ಪಾಕಿಸ್ತಾನಕ್ಕೆ ಭಾರತ ಬರದಿದ್ದರೆ, ನಾವು ಕೂಡ..; ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರಶೀದ್ ಲತೀಫ್ ಎಚ್ಚರಿಕೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಪಾಕಿಸ್ತಾನಕ್ಕೆ ಭಾರತ ಬರದಿದ್ದರೆ, ನಾವು ಕೂಡ..; ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರಶೀದ್ ಲತೀಫ್ ಎಚ್ಚರಿಕೆ

ಪಾಕಿಸ್ತಾನಕ್ಕೆ ಭಾರತ ಬರದಿದ್ದರೆ, ನಾವು ಕೂಡ..; ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರಶೀದ್ ಲತೀಫ್ ಎಚ್ಚರಿಕೆ

Rashid Latif: ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಬರದಿರಲು ಭಾರತ ತಂಡವು ಭದ್ರತಾ ವಿಷಯವನ್ನು ಮುಂದಿಟ್ಟಿದೆ. ಆದರೆ ಇದು ಸರಿಯಾದ ಕಾರಣವಲ್ಲ. ಒಂದು ತಂಡವು ಭಾಗವಹಿಸಲು ನಿರಾಕರಿಸಿದರೆ, ಅವರು ತಮ್ಮ ನಿರ್ಧಾರ ಸಮರ್ಥಿಸಲು ಬಲವಾದ ಕಾರಣವನ್ನು ಹೊಂದಿರಬೇಕು ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಭಾರತ ಬರದಿದ್ದರೆ, ನಾವು ಕೂಡ..; ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರಶೀದ್ ಲತೀಫ್ ಎಚ್ಚರಿಕೆ
ಪಾಕಿಸ್ತಾನಕ್ಕೆ ಭಾರತ ಬರದಿದ್ದರೆ, ನಾವು ಕೂಡ..; ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರಶೀದ್ ಲತೀಫ್ ಎಚ್ಚರಿಕೆ

ಟಿ20 ವಿಶ್ವಕಪ್ 2024 (T20 World Cup 2024) ಗೆದ್ದು ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಂಡ ಟೀಮ್ ಇಂಡಿಯಾ (Team India) ಇದೀಗ ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯುವ ಫೆಬ್ರವರಿ-ಮಾರ್ಚ್​​ನಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (ICC Champions Trophy 2025) ಸಜ್ಜಾಗುತ್ತಿದೆ. ಆದರೆ, ಭಾರತ, ನೆರೆಯ ರಾಷ್ಟ್ರಕ್ಕೆ ಪ್ರಯಾಣ ಬೆಳೆಸುವುದೇ ಎಂಬ ಗೊಂದಲ ಇನ್ನೂ ಮುಂದುವರೆದಿದೆ. ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಭಾರತ ಪ್ರಯಾಣಿಸುವುದಿಲ್ಲ ಎಂಬ ವರದಿಯಾಗಿದೆ. ಹೈಬ್ರಿಡ್ ಮಾದರಿಯಲ್ಲಿ ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ ಎಂಬ ವರದಿಗಳೂ ಇವೆ. ಇದೀಗ ಪಾಕಿಸ್ತಾನದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ರಶೀದ್ ಲತೀಫ್ ಟೀಮ್ ಇಂಡಿಯಾಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಜಿಯೋ ನ್ಯೂಸ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ರಶೀದ್ ಲತೀಫ್, ಚಾಂಪಿಯನ್ಸ್ ಟ್ರೋಫಿ ಐಸಿಸಿ ಈವೆಂಟ್ ಎಂಬುದನ್ನು ಮರೆಯಬಾರದು. ಇದಕ್ಕಾಗಿ ಐಸಿಸಿ ಹಲವು ವರ್ಷಗಳಿಂದ ಸಿದ್ದತೆ ನಡೆಸುತ್ತಿದೆ. ತಂಡಗಳ ಬಗ್ಗೆ ಪ್ರಸಾರಕರು ಮತ್ತು ಪ್ರಾಯೋಜಕರು ಸಹಿ ಮಾಡಿದ್ದಾರೆ. ಆದರೆ ಭಾರತ ಬರದಿರಲು ಭದ್ರತಾ ವಿಷಯ ಪ್ರಮುಖ ಕಾರಣವಲ್ಲ. ಒಂದು ತಂಡವು ಭಾಗವಹಿಸಲು ನಿರಾಕರಿಸಿದರೆ, ಅವರು ತಮ್ಮ ನಿರ್ಧಾರ ಸಮರ್ಥಿಸಲು ಬಲವಾದ ಕಾರಣವನ್ನು ಹೊಂದಿರಬೇಕು ಎಂದು ಹೇಳಿದ್ದಾರೆ.

ಬರುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ ಲತೀಫ್

ಭಾರತ ಮತ್ತು ಪಾಕಿಸ್ತಾನದ ಕಾರಣದಿಂದಾಗಿ ಐಸಿಸಿ ಅಸ್ತಿತ್ವದಲ್ಲಿದೆ. ಪಾಕಿಸ್ತಾನ ಸರ್ಕಾರವೂ ನಾವು ಆಡುವುದಿಲ್ಲ ಎಂದು ಹೇಳಿದರೆ, ಯಾರೂ ಪಂದ್ಯವನ್ನು ವೀಕ್ಷಿಸುವುದಿಲ್ಲ. ಒಂದು ವೇಳೆ ಅದೇ ನಡೆದರೆ ಐಸಿಸಿ ಯಾವುದಕ್ಕೂ ಪ್ರಯೋಜನ ಇಲ್ಲ ಎಂಬರ್ಥ ಎಂದು ರಶೀದ್ ಲತೀಫ್ ಹೇಳಿಕೆ ನೀಡಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿ ಆಡಲು ಭಾರತ, ಪಾಕಿಸ್ತಾನಕ್ಕೆ ಬರದಿದ್ದರೆ, ಪಾಕಿಸ್ತಾನ ಕೂಡ ಟೂರ್ನಿ ಆಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಇತ್ತ ಭಾರತ ತಂಡವು ದ್ವಿಪಕ್ಷೀಯ ಪಂದ್ಯಗಳನ್ನು ಆಡಲು ಬಯಸುವುದಿಲ್ಲ. ಮತ್ತೊಂದೆಡೆ ಐಸಿಸಿ ಟೂರ್ನಿಗೂ ಬರುವುದಿಲ್ಲ ಎಂದರೆ ಹೇಗೆ? ಇದು ಐಸಿಸಿ ಟೂರ್ನಿ. ಬರುವುದಿಲ್ಲ ಎಂದು ಹೇಳುವಂತಿಲ್ಲ ಎಂದಿದ್ದಾರೆ.

ಭಾರತ ಬರದಿದ್ದರೆ, ನಾವು ಆಡಲ್ಲ ಎಂದ ಲತೀಫ್

ಭಾರತ ತಂಡವು ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಭಾರತ ಬರದಿದ್ದರೆ, ಪಾಕಿಸ್ತಾನ ತಂಡವು ಟೂರ್ನಿಯಲ್ಲಿ ಭಾಗವಹಿಸುವ ಕುರಿತು ದೊಡ್ಡ ಹೆಜ್ಜೆ ಇಡಲಿದೆ ಎಂದು ಹೇಳಿದ್ದಾರೆ. ಆದರೆ ಇದೇ ಹೇಳಿಕೆಗೆ ಸಂಬಂಧಿಸಿ ನೆಟ್ಟಿಗರು, ಟ್ರೋಲ್ ಮಾಡುತ್ತಿದ್ದಾರೆ. ಭಾರತ ಆಡಲು ಬರದಿದ್ದರೆ ನೀವೇಕೆ ಆಡುವುದಿಲ್ಲ. ಇದು ಕಾಮಿಡಿಯಾಗಿದೆ. ನಿಮ್ಮ ದೇಶದಲ್ಲೇ ನಡೆಯುವ ಟೂರ್ನಿಯನ್ನು ತೊರೆದರೆ ಹೇಗೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಆದರೆ ಪಾಕಿಸ್ತಾನದ ಅಭಿಮಾನಿಗಳೇ ಟ್ರೋಲ್ ಮಾಡುತ್ತಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ದೇಶಗಳಾವ್ಯಾವು?

ಎ ಗುಂಪಿನಲ್ಲಿ ಭಾರತ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ

ಬಿ ಗುಂಪಿನಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ

Whats_app_banner