ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತೀಯರಿಗೆ ಸನ್‌ಸ್ಕ್ರೀನ್‌ ಅವಶ್ಯಕತೆ ಇಲ್ವಾ, ಇದನ್ನ ಹಚ್ಚಿಲ್ಲ ಅಂದ್ರೆ ಏನಾಗುತ್ತೆ? ತ್ವಚೆಯ ಕಾಳಜಿ ಕುರಿತು ಮಹತ್ವದ ಸಲಹೆಯಿದು

ಭಾರತೀಯರಿಗೆ ಸನ್‌ಸ್ಕ್ರೀನ್‌ ಅವಶ್ಯಕತೆ ಇಲ್ವಾ, ಇದನ್ನ ಹಚ್ಚಿಲ್ಲ ಅಂದ್ರೆ ಏನಾಗುತ್ತೆ? ತ್ವಚೆಯ ಕಾಳಜಿ ಕುರಿತು ಮಹತ್ವದ ಸಲಹೆಯಿದು

ಬೇಸಿಗೆಯಲ್ಲಿ ತಪ್ಪದೇ ಸನ್‌ಸ್ಕ್ರೀನ್‌ ಬಳಸಬೇಕು ಎಂದು ಹೇಳುವುದನ್ನ ಕೇಳಿರುತ್ತೇವೆ. ಆದರೆ ಭಾರತೀಯರ ಚರ್ಮಕ್ಕೆ ನಿಜಕ್ಕೂ ಸನ್‌ಸ್ಕ್ರೀನ್‌ ಅವಶ್ಯವಿಲ್ವಾ? ಸನ್‌ಸ್ಕ್ರೀನ್‌ ಬಳಸದೇ ಇದ್ರೆ ಏನಾಗುತ್ತೆ ಎಂಬ ಪ್ರಶ್ನೆಯೊಂದು ಈಗ ಎಲ್ಲೆಡೆ ಕೇಳಿ ಬರುತ್ತಿದೆ. ಹಾಗಾಗಿ ಭಾರತೀಯರಿಗೆ ಸನ್‌ಸ್ಕ್ರೀನ್‌ ಬೇಕಾ ಬೇಡ ಎಂಬ ತರ್ಕಕ್ಕೆ ಇಲ್ಲಿದೆ ಉತ್ತರ

ಭಾರತೀಯರಿಗೆ ಸನ್‌ಸ್ಕ್ರೀನ್‌ ಅವಶ್ಯಕತೆ ಇಲ್ವಾ, ಇದನ್ನ ಹಚ್ಚಿಲ್ಲ ಅಂದ್ರೆ ಏನಾಗುತ್ತೆ?
ಭಾರತೀಯರಿಗೆ ಸನ್‌ಸ್ಕ್ರೀನ್‌ ಅವಶ್ಯಕತೆ ಇಲ್ವಾ, ಇದನ್ನ ಹಚ್ಚಿಲ್ಲ ಅಂದ್ರೆ ಏನಾಗುತ್ತೆ?

ಬೇಸಿಗೆ ಕಾಲದಲ್ಲಿ ತ್ವಚೆಯ ಆರೈಕೆಯ ವಿಚಾರಕ್ಕೆ ಬಂದರೆ ಮೊದಲು ನೆನಪಾಗೋದು ಸನ್‌ಸ್ಕ್ರೀನ್‌. ಬಿರು ಬಿಸಿಲಿನಲ್ಲಿ ಸನ್‌ಸ್ಕ್ರೀನ್‌ ಇಲ್ಲದೇ ಹೊರಗಡೆ ಹೋಗಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಆದರೆ ಆಗಾಗ ಭಾರತೀಯರ ಚರ್ಮಕ್ಕೆ ಸನ್‌ಸ್ಕ್ರೀನ್‌ ನಿಜಕ್ಕೂ ಅಗಶ್ಯವೇ? ಎಂಬ ಪ್ರಶ್ನೆ ಕೇಳುತ್ತಿರುತ್ತದೆ. ಚರ್ಮದ ವೈದ್ಯರು ಮತ್ತು ಸೌಂದರ್ಯ ತಜ್ಞರು ಸಾಮಾನ್ಯವಾಗಿ ಭಾರತೀಯ ಚರ್ಮಕ್ಕೆ ಸನ್‌ಸ್ಕ್ರೀನ್‌ನ ಅಗತ್ಯದ ಬಗ್ಗೆ ಈ ಪ್ರಶ್ನೆಯನ್ನು ಎದುರಿಸುತ್ತಾರೆ. ದೇಹದಲ್ಲಿನ ಮೆಲನಿನ್‌ ಅಂಶವು ಯುವಿ ವಿಕಿರಣದ ವಿರುದ್ಧ ಅಂತರ್ಗತ ರಕ್ಷಣೆ ನೀಡುತ್ತದೆ. ಚರ್ಮದ ಬಣ್ಣ ಕಂದು ಅಥವಾ ಗೋಧಿ ಬಣ್ಣ ಹೊಂದಿದ್ದರೆ ಅಂತಹವರಿಗೆ ಸನ್‌ಸ್ಕ್ರೀನ್‌ ಅನಿವಾರ್ಯವಲ್ಲ ಎಂಬ ತಪ್ಪು ಕಲ್ಪನೆಯಿದೆ. ಸಾಮಾನ್ಯವಾಗಿ ಭಾರತೀಯರು ಗೋಧಿಬಣ್ಣ ಹೊಂದಿದ್ದು, ನಮಗೆ ನಿಜಕ್ಕೂ ಸನ್‌ಸ್ಕ್ರೀನ್‌ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಈಗ ನಿಮ್ಮಲ್ಲೂ ಮೂಡಿರಬಹುದು.

ಟ್ರೆಂಡಿಂಗ್​ ಸುದ್ದಿ

ಸನ್‌ಸ್ಕ್ರೀನ್‌ ಬಳಕೆ ಬೇಡವೇ?

ಎಸ್ತೆಟಿಕ್‌ ಫಿಸಿಷಿಯನ್‌ ಮತ್ತು ಕನ್ಸ್‌ಲ್ಟೆಂಟ್‌ ಡಾ. ಸರು ಸಿಂಗ್‌ ಅವರು ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಅವರು ಹೇಳುವ ಪ್ರಕಾರ ʼಮೆಲನಿನ್‌ ಸೂರ್ಯನ ಹಾನಿಕಾರಕ ಕಿರಣಗಳ ವಿರುದ್ಧ ನೈಸರ್ಗಿಕ ರಕ್ಷಣೆಯನ್ನು ಒದಗಿಸುತ್ತದೆ. ಆದರೆ ಚರ್ಮಕ್ಕೆ ಹಾನಿಯಾಗದಂತೆ ಸಂಪೂರ್ಣವಾಗಿ ರಕ್ಷಿಸಲು ಈ ಮೆಲನಿನ್‌ ಅಂಶ ಸಾಕಾಗುವುದಿಲ್ಲ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸನ್‌ಸ್ಕ್ರೀನ್‌ ಬಳಸದೇ ಇದ್ದಾಗ ಯುವಿ ವಿಕಿರಣವು ಚರ್ಮದ ಆಳಕ್ಕೆ ತೂರಿಕೊಳ್ಳಬಹುದು. ಇದು ಸನ್‌ಬರ್ನ್‌, ಅಕಾಲಿಕ ವಯಸ್ಸಾಗುವುದು ಮತ್ತು ಚರ್ಮದ ಕ್ಯಾನ್ಸರ್‌ನಂತಹ ಅಪಾಯಗಳಿಗೆ ಕಾರಣವಾಗಬಹುದು. ಇದಲ್ಲದೆ, ಎಲ್ಲಾ ಭಾರತೀಯರ ಸ್ಕಿನ್‌ ಟೋನ್‌ಗಳು ಸಮಾನವಾಗಿ ಮೆಲನಿನ್ ಅನ್ನು ಹೊಂದಿರುವುದಿಲ್ಲ. ಹಗುರವಾದ ಚರ್ಮದ ಟೋನ್ ಹೊಂದಿರುವ ವ್ಯಕ್ತಿಗಳಲ್ಲಿ ಮೆಲನಿನ್ ಅಂಶ ಕಡಿಮೆ ಇರಬಹುದು ಮತ್ತು ಜೊತೆಗೆ ಇವರ ಚರ್ಮಕ್ಕೆ ಸೂರ್ಯನ ಕಿರಣಗಳಿಂದ ಹೆಚ್ಚು ಹಾನಿಯಾಗಬಹುದು. ಎತ್ತರದ ಸ್ಥಳಗಳಲ್ಲಿ ವಾಸಿಸುವವರು ಹಾಗೂ ಹೆಚ್ಚು ಹೊರಗಡೆ ಸಮಯ ಕಳೆಯುವವರ ಮೇಲೆ ಯುವಿ ಕಿರಣಗಳು ಹೆಚ್ಚು ಪರಿಣಾಮ ಬೀರುತ್ತವೆ. ಇವರು ಸೂರ್ಯನ ವಿಕರಣಗಳಿಂದ ಚರ್ಮದ ರಕ್ಷಣೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂಬುದನ್ನು ತಜ್ಞರು ಒತ್ತಿ ಹೇಳುತ್ತಾರೆ.

ಸನ್‌ಸ್ಕ್ರೀನ್‌ ಅವಶ್ಯವಿಲ್ಲ ಎನ್ನುವುದು ತಪ್ಪು ಕಲ್ಪನೆ

ʼಭಾರತೀಯರ ಚರ್ಮಕ್ಕೆ ಸನ್‌ಸ್ಕ್ರೀನ್‌ ಅವಶ್ಯವಿಲ್ಲ ಎನ್ನುವುದು ತಪ್ಪುಕಲ್ಪನೆ. ಸನ್‌ಸ್ಕ್ರೀನ್‌ ಬಳಸದೇ ಇರುವುದರಿಂದ ಸೂರ್ಯ ವಿಕಿರಣಗಳಿಂದ ಚರ್ಮಕ್ಕೆ ತೊಂದರೆ ಉಂಟಾಗಲು ಕಾರಣವಾಗಬಹುದು. ದೀರ್ಘವಧಿಯವರೆಗೆ ಸನ್‌ಸ್ಕ್ರೀನ್‌ ಬಳಸದೇ ಇರುವುದು ಚರ್ಮದ ಮೇಲೆ ಹಾನಿಕಾರಕ ಪರಿಣಾಮ ಉಂಟು ಮಾಡಬಹುದು. ಸೂರ್ಯನ ವಿಕರಣಗಳಿಗೆ ಚರ್ಮವನ್ನು ತೆರೆದಿಡುವುದು ಚರ್ಮದ ಕ್ಯಾನ್ಸರ್‌ ಅಥವಾ ಇತರ ಚರ್ಮರೋಗಗಳಿಗೆ ಕಾರಣವಾಗಬಹುದು. ವಿವಿಧ ಚರ್ಮದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸನ್‌ಸ್ಕ್ರೀನ್ ನಿರ್ಣಾಯಕ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಇದು ಯುವಿ ವಿಕಿರಣದ ವಿರುದ್ಧ ರಕ್ಷಣಾತ್ಮಕ ತಡೆಗೋಡೆಯನ್ನು ರೂಪಿಸುತ್ತದೆ, ಸನ್‌ಬರ್ನ್‌, ಫೋಟೋಜಿಂಗ್ ಮತ್ತು ಚರ್ಮದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸನ್‌ಸ್ಕ್ರೀನ್‌ನ ನಿಯಮಿತ ಬಳಕೆ, ಮೈ ಪೂರ್ತಿ ಮುಚ್ಚುವ ಬಟ್ಟೆ ಧರಿಸುವುದು, ಸೂರ್ಯನ ಗರಿಷ್ಠ ಬಿಸಿಲು ಇರುವ ಹೊತ್ತು ಅಂದ್ರೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಹೊರಗಡೆ ಹೋಗದೇ ಇರುವುದು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಸೂರ್ಯನಿಗೆ ಸಂಬಂಧಿಸಿದ ಹಾನಿಯನ್ನು ತಡೆಯಲು ಕಡ್ಡಾಯವಾಗಿದೆ ಎಂದು ಡಾ. ಸರು ಸಲಹೆ ನೀಡುತ್ತಾರೆ.

ಸನ್‌ಸ್ಕ್ರೀನ್‌ ಬಳಕೆಯ ಪರಿಣಾಮಗಳು

“UVA ಮತ್ತು UVB ಕಿರಣಗಳ ವಿರುದ್ಧ ರಕ್ಷಣೆಯನ್ನು ಒದಗಿಸುವ ಮತ್ತು ಕನಿಷ್ಠ ಎಸ್‌ಪಿಎಫ್‌ ಅಂಶ 30 ಹೊಂದಿರುವ ಸನ್‌ಸ್ಕ್ರೀನ್ ಅನ್ನು ಆಯ್ಕೆ ಮಾಡುವುದು ಅತ್ಯಗತ್ಯ.ಪ್ರತಿ ಎರಡು ಗಂಟೆಗಳಿಗೊಮ್ಮೆ ಸನ್‌ಸ್ಕ್ರೀನ್ ಅನ್ನು ಪುನಃ ಹಚ್ಚಬೇಕು. ಹೆಚ್ಚು ಬೆವರುತ್ತಿದ್ದರೆ ಅಥವಾ ಈಜಾಡಿದ್ದರೆ ಪುನಃ, ಸನ್‌ಸ್ಕ್ರೀನ್‌ ಹಚ್ಚಬೇಕು. ಮೆಲನಿನ್ ಮಟ್ಟಗಳು ಅಥವಾ ಚರ್ಮದ ಟೋನ್ ಅನ್ನು ಲೆಕ್ಕಿಸದೆ ಇದ್ದರೂ ಭಾರತೀಯರ ಚರ್ಮಕ್ಕೆ ಸನ್‌ಸ್ಕ್ರೀನ್ ಖಂಡಿತ ಅವಶ್ಯ. ನಿಮ್ಮ ದೈನಂದಿನ ತ್ವಚೆಯ ದಿನಚರಿಯಲ್ಲಿ ಸನ್‌ಸ್ಕ್ರೀನ್ ಅನ್ನು ಸೇರಿಸುವುದು UV ವಿಕಿರಣದ ಹಾನಿಕಾರಕ ಪರಿಣಾಮಗಳ ವಿರುದ್ಧ ನಿಮ್ಮ ಚರ್ಮವನ್ನು ರಕ್ಷಿಸಲು ಮತ್ತು ಮುಂಬರುವ ವರ್ಷಗಳಲ್ಲಿ ಅತ್ಯುತ್ತಮವಾದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆʼ ಎನ್ನುವುದು ಅವರ ಸಲಹೆ.

ಬಣ್ಣಕ್ಕೂ ಚರ್ಮದ ಹಾನಿಗೂ ಸಂಬಂಧವಿಲ್ಲ. ಸೂರ್ಯ ವಿಕಿರಣಗಳಿಂದ ಚರ್ಮವು ಹಾನಿಕಾರಕ ಪರಿಣಾಮಗಳಿಗೆ ಗುರಿಯಾಗುತ್ತದೆ. ಅತಿಯಾದ ಶಾಖ, ಆರ್ದ್ರತೆಯು ಚರ್ಮದ ನೈಸರ್ಗಿಕ ಸೌಂದರ್ಯವನ್ನು ಹಾಳುಮಾಡುತ್ತದೆ. ಹವಾಮಾನವನ್ನು ಲೆಕ್ಕಿಸದೆ ವರ್ಷವಿಡೀ ನಿಮ್ಮ ಚರ್ಮಕ್ಕೆ ಸ್ಥಿರವಾದ ಆರೈಕೆಯ ಅಗತ್ಯವಿರುತ್ತದೆ. ಬೇಸಿಗೆಯಲ್ಲಿ, ಸನ್‌ಸ್ಕ್ರೀನ್ ನಿಮ್ಮ ಚರ್ಮವನ್ನು ಹಾನಿಕಾರಕ UVA ಮತ್ತು UVB ಕಿರಣಗಳಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಸನ್‌ಬರ್ನ್, ಕಪ್ಪು ಕಲೆಗಳು ಮತ್ತು ವರ್ಣದ್ರವ್ಯವನ್ನು ತಡೆಯುತ್ತದೆ. ಆ ಕಾರಣಕ್ಕೆ ಸನ್‌ಸ್ಕ್ರೀನ್‌ ಅವಶ್ಯ ಎನ್ನುತ್ತಾರೆ ಜಾಯ್ ಪರ್ಸನಲ್ ಕೇರ್ (RSH ಗ್ಲೋಬಲ್) ಸಂಸ್ಥಾಪಕ ಮತ್ತು ಅಧ್ಯಕ್ಷ ಸುನಿಲ್ ಅಗರ್ವಾಲ್.

ಸೂರ್ಯನ ವಿಕಿರಣಗಳಿಂದ ಚರ್ಮಕ್ಕಾಗುವ ತೊಂದರೆಗಳು

ಸುರೋಸ್ಕಿಯ ಸಿಇಒ ಮತ್ತು ಸಂಸ್ಥಾಪಕರಾದ ದೀಪಾಲಿ ಬನ್ಸಾಲ್ ಸೂರ್ಯನ ಯುವಿ ವಿಕಿರಣಕ್ಕೆ ಭಾರತೀಯ ಚರ್ಮವು ಹೆಚ್ಚು ದುರ್ಬಲವಾಗಲು ಈ ಕೆಲವು ಕಾರಣಗಳನ್ನು ಎತ್ತಿ ತೋರಿಸುತ್ತಾರೆ.

* ಭಾರತವು ಸಮಭಾಜಕ ರೇಖೆಯ ಸಾಮೀಪದಲ್ಲೇ ಇರುವ ಕಾರಣ ಇಲ್ಲಿನ ಜನರು ವರ್ಷಪೂರ್ತಿ ಅತಿಯಾದ ಯುವಿ ವಿಕಿರಣಕ್ಕೆ ಒಡ್ಡಿಕೊಳ್ಳುತ್ತಾರೆ. ಯುವಿ ವಿಕಿರಣಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಚರ್ಮದ ಹಾನಿ, ಅಕಾಲಿಕ ವಯಸ್ಸಾದ ಲಕ್ಷಣಗಳು ಮತ್ತು ಚರ್ಮದ ಕ್ಯಾನ್ಸರ್‌ನಂತಹ ಹೆಚ್ಚಿನ ಅಪಾಯ ಉಂಟಾಗುತ್ತದೆ. ಈ ಹಾನಿಕಾರಕ ಕಿರಣಗಳ ವಿರುದ್ಧ ಸನ್‌ಸ್ಕ್ರೀನ್ ಬಳಕೆಯು ಬಿಸಿಲು ಮತ್ತು ದೀರ್ಘಕಾಲೀನ ಹಾನಿಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.

* ಅತಿಯಾದ ಮೆಲನಿನ್ ಉತ್ಪಾದನೆಯ ಕಾರಣದಿಂದ ನಿರ್ದಿಷ್ಟ ಚರ್ಮದ ಪ್ರದೇಶಗಳಲ್ಲಿ ಹೈಪರ್ಪಿಗ್ಮೆಂಟೇಶನ್ ಅಥವಾ ಕಪ್ಪಾಗುವುದು ಭಾರತೀಯ ಚರ್ಮದ ಪ್ರಕಾರಗಳಲ್ಲಿ ತುಂಬಾ ಸಾಮಾನ್ಯ. ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಮೆಲಸ್ಮಾ ಮತ್ತು ಚರ್ಮದ ಟೋನ್‌ಗಳು ಅಸಮ ಉಂಟಾಗುತ್ತವೆ. ನೀವು ಪ್ರತಿದಿನ ಸನ್‌ಸ್ಕ್ರೀನ್ ಅನ್ನು ಅನ್ವಯಿಸಿದರೆ, ಇದು ಹೈಪರ್ಪಿಗ್ಮೆಂಟೇಶನ್ ಗಾಢವಾಗುವುದನ್ನು ತಡೆಯುತ್ತದೆ ಮತ್ತು ಹೊಸ ಪಿಗ್ಮೆಂಟೇಶನ್ ಸಮಸ್ಯೆಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

* ಸೂರ್ಯನಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಫೋಟೊಜಿಂಗ್ ಅನ್ನು ವೇಗಗೊಳಿಸುತ್ತದೆ, ಸೂಕ್ಷ್ಮ ಗೆರೆಗಳು, ಸುಕ್ಕುಗಳು ಮತ್ತು ಚರ್ಮ ಕಳೆಗುಂದುವುದು ಅವುಗಳು ಇರುವುದಕ್ಕಿಂತ ಮುಂಚೆಯೇ ಹೊರಹೊಮ್ಮುತ್ತದೆ. ಚರ್ಮದ ಮೃದುತ್ವವನ್ನು ರಕ್ಷಿಸುತ್ತದೆ. ಸುಕ್ಕುಗಳ ಹೊರಹೊಮ್ಮುವಿಕೆಯನ್ನು ವಿಳಂಬಗೊಳಿಸುವ ಮೂಲಕ, ಸನ್‌ಸ್ಕ್ರೀನ್‌ನ ನಿಯಮಿತ ಬಳಕೆಯು ಯುವಿ ವಿಕಿರಣದ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅಂತಿಮವಾಗಿ ಹೆಚ್ಚು ತಾರುಣ್ಯದ ನೋಟವನ್ನು ಉತ್ತೇಜಿಸುತ್ತದೆ.

ವಿಭಾಗ