Anand Mahindra: ನಾನು ಭಾರತದ ಶ್ರೀಮಂತ ವ್ಯಕ್ತಿಯಲ್ಲ, ಏಕೆಂದರೆ.... ಆನಂದ್‌ ಮಹೀಂದ್ರ ನೀಡಿದ ಕಾರಣಗಳೇನು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Anand Mahindra: ನಾನು ಭಾರತದ ಶ್ರೀಮಂತ ವ್ಯಕ್ತಿಯಲ್ಲ, ಏಕೆಂದರೆ.... ಆನಂದ್‌ ಮಹೀಂದ್ರ ನೀಡಿದ ಕಾರಣಗಳೇನು?

Anand Mahindra: ನಾನು ಭಾರತದ ಶ್ರೀಮಂತ ವ್ಯಕ್ತಿಯಲ್ಲ, ಏಕೆಂದರೆ.... ಆನಂದ್‌ ಮಹೀಂದ್ರ ನೀಡಿದ ಕಾರಣಗಳೇನು?

ಸತ್ಯವೇನೆಂದರೆ, ನಾನು ಎಂದಿಗೂ ಶ್ರೀಮಂತನಾಗುವುದಿಲ್ಲ. ಏಕೆಂದರೆ, ಇದು ನನ್ನ ಆಶಯವಾಗಿರಲಿಲ್ಲʼʼ ಎಂದು ಆನಂದ್‌ ಮಹೀಂದ್ರ ಹೇಳಿದ್ದಾರೆ.

Anand Mahindra: ನಾನು ಭಾರತದ ಶ್ರೀಮಂತ ವ್ಯಕ್ತಿಯಲ್ಲ, ಏಕೆಂದರೆ.... ಆನಂದ್‌ ಮಹೀಂದ್ರ ನೀಡಿದ ಕಾರಣಗಳೇನು?
Anand Mahindra: ನಾನು ಭಾರತದ ಶ್ರೀಮಂತ ವ್ಯಕ್ತಿಯಲ್ಲ, ಏಕೆಂದರೆ.... ಆನಂದ್‌ ಮಹೀಂದ್ರ ನೀಡಿದ ಕಾರಣಗಳೇನು?

ಮಹೀಂದ್ರ ಗ್ರೂಪ್‌ನ ಚೇರ್ಮನ್‌ ಆನಂದ್‌ ಮಹೀಂದ್ರ ಅವರು ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ವ್ಯಕ್ತಿ. ಕೆಲವೊಂದು ಆಫ್‌ಬೀಟ್‌, ಯಶಸ್ವಿ, ಸ್ಪೂರ್ತಿದಾಯಕ ವಿಷಯಗಳನ್ನು ಪೋಸ್ಟ್‌ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಸೋಷಿಯಲ್‌ ಮೀಡಿಯಾ ಬಳಕೆದಾರರು ಕೇಳಿದ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ.

ಡಿಸೆಂಬರ್‌ 11 ಅಂದರೆ ಇಂದು ಆನಂದ್‌ ಮಹೀಂದ್ರ ಅವರು ಸುಮಾರು ಒಂದು ತಿಂಗಳ ಹಿಂದೆ ಬಳಕೆದಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. "ನೀವು ಭಾರತದ ನಂಬರ್‌ ಒನ್‌ ಶ್ರೀಮಂತರಾಗಿಲ್ಲ ಏಕೆ?ʼʼ ಎಂದು ಆ ಬಳಕೆದಾರರು ಪ್ರಶ್ನಿಸಿದ್ದರು.

ಅದಕ್ಕೆ ಆನಂದ್‌ ಮಹೀಂದ್ರ ಅವರು ಹೀಗೆ ಉತ್ತರಿಸಿದ್ದಾರೆ. "ಸತ್ಯವೇನೆಂದರೆ, ನಾನು ಎಂದಿಗೂ ಶ್ರೀಮಂತನಾಗುವುದಿಲ್ಲ. ಏಕೆಂದರೆ, ಇದು ನನ್ನ ಆಶಯವಾಗಿರಲಿಲ್ಲʼʼ ಎಂದು ಅವರು ಮಾರುತ್ತರ ನೀಡಿದ್ದಾರೆ.

ಫೋರ್ಬ್ಸ್‌ ಪ್ರಕಾರ ಆನಂದ್‌ ಮಹೀಂದ್ರ 2.1 ಬಿಲಿಯನ್‌ ನಿವ್ವಳ ಮೌಲ್ಯದೊಂದಿಗೆ ದೇಶದ ಅಗ್ರ 91ನೇ ಶ್ರೀಮಂತರು. ನವೆಂಬರ್‌ 29ರಂದು ಭಾರತದ ಶ್ರೀಮಂತರ ಪಟ್ಟಿಯನ್ನು ಫೋರ್ಬ್ಸ್‌ ಇಂಡಿಯಾ ಬಿಡುಗಡೆ ಮಾಡಿತ್ತು. ಈ ಪಟ್ಟಿಯ ಪ್ರಕಾರ ದೇಶದ ಅಗ್ರ 100 ಶ್ರೀಮಂತರ ಒಟ್ಟು ಮೌಲ್ಯ 800 ಬಿಲಿಯನ್‌ ಡಾಲರ್‌ ಆಗಿದೆ.

ಆನಂದ್‌ ಮಹೀಂದ್ರ ನೀಡಿದ ಉತ್ತರಕ್ಕೆ ಟ್ವಿಟ್ಟರ್‌ ಬಳಕೆದಾರರು ಖುಷಿಗೊಂಡಿದ್ದಾರೆ. "ಅತ್ಯುತ್ತಮ ಮನಸ್ಸುಗಳು ಯಾವಾಗಲೂ ದೇಶದ ಕುರಿತು ಯೋಚಿಸುತ್ತವೆ. ನೀವು ದೇಶದ ಶ್ರೀಮಂತ ವ್ಯಕ್ತಿಯಾಗದೆ ಇದ್ದರೂ ದೇಶಕ್ಕೆ ಉತ್ತಮ ಕೊಡುಗೆ ನೀಡಿದ್ದೀರಿ. ನೀವು ಮತ್ತು ರತನ್‌ ಟಾಟಾರಂತಹ ವ್ಯಕ್ತಿಗಳು ದೇಶದ ಜನರ ಹೃದಯಕ್ಕೆ ಹತ್ತಿರವಾಗುವಿರಿʼʼ ಎಂದು ಟ್ವಿಟ್ಟರ್‌ ಬಳಕೆದಾರರೊಬ್ಬರು ಮಾರುತ್ತರ ನೀಡಿದ್ದಾರೆ.

ಮತ್ತೊಬ್ಬರು ಬಳಕೆದಾರರು ಹೀಗೆ ಬರೆದಿದ್ದಾರೆ. "ನಿಮ್‌ ಹೃದಯವೇ ಖಜಾನೆ. ನೀವು ನಮ್ಮೆಲ್ಲರ ಹೃದಯ ಗೆದ್ದಿದ್ದೀರಿ. ಆನಂದ್‌ ಸರ್‌ ನೀವು ರತನ್‌ ಟಾಟಾರಂತೆ. ನೀವು ಜನರಿಗಾಗಿ ಮತ್ತು ದೇಶದ ಉತ್ತಮ ಭವಿಷ್ಯಕ್ಕಾಗಿ ಎಕಲಸ ಮಾಡುವವರು. ಕೊರೊನಾ ಕಾಲದಲ್ಲಿ ನಿಮ್ಮ ಸೇವೆಯನ್ನು ಗಮನಿಸಿದ್ದೇವೆʼʼ ಎಂದು ಟ್ವಿಟ್ಟರ್‌ನಲ್ಲಿ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

"ಶ್ರೀಮಂತರಾಗುವುದು ದೊಡ್ಡದಲ್ಲ. ನಮಗೆ ಅಂತವರ ಅಗತ್ಯವಿಲ್ಲ. ದೊಡ್ಡದಾಗಿ ಯೋಚಿಸುವವರ ಅಗತ್ಯ ಈ ಭೂಮಿಗಿದೆ. "ಜಗತ್ತಿನ ಶ್ರೀಮಂತರು ಸಣ್ಣ ಯೋಚನೆಗಳನ್ನು ಹೊಂದಿರಬಹುದು. ಶ್ರೀಮಂತರಲ್ಲದೆ ಇರುವವರು ದೊಡ್ಡ ಯೋಚನೆ ಹೊಂದಿರುತ್ತಾರೆ" "ಶ್ರೀಮಂತರು ತಮ್ಮ ಬಿಸ್ನೆಸ್‌ ವೃದ್ಧಿಸುವುದರಲ್ಲಿ ನಿರತರಾಗಿರುತ್ತಾರೆ, ಅವರು ದೇಶದ ಕುರಿತು ಯೋಚಿಸುವುದಿಲ್ಲʼʼ ಹೀಗೆ ಹಲವು ಬಗೆಯ ಕಾಮೆಂಟ್‌ಗಳು ಬಂದಿವೆ.

ಹಳೆಯ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಪುಲ್ಲರ್ ಆಗಿ ಪರಿವರ್ತಿಸಿದ ಕಟ್ಟಡ ನಿರ್ಮಾಣ ಕಾರ್ಮಿಕರ ವೀಡಿಯೋವನ್ನು ಇತ್ತೀಚೆಗೆ ಆನಂದ್‌ ಮಹೀಂದ್ರ ಹಂಚಿಕೊಂಡಿದ್ದರು.

ಆನಂದ್‌ ಮಹೀಂದ್ರ ಅವರು ಇತ್ತೀಚೆಗೆ France’s Got Talent ಎಂಬ ರಿಯಾಲಿಟಿ ಟಿವಿ ಷೋದ ತುಣುಕು ಹಂಚಿಕೊಂಡಿದ್ದರು. "ಇಲ್ಲಿ ಮನುಷ್ಯರು ಪ್ರಾಣಿಗಳಾಗಿ ಬದಲಾಗುತ್ತಾರೆʼʼ ಎಂದು ಅವರು ಟ್ಯಾಗ್‌ಲೈನ್‌ ಬರೆದಿದ್ದರು. . ಇಲ್ಲಿರುವ ನಾಲ್ಕು ಯುವತಿಯರು ಗೂಬೆ, ಸಿಂಹ, ಹುಲಿ, ಮಂಗಗಳು ಹೀಗೆ ಮುಂತಾದ ಪ್ರಾಣಿ ಪಕ್ಷಿಗಳ ಚಿತ್ರವನ್ನು ತಮ್ಮ ಮೈಮೇಲೆ ವಿನ್ಯಾಸಗೊಳಿಸಿಕೊಂಡಿದ್ದಾರೆ. ಪ್ರೇಕ್ಷಕರು ಮತ್ತು ತೀರ್ಪುಗಾರರು ಇವರ ಪ್ರದರ್ಶನವನ್ನು ನೋಡಿದ ಅಚ್ಚರಿಗೆ ಒಳಗಾಗುತ್ತಾರೆ.

ಈ ವಿಡಿಯೋ ಅನ್ನು ಈತನಕ 7 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಈತನಕ 40,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿರುವ ಕಲಾವಿದೆಯರ ಕೌಶಲವನ್ನು ಕಂಡು ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ.

ಹೀಗೆ, ಆನಂದ್‌ ಮಹೀಂದ್ರ ಅವರು ಪ್ರತಿನಿತ್ಯ ಸೋಷಿಯಲ್‌ ಮೀಡಿಯಾದಲ್ಲಿ ಗಮನ ಸೆಳೆಯುಂತಹ, ವಿಶೇಷ ವಿಡಿಯೋ, ಬರಹಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.