ಎಲಾನ್‌ ಮಸ್ಕ್‌ನಿಂದಾಗಿ 100 ಕೋಟಿ ರೂಪಾಯಿ ವೇತನದ ಉದ್ಯೋಗ ಕಳೆದುಕೊಂಡ ಐಐಟಿ ಪದವೀಧರ ಈಗ ಸ್ವಂತ ಎಐ ಕಂಪನಿ ಮಾಲೀಕ-technology news iit graduate with rs 100 crore salary was fired by musk now has his own ai firm pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಎಲಾನ್‌ ಮಸ್ಕ್‌ನಿಂದಾಗಿ 100 ಕೋಟಿ ರೂಪಾಯಿ ವೇತನದ ಉದ್ಯೋಗ ಕಳೆದುಕೊಂಡ ಐಐಟಿ ಪದವೀಧರ ಈಗ ಸ್ವಂತ ಎಐ ಕಂಪನಿ ಮಾಲೀಕ

ಎಲಾನ್‌ ಮಸ್ಕ್‌ನಿಂದಾಗಿ 100 ಕೋಟಿ ರೂಪಾಯಿ ವೇತನದ ಉದ್ಯೋಗ ಕಳೆದುಕೊಂಡ ಐಐಟಿ ಪದವೀಧರ ಈಗ ಸ್ವಂತ ಎಐ ಕಂಪನಿ ಮಾಲೀಕ

ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಸ್ವಾಧೀನಪಡಿಸಿಕೊಂಡ ಸಮಯದಲ್ಲಿ ಉದ್ಯೋಗ ಕಳೆದುಕೊಂಡಿದ್ದ ಪರಾಗ್‌ ಅಗರ್‌ವಾಲ್‌ ಈಗ ಸ್ವಂತ ಎಐ ಕಂಪನಿ ಕಟ್ಟಿದ್ದಾರೆ. ತನ್ನ ಕಂಪನಿಗೆ ಈಗಾಗಲೇ 246 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.

ಎಲಾನ್‌ ಮಸ್ಕ್‌ನಿಂದಾಗಿ 100 ಕೋಟಿ ರೂಪಾಯಿ ವೇತನದ ಉದ್ಯೋಗ ಕಳೆದುಕೊಂಡ ಐಐಟಿ ಪದವೀಧರ ಈಗ ಸ್ವಂತ ಎಐ ಕಂಪನಿ ಮಾಲೀಕ
ಎಲಾನ್‌ ಮಸ್ಕ್‌ನಿಂದಾಗಿ 100 ಕೋಟಿ ರೂಪಾಯಿ ವೇತನದ ಉದ್ಯೋಗ ಕಳೆದುಕೊಂಡ ಐಐಟಿ ಪದವೀಧರ ಈಗ ಸ್ವಂತ ಎಐ ಕಂಪನಿ ಮಾಲೀಕ (ICPCNews)

ಭಾರತದ ಐಐಟಿಯಲ್ಲಿ ಪದವಿ ಪಡೆದವರು ಜಗತ್ತಿನಾದ್ಯಂತ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಮಾಡುವುದಲ್ಲದೆ ಸ್ವಂತ ಕಂಪನಿಗಳನ್ನು ಕಟ್ಟಿ ಸೈ ಎಣಿಸಿಕೊಂಡಿದ್ದಾರೆ. ಇದೇ ರೀತಿ ಐಐಟಿ ಪದವೀಧರ ಪರಾಗ್‌ ಅಗರ್‌ವಾಲ್‌ ಟ್ವಿಟ್ಟರ್‌ನಲ್ಲಿ ಕೆಲಸ ಪಡೆದು ವರ್ಷಕ್ಕೆ 100 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದರು. ಆದರೆ, ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಸ್ವಾಧೀನಪಡಿಸಿಕೊಂಡ ಬಳಿಕ ಇತರರಂತೆ ಇವರೂ ಕೆಲಸ ಕಳೆದುಕೊಂಡಿದ್ದರು. ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಅನ್ನು ಎಕ್ಸ್‌ ಆಗಿ ಬದಲಾಯಿಸಿದ್ದರು. ಈ ಸಮಯದಲ್ಲಿ ತನ್ನ ಕಂಪನಿಯ ಉದ್ಯೋಗಿಗಳ ವಿಷಯದಲ್ಲಿ ಸಾಕಷ್ಟು ಕಠಿಣ ಕ್ರಮಕೈಗೊಂಡಿದ್ದರು. ಕಂಪನಿಯ ಸಿಇಒನನ್ನೇ ಕೆಲಸದಿಂದ ತೆಗೆದುಹಾಕಿದ್ದರು. ಐಐಟಿ ಜೆಇಇಯಲ್ಲಿ ಆಲ್‌ ಇಂಡಿಯಾ ರಾಕಿಂಗ್‌ನಲ್ಲಿ ಅಗ್ರ 77ನೇ ಸ್ಥಾನ ಪಡೆದಿದ್ದ ಪರಗ್‌ ಅಗರ್‌ವಾಲ್‌ನನ್ನು ಟ್ವಿಟ್ಟರ್‌ನ ಸಿಇಒ ಆಗಿ ಕೆಲಸ ಮಾಡುತ್ತಿದ್ದರು. 8 ಕೋಟಿ ರೂಪಾಯಿ ವೇತನ ಮತ್ತು 94 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನೆಲ್ಲ ಲೆಕ್ಕಹಾಕಿದರೆ ಇವರ ವೇತನ 100 ಕೋಟಿ ರೂಪಾಯಿಗೆ ತಲುಪುತ್ತದೆ.

ಎಕ್ಸ್‌ನಿಂದ ಉದ್ಯೋಗ ಕಳೆದುಕೊಂಡ ಪರಾಗ್‌ ಅಗರ್‌ವಾಲ್‌

ಬ್ಲೂಮ್‌ಬರ್ಗ್‌ನ್‌ ಕುರ್ತ್‌ ವಾಗ್ನರ್‌ ಪ್ರಕಾರ "ಎಲಾನ್‌ ಮಸ್ಕ್‌ ಅವರ ಖಾಸಗಿ ಜೆಟ್‌ನ ಲೊಕೆಷನ್‌ ಟ್ರ್ಯಾಕಿಂಗ್‌ ಮಾಡುವ ಖಾತೆಯನ್ನು ಬ್ಲಾಕ್‌ ಮಾಡುವಂತೆ ಎಲಾನ್‌ ಮಸ್ಕ್‌ ವಿನಂತಿಸಿದ್ದರು. ಆದರೆ, ಇದನ್ನು ಪರಾಗ್‌ ಅಗರ್‌ವಾಲ್‌ ಒಪ್ಪಿರಲಿಲ್ಲ. ಇದು ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಸ್ವಾಧೀನಪಡಿಸಿಕೊಳ್ಳುವ ಹಿಂದಿನ ಕಥೆಯಾಗಿದೆ. ಇದಾದ ಬಳಿಕ ಎಲಾನ್‌ ಮಸ್ಕ್‌ ಟ್ವಿಟ್ಟರ್‌ಗೆ ಸೇರಿದ್ದರು. ತನ್ನ ಲೊಕೆಷನ್‌ ಟ್ರ್ಯಾಕಿಂಗ್‌ ಅಕೌಂಟ್‌ ಬ್ಲಾಕ್‌ ಮಾಡದಿರುವುದಕ್ಕೆ ಪರಾಗ್‌ ಅಗರ್‌ವಾಲ್‌ರನ್ನು ಕೆಲಸದಿಂದ ತೆಗೆದುಹಾಕಿದ್ದರು.

ಟ್ವಿಟ್ಟರ್‌ ಕೆಲಸ ಬಿಟ್ಟ ಬಳಿಕದ ಕಥೆ

ಉದ್ಯೋಗ ಕಡಿತದ ಬಳಿಕ ಪರಾಗ್‌ ಅಗರ್‌ವಾಲ್‌ಗೆ 400 ಕೋಟಿ ರೂಪಾಯಿ ಪಡೆಯಲು ಅರ್ಹರಾಗಿದ್ದರು. ಆದರೆ, ಕಂಪನಿ ಯಾವುದೇ ಪರಿಹಾರ ನೀಡಲಿಲ್ಲ. ಅಗರ್‌ವಾಲ್‌ ಮತ್ತು ಇತರರು ಎಲಾನ್‌ ಮಸ್ಕ್‌ ವಿರುದ್ಧ ದೂರು ದಾಖಲಿಸಿದ್ದರು. ನಮಗೆ ಒಂದು ಸಾವಿರ ಕೋಟಿಗೂ ಹೆಚ್ಚು ಪರಿಹಾರ ನೀಡಲು ಕಂಪನಿ ನಿರಾಕರಿಸಿದೆ ಎಂದು ಕಾನೂನು ಹೋರಾಟ ಮಾಡಿದ್ದರು.

ಪರಾಗ್‌ ಅಗರ್‌ವಾಲ್‌ ಈಗ ಎಐ ವಲಯದಲ್ಲಿ ದಾಪುಗಾಲು ಇಡುತ್ತಿದ್ದಾರೆ. ಹೊಸ ಉದ್ಯಮಕ್ಕೆ 246 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಓಪನ್‌ಎಐನ ಚಾಟ್‌ಜಿಪಿಟಿಯ ಹಿಂದಿನ ತಂತ್ರಜ್ಞಾನದಂತೆಯೇ ದೊಡ್ಡ ಭಾಷಾ ಮಾದರಿಗಳೊಂದಿಗೆ ಕೆಲಸ ಮಾಡುವ ಡೆವಲಪರ್‌ಗಳಿಗಾಗಿ ಆರಂಭದಲ್ಲಿ ಇವರ ಕಂಪನಿ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಿದ್ದಾರೆ. ವಿನೋದ್ ಖೋಸ್ಲಾ ನೇತೃತ್ವದ ಖೋಸ್ಲಾ ವೆಂಚರ್ಸ್ ಮತ್ತು ಓಪನ್ ಎಐನ ಆರಂಭಿಕ ಬೆಂಬಲಿಗರು ಅಗರ್ವಾಲ್ ಅವರ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಇಂಡೆಕ್ಸ್ ವೆಂಚರ್ಸ್ ಮತ್ತು ಫಸ್ಟ್ ರೌಂಡ್ ಕ್ಯಾಪಿಟಲ್ ಕೂಡ ಫಂಡಿಂಗ್ ಸುತ್ತಿನಲ್ಲಿ ಭಾಗವಹಿಸಿದ್ದವು ಎಂದು ವರದಿಗಳು ತಿಳಿಸಿವೆ.

mysore-dasara_Entry_Point