸೈಟ್‌ನಲ್ಲಿ ನೀಡಿದ ಮಾಹಿತಿ ಪ್ರಕಾರ “ಇತ್ತೀಚಿನ ದಿನಗಳಲ್ಲಿ ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ ಹೃದಯ ಸ್ತಂಭನ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸ್ಕ್ರೀನ್‌ ಟೈಮಿಂಗ್‌, ಹೆವಿ ವರ್ಕೌಟ್ ಇವುಗಳೆಲ್ಲೂ ಕಾರಣವಾಗುತ್ತದೆ” ಎಂದಿದ್ದಾರೆ. ಅವರು ತಿಳಿಸಿದ ತಪಾಸಣಾ ಹಾಗೂ ಮುಂಜಾಗ್ರತಾ ಕ್ರಮಗಳನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.

ಆರೋಗ್ಯ ತಪಾಸಣೆಗಳು: ನಿಯಮಿತ ವೈದ್ಯಕೀಯ ತಪಾಸಣೆಗಳು ಅಗತ್ಯ ವಿಶೇಷವಾಗಿ ನಿಮ್ಮ ಕುಟುಂಬದ ಹಿನ್ನೆಲೆಯಲ್ಲಿ ಯಾರಾದರೂ ಹೃದ್ರೋಗದ ಹೊಂದಿದ್ದರೆ ನೀವು ಆಗಾಗ ತಪಾಸಣೆ ಮಾಡಿಸಬೇಕಾಗುತ್ತದೆ.

ಸ್ಟ್ರೆಸ್‌ ಕಂಟ್ರೋಲ್ ಮಾಡಿ: ಯೋಗ, ಧ್ಯಾನ, ಮತ್ತು ಸಾಕಷ್ಟು ನಿದ್ರೆಯನ್ನು ಮಾಡಲೇಬೇಕು. ಒತ್ತಡ-ಕಡಿಮೆಗೊಳಿಸುವ ಅಭ್ಯಾಸಗಳನ್ನು ಹೊಂದಿರಿ. ಇದು ಮಾನಸಿಕ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

ಜಾಗೃತಿ ಮೂಡಿಸುವುದು: ಹೃದ್ರೋಗ ಮತ್ತು ಹೃದಯ ಸ್ತಂಭನದ ಅಪಾಯಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಯುವಜನರಿಗೆ ಶಿಕ್ಷಣ ನೀಡುವುದು, ಅಗತ್ಯವಿದ್ದಾಗ ತ್ವರಿತ ವೈದ್ಯಕೀಯ ಆರೈಕೆಯನ್ನು ಪಡೆಯಲು ಅವರನ್ನು ಉತ್ತೇಜಿಸುವ ಕೆಲಸ ಆಗಬೇಕಿದೆ.

ಸುರಕ್ಷಿತ ವ್ಯಾಯಾಮ: ಹೃದಯರಕ್ತನಾಳದ ತಪಾಸಣೆ ಮತ್ತು ಯುವ ಕ್ರೀಡಾಪಟುಗಳಿಗೆ ಸರಿಯಾದ ತರಬೇತಿ ಅಭ್ಯಾಸಗಳನ್ನು ಅನುಸರಿಸುವುದು ವ್ಯಾಯಾಮ-ಸಂಬಂಧಿತ ಹೃದಯ ಘಟನೆಗಳನ್ನು ತಡೆಯುತ್ತದೆ.

Whats_app_banner