ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು: ಕಸಾಪ ಮನುಶ್ರೀ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿ ಮಚ್ಚಿನ ಆಯ್ಕೆ

ಮಂಗಳೂರು: ಕಸಾಪ ಮನುಶ್ರೀ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿ ಮಚ್ಚಿನ ಆಯ್ಕೆ

ಕಸಾಪ ಮನುಶ್ರೀ ದತ್ತಿ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿ ಮಚ್ಚಿನ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಪ್ರಶಸ್ತಿ ಪ್ರಕಟಿಸಿದ್ದು, ಪ.ರಾಮಕೃಷ್ಣಶಾಸ್ತ್ರಿಗಳ ಕಿರುಪರಿಚಯ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಕಸಾಪ ಮನುಶ್ರೀ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿ ಮಚ್ಚಿನ (ಎಡ ಚಿತ್ರ) ಆಯ್ಕೆ.
ಕಸಾಪ ಮನುಶ್ರೀ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿ ಮಚ್ಚಿನ (ಎಡ ಚಿತ್ರ) ಆಯ್ಕೆ.

ಮಂಗಳೂರು: 2024ರ ಕನ್ನಡ ಸಾಹಿತ್ಯ ಪರಿಷತ್ತಿನ ಮನೋಹರಿ ಪಾರ್ಥಸಾರಥಿ ‘ಮನುಶ್ರೀ’ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿಯವರನ್ನು ಆಯ್ಕೆ ಮಾಡಲಾಗಿದೆ.ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮನೋಹರಿ ಪಾರ್ಥಸಾರಥಿಯವರು ಈ ದತ್ತಿಯನ್ನು ಸ್ಥಾಪಿಸಿದ್ದು ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸೇವೆ ಸಲ್ಲಿಸಿದ ಬರಹಗಾರರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಬೆಳ್ತಂಗಡಿಯ ತೆಂಕಕಾರಂದೂರಿನವರಾದ ಪ.ರಾಮಕೃಷ್ಣ ಶಾಸ್ತ್ರಿಗಳು ಕನ್ನಡ ಸಾಹಿತ್ಯ ಕಂಡ ವಿಶಿಷ್ಟ ಲೇಖಕರು. ವೃತ್ತಿಯಲ್ಲಿ ಕೃಷಿಕರಾದ ಇವರು ಪ್ರವೃತ್ತಿಯಲ್ಲಿ ಸಾಹಿತ್ಯ ಕೃಷಿಕರು.

12 ಸಾವಿರಕ್ಕೂ ಹೆಚ್ಚು ಲೇಖನ ಬರೆದ ದಣಿವರಿಯದ ಲೇಖಕ

1964ರಿಂದ ಹಿಡಿದು ಇಂದಿನವರೆಗೂ ದಣಿವರಿಯದೆ ನಿರಂತರವಾಗಿ ಬರೆಯುತ್ತಾ ಬರುತ್ತಿರುವ ಇವರ ಹನ್ನೆರಡು ಸಾವಿರಕ್ಕೂ ಹೆಚ್ಚು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ವಿವಿಧ ಪ್ರಾಕಾರದಲ್ಲಿ 104 ಕೃತಿಗಳು ಅಚ್ಚಾಗಿವೆ. ಇದರಲ್ಲಿ ಮಕ್ಕಳಿಗಾಗಿಯೇ 50 ಕಥಾ ಸಂಕಲನಗಳಿರುವುದು ವಿಶೇಷ. ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿಯೂ ಕಥೆ-ಕಾದಂಬರಿಗಳನ್ನು ಬರೆದಿರುವ ಇವರು ವಿಜ್ಞಾನ, ಅಧ್ಯಾತ್ಮ, ವೈಚಾರಿಕ ಕ್ಷೇತ್ರಗಳಲ್ಲಿಯೂ ಬರಹಗಳನ್ನು ಮಾಡಿದ್ದಾರೆ.

ಮೂವತ್ತಕ್ಕೂ ಹೆಚ್ಚು ವಿವಿಧ ಪುರಸ್ಕಾರಗಳನ್ನು ಪಡೆದಿರುವ ರಾಮಕೃಷ್ಣ ಶಾಸ್ತ್ರಿಗಳು ತಾಲ್ಲೋಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸಿದ್ದಾರೆ. ಸಾಹಿತ್ಯದ ಜೊತೆಗೆ ಯಕ್ಷಗಾನ ತಾಳಮದ್ದಳೆಯಲ್ಲಿ ಅರ್ಥಗಾರಿಕೆ, ಗಮಕ ವಾಚನದಲ್ಲಿಯೂ ಅವರು ಹೆಸರನ್ನು ಮಾಡಿದ್ದಾರೆ. ಅವರ ಬರಹಗಳು ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯವಾಗಿದೆ.

ಸುಂದರ ಬದುಕಿಗೆ ಒಂದಷ್ಟು ಸೂತ್ರಗಳು, ಶೌಚಾಲಾಯ-ಆರೋಗ್ಯ ಮಾತೆಗಿದು ದೇವಾಲಯ, ಉತ್ತಮ ಆರೋಗ್ಯಕ್ಕೆ ಅಂದದ ಕೈದೋಟ ಮುಂತಾದ ಕೃತಿಗಳನ್ನು ಮಹಿಳಾ ಓದುಗರನ್ನು ಗಮನದಲ್ಲಿಟ್ಟುಕೊಂಡು ರಚಿಸಿದ್ದು, ಅದರಲ್ಲಿ ಅವರು ಮಹಿಳೆಯರಲ್ಲಿ ಆರೋಗ್ಯದ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು, ಪ್ರೌಢರಿಗಾಗಿ ‘ಬದುಕು’ ಮತ್ತು ‘ಚಿತ್ರಚೋರ’ ಎಂಬ ಎರಡು ಕಥಾಸಂಕಲನ, ಎಂಕ್ಟೇಸಿಯ ಸಂಕಟ ಮತ್ತು ಸನ್ಮಾನ ಪ್ರಸಂಗ ಎಂಬ ಎರಡು ಹಾಸ್ಯ ಲೇಖನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇದಲ್ಲದೆ ತುಳು ಭಾಷೆಯಲ್ಲಿ ರಚಿಸಿದ ಕಾದಂಬರಿ ಪುದ್ವಾರು ಗಮನಸೆಳೆದಿರುವಂಥದ್ದು.

ನಾಡೋಜ ಡಾ.ಮಹೇಶ ಜೋಶಿ ಪ್ರಶಂಸೆ

ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿಯ ಆಯ್ಕೆ ಸಮಿತಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ ಮತ್ತು ದತ್ತಿದಾನಿಗಳ ಪರವಾಗಿ ಡಾ.ವರದಾ ಶ್ರೀನಿವಾಸ್ ಭಾಗವಹಿಸಿದ್ದರು.

ದತ್ತಿ ಪ್ರಶಸ್ತಿ ಪುರಸ್ಕೃತರಾದ ಪ.ರಾಮಕೃಷ್ಣ ಶಾಸ್ತ್ರಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಅಭಿನಂದಿಸುತ್ತದೆ ಮತ್ತು ಅವರ ಸಾಧನೆಯ ಹಾದಿ ಇನ್ನಷ್ಟು ಉಜ್ವಲವಾಗಲಿ ಆಶಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

ಓದಬಹುದಾದ ಇನ್ನಷ್ಟು ಸ್ಟೋರಿಗಳು

1) ಕರ್ನಾಟಕ ಹವಾಮಾನ ಮೇ 7; ಬೆಂಗಳೂರು, ಮೈಸೂರು ಸೇರಿ 18 ಜಿಲ್ಲೆಗಳಲ್ಲಿ ಮಳೆ, ಬೀದರ್, ಕೊಪ್ಪಳ ಸೇರಿ 9 ಜಿಲ್ಲೆಗಳಲ್ಲಿ ಶಾಖದ ಅಲೆ - ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ

2) ಪ್ರಜ್ವಲ್‌ ದೇಶ ಬಿಟ್ಟು ಹೋಗಲು ಕರ್ನಾಟಕದ ಕಾಂಗ್ರೆಸ್‌ ಸರ್ಕಾರವೇ ಕಾರಣ, ಇಂತವರ ಪರ ಸಹನೆ ಬೇಕಿಲ್ಲ: ಪ್ರಧಾನಿ ಮೋದಿ

3) ಐಶ್ವರ್ಯಾ ಅರ್ಜುನ್‌- ಉಮಾಪತಿ ರಾಮಯ್ಯ ಮದುವೆ ಆಮಂತ್ರಣ ಬಂತು; ಅರ್ಜುನ್‌ ಸರ್ಜಾ ಮಗಳಿಗೆ ಮುಂದಿನ ತಿಂಗಳೇ ಶುಭವಿವಾಹ

4) ಕಾಸ್ಟಿಂಗ್‌ ಡೈರೆಕ್ಟರ್‌ ವಿರುದ್ಧ ದೂರು ನೀಡಿದ ನಟಿ ಅಮೂಲ್ಯ ಗೌಡ; ಅಶ್ಲೀಲ ಸಂದೇಶ ಕಳುಹಿಸಿ ಅಡಿಷನ್‌ಗೆ ಆಹ್ವಾನ - ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ

IPL_Entry_Point