ಕನ್ನಡ ಸುದ್ದಿ  /  Sports  /  Most Expensive Cars Owned By Top Tennis Players Roger Federer Novak Djokovic Car Collection Iga Swiatek Sharapova Prs

ರೋಜರ್ ಫೆಡರರ್​ ಟು ಅರೀನಾ ಸಬಲೆಂಕಾ; ಟಾಪ್ ಟೆನಿಸ್ ಆಟಗಾರರು ಹೊಂದಿರುವ ಅತ್ಯಂತ ದುಬಾರಿ ಕಾರುಗಳು

Most Expensive Cars Owned By Top Tennis Players: ರೋಜರ್ ಫೆಡರರ್​ ಅವರಿಂದ ಅರೀನಾ ಸಬಲೆಂಕಾ ವರೆಗೂ ವಿಶ್ವದ ಟೆನಿಸ್ ಆಟಗಾರರ ಒಡೆತನದಲ್ಲಿರುವ ಐಷಾರಾಮಿ ಕಾರುಗಳ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.

ಟೆನಿಸ್ ಆಟಗಾರರು ಹೊಂದಿರುವ ಅತ್ಯಂತ ದುಬಾರಿ ಕಾರುಗಳು
ಟೆನಿಸ್ ಆಟಗಾರರು ಹೊಂದಿರುವ ಅತ್ಯಂತ ದುಬಾರಿ ಕಾರುಗಳು (VIP Fortunes)

ವಿಶ್ವದ ಅತ್ಯಂತ ದುಬಾರಿ ಕಾರುಗಳ ಸವಾರಿ ಎಲ್ಲರಿಗೂ ಖುಷಿ ಕೊಡುತ್ತದೆ. ಭಾರಿ ಬೆಲೆಯ ಕಾರುಗಳ ಚಾಲನಾ ವ್ಯವಸ್ಥೆ, ಐಷಾರಾಮಿ ಸೌಲಭ್ಯ, ಕಾರ್ಯಕ್ಷಮತೆ ಸಹಜವಾಗಿ ಎಲ್ಲರನ್ನೂ ಆಕರ್ಷಿಸುತ್ತವೆ. ಪ್ರಸಿದ್ಧ ವ್ಯಕ್ತಿಗಳು ಕೋಟಿ ಕೋಟಿ ಸುರಿದು ವಿವಿಧ ಐಷಾರಾಮಿ ಕಾರುಗಳನ್ನು ಖರೀದಿಸುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಕ್ರೀಡಾಪಟುಗಳು ಇಂತಹ ಅಪೂರ್ವ ಕಾರುಗಳ ಸಂಗ್ರಹದಿಂದಲೇ ಸಾಕಷ್ಟು ಗಮನ ಸೆಳೆಯುತ್ತಾರೆ. ಅಂತೆಯೇ, ವಿಶ್ವದ ಟೆನಿಸ್ ಆಟಗಾರರ ಒಡೆತನದಲ್ಲಿರುವ ಐಷಾರಾಮಿ ಕಾರುಗಳ ಬಗೆಗಿನ ಮಾಹಿತಿ ಇಲ್ಲಿದೆ.

1. ಮಾಜಿ ಟೆನಿಸ್ ತಾರೆ ಮಾರಿಯಾ ಶರಪೋವಾ ಅವರು 911 ಜಿಟಿ2 ಆರ್​ಎಸ್​, 911 ಟರ್ಗಾ 4ಎಸ್​ನಂತಹ ಪೋರ್ಷೆ ಕಾರುಗಳ ಹಲವು ಮಾಡೆಲ್​​ಗಳನ್ನು ಹೊಂದಿದ್ದಾರೆ. ಅಲ್ಲದೆ, 356 ಸ್ಪೈಡರ್ ಮತ್ತು 930 ಜನರೇಷನ್​ 911ನಂತಹ ಕ್ಲಾಸಿಕ್‌ ಕಾರುಗಳು ಮತ್ತು ಪನಮೆರಾ ಜಿಟಿಎಸ್​ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

2. ಪ್ರಸ್ತುತ ವಿಶ್ವದ ನಂಬರ್​ 2 ಟೆನಿಸ್ ಆಟಗಾರ್ತಿ ಬೆಲಾರಸ್‌ನ ಅರೀನಾ ಸಬಲೆಂಕಾ ಅವರು ಲ್ಯಾಂಬೋರ್ಗಿನಿ ಅವೆಂಟಡಾರ್ ಎಸ್, ಮರ್ಸಿಡಿಸ್-ಬೆನ್ಜ್ ಜಿ-ಕ್ಲಾಸ್ ಮತ್ತು ಬಿಎಂಡಬ್ಲ್ಯು ಹೊಂದಿದ್ದಾರೆ.

3. ವಿಶ್ವದ ನಂ. 11 ಟೆನಿಸ್ ಆಟಗಾರ ಗ್ರೀಸ್‌ನ ಸ್ಟೆಫಾನೋಸ್ ಸಿಟ್ಸಿಪಾಸ್ ಅವರು ಐಷಾರಾಮಿ ಆಸ್ಟನ್ ಮಾರ್ಟಿನ್ ಡಿಬಿಎಕ್ಸ್​ ಹೊಂದಿದ್ದಾರೆ. ಟೆಸ್ಲಾ ಮಾಡೆಲ್ 3 ಕಾರನ್ನು ಸಹ ಹೊಂದಿದ್ದಾರೆ.

4. ಆಸ್ಟ್ರೇಲಿಯನ್ ಟೆನಿಸ್ ಆಟಗಾರ ನಿಕ್ ಕಿರ್ಗಿಯೋಸ್ ಅವರು ಡಾಡ್ಜ್ ಎಸ್​ಆರ್​​ಟಿ ಡೆಮನ್ ಅನ್ನು ಹೊಂದಿದ್ದು, ಅಂಡರ್ ಬಾಡಿ ನಿಯಾನ್ ಲೈಟ್‌ಗಳು ಮತ್ತು ಮ್ಯಾಟ್ ಬ್ಲ್ಯಾಕ್ ಪೇಂಟ್ ಜಾಬ್ ಜೊತೆಗೆ ಟೆಸ್ಲಾ ಮಾಡೆಲ್ ಎಕ್ಸ್​​ ಕಲೆಕ್ಷನ್​ ಹೊಂದಿದ್ದಾರೆ. ಕಿರ್ಗಿಯೋಸ್ ಸಹ ನಿಸ್ಸಾನ್ ಜಿಟಿ-ಆರ್​​ (ಆರ್​35 ಜನರೇಷನ್) ಅನ್ನು ಹೊಂದಿದ್ದಾರೆ.

5. ಟೆನಿಸ್ ದಂತಕಥೆ ರೋಜರ್ ಫೆಡರರ್ ಅವರು ಕಾರುಗಳನ್ನು ಅತಿ ಹೆಚ್ಚು ಇಷ್ಟಪಡುವ ಕ್ರೀಡಾಪಟುಗಳಲ್ಲಿ ಒಬ್ಬರು. ಐಕಾನಿಕ್ ಎಎಂಜಿ ಜಿ ವಾಗನ್​​ನಿಂದ ಸ್ಪೋರ್ಟಿಯರ್ ಜಿಟಿ ಎಸ್​-ವರೆಗೆ ಮರ್ಸಿಡಿಸ್ ಬೆಂಜ್ ಮಾಡೆಲ್​​ಗಳನ್ನು ಹೊಂದಿದ್ದಾರೆ. ಅವರು ಎಸ್​ಎಲ್​ ರೋಡ್‌ಸ್ಟರ್, ಜಿಎಲ್​ಇ 63 ಎಸ್​ ಕಾರ್ಯಕ್ಷಮತೆಯ ಎಸ್​ಯುವಿ ಮತ್ತು ಎಸ್​​ಎಲ್​ಎಸ್​ ರೋಡ್‌ಸ್ಟರ್ ಅನ್ನು ಸಹ ಪಡೆದುಕೊಂಡಿದ್ದಾರೆ.

6. ಸ್ಪ್ಯಾನಿಷ್ ಟೆನಿಸ್ ದಂತಕಥೆ ರಾಫೆಲ್ ನಡಾಲ್ ಅವರು ಆಸ್ಟನ್ ಮಾರ್ಟಿನ್ ಡಿಬಿಎಸ್, ಫೆರಾರಿ 458 ಇಟಾಲಿಯಾ, ಮರ್ಸಿಡಿಸ್ ಬೆಂಜ್ ಎಸ್​ಎಲ್​55 ಮತ್ತು ಕೆಲವು ಕಿಯಾ ಮಾದರಿಗಳಂತಹ ಬಹು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

7. ವಿಶ್ವದ ನಂಬರ್​ 1 ಆಟಗಾರ್ತಿ ಇಗಾ ಸ್ವಿಯಾಟೆಕ್​ ಅವರು ಪೋರ್ಷೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅವರು ಸಂಪೂರ್ಣ ಎಲೆಕ್ಟ್ರಿಕ್ ಪೋರ್ಷೆ ಟೇಕಾನ್ ಟರ್ಬೊ ಎಸ್ ಕ್ರಾಸ್ ಟುರಿಸ್ಮೊ ಮತ್ತು ಪೋರ್ಷೆ ಪನಾಮೆರಾ 4 ಎಸ್ ಅನ್ನು ಹೊಂದಿದ್ದಾರೆ.

8. ವಿಶ್ವದ ನಂಬರ್​ 1 ನೊವಾಕ್ ಜೊಕೊವಿಕ್ ಅವರು ಎಲೆಕ್ಟ್ರಿಕ್ ಪಿಯುಗಿಯೊ ಇ-208 ಮತ್ತು ಟೆಸ್ಲಾ ಮಾಡೆಲ್ ಎಕ್ಸ್‌ನಂತಹ ಎಲೆಕ್ಟ್ರಿಕ್ ಮಾದರಿಗಳಿಂದ ಹಲವಾರು ಕಾರುಗಳನ್ನು ಹೊಂದಿದ್ದಾರೆ. ಫಿಯೆಟ್ 500 ಜೊತೆಗೆ ಮರ್ಸಿಡಿಸ್-ಬೆನ್ಜ್ ಎಸ್-ಕ್ಲಾಸ್, ಬಿಎಂಡಬ್ಲ್ಯು 5 ಸಿರೀಸ್ ಟೂರಿಂಗ್, ವಿ12-ಚಾಲಿತ ಆಸ್ಟನ್ ಮಾರ್ಟಿನ್ ಡಿಬಿ9 ಮತ್ತು ಆಡಿ ಆರ್8.