Karnataka News Live November 18, 2024 : 500 ರೂ. ಸಾಲ ವಾಪಸ್ ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಐವರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Mon, 18 Nov 202404:39 PM IST
ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರನ್ನು ಐವರು ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿರುವ ಘಟನೆ ಹಳೆ ಹುಬ್ಬಳ್ಳಿಯಲ್ಲಿ ನಡೆದಿದೆ. ಪೊಲೀಸರು, ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಅಸ್ಲಾಂ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Mon, 18 Nov 202402:38 PM IST
- ಮೈಸೂರಿನಲ್ಲಿ ಪ್ರೇಮಿಸಿ ವಿವಾಹವಾಗಿ ಕೆಲ ದಿನಗಳಿಂದ ನಗರದಲ್ಲಿ ವಾಸವಿದ್ದ ದಂಪತಿಗಳ ಕಲಹ ಪತ್ನಿ ಆತ್ಮಹತ್ಯೆಯಲ್ಲಿ ಅಂತ್ಯಗೊಂಡಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.
Mon, 18 Nov 202402:08 PM IST
- Namma Metro ಬೆಂಗಳೂರಿನ ನಮ್ಮ ಮೆಟ್ರೋ ಗೋಡೆಗಳ ಮೇಲೆ ಕಲಾವಿದರ ತಂಡವು ಆಕರ್ಷಕ ಚಿತ್ರಗಳನ್ನು ಬಿಡಿಸಿ ಪ್ರಯಾಣಿಕರ ಹಿತಕರ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ವಾತಾವರಣ ನಿರ್ಮಿಸಲಿದೆ.
Mon, 18 Nov 202401:18 PM IST
ವಿಜಯಪುರ ನಗರದಲ್ಲಿ ಈ ಸಾಲಿನ ವೃಕ್ಷೋತ್ಥಾನ್ ಓಟದ ಚಟುವಟಿಕೆಗೆ ಭರ್ಜರಿ ತಯಾರಿ ನಡೆದಿದೆ. ಗಿಡ ನೆಟ್ಟು ಪೋಷಿಸಿ ಹಸಿರು ವಿಜಯಪುರಕ್ಕೆ ಒತ್ತು ನೀಡುತ್ತಿರುವ ಸಚಿವ ಎಂ.ಬಿ.ಪಾಟೀಲ್ ಅವರು ಈ ಓಟದ ಮಹಾ ಪೋಷಕರು.
Mon, 18 Nov 202412:01 PM IST
- ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಭಾರೀ ಪ್ರಮಾಣ ದರೋಡೆ ನಡೆದು ನಗದು, ಚಿನ್ನಾಭರಣ ದೋಚಲಾಗಿದೆ. ಹಲವು ಗ್ರಾಹಕರು ತಮ್ಮ ಚಿನ್ನಾಭರಣ ವಾಪಾಸ್‌ಗೆ ಒತ್ತಾಯಿಸಿ ಪ್ರತಿಭಟನೆ ಕೂಡ ನಡೆಸಿದ್ದಾರೆ.
Mon, 18 Nov 202411:53 AM IST
2024ನೇ ಸಾಲಿನ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿಸೆಂಬರ್ 9 ರಿಂದ 20ವರೆಗೆ ನಡೆಯಲಿದೆ. ಈ ಬಾರಿ ಉತ್ತರ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ ವಿಚಾರಗಳು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸುವ ಸಾಧ್ಯತೆ ಇದೆ ಎಂದು ಸ್ಪೀಕರ್ ಯುಟಿ ಖಾದರ್, ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾಹಿತಿ ನೀಡಿದ್ದಾರೆ.
Mon, 18 Nov 202410:25 AM IST
- ನಿಮ್ಮ ಪಡಿತರ ಬಿಪಿಎಲ್( BPL) ನಿಂದ ಎಪಿಎಲ್( APL) ಕಾರ್ಡ್‌ಗೆ ಹೇಗೆ ಬದಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಏನು ಮಾಡಬೇಕು. ಇಲ್ಲಿದೆ ವಿವರ.
Mon, 18 Nov 202409:24 AM IST
ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಈ ಬಾರಿಯೂ ತಡವಾಗುತ್ತಿದೆ. 2024 ಅಂತ್ಯದ ವೇಳೆಗೆ ಎಕ್ಸ್‌ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಸಚಿವ ನಿತಿನ್ ಗಡ್ಕರಿ ಈ ಹಿಂದೆ ಘೋಷಿಸಿದ್ದರು. ಆದರೆ ತಮಿಳುನಾಡು ಭಾಗದ ಕಾಮಕಾರಿ ಇನ್ನೂ ಪೂರ್ಣಗೊಳ್ಳದ ಕಾರಣ ವಿಳಂಬವಾಗುತ್ತಿದೆ.
Mon, 18 Nov 202409:14 AM IST
ಕೊಡಗು ಜಿಲ್ಲೆಯಲ್ಲಿ ನಿಷೇಧಿತ ಎಂಡಿಎಂ ಹಾಗೂ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸಿದ ಕೇರಳದ ಮೂವರು, ಕೊಡಗಿನ ಇಬ್ಬರು ಸೇರಿ ಐದು ಮಂದಿಯನ್ನು ಬಂಧಿಸಲಾಗಿದೆ.
Mon, 18 Nov 202407:38 AM IST
ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಜಮೀರ್ ಅಹ್ಮದ್ ವಿರುದ್ಧ ಪಕ್ಷದ ಶಿಸ್ತು ಪಾಲನಾ ಸಮಿತಿ ಕ್ರಮ ಕೈಗೊಳ್ಳಬಹುದು ಎಂದು ಗೃಹ ಸಚಿವ ಜಿ ಪರಮೇಶ್ವರ್ ಮೈಸೂರಿನಲ್ಲಿ ಪರೋಕ್ಷವಾಗಿ ಸೂಚನೆ ನೀಡಿದ್ದಾರೆ.
Mon, 18 Nov 202404:52 AM IST
Amazon job scam: ಕೆಲವು ದಿನಗಳ ಹಿಂದೆ ಉಡುಪಿಯ 25 ವರ್ಷ ವಯಸ್ಸಿನ ಯುವತಿಗೆ ಅಮೆಜಾನ್‌ನಲ್ಲಿ ಪಾರ್ಟ್‌ಟೈಮ್ ಜಾಬ್ ಹೆಸರಲ್ಲಿ 1.94 ಲಕ್ಷ ರೂಪಾಯಿ ವಂಚನೆ ನಡೆದಿದೆ. ಈಕೆ ಇದು ನಂಬಿಕಸ್ಥ ಉದ್ಯೋಗ ಎಂದುಕೊಂಡಿದ್ದಳು. ಆದರೆ, ಇದು ಅತ್ಯಂತ ಎಚ್ಚರಿಕೆಯಿಂದ ಯೋಜಿಸಿದ ವಂಚನೆ ಎಂದು ತಿಳಿದಾಗ ತಡವಾಗಿತ್ತು.
Mon, 18 Nov 202401:44 AM IST
Karnataka Weather: ಭಾನುವಾರ ರಾಜ್ಯದ ಅನೇಕ ಕಡೆ ಲಘು ಮಳೆಯಾಗಿದೆ. ಇಂದು ಕೂಡಾ ಬೆಂಗಳೂರು, ಮೈಸೂರು, ಕೋಲಾರ, ದಕ್ಷಿಣ ಕನ್ನಡ ಸೇರಿ ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆ ಇದ್ದು ಉಳಿದ ಕಡೆಗಳಲ್ಲಿ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ.
Mon, 18 Nov 202412:50 AM IST
- ಇದು ವಿದ್ಯಾರ್ಥಿಗಳಿಗೆ ಖುಷಿ ಕೊಡುವ ಸುದ್ದಿ. ಡಿಸೆಂಬರ್ ತಿಂಗಳಲ್ಲಿ ಕರ್ನಾಟಕದ ಶಾಲೆಗಳಿಗೆ 8 ದಿನಗಳ ಕಾಲ ರಜೆ ಸಿಗಲಿದೆ. ಶಾಲೆಗಳು ಮಾತ್ರವಲ್ಲದೆ ಕಾಲೇಜುಗಳಿಗೆ ಸಹ 8 ದಿನಗಳ ರಜೆ ಇರಲಿದೆ. ರಜೆಯ ಸಂಪೂರ್ಣ ವಿವರ ಇಲ್ಲಿದೆ.
Mon, 18 Nov 202412:35 AM IST
- ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ಕೃಷಿ ಮೇಳದಲ್ಲಿ ಪ್ರಾಣಿ ಪ್ರಪಂಚವೇ ಅನಾವರಣಗೊಂಡಿತು. ವೈವಿಧ್ಯಮಯ ತಳಿಗಳ ಪ್ರಾಣಿಗಳು ಜನರ ಗಮನ ಸೆಳೆದವು. ಕುರಿ, ಮೇಕೆ, ಹಸು, ಕೋಳಿ, ಮೀನುಗಳು ನೋಡಲು ಖುಷಿ ಕೊಟ್ಟಿದ್ದು ಒಂದೆಡೆಯಾದರೆ, ಬೆಲೆ ಮಾತ್ರ ಅಬ್ಬಬ್ಬಾ ಎನ್ನುವಂತಿತ್ತು. (ವರದಿ: ಎಚ್ ಮಾರುತಿ, ಬೆಂಗಳೂರು)