Daughters Day 2024: ಮಗಳು ಬೆಳ್ಮುಗಿಲು, 2007ರಿಂದ ಆಚರಿಸಲಾಗುತ್ತಿರುವ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕಿದೆ ಇಷ್ಟೆಲ್ಲ ಪ್ರಾಮುಖ್ಯತೆ
ಕನ್ನಡ ಸುದ್ದಿ  /  ಜೀವನಶೈಲಿ  /  Daughters Day 2024: ಮಗಳು ಬೆಳ್ಮುಗಿಲು, 2007ರಿಂದ ಆಚರಿಸಲಾಗುತ್ತಿರುವ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕಿದೆ ಇಷ್ಟೆಲ್ಲ ಪ್ರಾಮುಖ್ಯತೆ

Daughters Day 2024: ಮಗಳು ಬೆಳ್ಮುಗಿಲು, 2007ರಿಂದ ಆಚರಿಸಲಾಗುತ್ತಿರುವ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕಿದೆ ಇಷ್ಟೆಲ್ಲ ಪ್ರಾಮುಖ್ಯತೆ

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 2024: ಸಮಾಜದಲ್ಲಿ ಗಂಡಿಗೊಂದೇ ಹೆಚ್ಚು ಪ್ರಾಮುಖ್ಯತೆ ಎಂಬ ಮನೋಭಾವವನ್ನು ತೊಡೆದುಹಾಕುವ ಉದ್ದೇಶದಿಂದ ಪ್ರತಿವರ್ಷ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಮಗಳಿಗೂ ಮಗನಿಗೆ ಕೊಡುವಷ್ಟೇ ಪ್ರಾಮುಖ್ಯತೆ ಕೊಡಬೇಕಾದದ್ದು ಎಲ್ಲರ ಕರ್ತವ್ಯ

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 2024: ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ, ಮನೆಯಲ್ಲಿ ಜನಿಸಿದ ಗಂಡುಮಕ್ಕಳನ್ನು ತುಂಬಾ ಗೌರವ ಹಾಗೂ ಖುಷಿ ಮತ್ತು ಹುಡುಗಿಯರನ್ನು ಕಡಿಮೆ ಎಂದು ಭಾವಿಸಿ ನೋಡುವ ಅಭ್ಯಾಸವಿದೆ. ಇನ್ನೂ ಕೆಲವೆಡೆ ಪುತ್ರರಿಗೆ ಆದ್ಯತೆ ನೀಡುವ ಸಂಪ್ರದಾಯ ಮುಂದುವರಿದಿದೆ. ಅನೇಕ ಸಂಸ್ಕೃತಿಗಳಲ್ಲಿ, ಹೆಣ್ಣುಮಕ್ಕಳಿಗೆ ಪುತ್ರರಿಗೆ ಸಮಾನವಾದ ಗೌರವವನ್ನು ನೀಡಲಾಗುವುದಿಲ್ಲ. ಮಗನಿಗೆ ಉತ್ತಮ ಶಿಕ್ಷಣ ಕೊಡಿಸಲು ಪೋಷಕರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಆದರೆ ಹುಡುಗಿಯರು ಯಾವಾಗಲೂ ತಮ್ಮ ಮನೆಯನ್ನು ಬಿಟ್ಟು ಬೇರೆ ಮನೆಗೆ ಹೋಗುತ್ತಾರೆ ಎಂದು ಅನೇಕ ಪೋಷಕರು ಅವರಿಗೆ ಕಲಿಯಲು ಸಹ ಅನುವುಮಾಡಿಕೊಡುವುದಿಲ್ಲ.

ವಿದ್ಯಾಭ್ಯಾಸ ಕೊಡಿಸಲು, ಅವರ ಮೇಲೆ ಹೆಚ್ಚು ಹಣ ಖರ್ಚು ಮಾಡಿ ಅವರ ಆಸ್ತಿಯಲ್ಲಿ ಭಾಗ ಕೊಡಲು ಮನಸಿರುವುದಿಲ್ಲ. ಆದರೆ ಒಂದು ವಿಷಯವನ್ನು ಮರೆತುಬಿಡುತ್ತಾರೆ. ತಮ್ಮ ಮಗನಲ್ಲಿ ಯಾವ ರಕ್ತ ಹರಿಯುತ್ತಿದೆಯೋ ಅದೇ ರಕ್ತ ನನ್ನ ಮಗಳಲ್ಲೂ ಹರಿಯುತ್ತಿದೆ ಎಂಬುದನ್ನು. ಇಬ್ಬರನ್ನೂ ಸಮಾನವಾಗಿ ಕಾಣಬೇಕು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ

ಪ್ರತಿ ಮನೆಯಲ್ಲೂ ಹೆಣ್ಣು ಮಗು ಇರಬೇಕು ಮತ್ತು ಅವರ ರಕ್ಷಣೆ ಮಾಡಬೇಕು ಎಂದು ಹೇಳಲು ‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ’ವನ್ನು ಆಯೋಜಿಸಲಾಗುತ್ತದೆ. ಹೆಣ್ಣು ಮಗುವಿನ ಮೌಲ್ಯವನ್ನು ತೋರಿಸಲು ಪ್ರತಿ ವರ್ಷ ಸೆಪ್ಟೆಂಬರ್ ನಾಲ್ಕನೇ ಭಾನುವಾರದಂದು ಈ ವಿಶೇಷ ದಿನವನ್ನು ಆಚರಿಸುವುದು ಸಂಪ್ರದಾಯವಾಗಿದೆ.

ಪ್ರೀತಿ, ಗೌರವ

ಮನೆಯಲ್ಲಿ ಹುಟ್ಟಿದ ಹೆಣ್ಣುಮಕ್ಕಳನ್ನು ಹೇಗೆ ಗೌರವಿಸಬೇಕು ಮತ್ತು ಪ್ರೀತಿ ತೋರಿಸಬೇಕು ಎಂಬುದನ್ನು ಪ್ರತಿಯೊಬ್ಬ ಪೋಷಕರು ತಿಳಿದಿರಬೇಕು. ಮಗಳೆಂದರೆ ವಸ್ತುವಲ್ಲ. ಮದುವೆಯಾದ ನಂತರ ಬೇರೆ ಮನೆಗೆ ಕೊಟ್ಟು ಸಂಬಂಧ ಕಳೆದುಕೊಳ್ಳುವುದೂ ಅಲ್ಲ. ಪ್ರೀತಿ, ಮಮತೆ, ಕಾಳಜಿಯನ್ನು ಪಡೆಯಲು ಮಗ ಎಷ್ಟು ಅರ್ಹನೋ, ಆ ಮನೆಯಲ್ಲಿ ಹುಟ್ಟಿದ ಹೆಣ್ಣು ಮಗಳಿಗೂ ಅಷ್ಟೇ ಅರ್ಹತೆ ಇದೆ ಎಂದು ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ವಿಶೇಷ.

ಲಿಂಗ ಸಮಾನತೆ

ಹೆಣ್ಣುಮಕ್ಕಳ ದಿನದ ಹಿಂದಿನ ಮೂಲ ಉದ್ದೇಶವೂ ಲಿಂಗ ಸಮಾನತೆಯೇ ಆಗಿದೆ. ನಮ್ಮ ದೇಶದಲ್ಲಿ ಗಂಡುಮಕ್ಕಳಿಗೆ ಸಮಾನವಾಗಿ ಹೆಣ್ಣು ಮಕ್ಕಳಿಗೆ ಪ್ರೀತಿ ಮತ್ತು ಶಿಕ್ಷಣದ ಅವಕಾಶಗಳನ್ನು ನೀಡಬೇಕು ಎಂದು ಸಮಾಜಕ್ಕೆ ತಿಳಿಸಲು ಈ ಹೆಣ್ಣುಮಕ್ಕಳ ದಿನ ಆಚರಿಸಲಾಗುತ್ತದೆ. ಪಾಲಕರು ತಾರತಮ್ಯ ಧೋರಣೆ ತೋರಿ ಮಕ್ಕಳಿಗೆ ಅನ್ಯಾಯ ಮಾಡಿದರೆ ಬೇರೆ ಯಾರೂ ಅವರಿಗೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ.

2007ರಲ್ಲಿ ಮೊದಲ ಆಚರಣೆ

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಮೊದಲ ಬಾರಿಗೆ 2007 ರಲ್ಲಿ ಆಚರಿಸಲಾಯಿತು. ಒಂದು ಮನೆಯಲ್ಲಿ ಮಗ, ಮಗಳು ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಮಗನನ್ನು ಆಯ್ಕೆ ಮಾಡುವವರ ಸಂಖ್ಯೆಯೇ ಹೆಚ್ಚು. UNICEF ಪ್ರಕಾರ, ಹೆಣ್ಣು ಮಕ್ಕಳ ಮರಣ ಪ್ರಮಾಣವು ಹುಡುಗರಿಗಿಂತ ಹೆಚ್ಚಿರುವ ಪ್ರಮುಖ ದೇಶವಾಗಿದೆ. ನಮ್ಮ ದೇಶದಲ್ಲಿ 1,000 ಗಂಡುಮಕ್ಕಳಿಗೆ ಕೇವಲ 900 ಹುಡುಗಿಯರಿದ್ದಾರೆ. ಜಾಗತಿಕವಾಗಿ, ಐದು ವರ್ಷದೊಳಗಿನ ಹೆಣ್ಣುಮಕ್ಕಳ ಸಂಖ್ಯೆ ನಮ್ಮ ದೇಶದಲ್ಲಿ ಅತಿ ಹೆಚ್ಚು. ಹೆಣ್ಣುಮಕ್ಕಳನ್ನು ಮನೆಯಲ್ಲಿ ಎಲ್ಲಾ ರೀತಿಯಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಅವರನ್ನು ತಾರತಮ್ಯದಿಂದ ರಕ್ಷಿಸಲು ನಾವು ಈ ವಿಶೇಷ ದಿನವನ್ನು ಆಯೋಜಿಸುತ್ತಿದ್ದೇವೆ.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ಹೊಂದಿರುವ ಪ್ರತಿಯೊಬ್ಬ ತಾಯಂದಿರಿಗೂ ಹೆಣ್ಣು ಮಕ್ಕಳ ದಿನಾಚರಣೆಯ ಶುಭಾಶಯಗಳು. ಮನೆಯಲ್ಲಿ ಗಂಡುಮಕ್ಕಳೊಂದಿಗೆ ಸಮಾನ ಅವಕಾಶಗಳನ್ನು ನೀಡಿ ಮತ್ತು ಅವರು ಉತ್ಕೃಷ್ಟರಾಗಲು ಅವರನ್ನು ಬೆಂಬಲಿಸಿ.

Whats_app_banner