Dooradarshana movie song Released: ವಾಸುಕಿ ವೈಭವ್ ಸಂಗೀತ ನಿರ್ದೇಶಿಸಿ ಹಾಡಿರುವ 'ದೂರದರ್ಶನ'ದ ಹಾಡು ರಿಲೀಸ್
ವಿಭಿನ್ನ ಪೋಸ್ಟರ್ ಹಾಗೂ ಟೀಸರ್ ಮೂಲಕ ಎಲ್ಲರ ಗಮನ ಸೆಳೆದ 'ದೂರದರ್ಶನ' ಸಿನಿಮಾ ಬಿಡುಗಡೆಗೆ ಸಿದ್ಧವಿದ್ದು ಚಿತ್ರತಂಡ ಪ್ರಚಾರ ಕಾರ್ಯವನ್ನು ಕೂಡಾ ಆರಂಭಿಸಿದೆ. ಸದ್ಯಕ್ಕೆ ಈ ಸಿನಿಮಾ ತಂಡ ಹಾಡೊಂದನ್ನು ಬಿಡುಗಡೆ ಮಾಡಿದೆ.
'ದಿಯಾ' ಸಿನಿಮಾ ನಂತರ ಪೃಥ್ವಿ ಅಂಬರ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಆಫರ್ ದೊರೆಯುತ್ತಿದೆ. ಸದ್ಯಕ್ಕೆ ಅವರು 'ದೂರದರ್ಶನ' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಟೈಟಲ್ ಮೂಲಕವೇ ಸದ್ದು ಮಾಡುತ್ತಿರುವ ಸಿನಿಮಾ ಇದೀಗ ಚಿತ್ರೀಕರಣ ಮುಗಿಸಿ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.
ವಿಭಿನ್ನ ಪೋಸ್ಟರ್ ಹಾಗೂ ಟೀಸರ್ ಮೂಲಕ ಎಲ್ಲರ ಗಮನ ಸೆಳೆದ 'ದೂರದರ್ಶನ' ಸಿನಿಮಾ ಬಿಡುಗಡೆಗೆ ಸಿದ್ಧವಿದ್ದು ಚಿತ್ರತಂಡ ಪ್ರಚಾರ ಕಾರ್ಯವನ್ನು ಕೂಡಾ ಆರಂಭಿಸಿದೆ. ಸದ್ಯಕ್ಕೆ ಈ ಸಿನಿಮಾ ತಂಡ ಹಾಡೊಂದನ್ನು ಬಿಡುಗಡೆ ಮಾಡಿದೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ 'ಕಣ್ಣು ಕಣ್ಣು ಕಾದಾಡುತ ಇರಲಿ...' ಎಂಬ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಸಂಗೀತ ನಿರ್ದೇಶಕ ವಾಸುಕಿ ವೈಭವ್ ಈ ಹಾಡಿಗೆ ಕಂಪೋಸ್ ಮಾಡಿರುವುದು ಅಲ್ಲದೆ, ಈ ಹಾಡನ್ನು ಅವರೇ ಹಾಡಿದ್ದಾರೆ. 80,90 ದಶಕದ ಪ್ರೀತಿ, ಪ್ರೇಮವನ್ನು ನೆನಪಿಸುವ ಹಾಡು ಇದಾಗಿದ್ದು, ಅದರ ಮರುಸೃಷ್ಟಿ ಮಾಡುವ ಕೆಲಸವನ್ನು ಈ ಹಾಡಿನಲ್ಲಿ ಮಾಡಲಾಗಿದೆ. ಅದಕ್ಕೆ ತಕ್ಕಂತೆ ಛಾಯಾಗ್ರಾಹಕ ಅರುಣ್ ಸುರೇಶ್ ಈ ಹಾಡನ್ನು ಸೆರೆ ಹಿಡಿದಿದ್ದು, ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಮೆಚ್ಚುಗೆ ಜೊತೆಗೆ ಒಂದು ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದುಕೊಂಡಿದೆ.
'ದೂರದರ್ಶನ' ಚಿತ್ರವನ್ನು ಸುಕೇಶ್ ಶೆಟ್ಟಿ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಇವರ ಮೊದಲ ಸಿನಿಮಾವಾಗಿದೆ. 'ದೂರದರ್ಶನ', 80-90 ದಶಕದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದ್ದು, ಹಳ್ಳಿಯೊಂದಕ್ಕೆ ಟಿವಿ ಎಂಟ್ರಿ ಕೊಟ್ಟಾಗ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಡ್ರಾಮಾ ಹಾಗೂ ಹ್ಯೂಮರ್ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಹಾಗೂ ಅಯಾನ ಜೊತೆಯಾಗಿ ನಟಿಸಿದ್ದಾರೆ. ಇವರೊಂದಿಗೆ ಉಗ್ರಂ ಮಂಜು, ಸುಂದರ್ ವೀಣಾ, ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರೀಕರಣ ಮುಗಿಸಿ, ಡಬ್ಬಿಂಗ್ ಪೂರ್ಣಗೊಳಿಸಿರುವ ಸಿನಿಮಾ ತಂಡ, ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದ್ದು ಸದ್ಯದಲ್ಲೇ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಲಿದೆ.
'ದೂರದರ್ಶನ' ಚಿತ್ರವನ್ನು ವಿ.ಎಸ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿ ರಾಜೇಶ್ ಭಟ್ ನಿರ್ಮಾಣ ಮಾಡಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ಪ್ರದೀಪ್ ಆರ್ ರಾವ್ ಸಂಕಲನ ಈ ಸಿನಿಮಾಗಿದೆ. I ಈ ಸಿನಿಮಾ ಹೊರತುಪಡಿಸಿ ಪೃಥ್ವಿ ಅಂಬರ್ ಕನ್ನಡದ ಲೈಫ್ ಇಸ್ ಬ್ಯೂಟಿಫುಲ್, ಫಾರ್ ರಿಜಿಸ್ಟ್ರೇಷನ್ ಹಾಗೂ ತಮಿಳಿನ ಒಂದು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.