ಕನ್ನಡ ಸುದ್ದಿ  /  ಜೀವನಶೈಲಿ  /  ಬ್ಯೂಟಿ ಟಿಪ್ಸ್: ಹೊಳೆವ ಚರ್ಮದ ಆಸೆ ಇರುವವರಿಗೆ ಬಾದಾಮಿಯ ಆಸರೆ, ರಾತ್ರಿ ನೆನೆಸಿಟ್ಟು ಬೆಳಿಗ್ಗೆ ತಿಂದ್ರೆ ಹೊಳೆಯುತ್ತೆ ಚರ್ಮ

ಬ್ಯೂಟಿ ಟಿಪ್ಸ್: ಹೊಳೆವ ಚರ್ಮದ ಆಸೆ ಇರುವವರಿಗೆ ಬಾದಾಮಿಯ ಆಸರೆ, ರಾತ್ರಿ ನೆನೆಸಿಟ್ಟು ಬೆಳಿಗ್ಗೆ ತಿಂದ್ರೆ ಹೊಳೆಯುತ್ತೆ ಚರ್ಮ

ತಾಜಾ ಹಣ್ಣುಗಳ ಜೊತೆಗೆ ಒಣ ಹಣ್ಣುಗಳನ್ನು ಸೂಕ್ತ ರೀತಿಯಲ್ಲಿ ಸೇವಿಸುವುದರಿಂದಲೂ ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರೆಯುತ್ತವೆ. ಅದರಲ್ಲೂ ಬಾದಾಮಿಯಲ್ಲಿ ಹಲವು ಆರೋಗ್ಯ ಉಪಯೋಗಗಳಿವೆ. ನೆನೆಸಿದ ಬಾದಾಮಿಯನ್ನು ಸೇವಿಸುವುದರಿಂದ ನಿಮ್ಮ ತ್ವಚೆಗೆ ಅಗಾಧ ಪ್ರಯೋಜನಗಳಿವೆ. ಇಲ್ಲಿದೆ ನೀವು ತಿಳಿಯಬೇಕಾದ ಮಾಹಿತಿ. (ಬರಹ: ಪ್ರಿಯಾಂಕಾ)

ಹೊಳೆವ ಚರ್ಮದ ಆಸೆ ಇರುವವರಿಗೆ ಬಾದಾಮಿಯ ಆಸರೆ
ಹೊಳೆವ ಚರ್ಮದ ಆಸೆ ಇರುವವರಿಗೆ ಬಾದಾಮಿಯ ಆಸರೆ

ಒಣ ಹಣ್ಣುಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಅಗಾಧ ಪೋಷಕಾಂಶಗಳು ದೊರೆಯುತ್ತವೆ. ಜನಪ್ರಿಯ ಒಣಹಣ್ಣುಗಳಲ್ಲಿ ಬಾದಾಮಿಯೂ ಒಂದು. ಬಾದಾಮಿಯು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಚರ್ಮಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ವಿಟಮಿನ್ ಇ ಬಾದಾಮಿಯಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿರುವ ವಿಷಯಕಾರಿ ಅಂಶವನ್ನು ಕಡಿಮೆ ಮಾಡುತ್ತದೆ (antioxidants). ಬಾದಾಮಿಯು ಚರ್ಮವನ್ನು ತೇವಗೊಳಿಸಲು ಮತ್ತು ಚರ್ಮದಲ್ಲಿ ನೀರಿನ ಅಂಶ ಕಾಪಾಡಲು ಸಹಕರಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

ಬಾದಾಮಿಯ ನಿಯಮಿತ ಸೇವನೆಯಿಂದ ಮುಖ ಕಾಂತಿಯುತವಾಗುತ್ತದೆ. ಅಲ್ಲದೆ, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಅದರಲ್ಲೂ ಬಾದಾಮಿಯನ್ನು ನೆನೆಸಿ ಸೇವಿಸಿದರೆ ಆರೋಗ್ಯಕ್ಕೆ ಮತ್ತಷ್ಟು ಉತ್ತಮ. ನೆನೆಸಿದ ಬಾದಾಮಿ ನಿಮ್ಮ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾದಾಮಿಯನ್ನು ರಾತ್ರಿಯಿಡೀ ನೆನೆಸಿಡಬೇಕು. ಇದರಿಂದ ಜೀರ್ಣಕ್ರಿಯೆಗೂ ಉತ್ತಮವಾಗಿರುತ್ತದೆ. ಒಂದು ಬಾದಾಮಿಯು ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಪ್ರೊಟೀನ್‌ಗಳಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಸೇವಿಸಿದಾಗ ಅದು ಮತ್ತಷ್ಟು ಪರಿಣಾಮಕಾರಿಯಾಗುತ್ತದೆ.

ನೆನೆಸಿದ ಬಾದಾಮಿಯಿಂದ ನಮ್ಮ ತ್ವಚೆಗೆ ಏನೆಲ್ಲಾ ಪ್ರಯೋಜನಗಳಿವೆ?

1) ಸಮೃದ್ಧ ವಿಟಮಿನ್ ಇ: ನೆನೆಸಿದ ಬಾದಾಮಿಯಲ್ಲಿ 'ವಿಟಮಿನ್ ಇ' ಸಮೃದ್ಧವಾಗಿದೆ. ಇದು ಚರ್ಮದಲ್ಲಿ ಅಂಟಾಕ್ಸಿಡೆಂಟ್ಸ್‌ ಕಡಿಮೆ ಮಾಡುತ್ತದೆ (ಉತ್ಕರ್ಷಣ ನಿರೋಧಕ). ವಿಟಮಿನ್ ಇ ಚರ್ಮವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುವುದಲ್ಲದೆ, ತ್ವಚೆಯನ್ನು ಮೃದುವಾಗಿಸುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ. ಬಾದಾಮಿಯಲ್ಲಿ ಕೊಬ್ಬಿನ ಆಮ್ಲಗಳು ಸಮೃದ್ಧವಾಗಿವೆ. ಈ ಅಂಶವು ಸಹ ಆರೋಗ್ಯಕರ, ಕಾಂತಿಯುತ ಚರ್ಮಕ್ಕೆ ನೆರವಾಗುತ್ತದೆ. ನಿಮ್ಮ ತ್ವಚೆಯಲ್ಲಿಯೂ ತೇವಾಂಶವನ್ನು ಆರೋಗ್ಯಕರ ಸ್ಥಿತಿಯಲ್ಲಿ ಇರಿಸುತ್ತದೆ.

2) ನೈಸರ್ಗಿಕ ಮಾಯಿಶ್ಚರೈಸರ್: ನೆನೆಸಿದ ಬಾದಾಮಿಯಲ್ಲಿರುವ ನೈಸರ್ಗಿಕ ತೈಲಗಳು ಅತ್ಯುತ್ತಮವಾದ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತವೆ. ಶುಷ್ಕತೆಯನ್ನು ನಿವಾರಿಸಲು ಮತ್ತು ನಿಮ್ಮ ತ್ವಚೆಯನ್ನು ಮೃದುವಾಗಿರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಇ ಸಮೃದ್ಧವಾಗಿರುವ ಕಾರಣ ಹಾನಿಕಾರಕ ಅತಿನೇರಳೆ ಕಿರಣಗಳ (ಯುವಿ ರೇ) ವಿರುದ್ಧ ರಕ್ಷಣಾತ್ಮಕ ಕವಚವನ್ನು ಒದಗಿಸುತ್ತದೆ. ನಿಮ್ಮ ಚರ್ಮವನ್ನು ತಾರುಣ್ಯ ಮತ್ತು ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ. ತೇವಾಂಶದ ನಷ್ಟವನ್ನು ತಡೆದು, ನೈಸರ್ಗಿಕ, ಆರೋಗ್ಯಕರ ಹೊಳಪನ್ನು ನೀಡುತ್ತದೆ.

3) ಸುಕ್ಕುಗಳಿಗೆ ಕಡಿವಾಣ: ನೆನೆಸಿದ ಬಾದಾಮಿಯಲ್ಲಿರುವ ವಿಟಮಿನ್ ಇ ಚರ್ಮದ ಮೇಲಿರು ಗೆರೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತ್ವಚೆಯನ್ನು ಯೌವನದಂತೆ ಕಾಣಿಸುವಲ್ಲಿ ಬಾದಾಮಿಯು ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಅಲ್ಲದೆ, ನೆನೆಸಿದ ಬಾದಾಮಿಯು ಆಂಟಾಕ್ಸಿಡೆಂಟ್‌ಗಳಿಂದ ತುಂಬಿರುತ್ತದೆ. ಈ ಅಂಟಾಕ್ಸಿಡೆಂಟ್‌ಗಳು ನಿಮ್ಮ ತ್ವಚೆಯನ್ನು ಹಾನಿಕಾರಕ ಪರಿಣಾಮಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ನೆನೆಸಿದ ಬಾದಾಮಿ ತಿನ್ನುವುದರಿಂದ ವೃದ್ಧಾಪ್ಯ ಮುಂದೂಡಬಹುದು. ಒಟ್ಟಾರೆ ಚರ್ಮದ ಆರೋಗ್ಯ ಮತ್ತು ಕಾಂತಿಗೆ ಕೊಡುಗೆ ನೀಡುತ್ತವೆ. ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ನೆನೆಸಿದ ಬಾದಾಮಿಯನ್ನು ಸೇರಿಸುವುದರಿಂದ ನಿಮ್ಮ ಚರ್ಮದ ಸೌಂದರ್ಯ ಹೆಚ್ಚಾಗುತ್ತದೆ.

4) ತ್ವಚೆಯ ಕಿರಿಕಿರಿ ತಡೆಯುತ್ತದೆ: ನೆನೆಸಿದ ಬಾದಾಮಿಯು ಪೋಷಕಾಂಶಗಳನ್ನು ಹೊಂದಿದ್ದು, ಅದು ನಿಮ್ಮ ತ್ವಚೆಯ ಕಿರಿಕಿರಿ ಅಥವಾ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಪ್ರಬಲ ಆಂಟಾಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುವುದರಿಂದ ನಿಮ್ಮ ಚರ್ಮವನ್ನು ವಿಷಕಾರಿ ವಸ್ತುಗಳ ಒತ್ತಡದಿಂದ ರಕ್ಷಿಸುತ್ತದೆ. ಬಾದಾಮಿಯಲ್ಲಿರುವ ಕೊಬ್ಬಿನ ಆಮ್ಲಗಳು ದೇಹದಲ್ಲಿ ತೇವಾಂಶವನ್ನು ಉಳಿಸುತ್ತದೆ. ಇದರಿಂದ ಚರ್ಮವು ಮೃದುವಾಗುತ್ತದೆ. ಉರಿಯೂತವೂ ಕಡಿಮೆಯಾಗುತ್ತದೆ. ಇದು ಸೂಕ್ಷ್ಮ ಪ್ರಕೃತಿಯ ಚರ್ಮ ಇರುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

5) ಮೊಡವೆ ಮತ್ತು ಕಲೆಗಳಿಗೆ ಕಡಿವಾಣ: ನೆನೆಸಿದ ಬಾದಾಮಿಯು ಉರಿಯೂತ ಕಡಿಮೆ ಮಾಡುವುದರಿಂದ ಮೊಡವೆಗಳು ಕಡಿಮೆಯಾಗುತ್ತವೆ. ಮೊಡವೆಗಳ ಮೇಲಿರುವ ಕೆಂಪು ಕಲೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ತ್ವಚೆಯ ದಿನಚರಿಗೆ ನೈಸರ್ಗಿಕ ಮತ್ತು ಪ್ರಯೋಜನಕಾರಿ ಸೇರ್ಪಡೆಯಾಗಿದೆ. ನೆನೆಸಿದ ಬಾದಾಮಿಯ ಪೋಷಣೆಯ ಗುಣಗಳು ಕಾಲಾನಂತರದಲ್ಲಿ ಕಲೆಗಳು ಕ್ರಮೇಣ ಮರೆಯಾಗಲು ಕೊಡುಗೆ ನೀಡುತ್ತವೆ.

6) ಡಾರ್ಕ್ ಸರ್ಕಲ್ ಕಡಿಮೆ ಮಾಡಲು ಸಹಕಾರಿ: ನೆನೆಸಿದ ಬಾದಾಮಿಯ ಪೇಸ್ಟ್ ಅನ್ನು ಕಣ್ಣುಗಳ ಕೆಳಗೆ ಹಚ್ಚುವುದರಿಂದ ಡಾರ್ಕ್ ಸರ್ಕಲ್ ಮತ್ತು ಅತಿಸುಕ್ಕು ಕಡಿಮೆ ಆಗುತ್ತದೆ. ವಿಟಮಿನ್‌ಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ಅಗತ್ಯವಾದ ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವುದರಿಂದ ಬಾದಾಮಿಯು ಪ್ರಯೋಜನಕಾರಿ ಎನಿಸಿದೆ.

ಬಾದಾಮಿಯಲ್ಲಿರುವ ನೈಸರ್ಗಿಕ ತೈಲಗಳು ಕಣ್ಣುಗಳ ಕೆಳಗಿರುವ ಸೂಕ್ಷ್ಮ ಚರ್ಮಕ್ಕೆ ಆರೋಗ್ಯಕರ ರೀತಿಯಲ್ಲಿ ತೇವಾಂಶ ನೀಡುತ್ತದೆ. ಇದು ತ್ವಚೆಯನ್ನು ನಯಗೊಳಿಸುವುದರ ಜೊತೆಗೆ ತಾರುಣ್ಯದ ಕಾಂತಿ ಕೊಡುತ್ತದೆ. ನೆನೆಸಿದ ಬಾದಾಮಿ ಸೇವನೆಯಿಂದ ಹಲವು ರೀತಿಯ ಅದ್ಭುತ ಪ್ರಯೋಜನಗಳಿವೆ. ಬಾದಾಮಿಯನ್ನು ರಾತ್ರಿ ಹೊತ್ತು ನೆನೆಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಅನುಕೂಲಗಳಿವೆ.