Breaking News: ರಾಯಚೂರು ಬಳಿ ಶಾಲಾ ವಾಹನ ಸಾರಿಗೆ ಬಸ್‌ ಡಿಕ್ಕಿ, ಇಬ್ಬರು ಮಕ್ಕಳ ಸಾವು, ಅಪಘಾತದಲ್ಲಿ ಕಾಲು ಕಳೆದುಕೊಂಡ ಮಕ್ಕಳು-raichur news school bus kalyan karnataka bus accident near raichur of kapagal students leg amputated kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Breaking News: ರಾಯಚೂರು ಬಳಿ ಶಾಲಾ ವಾಹನ ಸಾರಿಗೆ ಬಸ್‌ ಡಿಕ್ಕಿ, ಇಬ್ಬರು ಮಕ್ಕಳ ಸಾವು, ಅಪಘಾತದಲ್ಲಿ ಕಾಲು ಕಳೆದುಕೊಂಡ ಮಕ್ಕಳು

Breaking News: ರಾಯಚೂರು ಬಳಿ ಶಾಲಾ ವಾಹನ ಸಾರಿಗೆ ಬಸ್‌ ಡಿಕ್ಕಿ, ಇಬ್ಬರು ಮಕ್ಕಳ ಸಾವು, ಅಪಘಾತದಲ್ಲಿ ಕಾಲು ಕಳೆದುಕೊಂಡ ಮಕ್ಕಳು

School Bus Accident ಶಾಲಾ ಮಕ್ಕಳನ್ನು ಹೊತ್ತು ಸಾಗುತ್ತಿದ್ದ ಬಸ್‌ ಸಾರಿಗೆ ಸಂಸ್ಥೆ ಡಿಕ್ಕಿಯಾಗಿ ಇಬ್ಬರು ಬಾಲಕರು ಮೃತಪಟ್ಟು, ನಾಲ್ವರು ಮಕ್ಕಳ ಕಾಲು ಕಡಿತಗೊಂಡಿರುವ ಘಟನೆ ರಾಯಚೂರು ಬಳಿ ನಡೆದಿದೆ.

ರಾಯಚೂರಿನ ಕಪಗಲ್‌ ಬಳಿ ಸಾರಿಗೆ ಬಸ್‌ ಹಾಗೂ ಶಾಲಾ ಮಕ್ಕಳಿದ್ದ ಬಸ್‌ ಅಪಘಾತಕ್ಕೆ ಈಡಾಗಿರುವುದು
ರಾಯಚೂರಿನ ಕಪಗಲ್‌ ಬಳಿ ಸಾರಿಗೆ ಬಸ್‌ ಹಾಗೂ ಶಾಲಾ ಮಕ್ಕಳಿದ್ದ ಬಸ್‌ ಅಪಘಾತಕ್ಕೆ ಈಡಾಗಿರುವುದು

ರಾಯಚೂರು:ರಾಯಚೂರು ನಗರದಿಂದ 20 ಕಿ.ಮಿ ದೂರವಿರುವ ಮಾನ್ವಿ ತಾಲ್ಲೂಕಿನ ಕಪಗಲ್‌ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅದೂ ಶಿಕ್ಷಕರ ದಿನಾಚರಣೆಗೆ ಹೊರಟಿದ್ದ ಶಾಲಾ ಬಸ್‌ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗೆ ಸೇರಿದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಮಕ್ಕಳು ಮೃತಪಟ್ಟು, ಮೂವರು ಮಕ್ಕಳು ಕತ್ತರಿಸಿ ಹೋಗಿರುವ ಘಟನೆ ನಡೆದಿದೆ. ಇನ್ನೂ ಹಲವು ಮಕ್ಕಳಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲು ಕಳೆದುಕೊಂಡ ಹಾಗೂ ಗಾಯಗೊಂಡು ಚೀರಿಡುತ್ತಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ರೋಧನವನ್ನು ಕಂಡವರ ಹೃದಯ ಮಿಡಿಯುವಂತೆ ಇತ್ತು. ರಸ್ತೆಯಲ್ಲಿ ಮಲಗಿಕೊಂಡೇ ಮಕ್ಕಳು ಚಿಕಿತ್ಸೆಗಾಗಿ ಮನವಿ ಮಾಡುತ್ತಿದ್ದರು.

ಮಾನ್ವಿ ತಾಲ್ಲೂಕಿನ ಕೆಲವು ಗ್ರಾಮಗಳಿಂದ ಮಕ್ಕಳನ್ನು ಶಾಲಾ ಬಸ್‌ಗಳು ಕರೆದುಕೊಂಡು ಹೋಗುತ್ತವೆ. ಖಾಸಗಿ ಸಂಸ್ಥೆಗೆ ಸೇರಿದ ಶಾಲಾ ಬಸ್‌ ಕಪಗಲ್‌ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಕರೆದುಕೊಂಡು ಹೊರಟಿತ್ತು.

ಬಸ್‌ನಲ್ಲಿ ಅಂದಾಜು 32 ಮಕ್ಕಳು ಇದ್ದರು. ಮಕ್ಕಳನ್ನು ಕರೆದುಕೊಂಡು ಹೊರಟ ಬಸ್‌ ರಾಯಚೂರು- ಮಾನ್ವಿ ಹೆದ್ದಾರಿಯಲ್ಲಿ ಚಲಿಸುತ್ತಿತ್ತು. ಈ ವೇಳೆ ಕಲ್ಯಾಣ ಕರ್ನಾಟಕ ಘಟಕದ ಬಸ್‌ ಸಿಂಧನೂರು ಕಡೆಯಿಂದ ರಾಯಚೂರು ಕಡೆಗೆ ಹೊರಟಿತ್ತು. ಈ ವೇಳೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿವೆ.

ಶಾಲಾ ಬಸ್‌ ಸಾರಿಗೆ ಬಸ್‌ನ ಮಧ್ಯ ಭಾಗಕ್ಕೆ ಡಿಕ್ಕಿ ಹೊಡೆದಿದೆ. ಶಾಲಾ ಬಸ್‌ನಲ್ಲಿ ಕುಳಿತಿದ್ದ ಮಕ್ಕಳಿಗೆ ತೀವ್ರವಾಗಿ ಗಾಯಗೊಂಡು ಅಳಲು ಆರಂಭಿಸಿದರು. ಕೂಡಲೇ ಬಸ್‌ನಲ್ಲಿದ್ದವರು ಕೆಳಕ್ಕೆ ಇಳಿದು ಬಂದು ಮಕ್ಕಳ ರಕ್ಷಣೆಗೆ ಮುಂದಾದರು. ಶಾಲಾ ಬಸ್‌ನಲ್ಲಿದ್ದ 18 ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ಅವರನ್ನು ಕೂಡಲೇ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಆರಂಭಿಸಲಾಯಿತು. ಈ ವೇಳೆ ಸಮರ್ಥ ಹಾಗೂ ಶ್ರೀಕಾಂತ ಎಂಬ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟರು. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ.

ಇದರಲ್ಲಿ ನಾಲ್ವರು ಮಕ್ಕಳ ಕಾಲುಗಳು ಕತ್ತರಿಸಿ ತುಂಡಾಗಿವೆ. ಇಬ್ಬರು ಮಕ್ಕಳ ಎರಡೂ ಕಾಲು ತುಂಡಾಗಿದ್ದರೆ, ಇನ್ನಿಬ್ಬರು ಮಕ್ಕಳು ಒಂದೊಂದು ಕಾಲು ತುಂಡಾಗಿದೆ. ಅವರಿಗೆ ಚಿಕಿತ್ಸೆಯನ್ನು ಆರಂಭಿಸಲಾಗಿದೆ. ಇನ್ನುಳಿ ಮಕ್ಕಳಿಗೆ ಗಾಯಗಳಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಭಾಗದಲ್ಲಿ ಕುಳಿತಿದ್ದ ಕೆಲವು ಮಕ್ಕಳಿಗೆ ತೀವ್ರವಾಗಿ ಗಾಯವಾಗಿದೆ. ಶಾಲಾ ಬಸ್‌ ಚಾಲಕನ ನಿರ್ಲಕ್ಷ್ಯ ಹಾಗೂ ಅತೀ ವೇಗದಿಂದಲೇ ಈ ಘಟನೆ ನಡೆದಿದೆ. ಚಾಲಕನ ವಿರುದ್ದ ಪ್ರಕರಣವನ್ನು ಮಾನ್ವಿ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ.

ಇಂದು ಶಿಕ್ಷಕರ ದಿನ ಎಂದು ಮಗ ಖುಷಿಯಿಂದ ಹೊರಟಿದ್ದ. ಬಸ್‌ ಹೊರಟು ಮನೆಯ ಒಳಗೆ -ಬಂದು ಮೂರ್ನಾಲ್ಕು ನಿಮಿಷವೂ ಆಗಿರಲಿಲ್ಲ. ಅಪಘಾತ ಆಗಿರುವ ಸುದ್ದಿ ಬಂದಿತು.ಮಗನನ್ನು ಅಣಿಗೊಳಿಸಿ ಕಳುಹಿಸಿ ಮತ್ತೆ ಈ ಸ್ಥಿತಿಯಲ್ಲಿ ನೋಡಿ ಬೇಸರವಾಗಿದೆ ಎಂದು ಪೋಷಕರು ಕಣ್ಣೀರಾದರು.

ಅದರಲ್ಲೂ ಮಕ್ಕಳನ್ನು ಕಂಡ ಪೋಷಕರು, ಸಂಬಂಧಿಕರ ಕಣ್ಣೀರು ಮುಗಿಲು ಮುಟ್ಟಿತ್ತು. ವಿಷಯ ತಿಳಿದು ಪೋಷಕರು, ಊರವರು ಘಟನೆ ನಡೆದ ಸ್ಥಳಕ್ಕೆ ಧಾವಿಸಿದ್ದರಿಂದ ಜನಜಂಗುಳಿ ಜೋರಾಗಿತ್ತು. ಅಲ್ಲದೇ ಅಫಘಾತದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಕೆಲ ಹೊತ್ತು ಸಂಚಾರ ಬಂದ್‌ ಆಗಿತ್ತು.

ರಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿದ್ದ ರಾಯಚೂರು ಡಿಸಿ ಕೆ.ನಿತೀಶ್‌, ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಪರಿಹಾರವನ್ನು ನೀಡಲಾಗುವುದು. ಗಾಯಾಳುಗಳಿಗೆ ಸಂಪೂರ್ಣ ಚಿಕಿತ್ಸೆ ನೀಡಲಾಗುವುದು ಎಂದು ಭರವಸೆ ನೀಡಿದರು.