ನೀವು ಯಾರಿಗೆ ಏನ್ ಒಳ್ಳೆದ್ ಮಾಡಿದ್ರು, ಬೈಯುವವರು ಎಲ್ಲಾ ಕಡೆ ಸಿಕ್ಕೇ ಸಿಗ್ತಾರೆ ಅನ್ನೋದಕ್ಕೆ ಇಲ್ಲೇ ಇದೆ ಉದಾಹರಣೆ
Do what You Want: ನೀವು ಯಾರಿಗೆ ಎನ್ ಬೇಕಾದ್ರು ಒಳ್ಳೆಯ್ದು ಮಾಡ್ರಿ, ನಿಮ್ಮನ್ನು ಬೈಯುವರು ಎಲ್ಲಾ ಕಡೆ ಸಿಕ್ಕೇ ಸಿಗ್ತಾರೆ. ಇದಕ್ಕೆ ಹೇಳೋದು ನಿಮಗೆ ಏನ್ ಬೇಕೋ ಅದನ್ನು ನೀವೇ ಮಾಡಿಬಿಡಿ. ಯಾಕೆಂದರೆ ಜನರು ನೀವು ಒಳ್ಳೆಯದು ಮಾಡಿದರೂ ಬೈತಾರೆ, ಕೆಟ್ಟದ್ದನ್ನು ಮಾಡಿದರಂತೂ ಹೇಳದೆ ಬಿಡೋದೇ ಇಲ್ಲ. ಇದಕ್ಕೆ ಉದಾಹರಣೆಯಾಗಿ ಒಂದು ಸುಂದರ ಕಥೆ ಇಲ್ಲಿದೆ ನೋಡಿ.
ಅದೊಂದು ಮದುವೆ. ವರನ ಕಡೆಯವರು ಒಂದು ಕೆಂಪು ಬಸ್ ಪೂರಾ ತುಂಬಿಕೊಂಡು ವಧುವಿನ ಊರಿಗೆ ಬಂದು ಮುಟ್ಟಿದರು. ಹೆಣ್ಣಿನ ಕಡೆಯವರು ಉಳ್ಳವರು. 20 ಎಕ್ರೆ ಕಾಯಿಪಲ್ಲೆ ತೋಟ, 15 ಧಾರವಾಡ ಎಮ್ಮಿ, 10 ಗೀರ್ ಆಕಳು, 10000 ಕೋಳಿ ಇದ್ದ ಫಾರಂ ಮತ್ತು 1000ಕ್ಕು ಹೆಚ್ಚು ಕುರಿ ಇದ್ದವರು ಭರ್ಜರಿ ಸ್ವಾಗತ ಮಾಡಿದರು. ಬಸ್ಸಿನ್ಯಾಗ ಬಂದ ಅತಿಥಿ ಸಂಖ್ಯೆ 55, ಅದಕ್ಕ ಬಗೆಯ ಅಡುಗೆಗಳು! 55 ಜನರಿಗೆ ಅಸಲಿ ಜವಾರಿ ತುಪ್ಪದಾಗ ಮಾಡಿಸಿದ 55 ನಮೂನೆಯ ಸ್ವೀಟುಗಳು.
ಶುದ್ಧ ಹಾಲಿನ್ಯಾಗ ಕುದಿಸಿದ ಚಹಾ / ಕಾಫಿ, ಬಾಯಿ ಚಪ್ಪರಿಸಲಿಕ್ಕೆ ಗೋಡಂಬಿ - ಬದಾಮ್ - ಪಿಸ್ತಾ ! ಇರಲಿಕ್ಕೆ ವ್ಯವಸ್ಥಾ ಜೋರದಾರ ಮಾಡಿದ್ದರು, ಇಬ್ಬಿಬ್ಬರಿಗೆ ಒಂದು ಕೋಣೆ, ಗಾದಿ ಹಾಕಿ, ಮೆತ್ತನೆ ತಲೆದಿಂಬು, ಹೊದಿಲಿಕ್ಕೆ ಜಯಪುರ್ ರಗ್ಗು ಇಟ್ಟಿದ್ದರು. ಸ್ನಾನಕ್ಕೆ ಬಿಸಿ ಬಿಸಿ ನೀರು, ಮೈಸೂರು ಸ್ಯಾಂಡಲ್ ಸಾಬೂನು, ಶಾಂಪೂ, ಒರೆಸಿಕೊಳಲಿಕ್ಕೆ ಅಪ್ಪಟ ಬಿಳಿ ಬಣ್ಣದ ಹೊಚ್ಚ ಹೊಸ ಟಾವೆಲ್. ಚಾಕುಚಕ್ಯತೆ ಎಷ್ಟು ಇತ್ತು ಅಂದ್ರ. ಎಲ್ಲೆಲ್ಲೂ ಸ್ವಚ್ಛತೆ, ಸುವಾಸನೆಯ ಮತ್ತ ಸೌಂದರ್ಯ!
ಭರ್ಜರಿ ಭೋಜನ ಮಾಡಿ, ರಾತ್ರಿ ಇಡೀ ತಂಪು ನಿದ್ದಿ ಮಾಡಿದ ಬೀಗರು, ಮರುದಿನ ವಿಜೃಂಭಣೆಯಿಂದ ಆದ ಮಾದವ್ಯಾಗ ತಿಂದು ಉಂಡು ತೇಗಿದರು. ಆಗಲೂ ಭರ್ಜರಿ ವ್ಯವಸ್ಥೆ ! ಊಟ ಉಪಚಾರ ಬಲು ಜೋರು! ಮದುವಿ ಮುಗಿಸಿಕೊಂಡು ಮರಳುತ್ತಿದ್ದ ಪ್ರತಿಯೊಬ್ಬ ಅತಿಥಿಗೆ ಉಡುಗೊರೆ ಅಂತ ಒಂದು ಬೆಳ್ಳಿ ಲೋಟ, ಮತ್ತ ಆ ಊರಿನ ವೈಶಿಷ್ಯ ಇದ್ದ ದಾಳಂಬರಿ ಹಣ್ಣಿನ ಒಂದು ಬಾಕ್ಸ ಕೊಟ್ಟು ಕೃತಕೃತಾರ್ಥರಾದರು ವಧುವಿನ ಕಡೆಯವರು.
ಇಷ್ಟೆಲ್ಲ ಅನುಭವಿಸಿ - ಆನಂದಿಸಿ ನವವಧುವನ್ನ ಕರಕೊಂಡು ತಮ್ಮ ಊರಿಗೆ ಮರಳಿದ ದಿಬ್ಬಣಖೋರರ ಮರುದಿನದ ಪ್ರತಿಕ್ರಿಯೆ.
1. ಬೀಗರು 'ನಮ್ಮನ್ನ ಅವಮಾನ ಮಾಡಾಕ್!' ಬೇಕಂತಲೇ ಈ ವ್ಯವಸ್ಥೆ ಮಾಡಿದ್ದರು.
2. ಅಲ್ಲಾ, ಎಲ್ಲಾ ತುಪ್ಪದಾಗ್ ಮಾಡ್ಸ್ಯಾರ್ ನಾವೇನು ತುಪ್ಪ ನೋಡಿಲ್ಲ ಅಂತ ತಿಳಕಂಡರು ಹ್ಯಾಂಗ್?
3. ಏನೇನೋ ತಿನ್ನಿಸಿ ಹೊಟ್ಟಿ ಕೆಡಿಸ್ಯಾರ್. ನಮ್ ಮುದುಕಿ ಬರೆ ಗ್ಯಾಸ್ ಅಂತ ಹೋಯೀಕೊತ ಕೂತದ.
4. ಅಲ್ಲ, ಅಷ್ಟೊಂದು ಸಾಬೂನು ಶಾಂಪೂ ಯಾಕ್ ಕೊಟ್ಟರು ? ನಾವೇನು ಅಷ್ಟು ಹೊಲಸು ಅಂತ ತಿಳಿಕೊಂಡರೊ ಹ್ಯಾಂಗ?
5. ಮಲಗು ರೂಮ್ ನಾಗ ಗಾದಿ ಹಾಕಿದ್ರು , ನನ್ನ ಬೆನ್ನು ನೋಯಿಸಬೇಕು ಅಂತ ಬೇಕಂತಲೇ ಕಾರಸ್ತಾನ ಮಾಡ್ಯಾರ್!
6. ಇಬ್ಬಿಬ್ಬರಿಗೆ ಒಂದು ರೂಮ್ ಕೊಟ್ಟಾರ, ರಾತ್ರಿ ನಮ್ಮ ನಮ್ಮ ಒಳಗ್ ಸಮಾತನ್ಯಾಗ ಮಾತಾಡಾಕ್ ಆಗಲೇ ಇಲ್ಲ , ಅರ್ಧ ರಾತ್ರ್ಯಾಗ ಬ್ಯಾರೆ ಬ್ಯಾರೆ ರೂಮ್ ಅಡ್ಡಾಡೋದ ಆತು ನಮ್ಮ ಗತಿ!
7. ಹಾಲನ್ಯಾಗ ಚಾ ಕಾಫಿ ಮಾಡ್ಯಾರ್, ಅದಕ್ಕೇನು ಖರೆ ಚಾದ್ ರುಚಿ ಬರ್ತಿತಿ? ಬರೆ ಹಾಲ್ ಕುಡದ್ಹಂಗ ಆತು!
8. ಬಿಳಿ ಟಾವೆಲ್ ಕೊಟ್ಪಾರಪಾ, ಅವು ಮೆತ್ತಗಿನ ಅರಬಿದು, ಬೆನ್ನ ವರಸಾಕ್ ಬಿರಸ್ ಟಾವೆಲ್ ಬೇಕಾಗತೈತಿ ಅಂತೂ ಗೊತ್ತಿಲ್ಲ ಅವರಿಗೆ!
9. ತಮ್ಮ ರೊಕ್ಕದ ದಿಮಾಕ್ ತೋರಿಸಲಿಕ್ಕೆ ಹಿಂಗ್ ಮಾಡ್ಯಾರ್!
10. ಬೆಳ್ಳಿ ಲೋಟ ತುಗೊಂಡ್ ನಾವೇನು ಮಾಡಬೇಕು? ಚೆಂದದ ಹಾಂಗ್ ಒಂದು ಶರ್ಟ್ ಪೀಸ್ ಒಂದು ಟೋಪಿಗಿ ಕೊಟ್ಟಿದ್ದರ ಛೋಲೋ ಇರತಿತ್ತು.
11. ಆ ದಾಳಂಬರಿ ಹಣ್ಣಿನ ಕಲಿ ನನ್ನ ಹೆಂಡ್ತಿ ಸೀರಿಗೆ ಹತೈತಿ , ಇವರಪ್ಪ ತುಂಬಿ ಕೊಡ್ತಾನೇನು? 250 ರೂಪಾಯಿ ಸೀರಿ!
12. ಅಲ್ಲ, ಇಷ್ಟ ಖರ್ಚು ಮಾಡ್ಯಾರ್ ಅಂದ್ರ ಹುಡುಗಿದು ಎನ್ ಲಫ್ಡಾ ಇತ್ತೋ ಏನೋ. ನನಗಂತೂ ಅಕಿ ಮ್ಯಾಲ್ಗಣ್ಣು ಅಂತ ಸಂಶಯ್ ಐತಿ!
ತಾತ್ಪರ್ಯ ಏನು?
ನೀವು ಯಾರಿಗೆ ಎನ್ ಬೇಕಾದ್ರು ಒಳ್ಳೆಯ್ದು ಮಾಡ್ರಿ, ನಿಮ್ಮನ್ನು ಬೈಯುವರು ಎಲ್ಲಾ ಕಡೆ ಸಿಕ್ಕೇ ಸಿಗತಾರ. ಅದಕ್ಕ ನಿಮ್ಗೆ ಯಾವಾಗ ಏನು ಬೇಕೋ ಅದನ್ನ ಮಾಡ್ರಿ, ಮಂದಿ ಏನಂದಾರು ಅಂತ ಯೋಚಿಸಬೇಡಿ.
ಕೃಪೆ: ವಾಟ್ಸಪ್
ಮೆಸೇಜ್ ಹಂಚಿಕೊಂಡವರು ಓದುಗರಾದ ಮೇದಿನಿ ಕೆಸವಿನಮನೆ
ವಿಭಾಗ