ವಿರಾಟ್​ ಕೊಹ್ಲಿಯೇ ನನಗೆ ಸ್ಫೂರ್ತಿ; ಯುಪಿಎಸ್​ಸಿ ಟಾಪರ್ 22 ವರ್ಷದ​ ಡೋಣೂರು ಅನನ್ಯಾ ರೆಡ್ಡಿ ಅಭಿಮಾನದ ಮಾತು-cricket news upsc third topper donuru ananya reddy calls virat kohli her inspiration upsc topper list upsc results prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್​ ಕೊಹ್ಲಿಯೇ ನನಗೆ ಸ್ಫೂರ್ತಿ; ಯುಪಿಎಸ್​ಸಿ ಟಾಪರ್ 22 ವರ್ಷದ​ ಡೋಣೂರು ಅನನ್ಯಾ ರೆಡ್ಡಿ ಅಭಿಮಾನದ ಮಾತು

ವಿರಾಟ್​ ಕೊಹ್ಲಿಯೇ ನನಗೆ ಸ್ಫೂರ್ತಿ; ಯುಪಿಎಸ್​ಸಿ ಟಾಪರ್ 22 ವರ್ಷದ​ ಡೋಣೂರು ಅನನ್ಯಾ ರೆಡ್ಡಿ ಅಭಿಮಾನದ ಮಾತು

Donuru Ananya Reddy : ಯುಪಿಎಸ್​ಸಿ 2023ರ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 3ನೇ ರ್ಯಾಂಕ್ ಗಳಿಸಿರುವ 22 ವರ್ಷದ ಡೋಣೂರು ಅನನ್ಯಾ ರೆಡ್ಡಿ, ವಿರಾಟ್ ಕೊಹ್ಲಿ ತನಗೆ ಪ್ರೇರಣೆ ಎಂದು ಹೇಳಿಕೆ ನೀಡಿದ್ದಾರೆ.

 ಯುಪಿಎಸ್​ಸಿ ಟಾಪರ್ 22 ವರ್ಷದ​ ಅನನ್ಯಾ ರೆಡ್ಡಿ ವಿರಾಟ್ ಕೊಹ್ಲಿ ಅವರನ್ನು ಬಣ್ಣಿಸಿದ್ದಾರೆ.
ಯುಪಿಎಸ್​ಸಿ ಟಾಪರ್ 22 ವರ್ಷದ​ ಅನನ್ಯಾ ರೆಡ್ಡಿ ವಿರಾಟ್ ಕೊಹ್ಲಿ ಅವರನ್ನು ಬಣ್ಣಿಸಿದ್ದಾರೆ.

ಏಪ್ರಿಲ್ 16ರಂದು ಯುಪಿಎಸ್​ಸಿ ಫಲಿತಾಂಶ ಹೊರಬಿದ್ದಿದೆ. ಅತ್ಯುನ್ನತ ಶ್ರೇಯಾಂಕ ಪಡೆದ ಅಭ್ಯರ್ಥಿಗಳು ತಮ್ಮ ಅನಿಸಿಕೆ ಹಾಗೂ ತಾನು ಬೆಳೆದು ಬಂದ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ತಾವು ಪಟ್ಟ ಕಷ್ಟ, ಶ್ರಮ ಮತ್ತು ಪ್ರಯತ್ನದ ಕುರಿತು ಹೇಳುತ್ತಾ ಸಂತಸ ವ್ಯಕ್ತಪಡಿಸಿದ್ದಾರೆ. ಅದರಂತೆ ಇದೇ ವೇಳೆ 22 ವರ್ಷದ ಡೋಣೂರು ಅನನ್ಯಾ ರೆಡ್ಡಿ ಯುಪಿಎಸ್​ಸಿಯಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದು, ತನಗೆ ವಿರಾಟ್​ ಕೊಹ್ಲಿ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ.

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) 2023ರ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 3ನೇ ರ್ಯಾಂಕ್ ಗಳಿಸಿರುವ 22 ವರ್ಷದ ಡೋಣೂರು ಅನನ್ಯಾ ರೆಡ್ಡಿ, ವಿರಾಟ್ ತನಗೆ ಪ್ರೇರಣೆ ಎಂದು ಹೇಳಿಕೆ ನೀಡಿದ್ದಾರೆ. ಅನನ್ಯಾ ಹೇಳಿಕೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕೊಹ್ಲಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಏಪ್ರಿಲ್ 16ರಂದು ಕೇಂದ್ರ ಲೋಕಸೇವಾ ಆಯೋಗ ಸಿವಿಲ್ ಸರ್ವೀಸಸ್ ಪರೀಕ್ಷೆ ರಿಸಲ್ಟ್​ ಪ್ರಕಟಿಸಿದ್ದು, ತೆಲಂಗಾಣದ ಮೆಹಬೂಬ್‌ನಗರದ ಡೋಣೂರು ಅನನ್ಯಾ, ಭಾರತಕ್ಕೆ ಮೂರನೇ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನನಗೆ ಕೊಹ್ಲಿಯೇ ಸ್ಫೂರ್ತಿ ಎಂದ ಅನನ್ಯಾ

ಅತ್ಯುತ್ತಮ ಸಾಧನೆಯ ಬಳಿಕ ಈಟಿವಿ ಜೊತೆ ಮಾತನಾಡಿರುವ ಅನನ್ಯಾ ಅವರು ತನಗೆ ವಿರಾಟ್ ಸ್ಫೂರ್ತಿ ಎಂದು ಭಾರತೀಯ ಕ್ರಿಕೆಟಿಗನನ್ನು ಬಣ್ಣಿಸಿದ್ದಾರೆ. ಅವರು ನನ್ನ ನೆಚ್ಚಿನ ಆಟಗಾರ. ನನಗೆ ಒಂದು ರೀತಿಯಾಗಿ ಸ್ಫೂರ್ತಿ. ಅವರಂತೆ ಎಂದಿಗೂ ಬಿಟ್ಟುಕೊಡದ ಮನೋಭಾವವಿದೆ ಎಂದು ನಾನು ಭಾವಿಸುತ್ತೇನೆ. ಅವರ ಶಿಸ್ತು ಮತ್ತು ಫಲಿತಾಂಶಗಳನ್ನು ಲೆಕ್ಕಿಸದೆ ನಾವು ಕೆಲಸ ಮಾಡಬೇಕು ಮತ್ತು ನಮ್ಮ ಗುರಿಗಳಿಗಾಗಿ ಶ್ರಮಿಸಬೇಕು ಎಂಬುದನ್ನು ವಿರಾಟ್ ಅವರಿಂದ ಪಡೆದಿದ್ದೇನೆ ಎಂದು ಹೇಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್‌ನ ಹಳೆಯ ವಿದ್ಯಾರ್ಥಿ ಆಗಿರುವ ಅನನ್ಯಾ ರೆಡ್ಡಿ, ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್‌ನಿಂದ ಭೂವಿಜ್ಞಾನದಲ್ಲಿ ಬಿಎ (ಆನರ್ಸ್) ಪದವಿ ಪಡೆದಿದ್ದಾರೆ. 2021ರಲ್ಲಿ ಪದವಿ ಪಡೆದ ನಂತರ, ಅವರು ಹೈದರಾಬಾದ್‌ನಲ್ಲಿ ಯುಪಿಎಸ್​ಸಿ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದ್ದರು. ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಚಿಕ್ಕ ವಯಸ್ಸಲ್ಲೇ ಸಾಧಿಸಿದ ಆಕೆಯ ಸಾಧನೆಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಬಾಲ್ಯದಿಂದಲೂ, ನನ್ನ ಮನಸ್ಸಿನಲ್ಲಿ ಈ ಕಲ್ಪನೆ (ಯುಪಿಎಸ್​ಸಿ ಮಾಡುವ) ಇತ್ತು. ನನ್ನ ಅಜ್ಜ ನನಗೆ ಯುಪಿಎಸ್​​ಸಿ ಕುರಿತು ಪರಿಚಯ ಮಾಡಿಕೊಟ್ಟರು. ಹಾಗಾಗಿ ನನ್ನ ಪದವಿ ಪೂರ್ಣಗೊಳಿಸಿದ ನಂತರ ನಾನು ವೃತ್ತಿಜೀವನದ ಅವಕಾಶ ಹುಡುಕಲು ಪ್ರಾರಂಭಿಸಿದೆ. ನಾನು ನಾಗರಿಕ ಸೇವೆ ಮಾಡಿದರೆ, ನನ್ನ ದೇಶಕ್ಕೆ ಸೇವೆ ಸಲ್ಲಿಸಬಹುದು, ಆಡಳಿತಾತ್ಮಕ ಕರ್ತವ್ಯ ಸಾಧಿಸಬಹುದು ಎಂದು ಅರಿತುಕೊಂಡೆ. ನನಗೆ ಒಂದು ವಿಶಿಷ್ಟವಾದ ಅನುಭವ ನೀಡಿತು ಎಂದು ಹೇಳಿದ್ದಾರೆ.

ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿ ಆದಿತ್ಯ ಶ್ರೀವಾಸ್ತವ ಅವರು ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ 2023 ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಪ್ರಸ್ತುತ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ ಉದ್ಯೋಗದಲ್ಲಿರುವ ಒಡಿಶಾ ಮೂಲದ ಅನಿಮೇಶ್ ಪ್ರಧಾನ್ ಎರಡನೇ ರ್ಯಾಂಕ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಅನನ್ಯಾ ರೆಡ್ಡಿ ಇದ್ದಾರೆ.

ಐಪಿಎಲ್​ನಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ 17ನೇ ಆವೃತ್ತಿಯ ಐಪಿಎಲ್​ನಲ್ಲಿ ಉತ್ತಮ ಫಾರ್ಮ್​ನಲ್ಲಿದ್ದಾರೆ. ಪ್ರಸ್ತುತ ಆರೆಂಜ್ ಕ್ಯಾಪ್ ಪಡೆದಿರುವ ಕಿಂಗ್, ಆಡಿರುವ 7 ಪಂದ್ಯಗಳಲ್ಲಿ 72.20ರ ಸರಾಸರಿ ಮತ್ತು 147.35ರ ಅತ್ಯುತ್ತಮ ಸ್ಟ್ರೈಕ್​ರೇಟ್‌ನಲ್ಲಿ 2 ಅರ್ಧಶತಕ, 1 ಶತಕ 361 ರನ್​ ಗಳಿಸಿದ್ದಾರೆ. ಕೊಹ್ಲಿ 35 ಬೌಂಡರಿ, 14 ಸಿಕ್ಸರ್‌ ಸಿಡಿಸಿದ್ದಾರೆ. ಇದರ ಮಧ್ಯೆ ಟಿ20 ವಿಶ್ವಕಪ್​ಗೆ ಆಯ್ಕೆಯ ಕುರಿತು ಚರ್ಚೆ ನಡೆಯುತ್ತಿದೆ. ವಿಶ್ವಕಪ್​​ನಲ್ಲಿ ವಿರಾಟ್​​ರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸಲು ಚಿಂತನೆ ನಡೆಸಿದೆ.

mysore-dasara_Entry_Point