Amruthadhaare Serial: ಬರಿಗೈಯಲ್ಲಿ ದೇವರಿಗೆ ಕರ್ಪೂರದ ಆರತಿ ಮಾಡಿದ ಜೈದೇವ್‌ನ ಮನಸ್ಸು ಧಗಧಗ; ‘ಗಂಡ ಸಾಧನೆ ಮಾಡಿದ್ರು’ ಅಪ್ಪಿ ಫುಲ್‌ ಖುಷಿ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare Serial: ಬರಿಗೈಯಲ್ಲಿ ದೇವರಿಗೆ ಕರ್ಪೂರದ ಆರತಿ ಮಾಡಿದ ಜೈದೇವ್‌ನ ಮನಸ್ಸು ಧಗಧಗ; ‘ಗಂಡ ಸಾಧನೆ ಮಾಡಿದ್ರು’ ಅಪ್ಪಿ ಫುಲ್‌ ಖುಷಿ

Amruthadhaare Serial: ಬರಿಗೈಯಲ್ಲಿ ದೇವರಿಗೆ ಕರ್ಪೂರದ ಆರತಿ ಮಾಡಿದ ಜೈದೇವ್‌ನ ಮನಸ್ಸು ಧಗಧಗ; ‘ಗಂಡ ಸಾಧನೆ ಮಾಡಿದ್ರು’ ಅಪ್ಪಿ ಫುಲ್‌ ಖುಷಿ

ಅಮೃತಧಾರೆ ಧಾರಾವಾಹಿಯ ಸೋಮವಾರದ ಸಂಚಿಕೆಯಲ್ಲಿ ಒಂದಿಷ್ಟು ಸಂಭ್ರಮ ಕಾಣಿಸಿಕೊಂಡಿದೆ. ಪಾರ್ಥನಿಗೆ ಟೆಂಡರ್‌ ಸಿಕ್ಕ ಖುಷಿಯಲ್ಲಿ ಅಪೇಕ್ಷಾ ಎಲ್ಲರಿಗೂ ಸಿಹಿನೀಡಿ ಸಂಭ್ರಮಿಸುತ್ತಿದ್ದಾಳೆ. ಇದೇ ಸಮಯದಲ್ಲಿ ದೇಗುಲದಲ್ಲಿ ಕರ್ಪೂರದ ಆರತಿ ಮಾಡಿ ಎಲ್ಲರ ಮನಸ್ಸು ಗೆಲ್ಲುವ ಪ್ರಯತ್ನ ಜೈದೇವ್‌ ಮಾಡಿದ್ದಾನೆ. ಆದರೆ, ಆತನ ಮನಸ್ಸಲ್ಲಿ ದ್ವೇಷ ಧಗಧಗ ಉರಿಯುತ್ತಿದೆ.

ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಸೋಮವಾರದ (ಅಕ್ಟೋಬರ್‌ 14) ಸಂಚಿಕೆ: ಅಪೇಕ್ಷಾ ಖುಷಿಯಲ್ಲಿದ್ದಾಳೆ. ಶಕುಂತಲಾದೇವಿ ಮತ್ತು ರಮಾಕಾಂತ್‌ಗೆ ಸ್ವೀಟ್‌ ನೀಡುತ್ತಾಳೆ. ಆಫೀಸ್‌ನಲ್ಲಿ ಪಾರ್ಥನಿಗೆ ದೊಡ್ಡ ಟೆಂಡರ್‌ ಸಿಕ್ಕಿದೆ ಎಂಬ ಸಂಭ್ರಮ ಅವಳದ್ದು. ಪಾರ್ಥ ಅವರು ನಮ್ಮದೇ ಸಿಸ್ಟರ್‌ ಕಂಪನಿ ಹೆಸರಲ್ಲಿ ಕಡಿಮೆ ದರಕ್ಕೆ ಟೆಂಡರ್‌ ಸಿಗೋ ರೀತಿ ಮಾಡಿದ್ರಂತೆ ಎಂದು ಅಪೇಕ್ಷಾ ಖುಷಿಯಿಂದ ಹೇಳುತ್ತಾಳೆ. ಇದನ್ನು ಕೇಳಿ ಶಕುಂತಲಾದೇವಿ ಖುಷಿ ವ್ಯಕ್ತಪಡಿಸುತ್ತಾರೆ. ಅಪೇಕ್ಷಾ ಹೋದ ನಂತರ "ಯಾಕೆ ಇಷ್ಟು ತಿಂಡಿ ತಿನ್ತಾ ಇದ್ದೀಯ" ಎಂದು ಶಕುಂತಲಾ ಕೇಳುತ್ತಾರೆ. "ನಮ್ಮ ಜೀವನದ ಆ ದಿನಗಳನ್ನು ನೆನಪಿಸಿಕೋ, ಆಗ ತಿನ್ನಲು ಏನೂ ಇರಲಿಲ್ಲ" ಎಂದು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ರಮಕಾಂತ್‌. "ಪಾರ್ಥ ನೋಡಿದ್ರೆ ಹೀಗೆ, ಜೈದೇವ್‌ ನೋಡಿದರೆ ಹಾಗೇ, ಜೈ ಯಾವಾಗ ದಾರಿಗೆ ಬರ್ತಾನೋ" ಎಂದು ಶಕುಂತಲಾದೇವಿ ಬೇಸರ ವ್ಯಕ್ತಪಡಿಸುತ್ತಾರೆ.

ಖುಷಿಯಿಂದ ಕುಣಿದಾಡುತ್ತಿದ್ದಾಳೆ ಅಪೇಕ್ಷಾ

ಇದಾದ ಬಳಿಕ ಭೂಮಿಕಾಗೆ ಸ್ವೀಟ್‌ ನೀಡುತ್ತಾಳೆ. "ನನ್ನ ಗಂಡ ಸಾಧನೆ ಮಾಡಿದ್ದಾರೆ" ಎಂದು ಸ್ವೀಟ್‌ ನೀಡುತ್ತಾರೆ. ಭೂಮಿಕಾ ಕೂಡ ಖುಷಿವ್ಯಕ್ತಪಡಿಸುತ್ತಾಳೆ. "ನನ್ನ ಗಂಡ, ನನ್ನ ಮೈದುನ" ಎಂದು ಇಬ್ಬರೂ ಖುಷಿಯಿಂದ ಮಾತನಾಡುತ್ತಾರೆ. "ನನ್ನ ಶೇಪ್‌ಔಟ್‌ ಮಾಡಲು ಹೋಗಿ ಇವಳು ಶೇಪ್‌ಔಟ್‌ ಆದ್ಲು, ಪಾಪಾ ಅಪ್ಪಿ" ಎಂದುಕೊಳ್ಳುತ್ತಾಳೆ ಭೂಮಿಕಾ.

ಮಲ್ಲಿ ಮತ್ತು ಜೈದೇವ್‌ ಮಾತನಾಡುತ್ತಾರೆ. ನಾನು ಹೊರಗೆ ಹೋಗಿ ಬರ್ತಿನಿ ಎನ್ನುತ್ತಾನೆ. ಎಲ್ಲೂ ಹೋಗಬೇಡಿ ರೆಸ್ಟ್‌ ಮಾಡಿ ಎನ್ನುತ್ತಾಳೆ ಮಲ್ಲಿ. "ಮನೆಯಲ್ಲಿದ್ದು ಬೋರ್‌ ಆಗ್ತಾ ಇದೆ. ಮೈಂಡ್‌ ರಿಕವರ್‌ ಆಗಲಿ ಎಂದು ಹೋಗುವೆ" ಎಂದೆಲ್ಲ ಮಲ್ಲಿಯ ಮನಸ್ಸು ಬದಲಾಯಿಸಲು ಯತ್ನಿಸುತ್ತಾನೆ. ಮಲ್ಲಿಯೂ "ನೀವೂ ಹುಷರಾಗಿ, ಆಮೇಲೆ ಹೋಗಿ" ಎಂದು ಹೇಳುತ್ತಾಳೆ. "ಮನೆ ಪಕ್ಕದಲ್ಲಿ ಒಂದು ದೇವಸ್ಥಾನಕ್ಕೆ ಹೋಗಿ ಬರೋಣ" ಎಂದು ಹೇಳುತ್ತಾನೆ. ನಾನು ಬರೋಲ್ಲ ಎಂದು ಹೇಳುತ್ತಾಳೆ. "ಅಲ್ಲಿ ಒಬ್ಬಂಟಿಯಾಗಿ ಬಿಟ್ಟು ಬರ್ತಿನಿ ಎಂದುಕೊಂಡಿಯ. ನಾನು ಪ್ರಾಯಶ್ಚಿತಕ್ಕೆ ಹೋಗಿ ಬರೋದು. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತೆ" ಎಂದೆಲ್ಲ ಹೇಳುತ್ತಾನೆ.

ಶಕುಂತಲಾದೇವಿಯಲ್ಲಿ ಕ್ಷಮಾಪಣೆ ಕೇಳಿದ ಭೂಮಿಕಾ

ಶಕುಂತಲಾದೇವಿ, ರಮಾಕಾಂತ್‌ ಇರುವಲ್ಲಿಗೆ ಭೂಮಿಕಾ ಬರುತ್ತಾರೆ. "ಅತ್ತೆ ನಿಮ್ಮಲ್ಲಿ ಸ್ವಲ್ಪ ಮಾತನಾಡಬೇಕಿತ್ತು" ಎನ್ನುತ್ತಾರೆ. "ಐ ಆಮ್‌ ಸಾರಿ ಅತ್ತೆ. ಜೈದೇವ್‌ ವಿಷಯದಲ್ಲಿ ನನ್ನಲ್ಲಿ ಬೇಜಾರಾಗಿರಬಹುದು" ಎನ್ನುತ್ತಾರೆ. "ಜೈದೇವ್‌ ತಪ್ಪು ಮಾಡಿದ್ದಾರೆ. ಅವರನ್ನು ತಪ್ಪಿತಸ್ಥರನ್ನಾಗಿ ಮಾಡೋದು ಉದ್ದೇಶವಲ್ಲ. ಗೌತಮ್‌ ಮೂಲಕ ಹೇಳಿದ್ರೆ ತಿದ್ದಿಕೊಳ್ಳುತ್ತಾರೆ ಎಂದುಕೊಂಡಿದ್ದೆ. ಜೈದೇವ್‌ ಈ ರೀತಿ ಮಾಡ್ತಾರೆ ಎಂದುಕೊಂಡಿರಲಿಲ್ಲ" ಎಂದು ಹೇಳುತ್ತಾಳೆ. "ನೀನ್ಯಾಕೆ ಸಾರಿ ಕೇಳ್ತಿ. ಈ ವಿಷಯದಲ್ಲಿ ನೀನು ಕ್ಷಮೆ ಕೇಳುವ ಅಗತ್ಯವಿಲ್ಲ. ಇದ್ರಲ್ಲಿ ನಿನ್ನ ತಪ್ಪು ಯಾವುದೂ ಇಲ್ಲ. ನೀನು ಮಾಡಿದ್ದು ಸರಿ ಇದೆ. ನಿಜವಾಗಿಯೂ ಇದನ್ನು ನಾನು ಮಾಡಬೇಕಿತ್ತು. ನಿನ್ನ ಮೂಲಕ ಆಯ್ತು" ಎಂದು ಶಕುಂತಲಾದೇವಿ ಹೇಳುತ್ತಾರೆ. "ಜೈದೇವ್‌ ತಿದ್ದಿಕೊಳ್ತಾರೆ" ಎಂದು ಭೂಮಿಕಾ ಕೂಡ ಸಮಾಧಾನ ಹೇಳುತ್ತಾಳೆ.

ಬರಿಗೈಯಲ್ಲಿ ದೇವರಿಗೆ ಕರ್ಪೂರದ ಆರತಿ ಮಾಡಿದ ಜೈದೇವ್‌

ಜೈದೇವ್‌ ಮತ್ತು ಮಲ್ಲಿ ದೇವಸ್ಥಾನಕ್ಕೆ ಬಂದಿದ್ದಾರೆ. ಮಲ್ಲಿ ಭಕ್ತಿಯಿಂದ ದೇವರಲ್ಲಿ ಬೇಡಿಕೊಳ್ಳುತ್ತಾಳೆ. ಹಿಂತುರುಗಿ ನೋಡಿದಾಗ ಜೈದೇವ್‌ ಬರಿಗೈಯಲ್ಲಿ ಕರ್ಪೂರ ಹಾಕಿಕೊಂಡು ದೇವರಿಗೆ ಆರತಿ ಮಾಡುತ್ತಾನೆ. ಓಡೋಡಿ ಬಂದು ಅದನ್ನು ಕೆಳಕ್ಕೆ ಹಾಕುತ್ತಾಳೆ ಮಲ್ಲಿ. "ಇನ್ನು ನಾನು ಏನೂ ತಪ್ಪು ಮಾಡೋಲ್ಲ" ಎಂದೆಲ್ಲ ಮಲ್ಲಿಯಲ್ಲಿ ಹೇಳುತ್ತಾನೆ ಜೈದೇವ್‌. ಈ ಮೂಲಕ ಮಲ್ಲಿಯ ಮನಸ್ಸನ್ನು ಮತ್ತೆ ಗೆಲ್ಲುವ ಪ್ರಯತ್ನದಲ್ಲಿದ್ದಾನೆ ಜೈದೇವ್‌.

ಭೂಮಿಕಾ ಗೌತಮ್‌ಗೆ ಕಾಲ್‌ ಮಾಡಿ ಖುಷಿಯಿಂದ ಮಾತನಾಡುತ್ತಾಳೆ. "ಇನ್ನಷ್ಟು ಸಕ್ಸಸ್‌ ಸಿಗಲಿ" ಎಂದು ಹಾರೈಸುತ್ತಾಳೆ. "ಎಲ್ಲಾ ನಿಮ್ಮಿಂದಲೇ ಆಗಿದ್ದು, ಪಾರ್ಥ ಕೂಡ ಅದೇ ಹೇಳ್ದ" ಎಂದು ಗೌತಮ್‌ ಹೇಳುತ್ತಾರೆ. ಅಪೇಕ್ಷಾಗೆ ಇದೆಲ್ಲವೂ ಭೂಮಿಕಾಳಿಂದ ಆಗಿರೋದು ಎಂದು ತಿಳಿದಿರುವುದಿಲ್ಲ. ಗೌತಮ್‌ ಮತ್ತು ಭೂಮಿಕಾರ ಪ್ರೀತಿಯ ಮಾತುಗಳು ಮುಂದುವರೆಯುತ್ತದೆ.

ಜೈದೇವ್‌ ಒಬ್ಬನೇ ಕುಳಿತಿದ್ದಾನೆ. "ಜೈದೇವ್‌ ಎಂತಹ ಕೇಡಿ ಎಂದು ತೋರಿಸುವೆ" ಎಂದುಕೊಳ್ಳುತ್ತಾನೆ. ಅಲ್ಲಿಗೆ ರಮಾಕಾಂತ್‌ ಬರುತ್ತಾನೆ. ಎಲ್ಲಿಗೆ ಹೋಗಿದ್ದೆ ಎಂದು ಕೇಳುತ್ತಾನೆ. "ದೇವರ ಮೇಲೆ ನಿನಗೆ ನಂಬಿಕೆ ಇಲ್ಲ. ಯಾಕೆ ಹೋಗಿದ್ದೆ" ಎಂದು ಕೇಳುತ್ತಾನೆ. "ಇದು ಸಿಂಪತಿ ಗಳಿಸುವ ಪ್ಲ್ಯಾನ್‌" ಎಂದು ಜೈದೇವ್‌ ತನ್ನ ಕ್ರಿಮಿನಲ್‌ ಮೈಂಡ್‌ ಅನ್ನು ರಮಾಕಾಂತ್‌ ಜತೆ ಹಂಚಿಕೊಳ್ಳುತ್ತಾನೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner