ಬೆಂಗಳೂರಲ್ಲಿ ಭಾರಿ ಮಳೆಗೆ ರಸ್ತೆ, ಅಂಡರ್‌ಪಾಸ್ ಜಲಾವೃತ್ತವಾಗಿ ಸಂಚಾರ ಅಸ್ತವ್ಯಸ್ತ, ರಾಜ್ಯದ ವಿವಿಧೆಡೆ ಮಳೆ- ಹವಾಮಾನ ಮುನ್ಸೂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಭಾರಿ ಮಳೆಗೆ ರಸ್ತೆ, ಅಂಡರ್‌ಪಾಸ್ ಜಲಾವೃತ್ತವಾಗಿ ಸಂಚಾರ ಅಸ್ತವ್ಯಸ್ತ, ರಾಜ್ಯದ ವಿವಿಧೆಡೆ ಮಳೆ- ಹವಾಮಾನ ಮುನ್ಸೂಚನೆ

ಬೆಂಗಳೂರಲ್ಲಿ ಭಾರಿ ಮಳೆಗೆ ರಸ್ತೆ, ಅಂಡರ್‌ಪಾಸ್ ಜಲಾವೃತ್ತವಾಗಿ ಸಂಚಾರ ಅಸ್ತವ್ಯಸ್ತ, ರಾಜ್ಯದ ವಿವಿಧೆಡೆ ಮಳೆ- ಹವಾಮಾನ ಮುನ್ಸೂಚನೆ

Bengaluru Rains; ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇಂದು ಮಧ್ಯಾಹ್ನ ನಂತರ ಸುರಿದ ಭಾರಿ ಮಳೆಗೆ ವಿವಿಧರೆ ರಸ್ತೆ, ಅಂಡರ್‌ಪಾಸ್‌ಗಳು ಜಲಾವೃತವಾಗಿವೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು. ಇದಲ್ಲದೆ, ರಾಜ್ಯದಾದ್ಯಂತ ಅಲ್ಲಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಚದುರಿದಂತೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಮುನ್ಸೂಚನೆ ಇದೆ.

ಬೆಂಗಳೂರಲ್ಲಿ ಇಂದು (ಆಗಸ್ಟ್ 19) ಮಧ್ಯಾಹ್ನ ನಂತರ ಸುರಿದ ಭಾರಿ ಮಳೆಗೆ ಅಂಡರ್‌ಪಾಸ್‌ ಮತ್ತು ರಸ್ತೆಗಳು ಜಲಾವೃತವಾಗಿವೆ.
ಬೆಂಗಳೂರಲ್ಲಿ ಇಂದು (ಆಗಸ್ಟ್ 19) ಮಧ್ಯಾಹ್ನ ನಂತರ ಸುರಿದ ಭಾರಿ ಮಳೆಗೆ ಅಂಡರ್‌ಪಾಸ್‌ ಮತ್ತು ರಸ್ತೆಗಳು ಜಲಾವೃತವಾಗಿವೆ. (BTP)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಸೋಮವಾರ (ಆಗಸ್ಟ್ 19) ಅಪರಾಹ್ನ ಸುರಿದ ಭಾರಿ ಮಳೆಗೆ ವಿವಿಧೆಡೆ ರಸ್ತೆ, ಅಂಡರ್‌ಪಾಸ್‌ಗಳು ಜಲಾವೃತವಾಗಿ ಸಂಚಾರ ಅಸ್ತವ್ಯಸ್ತವಾಯಿತು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ವಿಶ್ವನಾಥ ನಾಗೇನಹಳ್ಳಿಯಲ್ಲಿ ಕೆಲವೇ ನಿಮಿಷಗಳಲ್ಲಿ 30 ಮಿ.ಮೀ. ಮಳೆ ಸುರಿದ ಕಾರಣ ಅಲ್ಲಿ ಜನಜೀವನ ಅಸ್ತವ್ಯಸ್ತವಾಯಿತು. ಇದೇ ರೀತಿ ಕೊಡಿಗೇಹಳ್ಳಿಯಲ್ಲಿ 28 ಮಿಮೀ, ಬಾಣಸವಾಡಿ 18 ಮಿಮೀ, ರಾಜಮಹಲ್ ಗುಟ್ಟಹಳ್ಳಿ 12.5 ಮಿಮೀ ಮಳೆ ದಾಖಲಾಯಿತು ಎಂದು ಸ್ಥಳೀಯಾಡಳಿತ ಸಂಸ್ಥೆಯ ಮೂಲಗಳು ತಿಳಿಸಿವೆ. ಇನ್ನುಳಿದಂತೆ, ಭಾರಿ ಮಳೆಯ ಕಾರಣ ರಸ್ತೆಗಳು ಜಲಾವೃತವಾಗಿ ಹಲವೆಡೆ ಸಂಚಾರಕ್ಕೆ ಅಡ್ಡಿಯಾಯಿತು

ಬೆಂಗಳೂರಲ್ಲಿ ನಾಳೆ ಬೆಳಗ್ಗೆ 8.30ರ ತನಕದ ಹವಾಮಾನ ಮುನ್ಸೂಚನೆ

ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ಹವಾಮಾನ ಮುನ್ಸೂಚನೆ ಪ್ರಕಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಾಳೆ (ಆಗಸ್ಟ್ 20) ಬೆಳಗ್ಗೆ 8.30ರ ತನಕದ ಅವಧಿಯಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಎರಡೂ ಜಿಲ್ಲೆಗಳಲ್ಲಿ ನಾಳೆ ಬೆಳಗ್ಗೆವರೆಗೆ ಮೋಡ ಕವಿದ ವಾತಾವರಣ ಇರಲಿದ್ದು, ತಾಪಮಾನ ಗರಿಷ್ಠ 30 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 22 ಸೆಲ್ಶಿಯಸ್ ಇರಬಹುದು. ಈ ಎರಡೂ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವ ಕಾರಣ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಲ್ಲಿ ಈಗಾಗಲೇ ಮಳೆ ಸುರಿಯತೊಡಗಿದೆ. ಕೆಲವು ಪ್ರದೇಶಗಳಲ್ಲಿ ರಸ್ತೆ ಜಲಾವೃತವಾಗಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಹೆಬ್ಬಾಳ ಫ್ಲೈಓವರ್ ಮೇಲ್ಸೇತುವೆಯಿಂದ ಹೆಬ್ಬಾಳ ವೃತ್ತ ಕಡೆಗೆ, ಹೆಬ್ಬಾಳ ಡೌನ್‌ರಾಂಪ್ ಯಿಂದ ವಿಮಾನ ನಿಲ್ದಾಣದ ಕಡೆಗೆ, ಹೊರ ವರ್ತುಲ ರಸ್ತೆಯ (ಎರಡು ಕಡೆ) ವೀರಣ್ಣಪಾಳ್ಯ ಮತ್ತು ಹೆಬ್ಬಾಳ ಕಡೆಗೆ, ದೇವಿನಗರ ಕ್ರಾಸ್‌ಗಳಲ್ಲಿ ಮಳೆ ನೀರು ನಿಂತ ಕಾರಣ ನಿಧಾನ ಗತಿ ಸಂಚಾರ ಇದೆ ಎಂದು ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಮಹಾನಗರದಲ್ಲಿ ರಸ್ತೆ ಮೇಲೆ ಮಳೆ ನೀರು ನಿಂತ ಕಾರಣ ಎಲ್ಲೆಲ್ಲಿ ನಿಧಾನಗತಿಯ ಸಂಚಾರ

1) ಕುವೆಂಪು ವೃತ್ತದಿಂದ ದೇವಿನಗರದ ಕಡೆಗೆ.

2) ನಾಗವಾರ ಕೆಇಬಿಯಿಂದ ಹೆಣ್ಣೂರು ಕ್ರಾಸ್ ಕಡೆಗೆ (ಎರಡೂ ಬದಿಯಲ್ಲಿ).

3) ಸಂಜಯ್ ನಗರ ಕ್ರಾಸ್ ನಿಂದ ವಿಮಾನ ನಿಲ್ದಾಣದ ಕಡೆಗೆ.

4) ಭಾರೀ ಮಳೆಯಿಂದಾಗಿ ಹೆಣ್ಣೂರು, ಎಚ್‌ಆರ್‌ಬಿಆರ್ ಲೇಔಟ್, ಕಲ್ಯಾಣನಗರ, ಜಯಮಹಲ್ ರಸ್ತೆಯ ಒಆರ್‌ಆರ್‌ನಲ್ಲಿ ನಿಧಾನಗತಿಯ ಸಂಚಾರವಿರುತ್ತದೆ.

5) ನಾಗವಾರ ಜಂಕ್ಷನ್ ರಾಜ್ ಎಲ್ಲಿಗೆನ್ಸ್ ಬಳಿ ವಾಟರ್ ಲಾಗಿಂಗ್ ಆಗಿದ್ದು ಹೆಬ್ಬಾಳ ಕಡೆಗೆ ನಿದಾನ ಗತಿಯ ಸಂಚಾರವಿರುತ್ತದೆ

6) ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣ ನಗರ ಅಂಡರ್ ಬ್ರಿಡ್ಜ್ ಬಳಿ ಸುರಿದ ಭಾರಿ ಮಳೆಯಿಂದಾಗಿ ವಾಟರ್ ಲಾಗಿಂಗ್ ಉಂಟಾಗಿದ್ದು, ಸಂಚಾರವು ನಿಧಾನಗತಿಯಲ್ಲಿದೆ.

7) ವಡ್ಡರಪಾಳ್ಯ ಜಂಕ್ಷನ್‌ ಬಳಿ ನೀರು ನಿಂತಿರುವುದರಿಂದ ನಗರದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ

8) ಯೋಗೇಶ್ವರನಗರ ಕ್ರಾಸ್‌ ಬಳಿ ಮಳೆ ನೀರು ನಿಂತಿರುವುದರಿಂದ ವೀರಣ್ಣಪಾಳ್ಯ ಕಡೆಗೆ ನಿಧಾನಗತಿಯ ಸಂಚಾರವಿದೆ

9) ದೇವಿನಗರ ಅಂಡರ್‌ಪಾಸ್‌ ಬಳಿ ನೀರು ನಿಂತಿರುವುದರಿಂದ ಭೂಪಸಂದ್ರ ಕಡೆಗೆ ನಿಧಾನಗತಿಯ ಸಂಚಾರವಿದೆ

10) ವಿಂಡ್ಸರ್ ಮ್ಯಾನರ್ ರೈಲ್ವೆ ಸೇತುವೆಯ ಕೆಳಭಾಗದಲ್ಲಿ ಮಳೆ ನೀರು ನಿಂತಿರುವುದರಿಂದ ಕಾವೇರಿ ಥಿಯೇಟರ್ ಕಡೆಗೆ ನಿಧಾನಗತಿಯ ಸಂಚಾರವಿದೆ

11) ಸದಾಶಿವನಗರ ಪೊಲೀಸ್ ಠಾಣೆ ಬಳಿ ನೀರು ನಿಂತಿರುವುದರಿಂದ ರಾಮಯ್ಯ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ

ಕರ್ನಾಟಕದ ವಿವಿಧೆಡೆ ಮಳೆ, ಹವಾಮಾನ ಮುನ್ಸೂಚನೆ ವರದಿ: ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿರುವ ಕಾರಣ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಚಿಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲೂ ನಾಳೆ ಬೆಳಗ್ಗೆ 8.30ರ ತನಕ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

Whats_app_banner