ಪಾಕಿಸ್ತಾನ ಕ್ರಿಕೆಟ್ ಎಂಬುದು ಹುಚ್ಚು ಜಗತ್ತು, ಬೆನ್ನಿಗೆ ಚೂರಿ ಹಾಕೋರೆ ಹೆಚ್ಚು; ಪಾಕ್ ಮಾಜಿ ಹೆಡ್ಕೋಚ್ ಅಚ್ಚರಿ ಹೇಳಿಕೆ
Mickey Arthur : ಪಾಕಿಸ್ತಾನ ಕ್ರಿಕೆಟ್ ಅನ್ನು ಒಂದು ಹುಚ್ಚು ಜಗತ್ತು. ಇಲ್ಲಿ ಬೆನ್ನಿಗೆ ಚೂರಿ ಹಾಕುವವರೇ ಹೆಚ್ಚು ಎಂದು ಕರೆಯುವ ಮೂಲಕ ಮಾಜಿ ಹೆಡ್ಕೋಚ್ ಮತ್ತು ಮಾಜಿ ನಿರ್ದೇಶಕ ಮಿಕ್ಕಿ ಆರ್ಥರ್ ಹೊಸ ವಿವಾದ ಹುಟ್ಟು ಹಾಕಿದ್ದಾರೆ.
2017ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy 2017) ಗೆಲ್ಲಲು ಸಹಾಯ ಮಾಡಿದ್ದ ಮಾಜಿ ನಿರ್ದೇಶಕ ಹಾಗೂ ಮಾಜಿ ಹೆಡ್ಕೋಚ್ ಮಿಕ್ಕಿ ಆರ್ಥರ್ (Mickey Arthur) ಅವರು ಪಾಕಿಸ್ತಾನ ಕ್ರಿಕೆಟ್ನಲ್ಲಿನ (Pakistan Cricket) ಇತ್ತೀಚಿನ ಸಮಸ್ಯೆಗಳ ಕುರಿತು ಟೀಕಿಸಿದ್ದಾರೆ. ಪಾಕಿಸ್ತಾನ ತಂಡದಲ್ಲಿ ನಾಯಕತ್ವದ ಪರಿಸ್ಥಿತಿಯ ನಿರ್ವಹಣೆಯನ್ನು ಟೀಕಿಸಿದ್ದಾರೆ. ಅಲ್ಲದೆ, ಪಾಕ್ ಕ್ರಿಕೆಟ್ ಅನ್ನು ಒಂದು ಹುಚ್ಚು ಜಗತ್ತು. ಇಲ್ಲಿ ಬೆನ್ನಿಗೆ ಚೂರಿ ಹಾಕುವವರೇ ಹೆಚ್ಚು ಎಂದು ಕರೆಯುವ ಮೂಲಕ ಮಿಕ್ಕಿ ಆರ್ಥರ್ ಹೊಸ ವಿವಾದ ಹುಟ್ಟು ಹಾಕಿದ್ದಾರೆ.
ಪಾಕಿಸ್ತಾನ ತಂಡದ ಕುರಿತು ಕಳವಳ ವ್ಯಕ್ತಪಡಿಸಿರುವ ಆರ್ಥರ್, ಪಾಕಿಸ್ತಾನ ಕ್ರಿಕೆಟ್ ಬಗ್ಗೆ ಯಾರಿಗೂ ಹೆಚ್ಚೇನು ತಿಳಿದಿಲ್ಲ. ಇಲ್ಲಿ ಬೆನ್ನಿಗೆ ಚೂರಿ ಹಾಕುವವರೇ ಹೆಚ್ಚು. ಇದೊಂದು ಹುಚ್ಚು ಜಗತ್ತು. ನೀವಿಲ್ಲಿ ಕಷ್ಟ ಪಟ್ಟು ಶೇ 100ರಷ್ಟು ಕೆಲಸ ಮಾಡುವವರೆಗೂ ತಲೆ ಎತ್ತಿ ಓಡಾಡಬಹುದು. ಅಲ್ಲದೆ, ಎತ್ತರದಲ್ಲಿರುತ್ತೀರಿ. ಆ ನಂತರ ಪಾತಾಳಕ್ಕೆ ದೂಡುತ್ತಾರೆ. ಇಲ್ಲಿ ನೀವು ಲೆಕ್ಕಕ್ಕೇ ಇಲ್ಲದವರಾಗುತ್ತೀರಿ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅವರ ಕಾಲಿಗೆ ಅವರೇ ಗುಂಡು ಹಾರಿಸಿಕೊಳ್ತಿದ್ದಾರೆ ಎಂದ ಮಾಜಿ ಹೆಡ್ಕೋಚ್
ಇದೇ ವೇಳೆ ಪಾಕಿಸ್ತಾನ ತಂಡದ ಸ್ಥಿರತೆಯ ಕುರಿತು ಮಾತನಾಡಿದ ಅವರು, ಪಾಕಿಸ್ತಾನ ತನ್ನ ಕಾಲಿಗೆ ತಾನೇ ಗುಂಡು ಹಾರಿಸಿಕೊಳ್ತಿದೆ. ಏಕೆಂದರೆ ಯಾವುದೇ ಸ್ಥಿರತೆ ಇಲ್ಲ. ಇದನ್ನು ಅವರ ಪ್ರದರ್ಶನ ಹೇಗಿದೆ ಎಂಬುದನ್ನು ಸೂಚಿಸುತ್ತದೆ. ಆಟಗಾರರಿಗೆ ಅವರವರ ಪಾತ್ರದ ಬಗ್ಗೆ ಅರಿವಿದೆ. ಆದರೆ ಆಟಗಾರರು ತಂಡದ ಪ್ರದರ್ಶನಕ್ಕಿಂತ ತಮ್ಮ ವೈಯಕ್ತಿಕ ಪ್ರದರ್ಶನಕ್ಕೆ ಒತ್ತು ನೀಡುತ್ತಿದ್ದಾರೆ. ತಂಡದಲ್ಲಿನ ವ್ಯವಸ್ಥೆಯು ತುಂಬಾ ಅಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಬಾಬರ್ ಅಜಮ್ ಮತ್ತು ಶಾಹೀನ್ ಶಾ ಅಫ್ರಿದಿ ನಾಯಕತ್ವದ ವಿಚಾರದ ಕುರಿತು ಮಾತನಾಡಿದ ಆರ್ಥರ್, ನಾಯಕತ್ವದ ಬದಲಾವಣೆ ಎಲ್ಲಾ ಗೊಂದಲಮಯವಾಗಿಸಿದೆ. ಇದು ಆಟಗಾರರಿಗೂ ಗೊಂದಲ ಸೃಷ್ಟಿಸುತ್ತಿದೆ. ಆದರೆ, ಆಟಗಾರರ ದ್ವೇಷವನ್ನು ಸೃಷ್ಟಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ. 2023ರ ಏಕದಿನ ವಿಶ್ವಕಪ್ ಸೋಲಿನ ಬಾಬರ್ ತನ್ನ ಸೋಲಿನ ಹೊಣೆ ಹೊತ್ತು ನಾಯಕತ್ವ ತ್ಯಜಿಸಿದ್ದರು.
ಬಾಬರ್ಗೆ ಮತ್ತೆ ನಾಯಕತ್ವ ನೀಡಿದ್ದಕ್ಕೆ ಆಕ್ರೋಶ
ಆ ಬಳಿಕ ಶಾಹೀನ್ ಶಾ ಅಫ್ರಿದಿ ಅವರನ್ನು ಟಿ20 ನಾಯಕನನ್ನಾಗಿ ನೇಮಿಸಲಾಗಿತ್ತು. ಆದರೆ, ನ್ಯೂಜಿಲೆಂಡ್ ವಿರುದ್ಧದ ಸರಣಿಯ ಸೋಲಿನ ಪರಿಣಾಮವಾಗಿ ಶಾಹೀನ್ ಅಫ್ರಿದಿಯ ಆಳ್ವಿಕೆಯು ಕೇವಲ ನಾಲ್ಕು ತಿಂಗಳಿಗೆ ಮುಕ್ತಾಯಗೊಂಡಿತು. ನಾಯಕನಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ವೇಗಿ ಕೇವಲ ಒಂದೇ ಒಂದು ಸರಣಿಯನ್ನು ನೀಡಿದ್ದಕ್ಕಾಗಿ ಆಕ್ರೋಶ ವ್ಯಕ್ತವಾಯಿತು. ಏಪ್ರಿಲ್‌ನಲ್ಲಿ ಬಾಬರ್ ಪಾಕಿಸ್ತಾನದ ವೈಟ್-ಬಾಲ್ ನಾಯಕರಾಗಿ ಮರುನೇಮಕಗೊಂಡರು.
ನಿರಾಶಾದಾಯಕ ಫಲಿತಾಂಶಗಳ ಸರಮಾಲೆಯಿಂದಾಗಿ ಪಾಕಿಸ್ತಾನ ಕ್ರಿಕೆಟ್ ತಂಡವು ಅಗಾಧವಾದ ಒತ್ತಡದಲ್ಲಿದೆ. ಇದರ ಬೆನ್ನಲ್ಲೇ ಆರ್ಥರ್ ಅಚ್ಚರಿಯ ಪ್ರತಿಕ್ರಿಯೆ ನೀಡುವ ಮೂಲಕ ಗಮನ ಸೆಳೆದಿದೆ. 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಯುಎಸ್‌ಎ ವಿರುದ್ಧ ಸೋಲು ಕಂಡಿದ್ದು ದೊಡ್ಡ ಹೊಡೆತ ಬಿದ್ದಂತಾಗಿದೆ. ಇದು, ವಿಶ್ವಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಆಟಗಾರರಲ್ಲಿ ಹತಾಶೆಗೆ ಕಾರಣವಾಗಿದೆ. ಇದು ಸುಧಾರಣೆ ಅಗತ್ಯವೂ ಇದೆ ಎಂದು ಎತ್ತಿತೋರಿಸುತ್ತದೆ. 2023ರ ಏಪ್ರಿಲ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಿರ್ದೇಶಕರಾಗಿ ನೇಮಕಗೊಂಡಿದ್ದ ಆರ್ಥರ್, 2024ರ ಜನವರಿಯಲ್ಲಿ ರಾಜೀನಾಮೆ ನೀಡಿದ್ದರು.