ಕನ್ನಡ ಸುದ್ದಿ  /  ಕರ್ನಾಟಕ  /  ಬೆಸ್ಕಾಂ ಬಳಕೆದಾರರೇ, 1912 ಕರೆ ಮಾಡಲಾಗದಿದ್ದರೆ ಚಿಂತೆ ಬೇಡ, ವಾಟ್ಸ್‌ಆಪ್ ನಂಬರ್‌ಗಳ ಪಟ್ಟಿಯೇ ಇದೆ ನೋಡಿ

ಬೆಸ್ಕಾಂ ಬಳಕೆದಾರರೇ, 1912 ಕರೆ ಮಾಡಲಾಗದಿದ್ದರೆ ಚಿಂತೆ ಬೇಡ, ವಾಟ್ಸ್‌ಆಪ್ ನಂಬರ್‌ಗಳ ಪಟ್ಟಿಯೇ ಇದೆ ನೋಡಿ

ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಎದುರಾದಾಗ 1912 ಸಂಖ್ಯೆಗೆ ಕರೆ ಮಾಡಿ ಸಂಪರ್ಕ ಸಾಧಿಸುವುದು ಬಹಳ ತ್ರಾಸದಾಯಕ ಎಂಬ ದೂರಿದೆ. ಬೆಸ್ಕಾಂ ಬಳಕೆದಾರರೇ, 1912 ಕರೆ ಮಾಡಲಾಗದಿದ್ದರೆ ಚಿಂತೆ ಬೇಡ, ವಾಟ್ಸ್‌ಆಪ್ ನಂಬರ್‌ಗಳ ಪಟ್ಟಿಯೇ ಇದೆ ನೋಡಿ ಎಂದು ಬೆಸ್ಕಾಂ ಹೊಸ ಉಪಕ್ರಮ ತೆಗೆದುಕೊಂಡಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಸ್ಕಾಂ ಬಳಕೆದಾರರೇ, 1912 ಕರೆ ಮಾಡಲಾಗದಿದ್ದರೆ ಚಿಂತೆ ಬೇಡ, ವಾಟ್ಸ್‌ಆಪ್ ನಂಬರ್‌ಗಳ ಪಟ್ಟಿಯನ್ನೇ ಬೆಸ್ಕಾಂ ಕೊಟ್ಟಿದೆ. (ಸಾಂಕೇತಿಕ ಚಿತ್ರ)
ಬೆಸ್ಕಾಂ ಬಳಕೆದಾರರೇ, 1912 ಕರೆ ಮಾಡಲಾಗದಿದ್ದರೆ ಚಿಂತೆ ಬೇಡ, ವಾಟ್ಸ್‌ಆಪ್ ನಂಬರ್‌ಗಳ ಪಟ್ಟಿಯನ್ನೇ ಬೆಸ್ಕಾಂ ಕೊಟ್ಟಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಗಾಳಿ ಮತ್ತು ಮಳೆಗೆ ವಿದ್ಯುತ್‌ ಕಂಬಗಳು ಮುರಿದು ಬಿದ್ದಿದ್ದು ಅನೇಕ ವಿದ್ಯುತ್‌ ಮೂಲ ಸೌಕರ್ಯಗಳು ಹಾನಿಗೊಳಗಾಗಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಬೆಸ್ಕಾಂ ಸಹಾಯವಾಣಿ 1912ಗೆ ದೂರುಗಳ ಪ್ರವಾಹವೇ ಹರಿದು ಬರುತ್ತಿದ್ದು, ಕರೆಗಳ ಒತ್ತಡದಿಂದಾಗಿ ಗ್ರಾಹಕರಿಗೆ 1912 ಸಂಪರ್ಕ ಸಾಧ್ಯವಾಗುತ್ತಿಲ್ಲ.

ಟ್ರೆಂಡಿಂಗ್​ ಸುದ್ದಿ

ಮಳೆಗಾಲದಲ್ಲಿ ಗ್ರಾಹಕರ ವಿದ್ಯುತ್‌ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರಿಗೆ ಪಯಾರ್ಯ ವಾಟ್ಸ್‌ ಆಪ್‌ ಸಂಖ್ಯೆಗಳನ್ನು ನೀಡಲಾಗಿದೆ. ಈ ವಾಟ್ಸ್‌ಆಪ್‌ ಸಂಖ್ಯೆಗಳಿಗೆ ಗ್ರಾಹಕರು ಸಂದೇಶ ಹಾಗೂ ಛಾಯಾಚಿತ್ರಗಳನ್ನು ತಮ್ಮ ವಿಳಾಸದೊಂದಿಗೆ ಕಳುಹಿಸಿದರೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಬೆಸ್ಕಾಂಗೆ ಸಹಾಯವಾಗಲಿದೆ. ಗ್ರಾಹಕರು ತಮ್ಮ ವಿದ್ಯುತ್‌ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಈ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಸ್ಕಾಂ ಪರ್ಯಾಯ ಸಹಾಯವಾಣಿ ಸಂಖ್ಯೆ ಮತ್ತು ವಾಟ್ಸ್‌ಆಪ್ ಸಂಖ್ಯೆಗಳ ವಿವರ

ಬಳಕೆದಾರರಿಗೆ ಅನುಕೂಲವಾಗುವಂತೆ ಬೆಸ್ಕಾಂ ಪರ್ಯಾಯ ಸಹಾಯವಾಣಿ ಸಂಖ್ಯೆ ಮತ್ತು ವಾಟ್ಸ್‌ಆಪ್ ಸಂಖ್ಯೆಗಳ ವಿವರ ನೀಡಿದೆ. ಇದಲ್ಲದೆ, ಎಸ್‌ ಎಂಎಸ್ ಗಳನ್ನು ಕಳುಹಿಸಲು ಬೆಸ್ಕಾಂ ಬೆಂಗಳೂರು ಮಹಾನಗರ ವ್ಯಾಪ್ತಿಯ ಗ್ರಾಹಕರಿಗೆ 12 ಮೊಬೈಲ್‌ ಸಂಖ್ಯೆಗಳನ್ನು ಕೂಡ ಒದಗಿಸಲಾಗಿದೆ.

ಈ ಮೊಬೈಲ್‌ ಸಂಖ್ಯೆಗಳು ಅಂದರೆ, 9480816108, 9480816109, 9480816110, 9480816111, 9480816112, 9480816113, 9480816114, 9480816115, 9480816116, 9480816117, 9480816118 ಮತ್ತು 9480816119 ಗಳನ್ನು ಕೇವಲ ಎಸ್‌ಎಂಎಸ್‌ ಗಳಿಗೆ ಮಾತ್ರ ಮೀಸಲಿಡಲಾಗಿದೆ.

ಜಿಲ್ಲಾವಾರು ಬೆಸ್ಕಾಂ ವಾಟ್ಸ್‌ಆಪ್‌ ಸಂಖ್ಯೆಗಳು ಹೀಗಿವೆ

ಬೆಂಗಳೂರು ಪೂರ್ವ- 8277884013, ಬೆಂಗಳೂರು ಪಶ್ಚಿಮ- 8277884012, ಬೆಂಗಳೂರು ಉತ್ತರ- 8277884014, ಬೆಂಗಳೂರು ದಕ್ಷಿಣ- 8277884011. ಕೋಲಾರ- 8277884015, ಚಿಕ್ಕಬಳ್ಳಾಪುರ- 8277884016, ಬೆಂಗಳೂರು ಗ್ರಾಮಾಂತರ- 8277884017, ರಾಮನಗರ- 8277884018, ತುಮಕೂರು- 8277884019, ಚಿತ್ರದುರ್ಗ- 8277884020 ಹಾಗೂ ದಾವಣಗೆರೆ- 8277884021.

ಸುರಕ್ಷತೆ ಸಂಬಂಧಿಸಿದ ದೂರುಗಳಿಗೆ ವಾಟ್ಸ್‌ ಆಪ್‌ ಸಂಖ್ಯೆ - 9483191212, 9483191222 ಮತ್ತು ಬೆಸ್ಕಾಂ ಸಾಮಾನ್ಯ ವಾಟ್ಸ್‌ ಆಪ್‌ ಸಂಖ್ಯೆ- 9449844640.

ಸೈಬರ್ ವಂಚಕರ ಬಗ್ಗೆ ಜಾಗರೂಕರಾಗಿರಿ - ಬೆಸ್ಕಾಂ ಟ್ವೀಟ್‌

ಗ್ರಾಹಕರು ಸೈಬರ್ ವಂಚಕರ ಜಾಲಕ್ಕೆ ಗುರಿಯಾಗದೆ, ಆನ್‌ಲೈನ್ ವ್ಯವಹಾರಗಳನ್ನು ಮಾಡುವಾಗ, ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಸುರಕ್ಷಿತವಾಗಿರಿ ಎಂದು ಬೆಸ್ಕಾಂ ಎಚ್ಚರಿಸಿದೆ.

ಸೈಬರ್ ವಂಚಕರ ಜಾಲಕ್ಕೆ ಬೀಳದಂತೆ ಎಚ್ಚರವಹಿಸಿಕೊಳ್ಳುವುದರ ಜೊತೆಗೆ, ಬಯೋಮೆಟ್ರಿಕ್ ದೃಢೀಕರಣ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಹಣಪಾವತಿಸುವ ಮೊದಲು ಸ್ವೀಕರಿಸುವವರ ವಿವರ ಪರಿಶೀಲಿಸಬೇಕು. ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್‌ಗಳನ್ನು ಆಗಾಗ್ಗೆ ಪರಿಶೀಲಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸುವಾಗ ಪಾಸ್‌ವರ್ಡ್ ಅಥವಾ ಒಟಿಪಿ ಬಂದರೆ ಅದನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಬೆಸ್ಕಾಂ ಎಚ್ಚರಿಸಿದೆ.

ಅಷ್ಟೇ ಅಲ್ಲ, ಸೈಬರ್ ವಂಚನೆಗೆ ಒಳಗಾಗಿರುವುದು ಮನವರಿಕೆ ಆದ ಕೂಡಲೇ ಸೈಬರ್ ಸಹಾಯವಾಣಿ 112ಕ್ಕೆ ಕರೆ ಮಾಡಬೇಕು ಅಥವಾ ಬೆಸ್ಕಾಂನ 24X7 ಸಹಾಯವಾಣಿ 1912ಕ್ಕೆ ಕರೆಮಾಡಬೇಕು ಎಂದು ಬೆಸ್ಕಾಂ ಗ್ರಾಹಕರಲ್ಲಿ ಮನವಿ ಮಾಡಿದೆ.

(ವರದಿ- ಎಚ್. ಮಾರುತಿ, ಬೆಂಗಳೂರು)

IPL_Entry_Point