ಯಾವ ವಯಸ್ಸಿನ ಮಕ್ಕಳಿಗೆ ಯಾವ ರೀತಿಯ ಆಟಿಕೆಗಳನ್ನು ಖರೀದಿಸಬೇಕು? ಅನವಶ್ಯಕ ಆಟಿಕೆಗಳು ಮನೆಗೆ ಕಸವಷ್ಟೇ-what kind of toys should be bought for children of which age unnecessary toys are just garbage in the house smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಯಾವ ವಯಸ್ಸಿನ ಮಕ್ಕಳಿಗೆ ಯಾವ ರೀತಿಯ ಆಟಿಕೆಗಳನ್ನು ಖರೀದಿಸಬೇಕು? ಅನವಶ್ಯಕ ಆಟಿಕೆಗಳು ಮನೆಗೆ ಕಸವಷ್ಟೇ

ಯಾವ ವಯಸ್ಸಿನ ಮಕ್ಕಳಿಗೆ ಯಾವ ರೀತಿಯ ಆಟಿಕೆಗಳನ್ನು ಖರೀದಿಸಬೇಕು? ಅನವಶ್ಯಕ ಆಟಿಕೆಗಳು ಮನೆಗೆ ಕಸವಷ್ಟೇ

ಯಾವ ವಯಸ್ಸಿನ ಮಕ್ಕಳಿಗೆ ಯಾವ ರೀತಿಯ ಆಟಿಕೆಗಳನ್ನು ಖರೀದಿಸಬೇಕು ಎಂಬುದನ್ನು ಪಾಲಕರು ತಿಳಿದುಕೊಳ್ಳಲೇಬೇಕು. ಇಲ್ಲವಾದರೆ ಅನವಶ್ಯಕ ಆಟಿಕೆಗಳು ಮನೆಗೆ ಕಸವಷ್ಟೇ. ಮಕ್ಕಳ ಮಾನಸಿಕ ಬೆಳವಣಿಗೆಗೆ ಯಾವ ರೀತಿಯ ಆಟಿಕೆಗಳು ಬೇಕು ಎಂಬುದನ್ನು ಇಲ್ಲಿ ಗಮನಿಸಿ.

ಮಕ್ಕಳ ಮಾನಸಿಕ ಬೆಳವಣಿಗೆಗೆ ಯಾವ ರೀತಿಯ ಆಟಿಕೆಗಳು ಬೇಕು ನೋಡಿ ಆಯ್ಕೆ ಮಾಡಿ
ಮಕ್ಕಳ ಮಾನಸಿಕ ಬೆಳವಣಿಗೆಗೆ ಯಾವ ರೀತಿಯ ಆಟಿಕೆಗಳು ಬೇಕು ನೋಡಿ ಆಯ್ಕೆ ಮಾಡಿ

ಯಾವ ಆಟಿಕೆಗಳನ್ನು ಖರೀದಿಸಬೇಕು ಎಂಬ ಕಲ್ಪನೆಯು ಮಕ್ಕಳು ಹುಟ್ಟಿದಾಗಿನಿಂದ ಪ್ರಾರಂಭವಾಗುತ್ತದೆ. ಅವರ ವಯಸ್ಸಿಗೆ ಮೀರಿದ ಆಟಿಕೆಗಳನ್ನು ತಂದು ಆಡು ಎಂದು ಕೊಟ್ಟರೆ ಅದು ಸಾಧ್ಯವಿಲ್ಲ. ಅದಕ್ಕೆ ಯಾವುದೇ ಅರ್ಥವಿಲ್ಲ. ಅವರ ಬೆಳವಣಿಗೆಗೆ ಸಹಾಯವಾಗುವ ಆಟಿಕೆಗಳನ್ನು ಮಾತ್ರ ಖರೀದಿ ಮಾಡಿ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ತುಂಬಾ ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್ ಆಟಿಕೆಗಳನ್ನು ನಿಮ್ಮ ಮಕ್ಕಳಿಗೆ ಆದಷ್ಟು ಮಾಡಿ ಕೊಡಿಸಬೇಡಿ. ಮರದ ಗೊಂಬೆಗಳನ್ನು ಅಥವಾ ಆಟಿಕೆಗಳನ್ನು ಕೊಡಿಸಿ. ಅವರ ವಯಸ್ಸಿಗೆ ಅನುಗುಣವಾಗಿ ಯಾವ ಆಟಿಕೆಗಳನ್ನು ಖರೀದಿಸಬೇಕೆಂಬುದನ್ನು ನೀವೇ ಆಲೋಚಿಸಿ.

ಒಂದರಿಂದ - ಎರಡು ತಿಂಗಳು

ಈ ಸಮಯದಲ್ಲಿ ಮಕ್ಕಳು ಎಲ್ಲಾ ರೀತಿಯ ಭಾವನೆಗಳ ಬಗ್ಗೆ ಕಲಿಯಲು ಪ್ರಾರಂಭಿಸುತ್ತಾರೆ. ನಗಲು ಆರಂಭಿಸುತ್ತವೆ. ಹೊಸ ಲೋಕವನ್ನು ಅವರು ಅರ್ಥ ಮಾಡಿಕೊಳ್ಳುವ ಸಮಯ ಇದು. ಈ ಸಂದರ್ಭದಲ್ಲಿ ಆಟಿಕೆಗಳೇ ಬೇಡ. ಅವರೊಂದಿಗೆ ಮಾತನಾಡಿ, ನಗಿ, ಸ್ಪರ್ಶಿಸಿ ಮತ್ತು ಹಾಡುಗಳನ್ನು ಹಾಡಿ. ಇಷ್ಟನ್ನೇ ಮಾಡಿದರೂ ಸಾಕು. ಆಗ ಯಾವ ಆಟಿಕೆಯನ್ನೂ ತಂದುಕೊಡಬೇಕಿಲ್ಲ.

ಎರಡರಿಂದ- ಮೂರು ತಿಂಗಳು
ಈ ಸಮಯದಲ್ಲಿ ಮಕ್ಕಳು ತಮ್ಮ ಕೈಗೆ ಸಿಕ್ಕಿದ ವಸ್ತುಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಆರಂಭಿಸುತ್ತವೆ. ಈ ಸಂದರ್ಭದಲ್ಲಿ ಮೃದುವಾದ ಮತ್ತು ಕಡಿಮೆ ತೂಕದ ಸಣ್ಣ ಆಟಿಕೆಗಳನ್ನು ಆಯ್ಕೆ ಮಾಡಬೇಕು. ಮೃದುವಾದ ಮತ್ತು ಒತ್ತಿದಾಗ ಶಬ್ದ ಮಾಡುವ ಆಟಿಕೆಗಳು ಈ ಸಮಯದಲ್ಲಿ ಉತ್ತಮ ಆಯ್ಕೆಯಾಗಿದೆ.

ನಾಲ್ಕರಿಂದ - ಆರುತಿಂಗಳುಗಳು

ಈ ಸಮಯದಲ್ಲಿ ಹೊಸ ವಿಷಯಗಳನ್ನು ಕಲಿಯಲು ಮಕ್ಕಳು ಪ್ರಯತ್ನಪಡುತ್ತಾ ಇರುತ್ತಾರೆ. ಹೊಸ ಆಕಾರಗಳು, ದೃಶ್ಯಗಳು ಮತ್ತು ಶಬ್ದಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ಮಕ್ಕಳಿರುತ್ತಾರೆ. ಅಲ್ಲದೆ ಯಾವುದೇ ವಸ್ತುವನ್ನು ನೋಡಿದರೂ ತಕ್ಷಣ ತಮ್ಮ ಬಾಯಿಗೆ ಹಾಕಿಕೊಳ್ಳುತ್ತಾರೆ. ಆ ಕಾರಣಕ್ಕಾಗಿ ಅವರ ಕೈ ಹಾಗೂ ಆಟಿಕೆಗಳನ್ನು ಆದಷ್ಟು ಸ್ವಚ್ಛಮಾಡಿ ಇಡಬೇಕು. ಇಲ್ಲವೆಂದರೆ ಇದೇ ಆಟಿಕೆಗಳು ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗಬಲ್ಲದು. ಆದ್ದರಿಂದ ಗುಣಮಟ್ಟದ ಆಟಿಕೆಗಳನ್ನು ಆಯ್ಕೆ ಮಾಡಿ. ಚಿಕ್ಕ ಬಟನ್, ಸೂಜಿ, ಹರಿತವಾದ ವಸ್ತು ಇದರಲ್ಲಿ ಯಾವುದನ್ನೂ ಅವರ ಕಣ್ಣೆದುರು ಇಡಬೇಡಿ.

ಎಂಟರಿಂದ - ಒಂದು ವರ್ಷದ ಮಕ್ಕಳು
ಈ ಸಮಯದಲ್ಲಿ ಮಕ್ಕಳು ಅನೇಕ ವಿಷಯಗಳನ್ನು ಕಲಿಯುತ್ತಾರೆ. ಅಂಬೆಗಾಲು ಇಡಲು ಆರಂಭಿಸಿರುತ್ತಾರೆ. ಏನನ್ನಾದರೂ ಹಿಡಿದುಕೊಂಡು ನಿಲ್ಲುವುದನ್ನು ಕಲಿಯುತ್ತಾರೆ. ಈ ಸಂದರ್ಭದಲ್ಲಿ ವಾಕರ್ ತಂದುಕೊಟ್ಟರೆ ಅವರಿಗೆ ಸಹಾಯವಾಗುತ್ತದೆ. ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುವ ಕಾರುಗಳು ಕೂಡ ಈ ಸಮಯದಲ್ಲಿ ಉತ್ತಮ ಆಯ್ಕೆಯಾಗಿದೆ. ನಿಮ್ಮ ಮಕ್ಕಳ ಚಟುವಟಿಕೆ ಹಾಗೂ ತಿಳುವಳಿಕೆ ಈಗ ಸುಧಾರಿಸಿರುತ್ತದೆ. ಅದಕ್ಕೆ ತಕ್ಕಂತ ಆಟಿಕೆಗಳನ್ನು ತನ್ನಿ.

mysore-dasara_Entry_Point