Exit Poll: ಉತ್ತರ ಪ್ರದೇಶದಲ್ಲಿ ಮತ್ತೆ ಎನ್‌ಡಿಎ ಮುನ್ನಡೆ; ಇಂಡಿಯಾ ಮೈತ್ರಿಗೆ ಕೇವಲ 11 ಸ್ಥಾನ ಎಂದ ಎಕ್ಸಿಟ್‌ ಪೋಲ್
ಕನ್ನಡ ಸುದ್ದಿ  /  ಚುನಾವಣೆಗಳು  /  Exit Poll: ಉತ್ತರ ಪ್ರದೇಶದಲ್ಲಿ ಮತ್ತೆ ಎನ್‌ಡಿಎ ಮುನ್ನಡೆ; ಇಂಡಿಯಾ ಮೈತ್ರಿಗೆ ಕೇವಲ 11 ಸ್ಥಾನ ಎಂದ ಎಕ್ಸಿಟ್‌ ಪೋಲ್

Exit Poll: ಉತ್ತರ ಪ್ರದೇಶದಲ್ಲಿ ಮತ್ತೆ ಎನ್‌ಡಿಎ ಮುನ್ನಡೆ; ಇಂಡಿಯಾ ಮೈತ್ರಿಗೆ ಕೇವಲ 11 ಸ್ಥಾನ ಎಂದ ಎಕ್ಸಿಟ್‌ ಪೋಲ್

ಬಹುನಿರೀಕ್ಷೆ ಮೂಡಿಸಿದ್ದ ಉತ್ತರ ಪ್ರದೇಶ ಲೋಕಸಭಾ ಚುನಾವಣೆಯ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರಬಿದ್ದಿದೆ. ರಾಜಕೀಯವಾಗಿ ಭಾರತದ ಪ್ರಮುಖ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಈ ಬಾರಿಯೂ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.

Exit Poll: ಉತ್ತರ ಪ್ರದೇಶದಲ್ಲಿ ಮತ್ತೆ ಎನ್‌ಡಿಎ ಮುನ್ನಡೆ; ಇಂಡಿಯಾ ಮೈತ್ರಿಗೆ ಕೇವಲ 11 ಸ್ಥಾನ ಎಂದ ಎಕ್ಸಿಟ್‌ ಪೋಲ್
Exit Poll: ಉತ್ತರ ಪ್ರದೇಶದಲ್ಲಿ ಮತ್ತೆ ಎನ್‌ಡಿಎ ಮುನ್ನಡೆ; ಇಂಡಿಯಾ ಮೈತ್ರಿಗೆ ಕೇವಲ 11 ಸ್ಥಾನ ಎಂದ ಎಕ್ಸಿಟ್‌ ಪೋಲ್

ಲೋಕಸಭೆ ಚುನಾವಣೆ 2024ರ ಅಂತಿಮ ಹಂತದ ಮತದಾನವು ಇಂದು (ಮೇ 31ರ ಗುರುವಾರ) ಸಂಜೆ ವೇಳೆ ಅಂತ್ಯವಾಗಿದೆ. ಮತದಾನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದೆ. ಇದರ ಪ್ರಕಾರ ದೇಶದ ಚುನಾವಣೆಯಲ್ಲಿ ಭಾರಿ ಗಮನ ಸೆಳೆಯುವ ಉತ್ತರ ಪ್ರದೇಶ ಚುನಾವಣೆಯ ಎಕ್ಸಿಟ್‌ ಪೋಲ್‌ ಫಲಿತಾಂಶ ಹೇಗಿದೆ ಎಂಬುದನ್ನು ನೋಡೋಣ. ಈ ಬಾರಿಯೂ ಆಕ್ಸಿಸ್‌ ಮೈ ಇಂಡಿಯಾ, ಸಿ ವೋಟರ್‌, ಇಂಡಿಯಾ ಟುಡೇ ಆಕ್ಸಿಸ್‌, ಎಬಿಪಿ ನ್ಯೂಸ್‌-ಸಿವೋಟರ್‌, ಟೈಮ್ಸ್‌ ನೌ, ನ್ಯೂಸ್‌ 18 ಐಬಿಎಸ್‌ಒಎಸ್‌, ರಿಪಬ್ಲಿಕ್‌ ಟಿವಿ ಜನ್‌ ಕೀ ಬಾತ್‌, ಟುಡೇಸ್‌ ಚಾಣಾಕ್ಯ ಚುನಾವಣಾ ಸಮೀಕ್ಷೆ ನಡೆಸಿದ ವರದಿ ಹೀಗಿದೆ.

ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ; ಎನ್‌ಡಿಎ ಭಾರಿ ಮುನ್ನಡೆ

ಉತ್ತರ ಪ್ರದೇಶದಲ್ಲಿ ಎನ್‌ಡಿಎ 69 ಸ್ಥಾನಗಳನ್ನು ಗೆಲ್ಲಲಿದೆ ಎಂದು ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ ಭವಿಷ್ಯ ನುಡಿದಿದೆ. ಇಂಡಿಯಾ ಮೈತ್ರಿಕೂಟ 11 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಅದು ಹೇಳಿದೆ. ಇಂಡಿಯಾ ಮೈತ್ರಿಕೂಟವು ಉಳಿದ 11 ಸ್ಥಾನಗಳನ್ನು ಪಡೆಯಲಿದೆ ಎಂದು ರಿಪಬ್ಲಿಕ್-ಪಿಮಾರ್ಕ್ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ. ಇದೇ ವೇಳೆ ಆಡಳಿತಾರೂಢ ಎನ್‌ಡಿಎ 50 ಶೇಕಡ ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಎನ್‌ಡಿಟಿವಿ-ಜನ್ ಕಿ ಬಾತ್ ಸಮೀಕ್ಷೆ

ಬಿಜೆಪಿ ನೇತೃತ್ವದ ಎನ್‌ಡಿಎ 68ರಿಂದ 74 ಸ್ಥಾನಗಳನ್ನು ಗೆಲ್ಲಲಿದೆ. ಇದೇ ವೇಳೆ ಇಂಡಯಾ ಮೈತ್ರಿಕೂಟ 12ರಿಂದ 16 ಸ್ಥಾನಗಳನ್ನು ಗೆಲ್ಲಲಿದೆ ಎಂದು ಎನ್‌ಡಿಟಿವಿ-ಜನ್ ಕಿ ಬಾತ್ ಭವಿಷ್ಯ ನುಡಿದಿದೆ. 

ಇಂಡಿಯಾ ನ್ಯೂಸ್-ಡಿ ಡೈನಾಮಿಕ್ ಪ್ರಕಾರ, ಎನ್‌ಡಿಎ 69 ಸ್ಥಾನ ಗೆದ್ದರೆ, ಇಂಡಿಯಾ ಮೈತ್ರಿ 11 ಸ್ಥಾನ ಪಡೆಯಲಿದೆ.

26 ಕ್ಷೇತ್ರಗಳ ಸಮೀಕ್ಷೆ ವರದಿ ಪ್ರಕಟಿಸಿದ ನ್ಯೂಸ್ 18

ಬಿಜೆಪಿ ನೇತೃತ್ವದ ಎನ್‌ಡಿಎ 22 ರಿಂದ 25 ಸ್ಥಾನಗಳನ್ನು ಗೆಲ್ಲಬಹುದು. ಇಂಡಿಯಾ ಮೈತ್ರಿಕೂಟವು 26ರಲ್ಲಿ ಮೂರು ಸ್ಥಾನಗಳನ್ನು ಗೆಲ್ಲಬಹುದು ಎಂದು ನ್ಯೂಸ್ 18 ಸಮೀಕ್ಷೆ ಹೇಳಿದೆ.

ಲೋಕಸಭಾ ಚುನಾವಣೆ 2024ರ ಇನ್ನಿತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಉತ್ತರ ಪ್ರದೇಶದಲ್ಲಿ ಈ ಬಾರಿ ಎನ್‌ಡಿಎ 80 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಮೈತ್ರಿಕೂಟದಲ್ಲಿ ಬಿಜೆಪಿಯ 74 ಅಭ್ಯರ್ಥಿಗಳು ಕಣಕ್ಕಿಳಿದರೆ, ಅಪ್ನಾ ದಳ್, ಆರ್‌ಎಲ್‌ಡಿ ಮತ್ತು ಎಸ್‌ಬಿಎಸ್‌ಪಿ ಕಣಕ್ಕಿಳಿದಿದ್ದಾರೆ. ಅತ್ತ ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ನಿಂದ 17 ಅಭ್ಯರ್ಥಿಗಳು ಮಾತ್ರವೇ ಕಣಕ್ಕಿಳಿದರೆ, ಆಲ್‌ ಇಂಡಿಯಾ ಟಿಎಂಸಿ ಪಕ್ಷದ ಒಬ್ಬರು ಕಣಕ್ಕಿಳಿದಿದ್ದಾರೆ. ಕಳೆದ ಬಾರಿ 37 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 5 ಸ್ಥಾನಗಳಲ್ಲಿ ಗೆದ್ದಿದ್ದ ಸಮಾಜವಾದಿ ಪಕ್ಷ ಈ ಬಾರಿ 62 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಇಂಡಿಯಾ ಮೈತ್ರಿಕೂಟಕ್ಕೆ ಬಲ ತುಂಬಲು ಸಮಾಜವಾದಿ ಪಕ್ಷವೇ ಪ್ರಮುಖ ಪಾತ್ರ ವಹಿಸುತ್ತಿದೆ. ಮಾಯಾವತಿ ನೇತೃತ್ವದ ಬಿಎಸ್‌ಪಿಯು ಸ್ವತಂತ್ರವಾಗಿ 79 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ.

ಕಳೆದ ಬಾರಿಯ ಫಲಿತಾಂಶ ಏನಾಗಿತ್ತು?

ಬಿಜೆಪಿಯ ಭದ್ರಕೋಟೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಭಾವವಿರುವ ಉತ್ತರಪ್ರದೇಶದಲ್ಲಿ 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 62 ಸೀಟು ಗೆಲ್ಲುವುದರೊಂದಿಗೆ ಎನ್‌ಡಿಎ ಮೈತ್ರಿಕೂಟ 64 ಕ್ಷೇತ್ರಗಳಲ್ಲಿ ಗೆದ್ದಿತ್ತು. ಪ್ರಬಲ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಕೇವಲ 1 ಸ್ಥಾನ ಗೆದ್ದಿತ್ತು. ಬಿಎಸ್‌ಪಿ ನೇತೃತ್ವದ ಮಹಾಘಟಬಂಧನ್‌ 10 ಕ್ಷೇತ್ರಗಳಲ್ಲಿ ಗೆದ್ದಿತ್ತು.

ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು

(ಸುದ್ದಿ ಅಪ್ಡೇಟ್‌ ಆಗಲಿದೆ)

Whats_app_banner