PVR INOXನಿಂದ ಹೊಸ ಆಫರ್: ಕೇವಲ 699 ರೂಪಾಯಿ ನೀಡಿ ತಿಂಗಳೊಳಗೆ 10 ಸಿನಿಮಾ ನೋಡಿ
ಮಾಲ್‌ಗಳಿಗೆ ಸಿನಿಮಾ ನೋಡಲು ಹೋದ್ರೆ ಸುಮ್ನೆ ಖರ್ಚು ಅನ್ನೋರಿಗೀಗ ಇಲ್ಲೊಂದು ಸಿಹಿ ಸುದ್ದಿ ಇದೆ. ಕಡಿಮೆ ಮೊತ್ತವನ್ನು ಪೇ ಮಾಡಿ, ಒಂದಿಡಿ ತಿಂಗಳು ಸಿನಿಮಾ ನೋಡುವ ಅವಕಾಶವನ್ನು PVR INOX ನೀಡಿದೆ.
PVR INOX Passport Offer: ಸಿನಿಮಾ ಬಿಡುಗಡೆ ಆಗುತ್ತಿದ್ದರೆ, ಹೆಚ್ಚಿನವರ ಮೊದಲ ಆಯ್ಕೆ ಚಿತ್ರಮಂದಿರಗಳು. ಅದಕ್ಕೆ ಕಾರಣ; ಕಡಿಮೆ ಟಿಕೆಟ್ ಮೊತ್ತ. ಅದೇ ಸಿನಿಮಾ ಮಾಲ್‌ನಲ್ಲಿ ನೋಡಬೇಕಾದರೆ, ಡಬಲ್ ಮೊತ್ತ ಪೇ ಮಾಡಬೇಕಾಗುತ್ತದೆ. ಆದರೆ, ಇದೀಗ ಕಡಿಮೆ ಬೆಲೆಯಲ್ಲಿ ಮಾಲ್‌ನಲ್ಲಿಯೇ ಒಂದಲ್ಲ ಎರಡಲ್ಲ 10 ಸಿನಿಮಾಗಳನ್ನು ವೀಕ್ಷಿಸಬಹುದು.
ಪಿವಿಆರ್ ಐನಾಕ್ಸ್ ಸಿನಿಮಾ ಪ್ರೇಮಿಗಳಿಗೆಂದೇ ಹೊಸ ಆಫರ್‌ವೊಂದನ್ನು ಬಿಡುಗಡೆ ಮಾಡಿದೆ. PVR INOX ಪಾಸ್‌ಪೋರ್ಟ್ ಪ್ಲಾನ್ ಪರಿಚಯಿಸಿದೆ. ಇಂದಿನಿಂದ (ಅಕ್ಟೋಬರ್ 16) ಇದು ಜಾರಿಗೆ ಬರಲಿದ್ದು, ಕೇವಲ 699 ರೂಪಾಯಿ ನೀಡಿ ಚಂದಾದಾರರಾದರೆ, ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆ ಆಗುವ 10 ಸಿನಿಮಾಗಳನ್ನು ನೋಡಬಹುದು.
ಏನಿದು ಪಿವಿಆರ್ ಐನಾಕ್ಸ್ ಪಾಸ್‌ಪೋರ್ಟ್ ಆಫರ್?
ಇತ್ತೀಚಿನ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಎಲ್ಲ ಸಿನಿಮಾಗಳೂ ಸದ್ದು ಮಾಡುವುದಿಲ್ಲ. ಆಯ್ದ ಸಿನಿಮಾಗಳಷ್ಟೇ ಹೆಚ್ಚು ಸದ್ದು ಮಾಡುತ್ತಿರುತ್ತವೆ. ಇನ್ನುಳಿದ ಸಿನಿಮಾಗಳು ಬಿಡುಗಡೆ ಆದರೂ ಸುದ್ದಿಯಾಗುವುದಿಲ್ಲ. ಹಾಗಾಗಿ ಪ್ರೇಕ್ಷಕನನ್ನು ಚಿತ್ರಮಂದಿರಕ್ಕೆ ಕರೆತರಬೇಕೆಂಬ ನಿಟ್ಟಿನಲ್ಲಿ ಪಿವಿಆರ್ ಐನಾಕ್ಸ್ ಪಾಸ್‌ಪೋರ್ಟ್ ಆಫರ್‌ಅನ್ನು ಜಾರಿಗೆ ತಂದಿದೆ. 699 ರೂಪಾಯಿ ಪಾವತಿಸಿ ಸಬ್‌ಸ್ಕ್ರಿಪ್ಷನ್ ಪಡೆದರೆ, ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆ ಆಗುವ ಯಾವುದಾದರೂ 10 ಸಿನಿಮಾಗಳನ್ನು ವೀಕ್ಷಿಸಬಹುದು.
ಇನ್ನು ಇಂದಿನಿಂದ (ಅ. 16) ಆರಂಭವಾಗಿರುವ ಈ ಆಫರ್ (ಅ. 16) ಗುರುವಾರದವರೆಗೆ ಮಾತ್ರ ಇರಲಿದೆ. ಈ ಮಾಸಿಕ ಆಫರ್ ಪಡೆದುಕೊಂಡವರು, ಐಮ್ಯಾಕ್ಸ್, ಗೋಲ್ಡ್, ಲಕ್ಸ್ ಮತ್ತು ಡೈರೆಕ್ಟರ್ಸ್ ಕಟ್‌ನಂತಹ ಪ್ರೀಮಿಯಂ ಥಿಯೇಟರ್‌ಗಳಲ್ಲಿ ಸಿನಿಮಾ ವೀಕ್ಷಣೆಗೆ ಅವಕಾಶವಿಲ್ಲ. ಪಿವಿಆರ್ ಐನಾಕ್ಸ್‌ನ ಈ ಹೊಸ ಹೆಜ್ಜೆಯನ್ನು ನಟ ಅಜಯ್ ದೇವಗನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.