Exit Poll: ಲೋಕಸಭೆ ಚುನಾವಣಾ ಮತಗಟ್ಟೆ ಸಮೀಕ್ಷೆಗಳು ನಿಜವಾಗಲ್ಲ ಅನ್ನೋದಿಕ್ಕೆ 7 ಕಾರಣಗಳಿವು
ಲೋಕಸಭೆ ಚುನಾವಣೆಯ 7ನೇ ಹಾಗೂ ಕೊನೆಯ ಹಂತದ ಮತದಾನ ಇಂದು ಸಂಜೆ ಮುಕ್ತಾಯವಾಗಲಿದೆ. ಇದಾದ ಅರ್ಧ ಗಂಟೆಗೆ ಯಾವ ಪಕ್ಷಕ್ಕೆ ಹೆಚ್ಚಿನ ಸ್ಥಾನ, ಮತದಾರನ ಒಲವು ಯಾರತ್ತ ಅನ್ನೋದನ್ನು ಮತಗಟ್ಟೆ ಸಮೀಕ್ಷೆಗಳು ಬಹಿರಂಗಪಡಿಸಲಿವೆ. ಆದರೆ ಸಮೀಕ್ಷೆಗಳು ನಿಜವಾಗಲ್ಲ ಅನ್ನೋದಿಕ್ಕೆ 7 ಕಾರಣಗಳು ಇಲ್ಲಿವೆ.
ಬೆಂಗಳೂರು: ಲೋಕಸಭೆ ಚುನಾವಣೆ (Lok Sabah Election 2024) ಅಂತಿಮ ಘಟ್ಟ ತಲುಪಿದ್ದು, ಇಂದು (ಜೂನ್ 1, ಶನಿವಾರ) 7ನೇ ಹಾಗೂ ಕೊನೆಯ ಹಂತದ ಮತದಾನ ಮುಕ್ತಾಯವಾಗುತ್ತಿದ್ದು, ವೋಟಿಂಗ್ ಮುಗಿದ ಅರ್ಧ ಗಂಟೆಯ ನಂತರ ಮತಗಟ್ಟೆ ಸಮೀಕ್ಷೆಗಳು (Exit Polls 2024) ಬಹಿರಂಗವಾಗಲಿವೆ. ಬಿಜೆಪಿ (BJP) ನೇತೃತ್ವದ ಎನ್‌ಡಿಎ (NDA), ಕಾಂಗ್ರೆಸ್ (Congress) ಮುಂದಾಳತ್ವದ ಇಂಡಿಯಾ(INDIA) ಮೈತ್ರಿ ಕೂಟಗಳಲ್ಲಿ ಯಾರಿಗೆ ಹೆಚ್ಚು ಸ್ಥಾನಗಳು, ಹಿಂದಿನ ಫಲಿತಾಂಶಕ್ಕಿಂತ ಈ ಬಾರಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬಹುದು, ಪ್ರಧಾನಿ ಯಾರಾಬೇಕು, ರಾಜ್ಯವಾರು ಫಲಿತಾಂಶ, ಯಾವ ಪಕ್ಷಕ್ಕೆ ಹೆಚ್ಚಿನ ಸೀಟುಗಳು, ಇದಕ್ಕೆ ಕಾರಣಗಳು ಏನು ಎಂಬಿತ್ಯಾದಿ ಮಾಹಿತಿಯನ್ನು ಎಕ್ಸಿಟ್ ಪೋಲ್‌ನಲ್ಲಿ ನಿರೀಕ್ಷಿಸಲಾಗುತ್ತದೆ. ಆದರೆ ಸಮೀಕ್ಷೆಗಳು ನಿಜವಾಗಲ್ಲ ಅನ್ನೋದಿಕ್ಕೆ ಒಂದಿಷ್ಟು ಕಾರಣಗಳು ಇಲ್ಲಿವೆ.
ವೈಜ್ಞಾನಿಕ ವಿಧಾನಗಳ ಹೊರತಾಗಿಯೂ ಮತಗಟ್ಟೆ ಸಮೀಕ್ಷೆಗಳು ಕೂಡ ದೋಷಪೂರಿತವಾಗಿರುತ್ತವೆ. ಇದಕ್ಕೆ ಹಲವಾರು ಕಾರಣಗಳನ್ನು ನೋಡಬಹುದು. ಸಂಸ್ಥೆಯೊಂದು ಮೂರನೇ ವ್ಯಕ್ತಿಗಳ ಮೂಲಕ ಮತಗಟ್ಟೆ ಸಮೀಕ್ಷೆಗಳನ್ನು ನಡೆಸುತ್ತದೆ. ಆ ಮೂರನೆ ವ್ಯಕ್ತಿ ಒಂದಷ್ಟು ಜನರ ಗುಂಪುಗಳನ್ನು ರಚಿಸಿಕೊಂಡು ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಈ ವೇಳೆ ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ಸಾಧ್ಯತೆ ಅಥವಾ ಒಂದು ಮತದಾರ ಅಭಿಪ್ರಾಯ ಸಂಗ್ರಹಿಸದೆ ತಮಗೆ ತೋಚಿಸಿದಂತೆ ಅಂಕಿ ಅಂಶಗಳನ್ನು ನಮೂದಿಸಿಕೊಂಡಿರುವ ಸಾಕಷ್ಟು ನಿದರ್ಶನಗಳಿವೆ.
1. ವೈಯಕ್ತಿಕ ಸಂದರ್ಶನಗಳಲ್ಲಿ ಮತದಾರರು ಯಾರಿಗೆ ಮತಹಾಕಿದ್ದಾರೆ ಎಂಬ ಸತ್ಯವಾದ ಮಾಹಿತಿಯನ್ನು ಬಹಿರಂಗಪಡಿಸುತ್ತಾರೆ ಎಂಬ ಅಂದಾಜಿನಲ್ಲಿ ಎಕ್ಸಿಟ್ ಪೋಲ್‌ಗಳು ಕಾರ್ಯನಿರ್ವಹಿಸುತ್ತವೆ. ಕೆಲವು ಮತದಾರರು ಉದ್ದೇಶಪೂರ್ವಕವಾಗಿಯೇ ಸಮೀಕ್ಷೆ ನಡೆಸುವವರಿಗೆ ತಪ್ಪು ಮಾಹಿತಿಯನ್ನು ನೀಡುವ ಸಾಧ್ಯತೆ ಇರುತ್ತದೆ. ಆದರಿಂದ ಇದು ದೋಷಪುರಿತ ಸಮೀಕ್ಷೆಗೆ ಕಾರಣವಾಗಬಹುದು.
2. ಮತಗಟ್ಟೆ ಸಮೀಕ್ಷೆಗಳು ಸಾಮಾನ್ಯವಾಗಿ ಶೇಕಡಾ 1 ರಿಂದ 3 ರಷ್ಟು ವರೆಗೆ ಸತ್ಯವಾಗಿರುವುದಿಲ್ಲ. ಸಮೀಕ್ಷೆ ನಡೆಸುವ ಸಿಬ್ಬಂದಿ ಸ್ವಲ್ಪ ನಿರ್ಲಕ್ಷ್ಯವಹಿಸಿದರೂ ಸಮೀಕ್ಷೆಯ ಫಲಿತಾಂಶಗಳು ಭಾರಿ ಅಂತರದ ಏರುಪೇರಿಗೆ ಕಾರಣವಾಗುತ್ತದೆ.
3. ಸಮೀಕ್ಷೆ ನಡೆಸಲು ಬಜೆಟ್ ನಿರ್ಬಂಧಗಳು, ಸಮಯದ ಮಿತಿಗಳು ಕೂಡ ಮತಗಟ್ಟೆ ಸಮೀಕ್ಷೆಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಹುದು. ಕೆಲ ಮಾಧ್ಯಮಗಳು ಕಡಿಮೆ ಬಜೆಟ್‌ನ ಮಿತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇದು ಸಂಶೋಧನೆ ಮತ್ತು ನಿಖರ ಅಂಕಿ ಅಂಶಗಳ ಸಂಗ್ರಹದ ಮೇಲೆ ಪರಿಣಾಮ ಬೀರುತ್ತವೆ.
4. ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಮತಗಟ್ಟೆ ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಇದರ ಹೊರತಾಗಿ ಅಂಕಿ ಅಂಶ ಸಂಗ್ರಹಿಸುವಾಗ ದೋಷವಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.
5. ಮತದಾರರ ಪಟ್ಟಿಗಳಲ್ಲಿನ ಬದಲಾವಣೆಗಳು ಹಾಗೂ ಮತದಾನದ ಬದಲಾವಣೆಯಂತಹ ಅಂಶಗಳು ಕೂಡ ಮತಗಟ್ಟೆ ಸಮೀಕ್ಷೆಗಳ ಮೇಲೆ ಪರಿಣಾಮ ಬೀರಬಹುದು.
6. ಜಾತಿ ಮತ್ತು ಸಾಮಾಜಿಕ ಆರ್ಥಿಕ ಜನಸಂಖ್ಯಾಶಾಸ್ತ್ರದ ಸಮಗ್ರ ಮಾಹಿತಿಯ ಅನುಪಸ್ಥಿತಿಯು ನಿಖರವಾದ ಮತದಾನಕ್ಕೆ ದೊಡ್ಡ ಸವಾಲೊಡ್ಡುತ್ತದೆ. ಮತದಾರರ ಆರ್ಥಿಕ ಪ್ರೊಫೈಲ್‌ಗಳ ಮೇಲಿನ ಸೀಮಿತ ಮಾಹಿತಿಯು ಎಕ್ಸಿಟ್ ಪೋಲ್‌ಗಳ ಫಲಿತಾಂಶದ ನಿಖರತೆಗೆ ಅಡ್ಡಿಯಾಗುತ್ತದೆ.
7. ಮಹಿಳಾ ಮತದಾರರು ಹೆಚ್ಚುತ್ತಿರುವ ಪ್ರಭಾವದ ಹೊರತಾಗಿಯೂ ಮತಗಟ್ಟೆ ಸಮೀಕ್ಷೆಗಳು ಜನಸಂಖ್ಯಾಶಾಸ್ತ್ರವನ್ನು ಅಸಮಪರ್ಕವಾಗಿ ನಿರ್ವಹಿಸುತ್ತವೆ ಎಂಬ ಆರೋಪಗಳಿವೆ. ಸಮೀಕ್ಷೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಸಾಮಾನ್ಯವಾಗಿ ಶೇಕಡಾ 25 ರಿಂದ 30ರವೆಗೆ ಮಾತ್ರ ಇರುತ್ತದೆ. ಈ ಅಸಮಾನತೆಯು ಮತಗಟ್ಟೆ ಸಮೀಕ್ಷೆಗಳ ದೋಷಗಳಿಗೆ ಕಾರಣವಾಗುತ್ತವೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ವಿಭಾಗ