Festival Sale Scam: ಇ-ಕಾಮರ್ಸ್‌ ತಾಣಗಳ ಫೆಸ್ಟಿವಲ್‌ ಆಫರ್‌ ಬರೀ ಮೋಸ ಕಣ್ರೀ; ಈ ಪ್ರಾಡಕ್ಟ್‌ನ ಅಸಲಿ ರೇಟ್‌, ಹಬ್ಬದ ಆಫರ್‌ ದರ ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Festival Sale Scam: ಇ-ಕಾಮರ್ಸ್‌ ತಾಣಗಳ ಫೆಸ್ಟಿವಲ್‌ ಆಫರ್‌ ಬರೀ ಮೋಸ ಕಣ್ರೀ; ಈ ಪ್ರಾಡಕ್ಟ್‌ನ ಅಸಲಿ ರೇಟ್‌, ಹಬ್ಬದ ಆಫರ್‌ ದರ ಗಮನಿಸಿ

Festival Sale Scam: ಇ-ಕಾಮರ್ಸ್‌ ತಾಣಗಳ ಫೆಸ್ಟಿವಲ್‌ ಆಫರ್‌ ಬರೀ ಮೋಸ ಕಣ್ರೀ; ಈ ಪ್ರಾಡಕ್ಟ್‌ನ ಅಸಲಿ ರೇಟ್‌, ಹಬ್ಬದ ಆಫರ್‌ ದರ ಗಮನಿಸಿ

Festival Sale a scam?: ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸೇರಿದಂತೆ ಹಲವು ಇಕಾಮರ್ಸ್‌ ತಾಣಗಳು ಹಬ್ಬದ ಆಫರ್‌ ಮಾರಾಟ ನಡೆಸುತ್ತಿವೆ. ಇವು ನಿಜಕ್ಕೂ ಕಡಿಮೆ ದರಕ್ಕೆ ಪ್ರಾಡಕ್ಟ್‌ಗಳನ್ನು ನೀಡುತ್ತವೆಯೇ? ಇವುಗಳ ಮೋಸಕ್ಕೆ ಉದಾಹರಣೆಯಾಗಿ "ಐಕಿಯಾ ಫರ್ನಿಚರ್‌ಗಳ ಅಸಲಿ ದರ ಮತ್ತು ಅಮೆಜಾನ್‌ನಲ್ಲಿ ಹಬ್ಬದ ಆಫರ್‌ ಆಗಿ ಮಾರಾಟವಾಗುತ್ತಿರುವ ದರ ವಿವರ" ಇಲ್ಲಿ ನೀಡಲಾಗಿದೆ.

ಇ-ಕಾಮರ್ಸ್‌ ತಾಣಗಳು ಹಬ್ಬದ ಆಫರ್‌ ಹೀಗಿರುತ್ತವೆ. ಐಕಿಯಾ ಫರ್ನಿಚರ್‌ಗಳ ಅಸಲಿ ದರ ಮತ್ತು ಹಬ್ಬದ ಆಫರ್‌ ಆಗಿ ಇಕಾಮರ್ಸ್‌ ತಾಣದಲ್ಲಿ ಮಾರಾಟವಾಗುವ ದರ ಗಮನಿಸಿ.
ಇ-ಕಾಮರ್ಸ್‌ ತಾಣಗಳು ಹಬ್ಬದ ಆಫರ್‌ ಹೀಗಿರುತ್ತವೆ. ಐಕಿಯಾ ಫರ್ನಿಚರ್‌ಗಳ ಅಸಲಿ ದರ ಮತ್ತು ಹಬ್ಬದ ಆಫರ್‌ ಆಗಿ ಇಕಾಮರ್ಸ್‌ ತಾಣದಲ್ಲಿ ಮಾರಾಟವಾಗುವ ದರ ಗಮನಿಸಿ.

Festival Sale a scam?: ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸೇರಿದಂತೆ ಹಲವು ಇಕಾಮರ್ಸ್‌ ತಾಣಗಳು ಹಬ್ಬದ ಆಫರ್‌ ಆರಂಭಿಸಿವೆ. ಬಿಗ್‌ ಬಿಲಿಯನ್‌ ಫೆಸ್ಟಿವಲ್‌ ಸೇಲ್‌, ಗ್ರೇಟ್‌ ಇಂಡಿಯನ್‌ ಸೇಲ್‌ ಮುಂತಾದ ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಇಕಾಮರ್ಸ್‌ ತಾಣಗಳ ಮೂಲಕ ಪ್ರಾಡಕ್ಟ್‌ಗಳನ್ನು ಖರೀದಿಸಲು ಸಾಕಷ್ಟು ಜನರು ಇದೇ ಸಮಯಕ್ಕೆ ಕಾಯುತ್ತಿದ್ದಾರೆ. ಈ ಸಮಯದಲ್ಲಿ ಕೆಲವು ಪ್ರಾಡಕ್ಟ್‌ಗಳ ಖರೀದಿಗೆ ಅತ್ಯುತ್ತಮ ಡೀಲ್‌ಗಳು ದೊರಕಬಹುದು. ಆದರೆ, ಈ ಇದೇ ಸಮಯದಲ್ಲಿ ಬಹುತೇಕ ಪ್ರಾಡಕ್ಟ್‌ಗಳ ಅಸಲಿ ದರ ಬೇರೆಯೇ ಇರುತ್ತದೆ. ಹಬ್ಬದ ಅವಧಿಯ ಸೇಲ್‌ ಸಮಯದಲ್ಲಿ ಪ್ರಾಡಕ್ಟ್‌ಗಳ ದರವನ್ನು ಎರಡು ಪಟ್ಟು ತೋರಿಸಿ ಆಮೇಲೆ ಡಿಸ್ಕೌಂಟ್‌ ನೀಡಲಾಗುತ್ತದೆ. ಗ್ರಾಹಕರು ಬೇರೆ ದಿನಗಳಲ್ಲಿ ಅದೇ ಪ್ರಾಡಕ್ಟ್‌ ಅನ್ನು ಅದೇ ದರದಲ್ಲಿ ಅಥವಾ ಅದಕ್ಕಿಂತ ಕಡಿಮೆ ದರದಲ್ಲಿಯೂ ಖರೀದಿಸಬಹುದು. ಆದರೆ, ದೊಡ್ಡ ಪ್ರಮಾಣದ ಡಿಸ್ಕೌಂಟ್‌ ಲೇಬಲ್‌ ನೋಡಿ ಮೋಸ ಹೋಗುವವರು ಹೆಚ್ಚು.

ಫೆಸ್ಟಿವಲ್‌ ಆಫರ್‌ ಹೆಸರಲ್ಲಿ ಯಾವ ರೀತಿ ದರ ವ್ಯತ್ಯಾಸ ಇರುತ್ತದೆ? ಜನರಿಗೆ ಹೇಗೆ ಮೋಸ ಮಾಡಲಾಗುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಐಕಿಯಾ ಮತ್ತು ಅಮೆಜಾನ್‌ ನಡುವೆ ಇರುವ ದರ ವ್ಯತ್ಯಾಸ ತಿಳಿಯೋಣ. ಅಂದರೆ, ಐಕಿಯಾ ಪ್ರಾಡಕ್ಟ್‌ಗಳನ್ನು ಬೇರೆ ಇಕಾಮರ್ಸ್‌ ತಾಣದ ಫೆಸ್ಟಿವಲ್‌ ಸೇಲ್‌ನಲ್ಲಿ ಹೇಗೆ ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತದೆ ಎನ್ನುವುದನ್ನು ನೋಡೋಣ. ಇಲ್ಲಿ ಐಕಿಯಾ ಉದಾಹರಣೆಯಾಗಿ ಆಯ್ಕೆ ಮಾಡಿಕೊಂಡಿರುವುದು. ಇದೇ ರೀತಿ ಇತರೆ ಕಂಪನಿಗಳು, ಸಂಸ್ಥೆಗಳ ಪ್ರಾಡಕ್ಟ್‌ಗಳನ್ನು ನೀವು ಹೋಲಿಕೆ ಮಾಡಿ ನೋಡಬಹುದು. ಇಲ್ಲಿ ಐಕಿಯಾ ಚೈರ್‌ ದರ ಮಾತ್ರ ನೋಡಲಾಗಿದೆ. ಇದೇ ರೀತಿ ಇತರೆ ಪ್ರಾಡಕ್ಟ್‌ಗಳ ದರವನ್ನೂ ಹೋಲಿಕೆ ಮಾಡಿ ನೋಡಬಹುದು.

ಆಫೀಸ್‌ ಆರ್ಮ್‌ ಚೈರ್‌ ದರ ವ್ಯತ್ಯಾಸ

ಐಕಿಯಾ ಪೊಂಗ್‌ ಆರ್ಮ್‌ ಚೇರ್‌ ((POÄNG : Armchair, birch veneer/Knisa light beige) ದರವು ಐಕಿಯಾ ವೆಬ್‌ಸೈಟ್‌ನಲ್ಲಿ ಖರೀದಿಸಿದರೆ 7990 ರೂಪಾಯಿ ಇರುತ್ತದೆ. ಆದರೆ, ಅಮೆಜಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಖರೀದಿಸಿದರೆ ಮೂಲ ದರ 20999 ರೂಪಾಯಿ, ಅಮೆಜಾನ್‌ ಹಬ್ಬದ ಆಫರ್‌ ಆಗಿ 16,899 ರೂಪಾಯಿಗೆ ನೀಡಲಾಗುತ್ತದೆ. ನೋಡ್ರಿ, ನಿಜವಾದ ದರಕ್ಕಿಂತ ಎರಡು ಪಟ್ಟು ಹೆಚ್ಚು ದರಕ್ಕೆ ಅಮೆಜಾನ್‌ನಲ್ಲಿ ಮಾರಾಟ ಮಾಡ್ತಾ ಇದ್ದಾರೆ. ಐಕಿಯಾದ ಡೆಲಿವರಿ ಬೆಂಗಳೂರು ವ್ಯಾಪ್ತಿ ಮಾತ್ರ ಇರಬಹುದು. ಆದರೆ, ಅಮೆಜಾನ್‌ ಭಾರತದ್ಯಾಂತ ಡೆಲಿವರಿ ಮಾಡಬಹುದು. ಹೀಗಿದ್ದರೂ, ಡೆಲಿವರಿ ಚಾರ್ಜ್‌ ಅಂತ ಕೆಲವು ನೂರು ರೂಪಾಯಿ ಇರಬಹುದು. ಎಂಟು ಸಾವಿರ ರೂಪಾಯಿಯ ಪ್ರಾಡಕ್ಟ್‌ ಅನ್ನು ಹದಿನಾರು ಸಾವಿರ ರೂಪಾಯಿಗೆ ಮಾರಾಟ ಮಾಡ್ತಾರಂದ್ರೆ ಯೋಚಿಸಿ. ಇದು ಕೇವಲ ಈ ಚೈರ್‌ ಉದಾಹರಣೆಯಲ್ಲ. ಐಕಿಯಾದ ಎಲ್ಲಾ ಪ್ರಾಡಕ್ಟ್‌ಗಳಿಗೂ ಅಮೆಜಾನ್‌ನಲ್ಲಿ ಮಾರಾಟವಾಗುತ್ತಿರುವ ಇತರೆ ಪ್ರಾಡಕ್ಟ್‌ಗಳಿಗೂ ದರದಲ್ಲಿ ಅಜಗಜಾಂತರ ವ್ಯತ್ಯಾಸ ಇರುತ್ತದೆ.

ಐಕಿಯಾ ದರ 7999 ರೂಪಾಯಿ
ಐಕಿಯಾ ದರ 7999 ರೂಪಾಯಿ
ಅದೇ ಚೈರ್‌ಗೆ ಅಮೆಜಾನ್‌ನಲ್ಲಿ ಮೂಲ ದರ 20 ಸಾವಿರಕ್ಕೂ ಹೆಚ್ಚು, ಹಬ್ಬದ ಆಫರ್‌ ಆಗಿ 16,899 ರೂಪಾಯಿ ನೀಡುತ್ತದೆ. ಡಬಲ್‌ ದರಕ್ಕೆ ಮಾರಾಟ ಮಾಡುತ್ತಿದೆ.
ಅದೇ ಚೈರ್‌ಗೆ ಅಮೆಜಾನ್‌ನಲ್ಲಿ ಮೂಲ ದರ 20 ಸಾವಿರಕ್ಕೂ ಹೆಚ್ಚು, ಹಬ್ಬದ ಆಫರ್‌ ಆಗಿ 16,899 ರೂಪಾಯಿ ನೀಡುತ್ತದೆ. ಡಬಲ್‌ ದರಕ್ಕೆ ಮಾರಾಟ ಮಾಡುತ್ತಿದೆ.
ಅಮೆಜಾನ್‌ ದರ ಡಬಲ್‌ ಇರೋದನ್ನು ಗಮನಿಸಿ
ಅಮೆಜಾನ್‌ ದರ ಡಬಲ್‌ ಇರೋದನ್ನು ಗಮನಿಸಿ

ಟೇಬಲ್‌ ದರ ವ್ಯತ್ಯಾಸ

ಇನ್ನೊಂದು ಉದಾಹರಣೆ ಬೇಕಿದ್ದರೆ MICKE ಸ್ಟಡಿ ಟೇಬಲ್‌ ದರ ನೋಡೋಣ. 73x50 cm (28 3/4x19 5/8 ") ಗಾತ್ರದ ಸ್ಟಡಿ ಟೇಬಲ್‌ಗೆ ಐಕಿಯಾ ವೆಬ್‌ಸೈಟ್‌ನಲ್ಲಿ 4999 ರೂಪಾಯಿ ಇದೆ. ಇದೇ ರೀತಿ ಐಕಿಯಾದ ಈ ಪ್ರಾಡಕ್ಟ್‌ಗೆ ಅಮೆಜಾನ್‌ನಲ್ಲಿ 7849 ರೂಪಾಯಿ ಇದೆ. ಮೂಲ ದರ 11455 ರೂಪಾಯಿ ಅಂತೆ, ಅಮೆಜಾನ್‌ ಹಬ್ಬದ ಆಫರ್‌ ಆಗಿ 30 ಪರ್ಸೆಂಟ್‌ ಡಿಸ್ಕೌಂಟ್‌ ಅಂತೆ.

ಅಮೆಜಾನ್‌ನಲ್ಲಿ ಹಬ್ಬದ ಆಫರ್‌ ಆಗಿ ಐಕಿಯಾದ ಈ ಟೇಬಲ್‌ಗೆ 7849 ರೂಪಾಯಿ ಇದೆ.
ಅಮೆಜಾನ್‌ನಲ್ಲಿ ಹಬ್ಬದ ಆಫರ್‌ ಆಗಿ ಐಕಿಯಾದ ಈ ಟೇಬಲ್‌ಗೆ 7849 ರೂಪಾಯಿ ಇದೆ.
ಇದೇ ಟೇಬಲ್‌ಗೆ ಐಕಿಯಾದ ವೆಬ್‌ಸೈಟ್‌ನಲ್ಲಿ  ದರ ಕೇವಲ 4,999 ರೂಪಾಯಿ. ಅಮೆಜಾನ್‌ನಲ್ಲಿ ಇದೇ ಪ್ರಾಡಕ್ಟ್‌ ದರ, ಇದೇ ಹಬ್ಬದ ಅವಧಿಯಲ್ಲಿ 8 ಸಾವಿರ ರೂಪಾಯಿಗೆ ಹತ್ತಿರ.
ಇದೇ ಟೇಬಲ್‌ಗೆ ಐಕಿಯಾದ ವೆಬ್‌ಸೈಟ್‌ನಲ್ಲಿ ದರ ಕೇವಲ 4,999 ರೂಪಾಯಿ. ಅಮೆಜಾನ್‌ನಲ್ಲಿ ಇದೇ ಪ್ರಾಡಕ್ಟ್‌ ದರ, ಇದೇ ಹಬ್ಬದ ಅವಧಿಯಲ್ಲಿ 8 ಸಾವಿರ ರೂಪಾಯಿಗೆ ಹತ್ತಿರ.

 

ಅನ್ನ ಬೆಂದಿದೆಯೇ ಎಂದು ನೋಡಲು ಪಾತ್ರೆಯಲ್ಲಿರುವ ಪೂರ್ತಿ ಅನ್ನ ತಿನ್ನಬೇಕಿಲ್ಲ, ಒಂದೆರಡು ಅಗಳು ಅನ್ನ ತಿಂದರೆ ಸಾಕಂತೆ. ಇವೆರಡು ವೆಬ್‌ಸೈಟ್‌ಗಳ ವಿವಿಧ ಪ್ರಾಡಕ್ಟ್‌ಗಳ ನಡುವಿನ ದರ ವ್ಯತ್ಯಾಸವನ್ನು ಹೋಲಿಕೆ ಮಾಡಿ ನೋಡಬಹುದು.

ಈ ಸಲಹೆ ಗಮನಿಸಿ

  1. ಇ-ಕಾಮರ್ಸ್‌ ಫೆಸ್ಟಿವಲ್‌ ಆಫರ್‌ ಸಮಯದಲ್ಲಿ ಯಾವುದಾದರೂ ಪ್ರಾಡಕ್ಟ್‌ ಖರೀದೀಸಬೇಕೆಂದಿದ್ದರೆ ಆ ಪ್ರಾಡಕ್ಟ್‌ನ ದರವನ್ನು ವಿವಿಧ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಿ.
  2. ಕಡಿಮೆ ದರಕ್ಕೆ ದೊರಕುವ ಪ್ರಾಡಕ್ಟ್‌ನ ರಿವ್ಯೂ ಓದಿ. ಕಡಿಮೆ ಸ್ಟಾರ್‌ ರೇಟಿಂಗ್‌ ದೊರಕಿರುವ ಪ್ರಾಡಕ್ಟ್‌ಗಳಿಗೆ ಹೆಚ್ಚು ಪರ್ಸಂಟೇಜ್‌ ಡಿಸ್ಕೌಂಟ್‌ ಇರುತ್ತದೆ. ಉತ್ತಮ ಪ್ರಾಡಕ್ಟ್‌ಗಳಿಗೆ ಕಡಿಮೆ ಪ್ರಮಾಣದಲ್ಲಿ ಡಿಸ್ಕೌಂಟ್‌ ನೀಡಲಾಗುತ್ತದೆ.
  3. ಆನ್‌ಲೈನ್‌ ಆಫರ್‌, ಹಬ್ಬದ ಆಫರ್ ಇತ್ಯಾದಿಗಳ ಸಮಯದಲ್ಲಿ ತುಸು ಎಚ್ಚರವಿರಲಿ. ನಿಜಕ್ಕೂ ಒಳ್ಳೆಯ ಡೀಲ್‌ ಎಂದೆನಿಸಿದರೆ ಮಾತ್ರ ಖರೀದಿಸಿ.
  4. ಕೆಲವೊಮ್ಮೆ ಆಪಲ್‌ನಂತಹ ಪ್ರಾಡಕ್ಟ್‌ಗಳ ದರ ಇತರೆ ಸಮಯದಲ್ಲಿ ದುಬಾರಿ ಇರುತ್ತದೆ. ಹಬ್ಬದ ಆಫರ್‌ ಸಮಯದಲ್ಲಿ ಕಡಿಮೆ ಇರುತ್ತದೆ. ಇಂತಹ ನಿರ್ದಿಷ್ಟ ಪ್ರಾಡಕ್ಟ್‌ಗಳನ್ನು ಟಾರ್ಗೆಟ್‌ ಮಾಡಿ ಖರೀದಿಸಬಹುದು.
  5. ಪ್ರತಿಯೊಂದು ಕಂಪನಿಯ ಮೂಲ ಉದ್ದೇಶ ಲಾಭ ಮಾಡುವುದು. ಹೀಗಾಗಿ, ಒಂದಕ್ಕೊಂದು ಉಚಿತ, ಹಬ್ಬದ ಆಫರ್‌, ಭರ್ಜರಿ ದರ ಕಡಿತ, ದಾಸ್ತಾನು ಖಾಲಿ ಮಾರಾಟ ಇತ್ಯಾದಿಗಳನ್ನು ಕಣ್ಣುಮುಚ್ಚಿ ನಂಬಬೇಡಿ.

Whats_app_banner