Jewellery Cleaning: ಮನೆಯಲ್ಲೇ ಚಿನ್ನ, ಬೆಳ್ಳಿ ಸ್ವಚ್ಛಗೊಳಿಸುವುದು ಹೇಗೆ? ಆಭರಣ ಲಕಲಕ ಹೊಳೆಯುವಂತೆ ಮಾಡಲು ಬೊಂಬಾಟ್‌ ಐಡಿಯಾ-how clean gold and silver jewlery at home use dish soap toothpaste baking soda hot water pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Jewellery Cleaning: ಮನೆಯಲ್ಲೇ ಚಿನ್ನ, ಬೆಳ್ಳಿ ಸ್ವಚ್ಛಗೊಳಿಸುವುದು ಹೇಗೆ? ಆಭರಣ ಲಕಲಕ ಹೊಳೆಯುವಂತೆ ಮಾಡಲು ಬೊಂಬಾಟ್‌ ಐಡಿಯಾ

Jewellery Cleaning: ಮನೆಯಲ್ಲೇ ಚಿನ್ನ, ಬೆಳ್ಳಿ ಸ್ವಚ್ಛಗೊಳಿಸುವುದು ಹೇಗೆ? ಆಭರಣ ಲಕಲಕ ಹೊಳೆಯುವಂತೆ ಮಾಡಲು ಬೊಂಬಾಟ್‌ ಐಡಿಯಾ

Jewellery Cleaning: ಮನೆಯಲ್ಲೇ ನಿಮ್ಮಲ್ಲಿರುವ ಹಳೆಯ ಆಭರಣಗಳನ್ನು ಕ್ಲೀನ್‌ ಮಾಡಬಹುದು. ನಿಂಬೆರಸ, ಚಹಾ ಎಲೆ, ಟೂತ್‌ ಫೇಸ್ಟ್‌ ಸೇರಿದಂತೆ ವಿವಿಧ ವಸ್ತುಗಳ ಮೂಲಕ ಚಿನ್ನ, ಬೆಳ್ಳಿ ಆಭರಣಗಳನ್ನು ಹೇಗೆ ಕ್ಲೀನ್‌ ಮಾಡಬಹುದು ಎಂದು ತಿಳಿಯೋಣ.

ಚಿನ್ನ ಬೆಳ್ಳಿ ಸ್ವಚ್ಛಗೊಳಿಸಲು ಸಲಹೆ, ಸಾಂದರ್ಭಿಕ ಚಿತ್ರ  (PTI Photo/Shailendra Bhojak)
ಚಿನ್ನ ಬೆಳ್ಳಿ ಸ್ವಚ್ಛಗೊಳಿಸಲು ಸಲಹೆ, ಸಾಂದರ್ಭಿಕ ಚಿತ್ರ (PTI Photo/Shailendra Bhojak)

Jewellery Cleaning: ಚಿನ್ನ ಹೊಸದಾಗಿ ಖರೀದಿಸುವಾಗ ಲಕಲಕ ಎಂದು ಹೊಳೆಯುತ್ತಿರುತ್ತದೆ. ಧರಿಸಿ ಹಳೆಯದಾಗ ಕೊಂಚ ಮಸುಕಾದಂತೆ ಕಾಣಿಸುತ್ತದೆ. ಆಭರಣಗಳ ಮೇಲೆ ಪರಿಸರದ ಪ್ರಭಾವದಿಂದ ಡಲ್‌ ಆಗಿ ಕಾಣಿಸಬಹುದು. ದಸರಾ, ದೀಪಾವಳಿ ಹಬ್ಬ ಹತ್ತಿರದಲ್ಲಿದೆ. ಈ ಸಮಯದಲ್ಲಿ ನಿಮ್ಮ ಹಳೆಯ ಆಭರಣಗಳನ್ನು ಸ್ವಚ್ಛಗೊಳಿಸಿ ಧರಿಸಿರಿ. ಇದೇ ಸಮಯದಲ್ಲಿ ಮನೆಯ ದೇವರ ಕೋಣೆಯಲ್ಲಿ ಇಟ್ಟಂತಹ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನೂ ನೀವೇ ತೊಳೆಯಬಹುದು. ಚಿನ್ನ ಮತ್ತು ಬೆಳ್ಳಿಯ ವಿಗ್ರಹಗಳು, ಚಿನ್ನ ಬೆಳ್ಳಿ ಆಭರಣಗಳು ಭೇಗನೇ ಕಪ್ಪಾಗುತ್ತವೆ. ಪ್ಯೂರ್‌ ಚಿನ್ನ ಬೆಳ್ಳಿಯ ಆಭರಣಗಳನ್ನು ಸ್ವಚ್ಛಗೊಳಿಸಲು ಅಪರಿಚಿತರಿಗೆ ನೀಡಿದರೆ ಮೋಸ ಹೋಗುವ ಸಾಧ್ಯತೆಯೂ ಇರುತ್ತದೆ. ಇಂತಹ ಬೆಳೆಬಾಳುವ ಲೋಹಗಳನ್ನು ಮನೆಯಲ್ಲಿ ನೀವೇ ತೊಳೆಯಬಹುದು.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಬೆಳ್ಳಿ ಆಭರಣಗಳು ಸೋಪಿನ ನೊರೆ ಹಾಕಿ, ತುಸು ಬಿಸಿ ನೀರಿನಿಂದ ತೊಳೆಯಬಹುದು. ನೀರಿನೊಂದಿಗೆ ಅಡುಗೆ ಸೋಡ ಬಳಸಿಯೂ ತೊಳೆಯಬಹುದು. ಬಿಳಿ ವಿನೇಗರ್‌ ಬಳಸಿಯೂ ತೊಳೆಯಬಹುದು. ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸಲು ಕಿಚನ್ ಅಲ್ಯೂಮಿನಿಯಂ ಫಾಯಿಲ್ ಅನ್ನು ಬಳಸಬಹುದು. ಇದಕ್ಕಾಗಿ, ಒಂದು ಪಾತ್ರೆಯಲ್ಲಿ ಕುದಿಯುವ ನೀರನ್ನು ತೆಗೆದುಕೊಂಡು ಅಲ್ಯೂಮಿನಿಯಂ ಫಾಯಿಲ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈಗ ಈ ನೀರಿಗೆ ಒಂದು ಟೀಚಮಚ ಅಡಿಗೆ ಸೋಡಾ ಸೇರಿಸಿ ಮತ್ತು ಬೆಳ್ಳಿಯ ಆಭರಣಗಳನ್ನು ಸ್ವಲ್ಪ ಸಮಯದವರೆಗೆ ನೆನೆಸಿ. ಇದರ ನಂತರ ಬ್ರಷ್‌ನ ಸಹಾಯದಿಂದ ಬೆಳ್ಳಿಯ ವಸ್ತುಗಳನ್ನು ಸ್ವಚ್ಛಗೊಳಿಸಿ. ಇದು ಬೆಳ್ಳಿಯ ಆಭರಣಗಳ ಮೇಲಿನ ಕಪ್ಪು ಬಣ್ಣವನ್ನು ತೊಡೆದುಹಾಕುತ್ತದೆ, ಅದು ಬಿಳಿಯಾಗಿ ಹೊಳೆಯುವಂತೆ ಮಾಡುತ್ತದೆ.

ಚಹಾ ಎಲೆ ಬಳಸಿ ಆಭರಣ ಶುಚಿಗೊಳಿಸಿ

ಚಿನ್ನದ ಆಭರಣಗಳು ಅಥವಾ ದೇವರ ವಿಗ್ರಹಗಳಂತಹ ವಸ್ತುಗಳನ್ನು ಹೊಳೆಯುವಂತೆ ಮಾಡಲು ಚಹಾ ಎಲೆಗಳನ್ನು ಬಳಸಬಹುದು. ಬಾಣಲೆಯಲ್ಲಿ ಒಂದು ದೊಡ್ಡ ಲೋಟ ನೀರು ಹಾಕಿ. ಅದಕ್ಕೆ 2 ಟೀ ಚಮಚ ಚಹಾ ಎಲೆಗಳನ್ನು ಸೇರಿಸಿ. ಒಲೆಯ ಮೇಲೆ ಕುದಿಸಿ. ನೀರಿನ ಬಣ್ಣ ದಪ್ಪವಾದಾಗ ನೀರನ್ನು ಸೋಸಿ ಪಕ್ಕಕ್ಕೆ ಇಡಿ. ಈಗ ಒಂದು ಬೌಲ್‌ನಲ್ಲಿ ಒಂದು ಚಮಚ ಅಡಿಗೆ ಸೋಡಾ ಮತ್ತು ಒಂದು ಚಮಚ ಡಿಟರ್ಜೆಂಟ್ ಪೌಡರ್ ಸೇರಿಸಿ ಮಿಶ್ರಣ ಮಾಡಿ. ಜೊತೆಗೆ ಚಹಾ ಎಲೆಗಳ ನೀರನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ಈ ನೀರು ತಣ್ಣಗಾದ ಬಳಿಕ ಚಿನ್ನದ ಆಭರಣಗಳನ್ನು ಈ ನೀರಿನಲ್ಲಿ ಹಾಕಿ ಮತ್ತು ಕಾಲು ಗಂಟೆ ಬಿಡಿ. ಬಳಿಕ ಆಭರಣಗಳನ್ನು ಬ್ರಷ್‌ನಿಂದ ತೊಳೆಯಬೇಕು. ತಾಜಾ ನೀರಲ್ಲಿ ಒಂದಿಷ್ಟು ಹೊತ್ತು ಹಾಕಿಡಿ. ನಂತರ ಹತ್ತಿಯ ಬಟ್ಟೆಯಿಂದ ಆಭರಣಗಳು ಹೊರೆಸಿ. ನಿಮ್ಮ ಆಭರಣಗಳು ಹೊಸದರಂತೆ ಕಾಣಿಸುತ್ತವೆ.

ನಿಂಬೆ ರಸ ಬಳಸಿ

ಒಂದು ಬಟ್ಟಲಿನಲ್ಲಿ ಒಂದು ಅಥವಾ ಎರಡು ಚಮಚ ನಿಂಬೆ ರಸ ಹಾಕಿ. ಅದಕ್ಕೆ ಮೂರು ಚಮಚ ಉಪ್ಪನ್ನು ಮಿಶ್ರಣ ಮಾಡಿ. ಈ ಮಿಶ್ರಣದಲ್ಲಿ ಸ್ವಲ್ಪ ಸಮಯದವರೆಗೆ ಬೆಳ್ಳಿಯ ಪಾತ್ರೆಗಳನ್ನು ಇರಿಸಿ. ಹೀಗೆ ಮಾಡುವುದರಿಂದ ಬೆಳ್ಳಿಯ ಮೇಲಿನ ಕೊಳಕು ಹೋಗುತ್ತದೆ.

ಟೂತ್‌ ಪೇಸ್ಟ್‌

ವಜ್ರದ ಆಭರಣಗಳನ್ನು ಸ್ವಚ್ಛಗೊಳಿಸಲು ಟೂತ್‌ಪೇಸ್ಟ್‌ ಬಳಕೆ ಮಾಡಬಹುದು. ಡೈಮಂಡ್ ರಿಂಗ್ ಅಥವಾ ಕಿವಿಯೋಲೆಗಳ ಮೇಲೆ ಕೊಂಚ ಟೂತ್‌ಪೇಸ್ಟ್‌ ಹಾಕಿ. ಸ್ವಲ್ಪ ಸಮಯ ಉಜ್ಜಿ. ಬಳಿಕ ಒದ್ದೆ ಬಟ್ಟೆಯಿಂದ ಒರೆಸಿ. ಆಭರಣ ಲಕಲಕ ಹೊಳೆಯುತ್ತದೆ.

ಬಿಸಿನೀರಲ್ಲಿ ತೊಳೆಯಿರಿ

ನೀರನ್ನು ಬಿಸಿ ಮಾಡಿ. ಆ ಬಿಸಿನೀರಲ್ಲಿ ಚಿನ್ನದ ಆಭರಣಗಳನ್ನು ಹಾಕಿ ಬ್ರಷ್‌ನಿಂದ ಉಜ್ಜಿ. ಅದರ ಕೊಳೆ ಹೋಗುತ್ತದೆ. ವಜ್ರಗಳು, ಮುತ್ತುಗಳು ಮತ್ತು ಮಾಣಿಕ್ಯಗಳಂತಹ ಪುಡಿಮಾಡಿದ ಆಭರಣಗಳು ಬೀಳದಂತೆ ಎಚ್ಚರಿಕೆಯಿಂದ ಸ್ವಚ್ಛಗೊಳಿಸಬೇಕು. ಅವುಗಳನ್ನು ಬ್ರಷ್ನಿಂದ ಉಜ್ಜಿದರೆ, ಬೀಳುವ ಅಪಾಯವಿದೆ. ಆದ್ದರಿಂದ ಅವುಗಳನ್ನು ಒದ್ದೆಯಾದ ಬಟ್ಟೆಯಿಂದ ಒತ್ತಿ ಮತ್ತು ಒರೆಸಬೇಕು.

ವಂಚಕರ ಕುರಿತು ಎಚ್ಚರವಹಿಸಿ

ಗ್ರಾಮೀಣ ಮನೆಗಳಿಗೆ ಅಥವಾ ನಗರ ಮನೆಗಳಿಗೆ ವಂಚಕರು ಚಿನ್ನ ಬೆಳ್ಳಿ ಕ್ಲೀನ್‌ ಮಾಡುವುದಾಗಿ ಆಗಮಿಸಬಹುದು. ಅವರ ಮಾತಿನ ಮೋಡಿಗೆ ಸಿಲುಕಬೇಡಿ. ಚಿನ್ನ ಅಥವಾ ಬೆಳ್ಳಿ ಕ್ಲೀನ್‌ ಮಾಡುವ ನೆಪದಲ್ಲಿ ನಿಮ್ಮ ಆಭರಣದೊಂದಿಗೆ ಪರಾರಿಯಾಗಬಹುದು.

mysore-dasara_Entry_Point