IND vs PAK Asia Cup 2023 Highlights: ನಿಲ್ಲದ ಮಳೆ; ಇಂಡೋ-ಪಾಕ್‌ ಪಂದ್ಯ ರದ್ದು; ಸೂಪರ್‌ ಫೋರ್‌ ಲಗ್ಗೆ ಇಟ್ಟ ಪಾಕಿಸ್ತಾನ
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Pak Asia Cup 2023 Highlights: ನಿಲ್ಲದ ಮಳೆ; ಇಂಡೋ-ಪಾಕ್‌ ಪಂದ್ಯ ರದ್ದು; ಸೂಪರ್‌ ಫೋರ್‌ ಲಗ್ಗೆ ಇಟ್ಟ ಪಾಕಿಸ್ತಾನ

ಭಾರತ, ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದ ಲೈವ್‌ ಅಪ್ಡೇಟ್ಸ್(AP)

IND vs PAK Asia Cup 2023 Highlights: ನಿಲ್ಲದ ಮಳೆ; ಇಂಡೋ-ಪಾಕ್‌ ಪಂದ್ಯ ರದ್ದು; ಸೂಪರ್‌ ಫೋರ್‌ ಲಗ್ಗೆ ಇಟ್ಟ ಪಾಕಿಸ್ತಾನ

05:37 PM ISTSep 02, 2023 09:59 PM Jayaraj
  • twitter
  • Share on Facebook
05:37 PM IST

IND vs PAK Asia Cup 2023 Highlights: ಏಷ್ಯಾಕಪ್‌ 2023ರ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯವು ಫಲಿತಾಂಶವಿಲ್ಲದೆ ರದ್ದಾಗಿದೆ.

Sat, 02 Sep 202305:27 PM IST

ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಿದೆ ಭಾರತ

ಭಾರತವು ಸೂಪರ್‌ ಫೋರ್‌ ಹಂತವನ್ನು ಪ್ರವೇಶಿಸಬೇಕಾದರೆ ಸೆಪ್ಟೆಂಬರ್‌ 4ರಂದು ಇದೇ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ನೇಪಾಳ ತಂಡದ ವಿರುದ್ಧ ಗೆಲ್ಲಬೇಕು. ಒಂದು ವೇಳೆ ಎ ಗುಂಪಿನ ಅಗ್ರಸ್ಥಾನಿಯಾಗಿ ಸೂಪರ್‌ ಫೋರ್‌ ಹಂತವನ್ನು ಪ್ರವೇಶಿಬೇಕಿದ್ದರೆ, ಭರ್ಜರಿ ಅಂತರದಿಂದ ನೇಪಾಳವನ್ನು ಮಣಿಸಬೇಕಾಗುತ್ತದೆ. ಆಗ ರನ್‌ರೇಟ್‌ ಲೆಕ್ಕಕ್ಕೆ ಬರಲಿದೆ. ನೇಪಾಳ ಇದೇ ಮೊದಲ ಬಾರಿಗೆ ಏಷ್ಯಾಕಪ್‌ ಟೂರ್ನಿಗೆ ಅರ್ಹತೆ ಪಡೆದಿದ್ದು, ಮೊದಲ ಬಾರಿಗೆ ಟೀಮ್‌ ಇಂಡಿಯಾವನ್ನು ಎದುರಿಸಲಿದೆ. ನೇಪಾಳ ವಿರುದ್ಧ ಭಾರತವು ಸುಲಭ ಜಯ ಸಾಧಿಸುವ ವಿಶ್ವಾಸದಲ್ಲಿದೆ. ಇಲ್ಲಿಗೆ ಇಂದಿನ ಲೈವ್‌ ಅಪ್ಡೇಟ್ಸ್‌ ಮುಕ್ತಾಯ ಮಾಡುತ್ತಿದ್ದೇವೆ.

Sat, 02 Sep 202304:33 PM IST

ಪಂದ್ಯ ರದ್ದು

ಕ್ಯಾಂಡಿಯಲ್ಲಿ ಮಳೆ ನಿಲ್ಲದ ಕಾರಣ ಇಂಡೋ-ಪಾಕ್‌ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಪಾಕಿಸ್ತಾನ ತಂಡವು ಸೂಪರ್‌ ಫೋರ್‌ ಹಂತಕ್ಕೆ ಲಗ್ಗೆ ಇಟ್ಟಿದೆ.

ಚೇಸಿಂಗ್‌ ಆರಂಭಕ್ಕೂ ಮುನ್ನವೇ ಆರಂಭವಾದ ಮಳೆ ನಿಲ್ಲದ ಕಾರಣ ಓವರ್‌ ಕಡಿತಗೊಳ್ಳುವ ಸಾಧ್ಯತೆ ಇತ್ತು. ಇದೀಗ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಒಂದೇ ಒಂದು ಎಸೆತ ಕೂಡಾ ಕಾಣದೆ ಪಂದ್ಯವನ್ನು ಫಲಿತಾಂಶವಿಲ್ಲದೆ ರದ್ದುಪಡಿಸಲಾಗಿದೆ. ಹೀಗಾಗಿ ಉಭಯ ತಂಡಗಳಿಗೂ ತಲಾ ಒಂದು ಅಂಕವನ್ನು ನೀಡಲಾಗುತ್ತದೆ. ಆ ಮೂಲಕ ಪಾಕಿಸ್ತಾನ ತಂಡವು ಸೂಪರ್‌ ಫೋರ್‌ ಹಂತಕ್ಕೆ ಲಗ್ಗೆ ಇಟ್ಟಿದೆ.

Sat, 02 Sep 202304:05 PM IST

ಓವರ್‌ ಕಡಿತಗೊಂಡರೆ ಪಾಕ್‌ಗೆ ಎಷ್ಟು ಗುರಿ ನೀಡಲಾಗುತ್ತದೆ?

ಭಾರಿ ಮಳೆಯಿಂದಾಗಿ, ಚೇಸಿಂಗ್‌ ವೇಳೆ ಓವರ್‌ಗಳು ಕಡಿತಗೊಳ್ಳುವುದು ಖಚಿತವಾಗಿದೆ. ಒಂದು ವೇಳೆ 20 ಓವರ್‌ಗಳ ಪಂದ್ಯವಾದರೆ, ಪಾಕಿಸ್ತಾನ 155 ರನ್‌ ಗುರಿ ನೀಡಲಾಗುತ್ತದೆ. ಇದೇ ವೇಳೆ 30 ಓವರ್‌ಗಳಿಗೆ ಇನ್ನಿಂಗ್ಸ್‌ ಇಳಿಸಿದರೆ 203  ರನ್‌ ಗುರಿ ನೀಡಲಾಗುತ್ತದೆ. ಇದೇ ವೇಳೆ 40 ಓವರ್‌ಗಳ ಇನ್ನಿಂಗ್ಸ್‌ ನಡೆದರೆ, ಪಾಕ್‌ ಗೆಲುವಿಗೆ 239 ರನ್‌ ಗಳಿಸಬೇಕಾಗುತ್ತದೆ.

Sat, 02 Sep 202303:36 PM IST

ಪಾಕಿಸ್ತಾನದ ಇನ್ನಿಂಗ್ಸ್​​ಗೆ ಮಳೆ ಅಡ್ಡಿ

267 ರನ್​ಗಳ ಚೇಸಿಂಗ್​ ನಡೆಸಲು ಸಿದ್ಧವಾಗಿರುವ ಪಾಕಿಸ್ತಾನ ತಂಡಕ್ಕೆ ಮಳೆ ಅಡ್ಡಿಯಾಗಿದೆ. ಇದೀಗ ಎರಡನೇ ಇನಿಂಗ್ಸ್​ನಲ್ಲಿ ಪಾಕಿಸ್ತಾನ 267 ರನ್ ಗುರಿ ಬೆನ್ನತ್ತಬೇಕಿದೆ.

Sat, 02 Sep 202302:33 PM IST

ಭಾರತದ ವೇಗಿಗಳ ಕೈಯಲ್ಲಿ ಪಂದ್ಯ

ಮಳೆಯ ಅಡ್ಡಿ ಮತ್ತು ಪಾಕ್‌ ವೇಗಿಗಳ ಆರಂಭಿಕ ಪ್ರಾಧಾನ್ಯತೆಯ ಹೊರತಾಗಿಯೂ 266 ರನ್‌ಗಳ ಸ್ಪರ್ಧಾತ್ಮಕ ಹಾಗೂ ಸವಾಲಿನ ಮೊತ್ತ ಕಲೆ ಹಾಕುವಲ್ಲಿ ಭಾರತ ಯಶಸ್ವಿಯಾಯ್ತು. ಭಾರತದ ಎಲ್ಲಾ‌ ಹತ್ತು ವಿಕೆಟ್‌ಗಳನ್ನು‌ ವೇಗಿಗಳು ಕಬಳಿಸಿರುವುದು ವಿಶೇಷ. ಒಂದು ಹಂತದಲ್ಲಿ 66 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಭಾರತವನ್ನು ಇಶಾನ್‌ ಕಿಶನ್‌ ಮತ್ತು ಹಾರ್ದಿಕ್‌ ಪಾಂಡ್ಯ ಮೇಲೆತ್ತಿದರು. ಇವರ ತಲಾ ಅರ್ಧಶತಕ ಮತ್ತು ಶತಕದ ಜೊತೆಯಾಟದ ನೆರವಿನಿಂದ ಭಾರತ 200 ರನ್‌ಗಳ ಗಡಿ ದಾಟಿತು. ಒಂದು ಹಂತದಲ್ಲಿ 239/5 ವಿಕೆಟ್‌ ಕಳೆದುಕೊಂಡಿದ್ದ ಭಾರತ ಬಳಿಕ ಮತ್ತೆ ದಿಢೀರನೆ ಕುಸಿತ ಕಂಡು 266/10 ಎಲ್ಲಾ ವಿಕೆಟ್‌ ಕಳೆದುಕೊಂಡಿತು. ಇದೀಗ ಭಾರತ ಬೌಲರ್‌ಗಳ ಕೈಯಲ್ಲಿ ಪಂದ್ಯವಿದೆ.

Sat, 02 Sep 202302:18 PM IST

48.5 ಓವರ್‌ಗಳಲ್ಲಿ 266 ರನ್‌ಗೆ ಭಾರತ ಆಲೌಟ್

266 ರನ್‌ಗೆ ಭಾರತ ಆಲೌಟ್

48.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡ ಭಾರತ‌

ಪಾಕಿಸ್ತಾನ ಗೆಲುವುಗೆ ಬೇಕು 267 ರನ್

ಪಾಕಿಸ್ತಾನ ವೇಗದ ಬೌಲರ್‌ಗಳ ಆರ್ಭಟ

ಎಲ್ಲಾ ಹತ್ತು ವಿಕೆಟ್‌ ಕಬಳಿಸಿದ ವೇಗಿಗಳು

ಅಫ್ರಿದಿ 4, ನಸೀಮ್‌ ಶಾ ಮತ್ತು ಹ್ಯಾರಿಸ್‌ ರೌಫ್‌ ತಲಾ 3 ವಿಕೆಟ್

Sat, 02 Sep 202302:13 PM IST

48.2 ಓವರ್‌ಗಳಲ್ಲಿ ಭಾರತ 261/9

48.2 ಓವರ್‌ಗಳಲ್ಲಿ ಭಾರತ 261/9

ಕುಲ್ದೀಪ್‌ ವಿಕೆಟ್‌ ಪಡೆದ ನಸೀಮ್‌ ಶಾ

Sat, 02 Sep 202301:53 PM IST

44.2 ಓವರ್‌ ಬಳಿಕ 242/8

44.2 ಓವರ್‌ ಬಳಿಕ ಭಾರತ 242/8

ಏಳು ಎಸೆತಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡ ಭಾರತ

ನಸೀಮ್‌ ಶಾಗೆ ವಿಕೆಟ್‌ ಒಪ್ಪಿಸಿದ ಶಾರ್ದುಲ್‌ ಠಾಕೂರ್

Sat, 02 Sep 202301:51 PM IST

ಜಡೇಜಾ ವಿಕೆಟ್‌ ಕಬಳಿಸಿದ ಅಫ್ರಿದಿ

ರವೀಂದ್ರ ಜಡೇಜಾ ವಿಕೆಟ್‌ ಕಬಳಿಸಿದ ಅಫ್ರಿದಿ

ಒಂದೇ ಓವರ್‌ನಲ್ಲಿ ಹಾರ್ದಿಕ್‌ ಬಳಿಕ ಜಡೇಜಾ ಔಟ್

Sat, 02 Sep 202301:47 PM IST

ಹಾರ್ದಿಕ್‌ ಪಾಂಡ್ಯ ಔಟ್‌

ಹಾರ್ದಿಕ್‌ ಪಾಂಡ್ಯ ಔಟ್‌

87 ರನ್‌ ಗಳಿಸಿ ಅಫ್ರಿದಿಗೆ ವಿಕೆಟ್‌ ಒಪ್ಪಿಸಿದ ಹಾರ್ದಿಕ್‌

ಉತ್ತಮ ಕ್ಯಾಚ್‌ ಹಿಡಿದ ಅಘಾ ಸಲ್ಮಾನ್

Sat, 02 Sep 202301:44 PM IST

43 ಓವರ್‌ ಬಳಿಕ ಭಾರತ 239/5

43 ಓವರ್‌ ಬಳಿಕ ಭಾರತ 239/5

87 ರನ್‌ ಗಳಿಸಿ ಆಡುತ್ತಿರುವ ಹಾರ್ದಿಕ್

ಪಾಂಡ್ಯಗೆ ಜಡೇಜಾ ಸಾಥ್

Sat, 02 Sep 202301:31 PM IST

40‌ ಓವರ್‌ ಬಳಿಕ ಭಾರತ 221/5

40‌ ಓವರ್‌ ಬಳಿಕ ಭಾರತ 221/5

83 ಎಸೆತಗಳಲ್ಲಿ 80 ರನ್‌ ಗಳಿಸಿದ ಹಾರ್ದಿಕ್‌

ಪಾಂಡ್ಯಾಗೆ ಜಡೇಜಾ ಸಾಥ್‌

Sat, 02 Sep 202301:30 PM IST

82 ರನ್‌ ಗಳಿಸಿ ಕಿಶನ್‌ ಔಟ್

82 ರನ್‌ ಗಳಿಸಿ ಕಿಶನ್‌ ಔಟ್‌

ಇಶಾನ್‌ ವಿಕೆಟ್‌ ಪಡೆದ ಹ್ಯಾರಿಸ್‌ ರೌಫ್‌

81 ಎಸೆತಗಳಲ್ಲಿ 82 ರನ್‌ ಕಲೆ ಹಾಕಿದ ಬ್ಯಾಟರ್‌

ಪಾಂಡ್ಯ, ಇಶಾನ್ 138‌ ರನ್‌ಗಳ ಜೊತೆಯಾಟ ಮುರಿದ ರೌಫ್

37.3 ಓವರ್‌ ಬಳಿಕ ಭಾರತ : 204/5

Sat, 02 Sep 202301:17 PM IST

200ರ ಗಡಿ ದಾಟಿದ ಭಾರತ

ಹಾರ್ದಿಕ್‌, ಕಿಶನ್‌ ಉತ್ತಮ ಜೊತೆಯಾಟ

200ರ ಗಡಿ ದಾಟಿದ ಭಾರತ

37 ಓವರ್‌ ಬಳಿಕ ಭಾರತ 203/4

Sat, 02 Sep 202301:02 PM IST

ಹಾರ್ದಿಕ್‌ ಪಾಂಡ್ಯ ಅರ್ಧಶತಕ

ಹಾರ್ದಿಕ್‌ ಪಾಂಡ್ಯ ಅರ್ಧಶತಕ

ಇಶಾನ್‌ ಬಳಿಕ ಅರ್ಧಶತಕ ಸಿಡಿಸಿದ ಹಾರ್ದಿಕ್‌

ಉಭಯ ಆಟಗಾರರಿಂದ ಶತಕದ ಜೊತೆಯಾಟ

34 ಓವರ್ ಅಂತ್ಯಕ್ಕೆ ಭಾರತ 178/4

Sat, 02 Sep 202312:58 PM IST

ಶತಕದ ಜೊತೆಯಾಟವಾಡಿದ ಹಾರ್ದಿಕ್-ಕಿಶನ್

ಹಾರ್ದಿಕ್-ಕಿಶನ್‌ ಶತಕದ ಜೊತೆಯಾಟ

114 ಎಸೆತಗಳಲ್ಲಿ 102 ರನ್‌ ಪೇರಿಸಿದ ಜೋಡಿ

33 ಓವರ್‌ ಬಳಿಕ ಭಾರತ 168/4 

Sat, 02 Sep 202312:39 PM IST

ಕಿಶನ್‌ ಆಕರ್ಷಕ ಅರ್ಧಶತಕ

ಇಶಾನ್ ಕಿಶನ್‌ ಆಕರ್ಷಕ ಅರ್ಧಶತಕ 

ಏಕದಿನ ಕ್ರಿಕೆಟ್‌ನಲ್ಲಿ 7ನೇ ಫಿಫ್ಟಿ

ಹಾರ್ದಿಕ್‌ ಪಾಂಡ್ಯ ಉತ್ತಮ ಸಾಥ್

90 ಎಸೆತಗಳಲ್ಲಿ 81 ರನ್‌ ಜೊತೆಯಾಟವಾಡಿದ ಜೋಡಿ

Sat, 02 Sep 202312:23 PM IST

ಭಾರತ 127/4

25 ಓವರ್‌ಗಳ ಬಳಿಕ ಭಾರತ 127/4

ಕಿಶನ್‌ ಮತ್ತು ಹಾರ್ದಿಕ್‌ ಅರ್ಧಶತಕದ ಜೊತೆಯಾಟ

ಕುಸಿದಿದ್ದ ಭಾರತಕ್ಕೆ ಆಸರೆಯಾದ ಜೋಡಿ

46 ಎಸೆತಗಳಿಂದ 43 ರನ್‌ ಗಳಿಸಿದ ಕಿಶನ್‌

34 ಎಸೆತಗಳಿಂದ ಹಾರ್ದಿಕ್‌ 30 ರನ್‌

ಇಬ್ಬರಿಂದಲೂ ಬ್ಯಾಟಿಂಗ್‌ ಮುಂದುವರಿಕೆ

Sat, 02 Sep 202312:04 PM IST

1‌00 ರನ್‌ ಗಡಿ ದಾಟಿದ ಭಾರತ

ಕಿಶನ್‌, ಹಾರ್ದಿಕ್‌ ಜೋಡಿಯಿಂದ ಜೊತೆಯಾಟ

ನೂರು ರನ್‌ ಗಡಿ ದಾಟಿದ ಭಾರತ

20 ಓವರ್‌ ಬಳಿಕ ಭಾರತ102/4 

32 ರನ್‌ ಗಳಿಸಿ ಆಡುತ್ತಿರುವ ಇಶಾನ್‌ ಕಿಶನ್

Sat, 02 Sep 202311:56 AM IST

ಭಾರತ 17 ಓವರ್‌ಗಳಲ್ಲಿ 89/4

17 ಓವರ್‌ಗಳಲ್ಲಿ ಭಾರತ 89/4 ರನ್‌ ಗಳಿಸಿದೆ

ಇಶಾನ್‌ ಕಿಶನ್‌ ವೇಗದ ಆಟ ಆಡುತ್ತಿದ್ದಾರೆ.

Sat, 02 Sep 202311:41 AM IST

ನಾಲ್ಕು ವಿಕೆಟ್‌ ಕಳೆದುಕೊಂಡ ಭಾರತ

32 ಎಸೆತಗಳಲ್ಲಿ 10 ರನ್‌ ಗಳಿಸಿ ಶುಭ್ಮನ್‌ ಗಿಲ್‌ ಔಟ್‌

ನಾಲ್ಕು ವಿಕೆಟ್‌ ಕಳೆದುಕೊಂಡ ಭಾರತ

14.3 ಓವರ್‌ ಬಳಿಕ 71/4

ಶುಭ್ಮನ್‌ ಗಿಲ್‌ ವಿಕೆಟ್‌ ಪಡೆದ ಹ್ಯಾರಿಸ್‌ ರೌಫ್

Sat, 02 Sep 202311:37 AM IST

ಭಾರತ 66/3

14 ಓವರ್‌ ಬಳಿಕ ಭಾರತ 66/3

ಗಿಲ್‌ ಮತ್ತು ಕಿಶನ್‌ ಜವಾಬ್ದಾರಿಯುತ ಆಟ

18 ರನ್‌ಗಳ ಜೊತೆಯಾಟ ನೀಡಿದ ಜೋಡಿ

Sat, 02 Sep 202311:30 AM IST

12 ಓವರ್‌ ಬಳಿಕ ಭಾರತ 58/3

12 ಓವರ್‌ ಬಳಿಕ ಭಾರತ 58/3

ರೌಫ್‌ ಎಸೆತಕ್ಕೆ ಸಿಕ್ಸರ್‌ ಸಿಡಿಸಿದ ಇಶಾನ್‌ ಕಿಶನ್‌

Sat, 02 Sep 202311:10 AM IST

ಮತ್ತೆ ವರುಣಾಗಮನ

ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿ

ಮೈದಾನಕ್ಕೆ ಕವರ್ಸ್‌ ಹಾಕಿದ ಸಿಬ್ಬಂದಿ

11.2 ಓವರ್‌ಗಳಲ್ಲಿ ಭಾರತ 51/3

ಕಿಶನ್‌ ಮತ್ತು ಗಿಲ್‌ ಬ್ಯಾಟಿಂಗ್

Sat, 02 Sep 202310:59 AM IST

ಭಾರತದ ಮೂರು ವಿಕೆಟ್‌ ಪತನ

ಕ್ರೀಸ್‌ಕಚ್ಚಿ ಆಡುತ್ತಿದ್ದ ಅಯ್ಯರ್‌ ಔಟ್‌

ಕ್ಯಾಚ್‌ ನೀಡಿ ರೌಫ್‌ಗೆ ವಿಕೆಟ್‌ ಒಪ್ಪಿಸಿದ ಶ್ರೇಯಸ್‌

ಭಾರತದ ಮೂರು ವಿಕೆಟ್‌ ಪತನ

9.5 ಓವರ್‌ ಬಳಿಕ ಭಾರತ 48/3

ಪವರ್‌ಪ್ಲೇ ಒಳಗೆ ಭಾರತಕ್ಕೆ ಸಂಕಷ್ಟ

Sat, 02 Sep 202310:54 AM IST

9 ಓವರ್‌ ಬಳಿಕ ಭಾರತ 42/2

9 ಓವರ್‌ ಬಳಿಕ ಭಾರತ 42/2

ಬ್ಯಾಟ್‌ ಬೀಸುತ್ತಿರುವ ಗಿಲ್‌, ಶ್ರೇಯಸ್‌

8 ಎಸೆತಗಳಿಂದ 2 ಬೌಂಡರಿ ಸಹಿತ 14 ರನ್‌ ಪೇರಿಸಿದ ಅಯ್ಯರ್

Sat, 02 Sep 202310:43 AM IST

ವಿರಾಟ್‌ ಕೊಹ್ಲಿ ಔಟ್

ರೋಹಿತ್‌ ಬಳಿಕ ಕೊಹ್ಲಿ4(7) ವಿಕೆಟ್‌ ಪತನ

ಇಬ್ಬರ ವಿಕೆಟ್‌ ಪಡೆದ ಅಫ್ರಿದಿ

ಇನ್‌ಸೈಡ್‌ ಎಡ್ಜ್‌ ಆಗಿ ವಿಕೆಟ್‌ ಕಳೆದುಕೊಂಡ ವಿರಾಟ್‌

ಆರಂಭದಲ್ಲೇ ಮುನ್ನಡೆ ಪಡೆದ ಪಾಕ್‌

ಭಾರತಕ್ಕೆ ಆರಂಭಿಕ ಆಘಾತ

Sat, 02 Sep 202310:30 AM IST

ರೋಹಿತ್‌ ಶರ್ಮಾ ಔಟ್

ಮೊದಲ ವಿಕೆಟ್‌ ಕಳೆದುಕೊಂಡ ಭಾರತ

ರೋಹಿತ್ ಶರ್ಮಾಗೆ ಮತ್ತೆ ಕಂಟಕರಾದ ಶಾಹೀನ್‌ ಅಫ್ರಿದಿ

11(22) ರನ್‌ ಗಳಿಸಿದ ನಾಯಕನ ವಿಕೆಟ್‌ ಪಡೆದ ಅಫ್ರಿದಿ

5 ಓವರ್‌ ಬಳಿಕ ಭಾರತ 15/1

Sat, 02 Sep 202310:25 AM IST

ಪಂದ್ಯ ಪುನರಾರಂಭ

ಮಳೆ ನಿಂತ ಹಿನ್ನೆಲೆಯಲ್ಲಿ ಪಂದ್ಯವನ್ನು ಪುನರಾರಾಂಭಿಸಲಾಗಿದೆ. ಅಂಪೈರ್‌ಗಳು ಮತ್ತು ಟೀಮ್‌ ಇಂಡಿಯಾ ಬ್ಯಾಟರ್‌ಗಳು ಮತ್ತೆ ಮೈದಾನ ಪ್ರವೇಶಿಸಿದ್ದಾರೆ. 

Sat, 02 Sep 202310:20 AM IST

ನಿಂತ ಮಳೆ

ಕ್ಯಾಂಡಿಯಲ್ಲಿ ಸದ್ಯ ಮಳೆ ನಿಂತಿದೆ. ಹೀಗಾಗಿ ಪಿಚ್‌ ಮೇಲೆ ಹಾಕಲಾಗಿದ್ದ ಕವರ್‌ಗಳನ್ನು ಮೈದಾನದ ಸಿಬ್ಬಂದಿ ತೆಗೆದಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಪಂದ್ಯ ಪುನರಾರಂಭಗೊಳ್ಳುವ ಸಾಧ್ಯತೆ ಇದೆ.

Sat, 02 Sep 202309:58 AM IST

ಭಾರತ ವಿಕೆಟ್‌ ನಷ್ಟವಿಲ್ಲದೆ 15 ರನ್

4.2 ಓವರ್‌ ವೇಳೆ ಮಳೆ.

ಭಾರತ ವಿಕೆಟ್‌ ನಷ್ಟವಿಲ್ಲದೆ 15 ರನ್. 

ಮಳೆಯಿಂದಾಗಿ ನಿಂತ ಪಂದ್ಯ.

ಡಗೌಟ್‌ ಸೇರಿದ ಆಟಗಾರರು.

Sat, 02 Sep 202309:54 AM IST

ಭಾರಿ ಮಳೆ; ಪಂದ್ಯಕ್ಕೆ ಅಡ್ಡಿ

ಭಾರತ-ಪಾಕಿಸ್ತಾನ ಪಂದ್ಯ ಆರಂಭವಾಗುತ್ತಿದ್ದಂತೆಯೇ ಮಳೆ ಸುರಿದಿದೆ. ಹೀಗಾಗಿ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಮೈದಾನದ ಸಿಬ್ಬಂದಿ ಪಿಚ್‌ ಅನ್ನು ಕವರ್‌ ಹಾಕಿ ಮುಚ್ಚಿದ್ದಾರೆ. 

Sat, 02 Sep 202309:50 AM IST

ಶಮಿ ಹೊರಗಿಟ್ಟಿದ್ದಕ್ಕೆ ಮಂಜ್ರೇಕರ್‌ ಅಸಮಾಧಾನ

ಭಾರತದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್, ಟೀಮ್‌ ಇಂಡಿಯಾ ಆಡುವ ಬಳಗಕ್ಕೆ ತುಸು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊಹಮ್ಮದ್‌ ಶಮಿ ಅವರನ್ನು ತಂಡದಿಂದ ಹೊರಗಿಡುವ ಭಾರತದ ನಿರ್ಧಾರವನ್ನು ಖಂಡಿಸಿದ್ದಾರೆ.

ಪಾಕಿಸ್ತಾನಕ್ಕೆ ಶಮಿ ಅಪಾಯಕಾರಿಯಾಗುತ್ತಿದ್ದರು ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಶಾರ್ದೂಲ್ ಅವರ ಸೇರ್ಪಡೆಯಿಂದ ಭಾರತದ ಬ್ಯಾಟಿಂಗ್‌ನಲ್ಲಿ ಅಭದ್ರತೆ ಎದ್ದುಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.

"ಶಾರ್ದೂಲ್ ಠಾಕೂರ್ ಅವರಿಗಿಂತ ಮೊಹಮ್ಮದ್ ಶಮಿ ಪಾಕಿಸ್ತಾನಕ್ಕೆ ಹೆಚ್ಚು ಬೆದರಿಕೆ ಒಡ್ಡುತ್ತಿದ್ದರು. ಬ್ಯಾಟಿಂಗ್‌ನಲ್ಲಿ ಆಳ ಇರುವಂತೆಯೇ ಬೌಲಿಂಗ್ ಆಳವೂ ಮುಖ್ಯ. ಇದು ಭಾರತದ ಬ್ಯಾಟಿಂಗ್‌ನಲ್ಲಿನ ಅಭದ್ರತೆಯನ್ನು ತೋರಿಸುತ್ತದೆ" ಎಂದು ಟಾಸ್ ನಂತರ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಂಜ್ರೇಕರ್ ಹೇಳಿದ್ದಾರೆ.

Sat, 02 Sep 202309:47 AM IST

ಶಾಹೀನ್‌ ಎಸೆತಕ್ಕೆ ಬೌಂಡರಿ

3 ಓವರ್‌ಗಳ ಬಳಿಕ ಭಾರತ 14/0 ರನ್‌ ಗಳಿಸಿದೆ. ಶಾಹೀನ್‌ ಅಫ್ರಿದಿ ಎಸೆದ ಒಂದು ಮತ್ತು ಮೂರನೇ ಓವರ್‌ಗಳಲ್ಲಿ ರೋಹಿತ್‌ ಶರ್ಮಾ ತಲಾ ಒಂದು ಬೌಂಡರಿ ಸಿಡಿಸಿದ್ದಾರೆ. ಶುಭ್ಮನ್‌ ಗಿಲ್‌ ಇನ್ನೂ ಖಾತೆ ತೆರೆದಿಲ್ಲ. ರೋಹಿತ್‌ ಶರ್ಮಾ 16 ಎಸೆತಗಳಿಂದ 11 ರನ್‌ ಗಳಿಸಿದ್ದಾರೆ. 

Sat, 02 Sep 202309:37 AM IST

ಭಾರತ 6/0

ಮೊದಲ ಓವರ್‌ ಬಳಿಕ ಭಾರತ 6/0

ಆರಂಭಿಕರಾಗಿ ಕಣಕ್ಕಿಳಿದಿರುವ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್‌ ಗಿಲ್

Sat, 02 Sep 202309:12 AM IST

ಪಾಕಿಸ್ತಾನ ಆಡುವ ಬಳಗ

ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್‌ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.

Sat, 02 Sep 202309:13 AM IST

ಭಾರತ ಆಡುವ ಬಳಗ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಇಶಾನ್ ಕಿಶನ್‌ (ವಿಕೆಟ್‌ ಕೀಪರ್), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

Sat, 02 Sep 202309:07 AM IST

ಟಾಸ್‌ ಗೆದ್ದ ಭಾರತ ಮೊದಲಿಗೆ ಬ್ಯಾಟಿಂಗ್‌ ಆಯ್ಕೆ

ಇಂಡೋ-ಪಾಕ್‌ ಕದನ.

ಟಾಸ್‌ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ‌.

ದೊಡ್ಡ ಮೊತ್ತ ಕಲೆ ಹಾಕಲು ಭಾರತ ನಿರ್ಧಾರ.

ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುತ್ತಿರುವ ಭಾರತ.

Sat, 02 Sep 202308:57 AM IST

ಪಿಚ್‌ ವರದಿ ನೀಡಿದ ಸಂಜಯ್ ಮಂಜ್ರೇಕರ್

ಕ್ಯಾಂಡಿಯದ್ದು ಉತ್ತಮ ಗುಣಮಟ್ಟದ ಮತ್ತು ವಿಶಿಷ್ಟವಾದ ಪಿಚ್. ವೇಗದ ಬೌಲರ್‌ಗಳು ಸ್ವಲ್ಪ ಸೀಮ್ ಪಡೆಯಬಹುದು. ಇದೇ ವೇಳೆ ಸ್ಪಿನ್ನರ್‌ಗಳು ಸ್ವಲ್ಪ ತಿರುವು ಪಡೆಯುತ್ತಾರೆ. ಉತ್ತಮ ಬ್ಯಾಟರ್ ಇಲ್ಲಿ ಶತಕ ಕೂಡಾ ಸಿಡಿಸಬಹುದು. ಮಳೆ ಸಾಧ್ಯತೆ ಇರುವುದರಿಂದ, ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಮಾಡಲು ಆದ್ಯತೆ ನೀಡಬಹುದು ಎಂದು ಪಿಚ್‌ ಕುರಿತು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

Sat, 02 Sep 202308:55 AM IST

ಕವರ್‌ಗಳನ್ನು ತೆಗೆದ ಸಿಬ್ಬಂದಿ

ಕ್ಯಾಂಡಿ ಮೈದಾನದ ಸಿಬ್ಬಂದಿ ಪಿಚ್‌ ಮೇಲಿನ ಕವರ್‌ಗಳನ್ನು ತೆಗೆದಿದ್ದಾರೆ. ಸದ್ಯ ಮಳೆ ನಿಂತಿದೆ. ಆದರೆ ಮೋಡ ಕವಿದ ವಾತಾವರಣ ಇರುವುದರಿಂದ  ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ.

Sat, 02 Sep 202308:12 AM IST

ತುಂತುರು ಮಳೆ; ಪಿಚ್‌ ಮೇಲೆ ಕವರ್

ಕ್ಯಾಂಡಿಯಲ್ಲಿ ತುಂತುರು ಮಳೆ ಸುರಿಯುತ್ತಿರುವ ಕಾರಣ ಪಿಚ್‌ ಅನ್ನು ಕವರ್‌ನಿಂದ ಮುಚ್ಚಲಾಗಿದೆ.

Sat, 02 Sep 202308:05 AM IST

ನಿಂತ ಮಳೆ, ನಿಗದಿತ ಸಮಯಕ್ಕೆ ಟಾಸ್‌ ಸಾಧ್ಯತೆ 

ಅಭಿಮಾನಿಗಳಿಗೆ ಶುಭ ಸುದ್ದಿ ಸಿಕ್ಕಿದೆ. ಕ್ಯಾಂಡಿಯಲ್ಲಿ ಮಳೆ ನಿಂತಿದ್ದು, ಟಾಸ್‌ ಪ್ರಕ್ರಿಯೆಯು ನಿಗದಿತ ಸಮಯಕ್ಕೆ ನಡೆಯುವ ಸಾಧ್ಯತೆ ಇದೆ.

Sat, 02 Sep 202307:39 AM IST

ಕ್ಯಾಂಡಿಯಲ್ಲಿ ಭಾರಿ ಮಳೆ; ಟಾಸ್‌ ವಿಳಂಬ ಸಾಧ್ಯತೆ

ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯುವ ಕ್ಯಾಂಡಿ ಮೈದಾನದಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು . ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಹಂಚಿಕೊಂಡ ಪೋಸ್ಟ್ ಪ್ರಕಾರ, ಅಲ್ಪಪ್ರಮಾಣದ ತುಂತುರು ಮಳೆ ಆಗಿತ್ತು. ಆ ಬಳಿಕ ಶ್ರೀಲಂಕಾ ಕ್ರಿಕೆಟ್‌ ಶೇರ್‌ ಮಾಡಿದ ಪೋಸ್ಟ್‌ ಪ್ರಕಾರ ಆಕಾಶದಿಂದ ಮೋಡಗಳು ಮರೆಯಾಗಿದ್ದವು. ಆದರೆ, ಈಗ ಲಭ್ಯವಾದ ವರದಿ ಪ್ರಕಾರ ಕ್ಯಾಂಡಿಯಲ್ಲಿ ಭಾರಿ ಮಳೆ ಪ್ರಾರಂಭವಾಗಿದೆ. ಒಂದು ವೇಳೆ ಮಳೆ ಮುಂದುವರೆದರೆ, ಟಾಸ್‌ ಪ್ರಕ್ರಿಯೆ ವಿಳಂಬವಾಗಲಿದೆ.

Sat, 02 Sep 202307:21 AM IST

ತಮ್ಮ ನಿರೀಕ್ಷೆಯ ಆಡುವ ಬಳಗ ಹಂಚಿಕೊಂಡ ವಾಸಿಂ ಜಾಫರ್

ರೋಹಿತ್, ಇಶಾನ್, ಗಿಲ್, ಕೊಹ್ಲಿ, ಅಯ್ಯರ್, ಹಾರ್ದಿಕ್, ಜಡೇಜಾ, ಶಾರ್ದೂಲ್, ಕುಲದೀಪ್, ಬುಮ್ರಾ, ಸಿರಾಜ್

Sat, 02 Sep 202307:00 AM IST

ರವೀಂದ್ರ ಜಡೇಜಾ ಮೇಲೆ ಹೆಚ್ಚಿದ ನಿರೀಕ್ಷೆ

2019ರ ವಿಶ್ವಕಪ್‌ ಟೂರ್ನಿಯಿಂದ ಇಲ್ಲಿಯವರೆಗೂ ರವೀಂದ್ರ ಜಡೇಜಾ 49.77ರ ಸರಾಸರಿಯಲ್ಲಿ 448 ರನ್ ಗಳಿಸಿದ್ದಾರೆ.

Sat, 02 Sep 202306:52 AM IST

ಅಭಿಮಾನಿಗಳಿಗೆ ಸಿಹಿ ಸುದ್ದಿ

ಅಭಿಮಾನಿಗಳಿಗೆ ಸಿಹಿ ಸುದ್ದಿ. ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆಯ ಆತಂಕ ದೂರವಾಗುವ ಸಾಧ್ಯತೆ ಇದೆ. ಬೆಳಗ್ಗಿನಿಂದ ಮೋಡ ಕವಿದ ವಾತಾವರಣ ಇತ್ತು. ಇದೀಗ ವಾತಾವರಣ ಸಹಜ ಸ್ಥಿತಿಗೆ ಮರಳುವ ಮುನ್ಸೂಚನೆ ನೀಡಿದೆ.

Sat, 02 Sep 202306:42 AM IST

ಏಕದಿನದಲ್ಲಿ ಭಾರತದ ವಿರುದ್ಧ ಬಾಬರ್ ಕಳಪೆ ದಾಖಲೆ

ನೇಪಾಳ ವಿರುದ್ಧದ ಹಿಂದಿನ ಪಂದ್ಯದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ 151 ರನ್ ಗಳಿಸಿದ್ದರು. ಆದಾಗ್ಯೂ, ನಾಯಕನು ಭಾರತದ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿಲ್ಲ. ವಾಸ್ತವವಾಗಿ ಅವರು ಏಕದಿನಗಳಲ್ಲಿ ಮೆನ್ ಇನ್ ಬ್ಲೂ ವಿರುದ್ಧ ಒಂದು ಬಾರಿಯೂ 50 ದಾಟಿಲ್ಲ. ಬಾಬರ್ ಸರಾಸರಿ 31.60, ಮತ್ತು ಗರಿಷ್ಠ ಸ್ಕೋರ್ 48. ಅವರು ಇದುವರೆಗೆ ಐದು ಇನ್ನಿಂಗ್ಸ್‌ಗಳಲ್ಲಿ 158 ರನ್ ಗಳಿಸಿದ್ದಾರೆ.

Sat, 02 Sep 202306:27 AM IST

ಏಕದಿನ ಕ್ರಿಕೆಟ್​ನಲ್ಲಿ ಪಾಕಿಸ್ತಾನದ್ದೇ ಮೇಲುಗೈ

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತ-ಪಾಕಿಸ್ತಾನ ತಂಡದ ಮುಖಾಮುಖಿ ದಾಖಲೆ ನೋಡಿದರೆ,  132 ಬಾರಿ ಪರಸ್ಪರ ಎದುರಾಗಿವೆ. ಪಾಕಿಸ್ತಾನ 73 ಬಾರಿ ಗೆದ್ದಿದ್ದರೆ, ಭಾರತ 55 ಬಾರಿ ಗೆದ್ದಿದೆ. ನಾಲ್ಕು ಮುಖಾಮುಖಿಗಳು ಯಾವುದೇ ಫಲಿತಾಂಶವನ್ನು ನೀಡಲಿಲ್ಲ.

Sat, 02 Sep 202305:58 AM IST

ಪಾಕ್​ ವಿರುದ್ಧ ರೋಹಿತ್ ಘರ್ಜನೆ

ಪಾಕಿಸ್ತಾನ ವಿರುದ್ಧ ತನ್ನ ಕೊನೆಯ ಐದು ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ ಮೂರು ಬಾರಿ 90 ಪ್ಲಸ್ ಸ್ಕೋರ್ ಗಳಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ರೋಹಿತ್ ಅವರ ಕೊನೆಯ ಐದು ಏಕದಿನ ಇನ್ನಿಂಗ್ಸಗಳು: 91(119), 0(3), 52(39), 111*(119), 140(113).

Sat, 02 Sep 202305:51 AM IST

ಮಳೆಯ ಆತಂಕ ಇಲ್ಲ ಎಂದ ವಾಸೀಂ ಅಕ್ರಮ್

ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಂ ಕ್ಯಾಂಡಿಯಲ್ಲಿದ್ದು, ಹವಾಮಾನದ ಕುರಿತು ಮಾಹಿತಿ ನೀಡಿದ್ದಾರೆ. ಸದ್ಯ ಮಟ್ಟಿಗೆ ಮಳೆಯ ಮುನ್ಸೂಚನೆ ಇಲ್ಲ. ಆದರೆ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ಮದ ನಂತರ ಮಳೆ ಬರುವ ಸಾಧ್ಯತೆ ಇದೆ ಎಂದು ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೆ, ಉಭಯ ತಂಡಗಳಿಗೂ ಆಲ್​ ದಿ ಬೆಸ್ಟ್ ಹೇಳಿದ್ದಾರೆ.

Sat, 02 Sep 202305:21 AM IST

ಪಲ್ಲೆಕೆಲ್ಲೆ ಮೈದಾನದಲ್ಲಿ ಭಾರತಕ್ಕೆ ಸೋಲೇ ಇಲ್ಲ

ಪಲ್ಲೆಕೆಲೆ ಮೈದಾನದಲ್ಲಿ ಭಾರತ ತಂಡವು ಆಡಿದ 3 ಪಂದ್ಯಗಳಲ್ಲಿ ಮೂರು ಗೆಲುವು ದಾಖಲಿಸಿದೆ. ಹಾಗಾಗಿ ಇಂದು ಕೂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. 2012, 2017 (ಎರಡು ಪಂದ್ಯ) ರಲ್ಲಿ ಭಾರತ ತಂಡವು ಗೆಲುವು ಸಾಧಿಸಿದೆ.

Sat, 02 Sep 202305:12 AM IST

ಇಂಡೋ-ಪಾಕ್‌ ಪಂದ್ಯ ಉಚಿತ ವೀಕ್ಷಣೆ ಹೇಗೆ?

ಪಂದ್ಯವು ಡಿಸ್ನಿ+ ಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯ ಇರಲಿದೆ. ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ನೀವು ಸಂಪೂರ್ಣ ಉಚಿತವಾಗಿ ವೀಕ್ಷಿಸಬಹುದು.

Sat, 02 Sep 202305:11 AM IST

ಯಾವ ಚಾನೆಲ್​ನಲ್ಲಿ ನೇರಪ್ರಸಾರ ವೀಕ್ಷಿಸಬಹುದು?

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಕದನವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ನೀವು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ಈ ಪಂದ್ಯವನ್ನು ಲೈವ್ ಆಗಿ ವೀಕ್ಷಿಸಬಹುದು.

Sat, 02 Sep 202304:57 AM IST

ಆಡುವ ಬಳಗ ಪ್ರಕಟಿಸಿದ ಪಾಕಿಸ್ತಾನ

ಭಾರತ ವಿರುದ್ಧದ ಬ್ಲಾಕ್‌ಬಸ್ಟರ್ ಪಂದ್ಯಕ್ಕೆ ಪಾಕಿಸ್ತಾನ (Pakistan vs India) ತಂಡವು ಒಂದು ದಿನ ಮುಂಚಿತವಾಗಿಯೇ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. 

ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಘಾ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.

Sat, 02 Sep 202304:56 AM IST

ಮುಖಾಮುಖಿ ದಾಖಲೆ

ಏಷ್ಯಾಕಪ್‌ ಟೂರ್ನಮೆಂಟ್‌ನ ಆರಂಭದಿಂದಲೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಇದುವರೆಗ ಒಟ್ಟು 16 ಬಾರಿ ಟೂರ್ನಿಯಲ್ಲಿ ಪರಸ್ಪರ ಮುಖಾಮುಖಿಯಾಗಿದೆ. ಇದರಲ್ಲಿ ಏಕದಿನ ಮಾದರಿಯಡಿಯಲ್ಲಿ 13 ಪಂದ್ಯಗಳನ್ನು ಆಡಿವೆ. ಉಳಿದಂತೆ ಟಿ20 ಸ್ವರೂಪದಲ್ಲಿ ಮೂರು ಬಾರಿ ಮಾತ್ರ ಕಣಕ್ಕಿಳಿದಿವೆ. ಒಟ್ಟು ಆಡಿರುವ 16 ಪಂದ್ಯಗಳಲ್ಲಿ ಭಾರತವು 9 ಪಂದ್ಯಗಳನ್ನು ಗೆದ್ದಿದೆ. ಇದರಲ್ಲಿ 7 ಏಕದಿನ ಪಂದ್ಯಗಳಾದರೆ, 2 ಟಿ20 ಪಂದ್ಯಗಳು. ಅತ್ತ ಪಾಕಿಸ್ತಾನವು ಒಟ್ಟು ಆರು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಅದರಲ್ಲಿ 5 ಏಕದಿನ ಪಂದ್ಯ ಮತ್ತು ಒಂದು 1 ಟಿ20 ಪಂದ್ಯವಾಗಿದೆ. 

Sat, 02 Sep 202304:55 AM IST

ಶೇ.70ರಷ್ಟು ಮಳೆ ಸಾಧ್ಯತೆ

ಇಂದಿನ ರೋಚಕ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ .ಇಂದು ಹಗಲಿನ ವೇಳೆ ಶೇಕಡಾ 70ರಷ್ಟು ಮಳೆ ಬೀಳುವ ಮುನ್ಸೂಚನೆ ಇದೆ. ಅಲ್ಲದೆ, ರಾತ್ರಿ ವೇಳೆ ಶೇಕಡಾ 87ರಷ್ಟು ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಇದು ಕೋಟ್ಯಂತರ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.

Sat, 02 Sep 202304:54 AM IST

ಪಿಚ್​ ರಿಪೋರ್ಟ್​?

ಪಲ್ಲೆಕೆಲೆ ಕ್ರಿಕೆಟ್ ಮೈದಾನವು ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ನೆರವಾಗಲಿದೆ. ಈ ಪಿಚ್​​​ನಲ್ಲಿ ಟಾಸ್​ ಗೆದ್ದವರು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.  ಅಂಕಿ-ಅಂಶಗಳ ಪ್ರಕಾರ ಚೇಸಿಂಗ್​ ನಡೆಸಿದ ತಂಡಗಳೇ ಹೆಚ್ಚು ಗೆಲುವು ದಾಖಲಿಸಿವೆ. ಕ್ರಿಕ್​​ಬಜ್ ಅಂಕಿ-ಅಂಶಗಳ ಪ್ರಕಾರ ಈವರೆಗೂ 37 ಏಕದಿನ ಪಂದ್ಯಗಳಿಗೆ ಪಲ್ಲೆಕೆಲೆ ಮೈದಾನ ಆತಿಥ್ಯ ವಹಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಪಂದ್ಯಗಳಲ್ಲಿ 15 ಗೆಲುವು ದಕ್ಕಿದೆ. ಇನ್ನು ಚೇಸಿಂಗ್ ಮಾಡಿದ ತಂಡಗಳು 19 ಬಾರಿ ಜಯಿಸಿವೆ.

Sat, 02 Sep 202304:53 AM IST

ಭಾರತ-ಪಾಕಿಸ್ತಾನ ಪಂದ್ಯದ ಲೈವ್‌ ಅಪ್ಡೇಟ್ಸ್

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ರೋಚಕ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂಡೋ-ಪಾಕ್ ಕದನವನ್ನು (India vs Pakistan) ಕಣ್ತುಂಬಿಕೊಳ್ಳಲು ಕ್ರಿಕೆಟ್​ ಜಗತ್ತೇ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಪಾಕಿಸ್ತಾನ 2ನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಮತ್ತೊಂದೆಡೆ ಭಾರತ ಗೆಲುವಿನ ಶುಭಾರಂಭಕ್ಕೆ ಎದುರು ನೋಡುತ್ತಿದೆ. ರೋಚಕ ಪಂದ್ಯದ ಲೈವ್‌ ಅಪ್ಡೇಟ್ಸ್‌, ಲೈವ್‌ ಸ್ಕೋರ್‌ಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಪೇಜ್‌ ನೋಡಿ.

ಹಂಚಿಕೊಳ್ಳಲು ಲೇಖನಗಳು

  • twitter