Karnataka News Live November 3, 2024 : ವಕ್ಫ್ ನೋಟಿಸ್ ಹಿಂಪಡೆಯುವಿಕೆ ಸ್ಥಳೀಯ ಚುನಾವಣೆ ಸಂಬಂಧ ಕಣ್ಣೊರೆಸುವ ತಂತ್ರ; ಸಿಎಂ ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 03 Nov 202412:10 PM IST
ರೈತರಿಗೆ ನೀಡಲಾಗಿದ್ದ ವಕ್ಫ್ ನೋಟಿಸ್ ಹಿಂಪಡೆಯುವಿಕೆ ಕ್ರಮವು ಕೇವಲ ಸ್ಥಳೀಯ ಚುನಾವಣೆ ಸಂಬಂಧ ಕಣ್ಣೊರೆಸುವ ತಂತ್ರ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
Sun, 03 Nov 202410:48 AM IST
Karnataka Rajyotsava: ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಲು ನಿರಾಕರಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆಯ ವರ್ತನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದೆ. ಕೆಲವರು ತೀರಾ ಕೀಳುಮಟ್ಟದ ಪ್ರತಿಕ್ರಿಯೆ ನೀಡಿದ್ದಾರೆ. ಆದಾಗ್ಯೂ, ಪರ ವಿರೋಧದ ಚರ್ಚೆಗೆ ಸೂಕ್ತವೆನಿಸುವ ಅಂಶಗಳೂ ಇವೆ. ವೈರಲ್ ವಿಡಿಯೋ ಗಮನಿಸಿ.
Sun, 03 Nov 202409:44 AM IST
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕೆಎಂಎಫ್‌ನ ನಂದಿನಿ ತುಪ್ಪ ಮತ್ತೆ ಸುದ್ದಿಯಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ ನಂದಿನಿ ತುಪ್ಪ ಉತ್ಪಾದನೆ ವಿಚಾರ ಗಮನಸೆಳೆದಿದ್ದು, ಖಾಸಗಿ ಕಂಪನಿಯವರಿಗೆ ನಂದಿನಿ ತುಪ್ಪ ಉತ್ಪಾದನೆಯನ್ನು ಹೊರಗುತ್ತಿಗೆ ನೀಡಲಾಗಿದೆಯೇ? ಎಂಬುದು ಚರ್ಚೆಯ ಮುಖ್ಯ ವಿಷಯವಾಗಿ ಮಾರ್ಪಟ್ಟಿದೆ. ಇದರ ವಿವರ ಇಲ್ಲಿದೆ.
Sun, 03 Nov 202409:24 AM IST
- Director Guruprasad: ಕನ್ನಡ ನಿರ್ದೇಶಕ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಭಾರತೀಯ ನ್ಯಾಯ ಸಹಿತ 194 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಈ ಸೆಕ್ಷನ್ ಹೇಳುವುದೇನು? ಇಲ್ಲಿದೆ ವಿವರ.
Sun, 03 Nov 202408:53 AM IST
ಬೆಂಗಳೂರಿನ ಕೂಡ್ಲು ಪ್ರದೇಶದಲ್ಲಿ ರಸ್ತೆ ದೌರ್ಜನ್ಯ ನಡೆದಿದೆ. ಕಾರು ಪ್ರಯಾಣಿಕರನ್ನು ಪುಂಡರು ಬೆದರಿಸುವಾಗ ಪೊಲೀಸರು ಮೂಕರಂತಿದ್ದರು. ಈ ಬಗ್ಗೆ ಬೆಂಗಳೂರಿಗರೊಬ್ಬರು ಎಕ್ಸ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ವಿವರ ಇಲ್ಲಿದೆ.
Sun, 03 Nov 202406:46 AM IST
ಯಲಹಂಕ - ಏರ್‌ಫೋರ್ಸ್ ರಸ್ತೆಯಲ್ಲಿ ಪುಂಡರ ಅಪಾಯಕಾರಿ ವೀಲಿಂಗ್ ಕಾಟ ಹೆಚ್ಚಳವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕೆಲವು ವಿಡಿಯೋ, ಫೋಟೋಗಳು ಗಮನಸೆಳೆದಿವೆ. ಪ್ರಾಣಭೀತಿಯಲ್ಲಿ ವಾಹನ ಚಲಾಯಿಸುತ್ತಿರುವ ಸವಾರರು, ಈ ಬಗ್ಗೆ ಟ್ವೀಟ್ ಮಾಡುತ್ತಿದ್ದು, ಬೆಂಗಳೂರು ಸಂಚಾರ ಪೊಲೀಸರ ಗಮನಸೆಳೆದಿದ್ದಾರೆ. ವೈರಲ್ ವಿಡಿಯೋ ಮತ್ತು ವಿವರ ಇಲ್ಲಿದೆ.
Sun, 03 Nov 202405:41 AM IST
ಕರ್ನಾಟಕದಲ್ಲಿರುವ 53 ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯ ತಾಣಗಳು ವಕ್ಫ್ ಆಸ್ತಿ ಎಂದಿರುವ ವಕ್ಫ್ ಬೋರ್ಡ್ ಘೋಷಿಸಿದೆ. 2005ರಲ್ಲಿ ಈ ಕೃತ್ಯ ನಡೆದಿದ್ದು, ಈಗ ಗಮನಸೆಳೆದಿದೆ. ಈ ಆಸ್ತಿಗಳೆಲ್ಲವೂ ಅತಿಕ್ರಮಣವಾಗಿದ್ದು, ಅವುಗಳ ಮೂಲ ಸ್ವರೂಪಕ್ಕೆ ಘಾಸಿಗಳಾಗಿವೆ ಎಂದು ವರದಿ ವಿವರಿಸಿದೆ. ಆರ್‌ಟಿಐ ಅರ್ಜಿಗೆ ಸರ್ಕಾರದ ಉತ್ತರ ಕೂಡ ಗಮನಸೆಳೆದಿದ್ದು, ಅದರ ವಿವರ ಇಲ್ಲಿದೆ.
Sun, 03 Nov 202403:15 AM IST
ಬಡ ಮಧ್ಯಮ ವರ್ಗದ ಜನರಿಗೆ ಬೆಲೆ ಏರಿಕೆ ಬಿಸಿ ವ್ಯಾಪಕವಾಗಿ ತಟ್ಟಿದೆ. ಕೇಂದ್ರ ಸರ್ಕಾರ, ಈ ಬೆಲೆ ಏರಿಕೆ ಪರಿಣಾಮ ತಗ್ಗಿಸಲು ಬೆಂಗಳೂರಿಗೆ ಭಾರತ್ ಅಕ್ಕಿ, ಬೇಳೆ ಪೂರೈಕೆ ಶುರುಮಾಡಿದೆ. ಭಾರತ್ ಬ್ರಾಂಡ್‌ನ ಭಾರತ್ ಅಕ್ಕಿ ಬೇಳೆಗಳ ದರ ವಿವರ ಹೀಗಿದೆ.
Sun, 03 Nov 202402:22 AM IST
ವಕ್ಫ್ ಆಸ್ತಿ ವಿವಾದ ವಿಚಾರವಾಗಿ ರೈತರ ನೋಟಿಸ್ ಹಿಂಪಡೆಯಲು ಆದೇಶ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಆಡಳಿತದ ವಕ್ಫ್ ನೋಟಿಸ್ ಶೀಘ್ರ ಬಹಿರಂಗ ಮಾಡಲಿದ್ದು ಅದನ್ನು ಎದುರಿಸಲು ಸಜ್ಜಾಗಿ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಸವಾಲೆಸೆದಿದ್ದಾರೆ.
Sun, 03 Nov 202401:16 AM IST
ಕರ್ನಾಟಕದಲ್ಲಿ ಮೈಸೂರು ಸೇರಿ 14 ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯ ಸಿಂಚನವಾಗುವ ಸಾಧ್ಯತೆ ಇದೆ. ದೀಪಾವಳಿ ಮುಗಿದಂತೆ ಮಳೆಯ ತೀವ್ರತೆಯೂ ಕಡಿಮೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಅನುಭವಕ್ಕೆ ಬರತೊಡಗಿದೆ. ಬೆಂಗಳೂರಲ್ಲಿ ಇಂದು ಮಳೆ ಬರುತ್ತಾ? ಹೇಗಿದೆ ಕರ್ನಾಟಕ ಹವಾಮಾನ? ಇಲ್ಲಿದೆ ಆ ಎಲ್ಲ ವಿವರ.