World Food Day: ಹಸಿದವನಿಗಷ್ಟೇ ಗೊತ್ತು ತುತ್ತಿನ ಮಹತ್ವ; ವಿಶ್ವ ಆಹಾರ ದಿನ ಇತಿಹಾಸ, ಮಹತ್ವ, ಈ ವರ್ಷದ ಥೀಮ್‌ ಕುರಿತ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  World Food Day: ಹಸಿದವನಿಗಷ್ಟೇ ಗೊತ್ತು ತುತ್ತಿನ ಮಹತ್ವ; ವಿಶ್ವ ಆಹಾರ ದಿನ ಇತಿಹಾಸ, ಮಹತ್ವ, ಈ ವರ್ಷದ ಥೀಮ್‌ ಕುರಿತ ವಿವರ ಇಲ್ಲಿದೆ

World Food Day: ಹಸಿದವನಿಗಷ್ಟೇ ಗೊತ್ತು ತುತ್ತಿನ ಮಹತ್ವ; ವಿಶ್ವ ಆಹಾರ ದಿನ ಇತಿಹಾಸ, ಮಹತ್ವ, ಈ ವರ್ಷದ ಥೀಮ್‌ ಕುರಿತ ವಿವರ ಇಲ್ಲಿದೆ

ಹಸಿವು ಜಗತ್ತಿನ ಜೀವಿಗಳ ಪರಮ ವೈರಿ. ಹಸಿವು ನಿವಾರಣೆಯಾಗಬೇಕು ಎಂದರೆ ಆಹಾರ ಬೇಕು. ಆಹಾರದ ಮಹತ್ವ ಹಾಗೂ ಜಾಗತಿಕ ಹಸಿವಿನ ಸಮಸ್ಯೆಯನ್ನು ಎತ್ತಿ ತೋರಿಸುವ ಉದ್ದೇಶದಿಂದ ಪ್ರತಿವರ್ಷ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆಹಾರ ದಿನ ಯಾವಾಗ, ಈ ದಿನದ ಇತಿಹಾಸ ಮಹತ್ವವೇನು, 2024ರ ವಿಶ್ವ ಆಹಾರದ ದಿನದ ಥೀಮ್ ಏನು ಎಂಬ ವಿವರ ಇಲ್ಲಿದೆ.

ವಿಶ್ವ ಆಹಾರ ದಿನ
ವಿಶ್ವ ಆಹಾರ ದಿನ (PC: Canva)

ಆಹಾರ ನಮ್ಮೆಲ್ಲರ ಪಾಲಿನ ಅಮೃತ ಎಂದರೂ ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ಭೂಮಿ ಮೇಲಿನ ಪ್ರತಿಯೊಂದು ಜೀವಿಗೂ ಜೀವದಾನ ನೀಡುವುದು ಆಹಾರ, ಆಹಾರ ಇಲ್ಲ ಎಂದರೆ ಭೂಮಿ ಮೇಲೆ ಜೀವಿಗಳ ಬದುಕಲು ಸಾಧ್ಯವೇ ಆಗುತ್ತಿರಲಿಲ್ಲ. ಹಸಿದುಕೊಂಡವನಿಗಷ್ಟೇ ಆಹಾರದ ಮಹತ್ವ, ಮೌಲ್ಯ ತಿಳಿಯುವುದು. ಆಹಾರವು ನಮ್ಮ ಬದುಕಿನ ಅಗತ್ಯಗಳಲ್ಲಿ ಒಂದು. ಹೀಗೆ ಆಹಾರದ ಮಹತ್ವ ಹಾಗೂ ಅಗತ್ಯ, ಜಾಗತಿಕ ಮಟ್ಟದಲ್ಲಿ ಹಸಿವಿನ ಸೂಚ್ಯಂಕವನ್ನು ತೋರಿಸುವ ಉದ್ದೇಶದಿಂದ ಪ್ರತಿವರ್ಷ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆಹಾರ ದಿನ ಯಾವಾಗ, ಈ ದಿನದ ಮಹತ್ವವೇನು, ಇತಿಹಾಸ ಹಾಗೂ ಈ ವರ್ಷದ ಥೀಮ್ ಕುರಿತ ವಿವರ ಇಲ್ಲಿದೆ.

ವಿಶ್ವ ಆಹಾರ ದಿನ ಯಾವಾಗ?

ಪ್ರತಿವರ್ಷ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. 1945ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಸ್ಥಾಪನೆಯಾಯ್ತು, ಇದರ ನೆನಪಿನಲ್ಲಿ ಆಹಾರ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಆಹಾರ ದಿನ 2024ರ ಥೀಮ್

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಾರ, ‘ಉತ್ತಮ ಜೀವನ ಮತ್ತು ಉತ್ತಮ ಭವಿಷ್ಯಕ್ಕಾಗಿ ಆಹಾರದ ಹಕ್ಕು‘ ಎಂಬುದು 2024ರ ವಿಶ್ವ ಆಹಾರ ದಿನದ ಥೀಮ್ ಆಗಿದೆ. ಪ್ರತಿಯೊಬ್ಬರಿಗೂ ಕೈಗೆಟುವಂತೆ ಆಹಾರ ಸಿಗುವಂತೆ ಮಾಡುವುದು ಹಾಗೂ ಜಗತ್ತಿನ ಜೀವಿಗಳಿಗೆ ಆಹಾರದ ಮಹತ್ವವನ್ನು ತಿಳಿಸುವುದು ಈ ಥೀಮ್‌ನ ಉದ್ದೇಶವಾಗಿದೆ.

ವಿಶ್ವ ಆಹಾರದ ದಿನ ಉದ್ದೇಶ

1945ರಲ್ಲಿ ಯುನೈಟೆಡ್ ನೇಷನ್ಸ್ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಶನ್ (WFO) ಸ್ಥಾಪನೆಯನ್ನು ಗುರುತಿಸಲು ಪ್ರತಿ ವರ್ಷ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ವಿಶ್ವ ಆಹಾರ ಕಾರ್ಯಕ್ರಮ, ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಸಿವು ಮತ್ತು ಆಹಾರ ಭದ್ರತೆಯ ಮೇಲೆ ಕೇಂದ್ರೀಕರಿಸಿದ ವಿವಿಧ ಸಂಸ್ಥೆಗಳು ಗುರುತಿಸಿವೆ. ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ ಪ್ರಾಮುಖ್ಯವನ್ನೂ ಈ ದಿನ ಎತ್ತಿ ಹಿಡಿಯುತ್ತದೆ. 1979ರಲ್ಲಿ ನಡೆದ 20ನೇ FAO ಸಮ್ಮೇಳನದಲ್ಲಿ ವಿಶ್ವ ಆಹಾರ ದಿನವನ್ನು ಅಧಿಕೃತವಾಗಿ ಜಾಗತಿಕ ರಜಾದಿನವೆಂದು ಗುರುತಿಸಲಾಯಿತು ಮತ್ತು ಅಂದಿನಿಂದ 150 ದೇಶಗಳು ಈ ಆಚರಣೆಯನ್ನು ಸ್ವೀಕರಿಸಿವೆ ಎಂದು ಆಹಾರ ಮತ್ತು ಕೃಷಿ ಸಂಸ್ಥೆ (FAO) ವರದಿ ಮಾಡಿದೆ. 2014ರಿಂದ ಜಗತ್ತಿಗೆ ಆಹಾರ ನೀಡುವ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಡತನವನ್ನು ನಿರ್ಮೂಲನೆ ಮಾಡುವ ಗುರಿಗಳನ್ನು ಉತ್ತೇಜಿಸಲು ದಿನವನ್ನು ಹೆಚ್ಚಾಗಿ ಬಳಸಲಾಗುತ್ತದೆ.

ವಿಶ್ವ ಆಹಾರ ದಿನದ ಮಹತ್ವ

ಹಸಿವು ಮತ್ತು ಅಪೌಷ್ಟಿಕತೆಯ ವಿರುದ್ಧದ ಹೋರಾಟದಲ್ಲಿ ವಿಶ್ವ ಆಹಾರ ದಿನವು ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ವರದಿಯ ಪ್ರಕಾರ, “ಜಗತ್ತಿನಲ್ಲಿ 2.8 ಶತಕೋಟಿಗೂ ಹೆಚ್ಚು ಜನರು ಆರೋಗ್ಯಕರ ಆಹಾರವನ್ನು ಪಡೆಯಲು ಅಸಮರ್ಥರಾಗಿದ್ದಾರೆ. ಅನಾರೋಗ್ಯಕರ ಆಹಾರವು ಎಲ್ಲಾ ರೀತಿಯ ಅಪೌಷ್ಟಿಕತೆಗೆ ಪ್ರಮುಖ ಕಾರಣವಾಗಿದೆ - ಅಪೌಷ್ಟಿಕತೆ, ಮೈಕ್ರೋನ್ಯೂಟ್ರಿಯಂಟ್ ಕೊರತೆಗಳು ಮತ್ತು ಸ್ಥೂಲಕಾಯತೆ, ಇದು ಈಗ ಹೆಚ್ಚಿನ ದೇಶಗಳಲ್ಲಿ ಅಸ್ತಿತ್ವದಲ್ಲಿದೆ, ಇದು ಸಾಮಾಜಿಕ-ಆರ್ಥಿಕ ವರ್ಗಗಳನ್ನು ಬೇರೆ ಮಾಡುತ್ತಿದೆ. ಆಚರಣೆಯು ಜಾಗತಿಕ ಒಗ್ಗಟ್ಟಿನ ಪ್ರಜ್ಞೆಗೆ ಕಾರಣವಾಗುತ್ತದೆ, ಹಸಿವನ್ನು ತೊಡೆದುಹಾಕಲು ಮತ್ತು ಪೌಷ್ಟಿಕಾಂಶವನ್ನು ಸುಧಾರಿಸಲು ತಮ್ಮ ಪ್ರಯತ್ನಗಳಲ್ಲಿ ಒಂದಾಗಲು ದೇಶಗಳನ್ನು ಪ್ರೋತ್ಸಾಹಿಸುತ್ತದೆ.

ಆಹಾರ ಭದ್ರತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಕಾರ್ಯತಂತ್ರಗಳನ್ನು ಚರ್ಚಿಸಲು ಮತ್ತು ಕಾರ್ಯಗತಗೊಳಿಸಲು ಸರ್ಕಾರಗಳು, ಎನ್‌ಜಿಒಗಳು ಮತ್ತು ಪ್ರತಿಯೊಬ್ಬ ಮನುಷ್ಯನೂ ಸೇರಿದಂತೆ ಆಹಾರದ ಮಹತ್ವವನ್ನು ಅರಿಯಲು ಈ ದಿನವು ಒಂದು ಅವಕಾಶವಾಗಿದೆ.

Whats_app_banner