ಅಬ್ಬಾ.. ಮಳೆಗೆ ಮಾನ್ಯತಾ ಟೆಕ್‌ ಪಾರ್ಕ್‌ ಕೂಡ ಜಲಾವೃತ, ಲೇಕ್, ವಾಟರ್‌ಫಾಲ್ಸ್ ಎಲ್ಲ ಇಲ್ಲೇ ನೋಡಬಹುದು ಅಂತಿದ್ದಾರೆ ಉದ್ಯೋಗಿಗಳು- ವಿಡಿಯೋ
ಕನ್ನಡ ಸುದ್ದಿ  /  ಕರ್ನಾಟಕ  /  ಅಬ್ಬಾ.. ಮಳೆಗೆ ಮಾನ್ಯತಾ ಟೆಕ್‌ ಪಾರ್ಕ್‌ ಕೂಡ ಜಲಾವೃತ, ಲೇಕ್, ವಾಟರ್‌ಫಾಲ್ಸ್ ಎಲ್ಲ ಇಲ್ಲೇ ನೋಡಬಹುದು ಅಂತಿದ್ದಾರೆ ಉದ್ಯೋಗಿಗಳು- ವಿಡಿಯೋ

ಅಬ್ಬಾ.. ಮಳೆಗೆ ಮಾನ್ಯತಾ ಟೆಕ್‌ ಪಾರ್ಕ್‌ ಕೂಡ ಜಲಾವೃತ, ಲೇಕ್, ವಾಟರ್‌ಫಾಲ್ಸ್ ಎಲ್ಲ ಇಲ್ಲೇ ನೋಡಬಹುದು ಅಂತಿದ್ದಾರೆ ಉದ್ಯೋಗಿಗಳು- ವಿಡಿಯೋ

ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಕಾರಣ ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ, ಮಳೆಗೆ ಮಾನ್ಯತಾ ಟೆಕ್‌ ಪಾರ್ಕ್‌ ಕೂಡ ಜಲಾವೃತ, ಲೇಕ್, ವಾಟರ್‌ಫಾಲ್ಸ್ ಎಲ್ಲ ಇಲ್ಲೇ ನೋಡಬಹುದು ಎಂದು ಉದ್ಯೋಗಿಗಳು ಹೇಳತೊಡಗಿದ್ದು, ವಿಡಿಯೋಗಳು ವೈರಲ್ ಆಗಿವೆ.

ಮಳೆಗೆ ಮಾನ್ಯತಾ ಟೆಕ್‌ ಪಾರ್ಕ್‌ ಕೂಡ ಜಲಾವೃತ, ಲೇಕ್, ವಾಟರ್‌ಫಾಲ್ಸ್ ಎಲ್ಲ ಇಲ್ಲೇ ನೋಡಬಹುದು ಅಂತಿದ್ದಾರೆ ಉದ್ಯೋಗಿಗಳು. ವಿಡಿಯೋದಿಂದ ತೆಗೆದ ಚಿತ್ರ.
ಮಳೆಗೆ ಮಾನ್ಯತಾ ಟೆಕ್‌ ಪಾರ್ಕ್‌ ಕೂಡ ಜಲಾವೃತ, ಲೇಕ್, ವಾಟರ್‌ಫಾಲ್ಸ್ ಎಲ್ಲ ಇಲ್ಲೇ ನೋಡಬಹುದು ಅಂತಿದ್ದಾರೆ ಉದ್ಯೋಗಿಗಳು. ವಿಡಿಯೋದಿಂದ ತೆಗೆದ ಚಿತ್ರ. (HT News)

ಬೆಂಗಳೂರು: ಭಾರಿ ಮಳೆಗೆ ಬೆಂಗಳೂರು ಜನಜೀವನ ಅಸ್ತವ್ಯಸ್ತವಾಗಿದ್ದು, ವಿವಿಧೆಡೆ ರಸ್ತೆಗಳು ಜಲಾವೃತವಾಗಿವೆ. ಭಾರತದ ಪ್ರಮುಖ ಟೆಕ್‌ ಹಬ್‌ ಎನಿಸಿಕೊಂಡಿರುವ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ ಪ್ರವಾಹಪೀಡಿತ ಪ್ರದೇಶದಂತಾಗಿದೆ. 300 ಎಕರೆ ಪ್ರದೇಶದರಲ್ಲಿರುವ ಟೆಕ್ ಪಾರ್ಕ್‌ ಮಳೆನೀರಿನಿಂದ ತುಂಬಿಕೊಂಡಿದ್ದು, ಅಲ್ಲಿನ ವಿವಿಧ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆದಿವೆ. ಮಂಗಳವಾರ ಬೆಳಗ್ಗೆ ಸುರಿದ ಮಳೆಗೆ ರಸ್ತೆ ತುಂಬಾ ನೀರು ತುಂಬಿಕೊಂಡು ವಾಹನಗಳು ಅದರಲ್ಲಿ ಸಿಲುಕಿ ಸಂಚಾರಕ್ಕೆ ಸವಾರರು ಪರದಾಡುವಂತಾಯಿತು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಜಲಾವೃತವಾಗಿದೆ ಮಾನ್ಯತಾ ಟೆಕ್ ಪಾರ್ಕ್‌

ಬೆಂಗಳೂರಿನ ಮಳೆಯ ವಿಚಾರ ಮೈಕ್ರೋ ಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ವ್ಯಾಪಕವಾಗಿ ಚರ್ಚೆಗೆ ಒಳಗಾಗಿದ್ದು, ನಾರ್ತ್ ಬೆಂಗಳೂರು ಪೋಸ್ಟ್ ಖಾತೆಯಲ್ಲಿ ಮಾನ್ಯತಾ ಟೆಕ್‌ ಪಾರ್ಕ್‌ ವಿಡಿಯೋ ಶೇರ್ ಆಗಿದೆ. ಇದರಲ್ಲಿ ಅದು “ಹೊರವರ್ತುಲ ರಸ್ತೆಯಲ್ಲಿರುವ ಮಾನ್ಯತಾ ಟೆಕ್ ಪಾರ್ಕ್‌ ಕಡೆಗೆ ಹೋಗುವ ರಸ್ತೆ ಜಲಾವೃತವಾಗಿದೆ. ನಸುಕಿನ ಮೂರು ಗಂಟೆಯಿಂದ ಎಡೆಬಿಡದೆ ಸುರಿಯುವ ಮಳೆ ಸಂಕಷ್ಟವನ್ನು ಉಂಟುಮಾಡಿದೆ. ಸುತ್ತಮುತ್ತ ಪ್ರದೇಶದ ಜಲಾವೃತವಾಗಿದ್ದು, ಪ್ರವಾಹ ಪೀಡಿತ ಪ್ರದೇಶದಂತಾಗಿದೆ” ಎಂದು ಬರೆಯಲಾಗಿದೆ.

ಹೆಬ್ಬಾಳ ಮೇಲ್ಸೇತುವೆ ಬಳಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಮಳೆ ಹೆಚ್ಚಾಗಿರುವ ಕಾರಣ ಸಂಜೆ ಕಚೇರಿ ಬಿಡುವ ಸಮಯದಲ್ಲಿ ವ್ಯತ್ಯಾಸ ಮಾಡಿಕೊಂಡು ಹೊರಡುವುದು ಒಳಿತು ಎಂಬ ಅಭಿಪ್ರಾಯಗಳು ಕಚೇರಿ ಉದ್ಯೋಗಿಗಳ ವಲಯದಲ್ಲಿ ಹರಡಿದೆ. ಹವಾಮಾನ ವಿಷಯ ಮಂಡಿಸುವ ಬ್ಲಾಗರ್‌ಗಳು ಇದೇ ವಿಷಯವನ್ನು ಪ್ರಸ್ತಾಪಿಸಿದ್ದು, ಸಲಹೆ ಕೂಡ ಕೊಡುತ್ತಿದ್ಧಾರೆ.

ಬೆಂಗಳೂರು ಹೊರವರ್ತುಲ ರಸ್ತೆ ಸಂಚಾರ

ಬೆಂಗಳೂರು ವೆದರ್‌ಮ್ಯಾನ್‌ ಎಂಬ ವೆದರ್ ಬ್ಲಾರ್‌ ಅವರು, “ಹೊರವರ್ತುಲ ರಸ್ತೆಯಲ್ಲಿ ಸಂಚರಿಸುವವರು ಗಮನಿಸಿ. 2-3 ಗಂಟೆ ಮಳೆ ಇರುವ ಕಾರಣ, ಬೇಗನೆ ಕಚೇರಿ ಬಿಡುವುದು ಸಾಧ್ಯವಾದರೆ ಅಂತಹ ಅವಕಾಶವನ್ನು ಬಳಸಿಕೊಳ್ಳಿ” ಎಂದು ಸಲಹೆ ನೀಡಿದ್ಧಾರೆ.

ಮಾನ್ಯತಾ ಟೆಕ್ ಪಾರ್ಕ್‌ ಜಲಾವೃತವಾಗಿರುವ ವಿಡಿಯೋವನ್ನು ಸಿಟಿಜೆನ್‌ ಮೂವ್‌ಮೆಂಟ್ಸ್ ಈಸ್ಟ್ ಬೆಂಗಳೂರು ಶೇರ್ ಮಾಡಿದೆ.

ಎಕ್ಸ್‌ ತಾಣದಲ್ಲಿರುವ ಇನ್ನೊಬ್ಬ ಬಳಕೆದಾರ ಮಲ್ಲಿಕಾರ್ಜುನ್ ಅವರು, ಮಾನ್ಯತಾ ಟೆಕ್‌ ಪಾರ್ಕ್‌ನ ಇನ್ನಷ್ಟು ದೃಶ್ಯಗಳನ್ನು ಶೇರ್ ಮಾಡಿದ್ದು, ಮಾನ್ಯತಾ ಟೆಕ್ ಪಾರ್ಕ್‌ನ ಒಳಗೆ ಎಲ್ಲಿ ನೋಡಿದರೂ ಸರೋವರ ಮತ್ತು ಜಲಪಾತಗಳನ್ನು ಕಾಣಬಹುದು" ಎಂದು ತಮ್ಮ ಹತಾಶೆ, ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇನೊಬ್ಬ ಬಳಕೆದಾರ, ನೀರು ತುಂಬಿದ ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ, ಹೊಂಡಗಳಿರಬಹುದು, ಮ್ಯಾನ್‌ ಹೋಲ್‌ ಓಪನ್ ಆಗಿರಬಹುದು. ಹೀಗಾಗಿ ತಡವಾದರೂ ಪರವಾಗಿಲ್ಲ. ರಸ್ತೆ ಮೇಲೆ ನೀರು ಖಾಲಿಯಾದ ಮೇಲೆ ಸಂಚರಿಸಿ" ಎಂದು ಸಲಹೆ ನೀಡಿದ್ದಾರೆ.

ಮತ್ತೊಬ್ಬ ಬಳಕೆದಾರರು, ಕಚೇರಿಯೊಂದರ ಚಿತ್ರ ಶೇರ್ ಮಾಡಿಕೊಂಡು, ಮಾನ್ಯತಾ ಈಸ್ ಬ್ಲಾಕ್ಡ್‌ ಎಂದು ಬರೆದುಕೊಂಡಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬೆಂಗಳೂರು ಪ್ರದೇಶದಲ್ಲಿ ಮುಂದಿನ ಕೆಲವು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಭಾರೀ ಮಳೆಯೊಂದಿಗೆ ಮೋಡ ಕವಿದ ವಾತಾವರಣ ಮತ್ತು ದಟ್ಟ ಮುಗಿಲು ತುಂಬಿದ ಆಕಾಶವು ಮುಂದಿನ 2-3 ದಿನಗಳವರೆಗೆ ಮುಂದುವರಿಯಬಹುದು. ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿರುವ 7 ದಿನಗಳ ಮುನ್ಸೂಚನೆಯ ಪ್ರಕಾರ, ಅಕ್ಟೋಬರ್ 14 ಮತ್ತು 17 ರ ನಡುವೆ ಬೆಂಗಳೂರಿಗೆ ಸಾಧಾರಣದಿಂದ ಭಾರೀ ಮಳೆಯಾಗುತ್ತದೆ ಎಂದು ಮುನ್ಸೂಚನೆ ಇದೆ. ಬೆಂಗಳೂರು ಜೊತೆಗೆ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಪ್ರದೇಶಗಳಲ್ಲಿ ಈ ವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.

Whats_app_banner