ಹೀರೊ ರೀತಿ ಬಂದು ನಾಯಿಗಳಿಂದ ಬೆಕ್ಕಿನ ಮರಿಯನ್ನು ರಕ್ಷಿಸಿದ ದೊಡ್ಡ ಬೆಕ್ಕು, ಗ್ರೇಟ್‌ ಎಸ್ಕೇಪ್‌ ಎಂದ ನೆಟ್ಟಿಗರು, ವೈರಲ್ ಆಯ್ತು ವಿಡಿಯೊ
ಕನ್ನಡ ಸುದ್ದಿ  /  ಜೀವನಶೈಲಿ  /  ಹೀರೊ ರೀತಿ ಬಂದು ನಾಯಿಗಳಿಂದ ಬೆಕ್ಕಿನ ಮರಿಯನ್ನು ರಕ್ಷಿಸಿದ ದೊಡ್ಡ ಬೆಕ್ಕು, ಗ್ರೇಟ್‌ ಎಸ್ಕೇಪ್‌ ಎಂದ ನೆಟ್ಟಿಗರು, ವೈರಲ್ ಆಯ್ತು ವಿಡಿಯೊ

ಹೀರೊ ರೀತಿ ಬಂದು ನಾಯಿಗಳಿಂದ ಬೆಕ್ಕಿನ ಮರಿಯನ್ನು ರಕ್ಷಿಸಿದ ದೊಡ್ಡ ಬೆಕ್ಕು, ಗ್ರೇಟ್‌ ಎಸ್ಕೇಪ್‌ ಎಂದ ನೆಟ್ಟಿಗರು, ವೈರಲ್ ಆಯ್ತು ವಿಡಿಯೊ

ನಾಲ್ಕು ನಾಯಿಗಳು ಸೇರಿಕೊಂಡು ಪುಟ್ಟ ಬೆಕ್ಕಿನ ಮರಿಯೊಂದನ್ನು ಸುತ್ತುವರಿದು ಆಕ್ರಮಣ ಮಾಡಲು ಸಿದ್ಧವಾಗುತ್ತಿರುವ ಹೊತ್ತಿಗೆ ದೊಡ್ಡ ಬೆಕ್ಕೊಂದು ಹೀರೊ ರೀತಿ ಎಂಟ್ರಿ ಕೊಡುತ್ತೆ, ಮುಂದೇನಾಯ್ತು ಅಂತ ನೋಡೋದನ್ನು ನೀವು ಮಿಸ್ ಮಾಡ್ಲೇಬಾರದು. ಟ್ವಿಟರ್‌ನಲ್ಲಿ ವೈರಲ್ ಆದ ಈ ವಿಡಿಯೊದಲ್ಲಿ ಏನಿದೆ ನೋಡಿ.

ನಾಯಿಗಳಿಂದ ಮರಿ ಬೆಕ್ಕನ್ನು ಕಾಪಾಡಿದ ದೊಡ್ಡ ಬೆಕ್ಕು, ವೈರಲ್ ವಿಡಿಯೊದ ದೃಶ್ಯಗಳು
ನಾಯಿಗಳಿಂದ ಮರಿ ಬೆಕ್ಕನ್ನು ಕಾಪಾಡಿದ ದೊಡ್ಡ ಬೆಕ್ಕು, ವೈರಲ್ ವಿಡಿಯೊದ ದೃಶ್ಯಗಳು

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಪ್ರಾಣಿಗಳ ಮುದ್ದಾದ ವಿಡಿಯೊಗಳನ್ನು ನೋಡಿದ್ರೆ ನೋಡ್ತಾ ಇರ್ಬೇಕು ಅನ್ನಿಸುತ್ತೆ, ಕೆಲವೊಮ್ಮೆ ಸಾಕಷ್ಟು ನಗು ಕೂಡ ಬರುತ್ತೆ, ಆದ್ರೆ ಇಲ್ಲಿರುವ ವಿಡಿಯೊ ನೋಡಿದ್ರೆ ನಿಮಗೆ ಅಚ್ಚರಿಯ ಜೊತೆ ಕ್ಷಣ ಭಯ ಕೂಡ ಆಗುತ್ತೆ. ಇದು ಬೆಕ್ಕೊಂದು ಹೀರೊ ಆದ ವಿಡಿಯೊ. ಹಾಗಾದರೆ ಈ ವಿಡಿಯೊದಲ್ಲಿ ಅಂಥದ್ದೇನಿದೆ ಅಂತೀರಾ, ಮುಂದೆ ನೋಡಿ.

ಸಿನಿಮಾ ಸ್ಟೈಲ್‌ನಲ್ಲಿ ಮರಿಯನ್ನು ಕಾಪಾಡಿದ ಬೆಕ್ಕು

ರೆಡ್ಟಿಟ್‌ ಹಾಗೂ ಟ್ವಿಟರ್‌ನಲ್ಲಿ ಬಾರಿ ವೈರಲ್ ಆಗಿರುವ ಈ ವಿಡಿಯೊದಲ್ಲಿ ಆರಂಭದಲ್ಲಿ ಮನೆಯ ಎದುರುಗಡೆಯ ರಸ್ತೆಗೆ ಬರುವ ಪುಟ್ಟ ಬೆಕ್ಕಿನ ಮರಿಯೊಂದನ್ನು ನಾಲ್ಕು ನಾಯಿಗಳು ಸುತ್ತವರಿದು ಕಚ್ಚಲು ಬರುವುದು ಕಾಣುತ್ತದೆ. ಆ ಮರಿ ಹೆದರಿ ಅವಿತುಕೊಳ್ಳಲು ನೋಡಿದರೂ ನಾಯಿಗಳು ಒಂದರ ಹಿಂದೆ ಒಂದರಂತೆ ಆಕ್ರಮಣ ಮಾಡಲು ಬರುತ್ತವೆ. ಅಷ್ಟೊತ್ತಿಗೆ ಅಲ್ಲಿಗೆ ಹೀರೊ ರೀತಿ ಎಂಟ್ರಿ ಕೊಡುತ್ತೆ ದೊಡ್ಡ ಬೆಕ್ಕು. ಅಲ್ಲದೇ ಅಲ್ಲಿದ್ದ ನಾಯಿಗಳ ಮೇಲೆ ಅಕ್ರಮಣ ಮಾಡಿ ಮರಿಯನ್ನು ರಕ್ಷಿಸಿ, ತನ್ನನ್ನು ಕಚ್ಚಲು ಬಂದ ನಾಯಿಗಳಿಂದ ಗ್ರೇಟ್ ಎಸ್ಕೇಪ್ ಎನ್ನುವ ರೀತಿ ತಪ್ಪಿಸಿಕೊಂಡು ಓಡಿ ಹೋಗುತ್ತೆ. ಆ ಬೆಕ್ಕು ಬಂದು ಆಕ್ರಮಣ ಮಾಡಿದ ಓಡಿ ಹೋದ ರೀತಿಗೆ ನಾಯಿಗಳಿಗೂ ಶಾಕ್ ಆಗುತ್ತೆ.

ಈ ವಿಡಿಯೊ ನೋಡಿದ್ರೆ ನಿಮಗೂ ಅಚ್ಚರಿಯಾಗೋದು ಸುಳ್ಳಲ್ಲ, ಮಾತ್ರವಲ್ಲ ಬೆಕ್ಕಿನ ಸಾಹಸ ಕಂಡು ನಿಮಗೆ ಅದಕ್ಕೆ ಹೀರೊ ಎಂದು ಕರೆಯದೇ ಇರಲು ಸಾಧ್ಯವಾಗುವುದಿಲ್ಲ.

ಸೆಪ್ಟೆಂಬರ್ 19 ರಂದು DaisyX ಎನ್ನುವ ಟ್ವಿಟರ್ ಖಾತೆ ಹೊಂದಿರುವವರು ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈಗಾಗಲೇ 7 ಸಾವಿರದಷ್ಟು ಮಂದಿ ಈ ವಿಡಿಯೊವನ್ನು ವೀಕ್ಷಿಸಿದ್ದಾರೆ. ಹಲವರು ಲೈಕ್ ಮಾಡಿದ್ದಾರೆ. ಕೆಲವರು ಕಾಮೆಂಟ್ ಮಾಡುವ ಮೂಲಕ ಬೆಕ್ಕಿನ ಹೀರೊಯಿಸಂ ಬಗ್ಗೆ ಹೊಗಳಿದ್ದಾರೆ. ರೆಡ್ಡಿಟ್‌ನಲ್ಲೂ ಇದೇ ವಿಡಿಯೊ ವೈರಲ್ ಆಗಿದೆ. ಅಲ್ಲಿ 80 ಸಾವಿರಕ್ಕೂ ಅಧಿಕ ಮಂದಿ ವಿಡಿಯೊ ವೀಕ್ಷಿಸಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

‘ಈ ಬೆಕ್ಕು ನಿಜಕ್ಕೂ ರಿಯಲ್ ಹೀರೊ, ನಾಲ್ಕು ನಾಯಿಗಳನ್ನು ಒಂದು ಬೆಕ್ಕು ಎದುರಿಸುವುದು ನಿಜಕ್ಕೂ ದೊಡ್ಡ ಮಾತು‘ ಎಂದು ರೆಡ್ಡಿಟ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಈ ಬೆಕ್ಕು ನಿಜಕ್ಕೂ ಲೆಜೆಂಡ್. ಇಷ್ಟೊಂದು ನಾಯಿಗಳನ್ನು ಒಂದು ಬೆಕ್ಕು ಎದುರಿಸುವುದು ನಾವೆಂದೂ ನೋಡಿಲ್ಲ‘ ಎಂದು ಇನ್ನೊಬ್ಬರು ರೆಡ್ಡಿಟ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ‘ಈ ಪುಟ್ಟ ಬೆಕ್ಕು ನಿಜಕ್ಕೂ ಲಕ್ಕಿ, ದೊಡ್ಡ ಬೆಕ್ಕಿನ ಹೀರೊಯಿಸಂಗೆ ಸಲಾಂ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

Whats_app_banner