ಕನ್ನಡ ಸುದ್ದಿ  /  ಕ್ರಿಕೆಟ್  /  ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಲಿ; ವಿರಾಟ್ ಕೊಹ್ಲಿ ಸತತ ವೈಫಲ್ಯದ ಬೆನ್ನಲ್ಲೇ ಮಾಜಿ ಕ್ರಿಕೆಟರ್ಸ್ ಒತ್ತಾಯ

ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಲಿ; ವಿರಾಟ್ ಕೊಹ್ಲಿ ಸತತ ವೈಫಲ್ಯದ ಬೆನ್ನಲ್ಲೇ ಮಾಜಿ ಕ್ರಿಕೆಟರ್ಸ್ ಒತ್ತಾಯ

T20 World Cup 2024: ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅವರನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಬೇಕು. ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಬೇಕು ಎಂದು ಮಾಜಿ ಕ್ರಿಕೆಟರ್​ಗಳು ಸಲಹೆ ನೀಡಿದ್ದಾರೆ.

ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಲಿ, ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಲಿ; ಮಾಜಿ ಕ್ರಿಕೆಟರ್ಸ್ ಒತ್ತಾಯ
ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಲಿ, ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಲಿ; ಮಾಜಿ ಕ್ರಿಕೆಟರ್ಸ್ ಒತ್ತಾಯ

ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಟೀಮ್ ಇಂಡಿಯಾ ದೊಡ್ಡ ತಪ್ಪು ಮಾಡುತ್ತಿದೆಯೇ? ಈ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ತಂಡದ ಪ್ಲೇಯಿಂಗ್ ಆಯ್ಕೆ ವಿಚಾರದಲ್ಲಿ ಟೀಮ್ ಮ್ಯಾನೇಜ್ಮೆಂಟ್ ಪ್ರಮಾದ ಎಸಗುತ್ತಿದೆ ಎಂದು ಅಭಿಮಾನಿಗಳು, ಮಾಜಿ ಕ್ರಿಕೆಟರ್​ಗಳಿಂದಲೂ ಆರೋಪ ಬರುತ್ತಿದೆ. ಯಶಸ್ವಿ ಜೈಸ್ವಾಲ್ ಅವರನ್ನು 2ನೇ ಪಂದ್ಯಕ್ಕೂ ಕೈಬಿಟ್ಟಿರುವುದು ಆಕ್ರೋಶ ವ್ಯಕ್ತವಾಗಿದೆ.

ಟ್ರೆಂಡಿಂಗ್​ ಸುದ್ದಿ

ಮತ್ತೆ ವಿರಾಟ್ ಕೊಹ್ಲಿ ಆರಂಭಿಕ, ಮತ್ತೆ ವೈಫಲ್ಯ

ಆರಂಭಿಕ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಅವರು ತಂಡದಲ್ಲಿದ್ದರೂ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಅವರನ್ನು ಬೆಂಚ್​​ಗೆ ಸೀಮಿತ ಮಾಡಲಾಗಿದೆ. ಪಾಕಿಸ್ತಾನ ಮತ್ತು ಐರ್ಲೆಂಡ್ ವಿರುದ್ಧದ ಪಂದ್ಯಕ್ಕೂ ಅವಕಾಶ ಪಡೆಯದ ಜೈಸ್ವಾಲ್ ಅವರನ್ನು ಮುಂದಿನ ಪಂದ್ಯದಲ್ಲಿ ಆಡಿಸಬೇಕು ಎಂದು ಆಗ್ರಹ ಕೇಳಿ ಬಂದಿದೆ. ವಿರಾಟ್ ಕೊಹ್ಲಿ ಎರಡು ಪಂದ್ಯಗಳಲ್ಲೂ ಆರಂಭಿಕರಾಗಿ ಕಣಕ್ಕಿಳಿದಿದ್ದು, ರನ್ ಗಳಿಸಲು ವಿಫಲಗೊಂಡಿದ್ದಾರೆ.

ಐರ್ಲೆಂಡ್-ಪಾಕಿಸ್ತಾನ ವಿರುದ್ಧ ಕೊಹ್ಲಿ ಫೇಲ್

ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಅವರು ಅತ್ಯುದ್ಭುತ ಪ್ರದರ್ಶನ ನೀಡಿದ್ದ ಕಾರಣ ಟಿ20 ವಿಶ್ವಕಪ್​ನಲ್ಲೂ ಆರಂಭಿಕರನ್ನಾಗಿ ಕಣಕ್ಕಿಳಿಸಲಾಗುತ್ತಿದೆ. ಆದರೆ ಅವರು ರನ್ ಗಳಿಸಲು ವಿಫಲರಾಗುತ್ತಿದ್ದಾರೆ. ಐರ್ಲೆಂಡ್ ವಿರುದ್ಧ 5 ಎಸೆತಗಳಲ್ಲಿ 1 ರನ್ ಗಳಿಸಿದ್ದ ಕೊಹ್ಲಿ, ಪಾಕಿಸ್ತಾನ ವಿರುದ್ಧ 3 ಬಾಲ್​​ಗಳಲ್ಲಿ 4 ರನ್ ಗಳಿಸಿದರು. ಹೀಗಾಗಿ ಮುಂದಿನ ಪಂದ್ಯದಲ್ಲಿ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದರೆ ಉತ್ತಮ ಎಂಬುದು ತಜ್ಞರ ಅಭಿಪ್ರಾಯ.

ಐಪಿಎಲ್​ನಲ್ಲಿ ಅಬ್ಬರಿಸಿದ್ದ ಕೊಹ್ಲಿ

ಐಪಿಎಲ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಅಬ್ಬರಿಸಿದ್ದರು. 15 ಪಂದ್ಯಗಳಲ್ಲಿ 741 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು. 61.75ರ ಬ್ಯಾಟಿಂಗ್ ಸರಾಸರಿ ಹೊಂದಿದ್ದರು. 5 ಅರ್ಧಶತಕ, 1 ಶತಕ ಸಿಡಿಸಿ ಮಿಂಚಿದ್ದರು. ಕೊಹ್ಲಿ ಅಬ್ಬರದ ಪ್ರದರ್ಶನದಿಂದ ಆರ್​​ಸಿಬಿ ಪ್ಲೇಆಫ್​​ಗೂ ಪ್ರವೇಶಿಸಿತ್ತು. ಆದರೆ ಪ್ಲೇಆಫ್​​​ನಲ್ಲಿ ಆರ್​ಸಿಬಿ ಸೋತಿತ್ತು. ಇದೇ ಕಾರಣಕ್ಕಾಗಿ ಟಿ20 ವಿಶ್ವಕಪ್​​ನಲ್ಲೂ ಕೊಹ್ಲಿ ಆರಂಭಿಕರಾಗಿದ್ದಾರೆ.

ನ್ಯೂಯಾರ್ಕ್​​ನಲ್ಲಿ ಸ್ಲೋ ಪಿಚ್​​​​​ಗಳು

ಅಮೆರಿಕ ಟಿ20 ವಿಶ್ವಕಪ್​ಗೆ ಆತಿಥ್ಯ ವಹಿಸಿದ್ದು, ಟೂರ್ನಿಗಾಗಿ ತಾತ್ಕಾಲಿಕ ಪಿಚ್​​ಗಳನ್ನು ನಿರ್ಮಿಸಿವೆ. ಆದರೆ, ಈ ಪಿಚ್​​​ಗಳಲ್ಲಿ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಟರ್​​​​ಗಳು ದೊಡ್ಡ ಮೊತ್ತ ಸ್ಕೋರ್ ಮಾಡಲು ವಿಫಲರಾಗುತ್ತಿದ್ದಾರೆ. ಪಿಚ್​ ಮರ್ಮ ಅರಿಯುವಲ್ಲಿ ಆಟಗಾರರು ವಿಫಲರಾಗುತ್ತಿದ್ದಾರೆ. ಆದರೆ, ಬೌಲರ್​​ಗಳು ಹೆಚ್ಚು ಮೇಲುಗೈ ಸಾಧಿಸುತ್ತಿದ್ದಾರೆ. ಘಟಾನುಘಟಿ ಆಟಗಾರರೇ ಅನಾನುಭವಿ ಬೌಲರ್​​ಗಳ ಎದುರು ರನ್ ಗಳಿಸಲು ಪರದಾಡುತ್ತಿದ್ದಾರೆ.

ಜೈಸ್ವಾಲ್​ಗೆ ಅವಕಾಶ ನೀಡಲು ಒತ್ತಾಯ

ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಸಹ ಆತಿಥೇಯ ಅಮೆರಿಕ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ರೋಹಿತ್​ ಶರ್ಮಾ ಜೊತೆಗೆ ಜೈಸ್ವಾಲ್ ಇನ್ನಿಂಗ್ಸ್​ ಆರಂಭಿಸಬೇಕು. ವಿರಾಟ್ ತನ್ನ 3ನೇ ಕ್ರಮಾಂಕದಲ್ಲೇ ಬ್ಯಾಟ್ ಬೀಸಲಿ ಎಂದು ಹೇಳಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಅವರನ್ನು ಬೆಂಚ್​​ಗೆ ಸೀಮಿತಗೊಳಿಸಲಿ ಎಂದು ಕೆಲ ಮಾಜಿ ಕ್ರಿಕೆಟರ್​​ಗಳು ಹೇಳಿದ್ದಾರೆ.

ಟಿ20 ವರ್ಲ್ಡ್‌ಕಪ್ 2024