G Parameshwara: ಎಫ್​ಐಆರ್ ದಾಖಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಟ್ಟುಕೊಡದ ಗೃಹ ಸಚಿವ ಪರಮೇಶ್ವರ
ಕನ್ನಡ ಸುದ್ದಿ  /  ಕರ್ನಾಟಕ  /  G Parameshwara: ಎಫ್​ಐಆರ್ ದಾಖಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಟ್ಟುಕೊಡದ ಗೃಹ ಸಚಿವ ಪರಮೇಶ್ವರ

G Parameshwara: ಎಫ್​ಐಆರ್ ದಾಖಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಟ್ಟುಕೊಡದ ಗೃಹ ಸಚಿವ ಪರಮೇಶ್ವರ

G Parameshwara: ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸಿಎಂ ವಿರುದ್ಧ ಎಫ್​ಐಆರ್​ ಮಾಡಿಕೊಂಡಿದ್ದಾರೆ. ಈ ಪ್ರಕರಣದ ತನಿಖೆ ಆರಂಭಿಸುವ ಸಲುವಾಗಿ ಎಫ್​ಐಆರ್​ ದಾಖಲಾಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಾದ ವಿಚಾರಕ್ಕೆ ಗೃಹ ಸಚಿವ ಜಿ ಪರಮೇಶ್ವರ ಅವರು ಪ್ರತಿಕ್ರಿಯಿಸಿದ್ದಾರೆ.a

ಎಫ್​ಐಆರ್ ದಾಖಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಟ್ಟುಕೊಡದ ಗೃಹ ಸಚಿವ ಪರಮೇಶ್ವರ
ಎಫ್​ಐಆರ್ ದಾಖಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಟ್ಟುಕೊಡದ ಗೃಹ ಸಚಿವ ಪರಮೇಶ್ವರ

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಎಫ್​ಐಆರ್​ ದಾಖಲಿಸಿದ ವಿಚಾರಕ್ಕೆ ಸಂಬಂಧಿಸಿ ಗೃಹ ಸಚಿವ ಡಾ.ಜಿ ಪರಮೇಶ್ವರ್​​ ಅವರು ತುಮಕೂರಿನಲ್ಲಿ ಪ್ರತಿಕ್ರಿಯಿಸಿದ್ದು, ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸಿಎಂ ವಿರುದ್ಧ ಎಫ್​ಐಆರ್​ ಮಾಡಿಕೊಂಡಿದ್ದಾರೆ. ಈ ಪ್ರಕರಣದ ತನಿಖೆ ಆರಂಭಿಸುವ ಸಲುವಾಗಿ ಎಫ್​ಐಆರ್​ ದಾಖಲಾಗಿದೆ ಎಂದಿದ್ದಾರೆ. ಯಾವುದೇ ತನಿಖೆಗೆ ಸಿದ್ಧ ಎಂದು ಈಗಾಗಲೇ ಮುಖ್ಯಮಂತ್ರಿ ಸ್ಪಷ್ಟವಾಗಿ ಹೇಳಿದ್ದಾರೆ. ತನಿಖೆ ಮಾಡಲು ಯಾವುದೇ ಅಭ್ಯಂತರ ಇಲ್ಲ, ತನಿಖೆ ಮಾಡಲಿ. ತನಿಖೆಯಲ್ಲಿ ವರದಿ ಏನು ಬರುತ್ತದೆ ಎಂಬುದರ ಆಧಾರದ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಇರುವಾಗ ಪಾರದರ್ಶಕ ತನಿಖೆ ನಡೆಯಲು ಸಾಧ್ಯನಾ ಎಂಬುದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಪಾರದರ್ಶಕವಾದ ತನಿಖೆ ನಡೆಯುತ್ತದೆ. ಲೋಕಾಯುಕ್ತ ಪೊಲೀಸರು ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ. ಲೋಕಾಯುಕ್ತ ನಮ್ಮ ಸರ್ಕಾರದ ಅಧೀನದಲ್ಲಿಲ್ಲ. ಸರ್ಕಾರ ಅವರಿಗೇ ಸಂಬಳ ಕೊಡುತ್ತದೆ, ಸಾರಿಗೆ ಕೊಡುತ್ತದೆ. ಆದರೆ ಅವರು ಅಡ್ಮಿನಿಸ್ಟ್ರೇಟಿವ್ ಸೆಟ್ ಅಪ್​ ಅಲ್ಲಿ ಇರುವುದಿಲ್ಲ. ನಾವು ಯಾರು ಕೂಡ ಅವರಿಗೆ ಸೂಚನೆ ಕೊಡೋಕೆ ಆಗೋದಿಲ್ಲ. ಅದು ಸ್ವತಂತ್ರವಾದ ಸ್ವಾಯತ್ತ ಸಂಸ್ಥೆ. ಅವರೇ ಪಾರದರ್ಶಕವಾಗಿ ತನಿಖೆ ಮಾಡ್ತಾರೆ. ಬೇರೆ ಯಾರೂ ಸಹ ಮಧ್ಯ ಪ್ರವೇಶಿಸುವಂತಿಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ ಎಂದ ಪರಮೇಶ್ವರ

ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂಬ ಸ್ನೇಹಮಯಿ ಕೃಷ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ, ಅವರು ಹೇಳಿದರೆ ಹೇಳಲಿ. ತಮ್ಮ ಅಭಿಪ್ರಾಯವನ್ನು ಹೇಳಿದ್ದಾರಷ್ಟೆ ಎಂದರು. ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜೀನಾಮೆ ಕೊಡುವ ಅಗತ್ಯ ಇಲ್ಲ ಎಂದು ನಾವೆಲ್ಲರೂ ಹೇಳಿದ್ದೀವಿ. ಸಿದ್ದರಾಮಯ್ಯ ಅವರು ಕೂಡ ರಾಜೀನಾಮೆ ಕೊಡೋದಿಲ್ಲ ಎಂದು ಹೇಳಿದ್ದಾರೆ. ಆದರೆ ಈ ವೇಳೆ ಒಬ್ಬೊಬ್ಬರು ಒಂದೊಂದು ವ್ಯಾಖ್ಯಾನ ಮಾಡುತ್ತಾರೆ. ಪಾರದರ್ಶಕವಾಗಿ ತನಿಖೆ ಆಗಲಿ, ಸಿಎಂ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಹಿಂದೆ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದರು ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಹಿಂದಿನದ್ದು ಬೇಡ, ಈಗಿನದ್ದು ಹೇಳ್ರಿ. ನಾವು ಹಿಂದಿನದ್ದಕ್ಕೆ ಯಾಕೆ ಹೋಗೋಣ. ಹಿಂದೆ ಹೋಗಬೇಕು ಅಂದರೆ ನೂರಾರು ಇದ್ದಾವೆ. ಕೇಂದ್ರ ಸರ್ಕಾರದಲ್ಲಿ ನಡೀತಾ ಇರುವಂತದ್ದು, ಹಿಂದಿನ ರಾಜ್ಯ ಸರ್ಕಾರಗಳಲ್ಲಿ ನಡೆದಿರುವಂತದ್ದು ನೂರಾರು ಇದ್ದಾವೆ. ಹಿಂದಿನದ್ದು ಅಂದ್ರೆ ಅದ್ದನ್ನೆಲ್ಲಾ ತೆಗಿಬೇಕಲ್ಲವೇ ಎಂದು ತುಮಕೂರಿನಲ್ಲಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

Whats_app_banner