ಕನ್ನಡ ಸುದ್ದಿ  /  Lifestyle  /  Viral News Brain Teaser Can You Calculate How Many Members Are There In This Suresh Family Social Media Rst

Brain Teaser: ಸುರೇಶನ ಮನೆಯಲ್ಲಿರುವುದು ಒಟ್ಟು ಎಷ್ಟು ಜನ? ಯೋಚ್ನೆ ಮಾಡಿ ಉತ್ತರ ಹೇಳಿ; ನಿಮ್ಮ ಜಾಣ್ಮೆಗೊಂದು ಸವಾಲು

ಸಾಮಾಜಿಕ ಜಾಲಾತಾಣದಲ್ಲಿ ವೈರಲ್‌ ಆಗಿರುವ ಬ್ರೈನ್‌ ಟೀಸರ್‌ವೊಂದಕ್ಕೆ ಉತ್ತರ ಹುಡುಕಲು ಜನ ಪರದಾಡುತ್ತಿದ್ದಾರೆ. ಸುರೇಶನ ಮನೆಯಲ್ಲಿ ಎಷ್ಟು ಜನ ಇದ್ದಾರೆ ಎಂಬುದನ್ನು ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವಾಗುವುದೇ ನೋಡಿ. ಕೊಂಚ ಯೋಚಿಸಿದ್ರೆ ಉತ್ತರ ಸಿಗೋದು ಪಕ್ಕಾ. ಹಾಗಂತ ಗಡಿಬಿಡಿ ಉತ್ತರ ಹೇಳ್ಬೇಡಿ, ತಪ್ಪಾಗುತ್ತೆ.

ಸುರೇಶನ ಮನೆಯಲ್ಲಿರುವುದು ಒಟ್ಟು ಎಷ್ಟು ಜನ? ಯೋಚ್ನೆ ಮಾಡಿ ಉತ್ತರ ಹೇಳಿ
ಸುರೇಶನ ಮನೆಯಲ್ಲಿರುವುದು ಒಟ್ಟು ಎಷ್ಟು ಜನ? ಯೋಚ್ನೆ ಮಾಡಿ ಉತ್ತರ ಹೇಳಿ

ಪಜಲ್‌ಗಳನ್ನು ಬಿಡಿಸುವ ಸಲುವಾಗಿ ತಲೆ ಕೆಡಿಸಿಕೊಳ್ಳೋದು ನಿಮಗೆ ಇಷ್ಟಾನಾ, ಹಾಗಿದ್ರೆ ನೀವು ಬ್ರೈನ್‌ ಟೀಸರ್‌ಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಬೇಕು. ಈ ಬ್ರೈನ್‌ ಟೀಸರ್‌ಗಳು ನಿಮ್ಮಲ್ಲಿ ಲಾಜಿಕಲ್‌ ಥಿಂಕಿಂಗ್‌ ಪವರ್‌ ಅನ್ನು ವೃದ್ಧಿಸುತ್ತದೆ. ಅಲ್ಲದೇ ಇವು ಕ್ರಿಯಾತ್ಮಕವಾಗಿ ಯೋಚಿಸುವಂತೆಯೂ ಮಾಡುತ್ತವೆ. ಅಲ್ಲದೇ ಇವುಗಳಿಗೆ ಉತ್ತರ ಹುಡುಕುವ ಸಲುವಾಗಿ ನೀವು ಒಂದಿಷ್ಟು ಹೊತ್ತು ನಿಮ್ಮ ಬೇರೆಲ್ಲ ಯೋಚನೆಗಳನ್ನು ಬದಿಗಿಡುತ್ತೀರಿ. ನಿಮಗೆ ಬ್ರೈನ್‌ ಟೀಸರ್‌ ಬಿಡಿಸುವ ಹವ್ಯಾಸ ರೂಢಿಸಿಕೊಳ್ಳುವ ಆಸೆ ಇದ್ರೆ ನಾವು ನಿಮಗಾಗಿ ಪ್ರತಿದಿನ ಇದೊಂದು ಭಿನ್ನ ಸವಾಲಿನ ಬ್ರೈನ್‌ ಟೀಸರ್‌ಗಳನ್ನು ತರ್ತೀವಿ. ಇದೀಗ ಇಲ್ಲೊಂದು ಅಂತಹದ್ದೇ ಬುದ್ಧಿಗೆ ಗುದ್ದು ಕೊಡುವ ಪ್ರಶ್ನೆಯೊಂದು ಇಲ್ಲಿದೆ. ಇದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಈ ಬ್ರೈನ್‌ ಟೀಸರ್‌ ಅನ್ನು ಬಿಡಿಸಲು ನಿಮ್ಮಿಂದ ಸಾಧ್ಯವಾಗುವುದೇ? ಟ್ರೈ ಮಾಡಿ.

MindYourLogic ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಈ ಪುಟದಲ್ಲಿ ಆಗಾಗ ಭಿನ್ನವಾಗಿರುವ ಬ್ರೈನ್‌ ಟೀಸರ್‌ಗಳನ್ನು ಹಂಚಿಕೊಳ್ಳಲಾಗುತ್ತಿರುತ್ತದೆ. ಈ ಬ್ರೈನ್‌ ಟೀಸರ್‌ನಲ್ಲಿ ಮಿಸ್ಟರ್‌ ಅಂಡ್‌ ಮಿಸೆಸ್‌ ಸುರೇಶ್‌ಗೆ 6 ಜನ ಹೆಣ್ಣುಮಕ್ಕಳು. ಪ್ರತಿ ಹೆಣ್ಣುಮಗಳಿಗೂ ಒಬ್ಬ ಸಹೋದರನಿದ್ದಾನೆ. ಹಾಗಾದರೆ ಸುರೇಶನ ಕುಟುಂಬದಲ್ಲಿ ಒಟ್ಟು ಎಷ್ಟು ಜನರಿದ್ದಾರೆ? ಕೊಂಚ ಯೋಚಿಸಿದ್ರೆ ಈ ಪ್ರಶ್ನೆಗೆ ನೀವು ಉತ್ತರ ಕಂಡು ಹಿಡಿಯೋದು ನಿಜಕ್ಕೂ ಕಷ್ಟವಲ್ಲ.

ಮಾರ್ಚ್‌ 22 ರಂದು ಈ ಬ್ರೈನ್‌ ಟೀಸರ್‌ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ 500ಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದರೆ ಕೆಲವು, ಕಾಮೆಂಟ್‌ ಮಾಡುವ ಮೂಲಕ ತಾವು ಕಂಡುಕೊಂಡು ಉತ್ತರ ತಿಳಿಸಿದ್ದಾರೆ.

ಬ್ರೈನ್‌ ಟೀಸರ್‌ಗೆ ಬಂದ ಉತ್ತರಗಳು ಹೀಗಿವೆ

ʼನೀವು ಖಂಡಿತ 14 ಎಂದು ಯೋಚಿಸಿರುತ್ತೀರಿ. ಆದರೆ ಅದು ತಪ್ಪು. ಯಾಕಂದ್ರೆ ಅಲ್ಲಿರುವುದು 7 ಜನ. ಆರು ಜನ ಸಹೋದರಿಯರು ಹಾಗೂ ಅವರಿಗಿರುವುದು ಒಬ್ಬ ಸಹೋದರ ಅಂದ್ರೆ ಒಟ್ಟು ಜನ 7 ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼ9. ಮಿಸ್ಟರ್‌ ಅಂಡ್‌ ಮಿಸೆಸ್‌ ಸುರೇಶ್‌, ಅವರ 6 ಜನ ಹೆಣ್ಣುಮಕ್ಕಳು ಹಾಗೂ ಒಬ್ಬ ಸಹೋದರ. ಒಟ್ಟು 9 ಜನ ಲ್ಲಿರುವುದು ಎಂದು ಎರಡನೇ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ.

ಈ ಬ್ರೈನ್‌ ಟೀಸರ್‌ಗೆ ಹಲವರು 9 ಎಂದು ಕಾಮೆಂಟ್‌ ಮಾಡಿದ್ದಾರೆ. ಸರಿ ಹಾಗಿದ್ರೆ ಅವರ ಉತ್ತರ ಬಿಡಿ, ನಿಮ್ಮ ಉತ್ತರ ತಿಳಿಸಿ. ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು?

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: ಫೇಸ್‌ಮಾಸ್ಕ್‌ ಹಾಕಿರುವ ಆ ಇಬ್ಬರು ಯಾರು? ಜಾಣರಾದ್ರೆ ಉತ್ತರ ಹೇಳಿ; ಈ ಪ್ರಶ್ನೆ ನಿಮ್ಮ ತಲೆಗೆ ಹುಳ ಬಿಡೋದು ಪಕ್ಕಾ

ಈ ಬ್ರೈನ್‌ ಟೀಸರ್‌ನಲ್ಲಿ ಪ್ರಶ್ನೆಗೆ ನಿಮ್ಮ ಉತ್ತರವೇನು? ಫೇಸ್‌ಮಾಸ್ಕ್‌ ಧರಿಸಿರುವ ಆ ಇಬ್ಬರು ವ್ಯಕ್ತಿಗಳು ಯಾರು? ಇದಕ್ಕೆ ಯೋಚ್ನೆ ಮಾಡಿದ್ರೆ ಉತ್ತರ ಖಂಡಿತ ಸಿಗುತ್ತೆ. ಹಿಂಟ್‌ ಏನು ಅಂದ್ರೆ ಐಪಿಎಲ್‌ ಹತ್ರ ಇದೆ. ಈಗಲಾದ್ರೂ ಯೋಚ್ನೆ ಮಾಡಿ ಉತ್ತರ ಕಂಡು ಹಿಡಿಯೋಕೆ ಟ್ರೈ ಮಾಡಿ. ನೀವು ನಿಜಕ್ಕೂ ಜಾಣರಾದ್ರೆ ಉತ್ತರ ಹೇಳಿ.

ವಿಭಾಗ