ಸಾಮಾನ್ಯ ಜ್ಞಾನ ರಸಪ್ರಶ್ನೆಗಳು: ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಬೇಕಿದ್ರೆ ಈ 8 ಕ್ವಿಜ್‌ಗೆ ಉತ್ತರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸಾಮಾನ್ಯ ಜ್ಞಾನ ರಸಪ್ರಶ್ನೆಗಳು: ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಬೇಕಿದ್ರೆ ಈ 8 ಕ್ವಿಜ್‌ಗೆ ಉತ್ತರಿಸಿ

ಸಾಮಾನ್ಯ ಜ್ಞಾನ ರಸಪ್ರಶ್ನೆಗಳು: ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಬೇಕಿದ್ರೆ ಈ 8 ಕ್ವಿಜ್‌ಗೆ ಉತ್ತರಿಸಿ

General Knowledge Quiz: ಶಾಲಾ ಪರೀಕ್ಷೆಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಬೇಕಿದ್ದರೆ ವಿವಿಧ ಕ್ವಿಜ್‌ಗಳ ಮೂಲಕ ಆಗಾಗ ತಮ್ಮ ಬುದ್ದಿಗೆ, ಜ್ಞಾನಕ್ಕೆ ಮೇವು ನೀಡುತ್ತಿರಬೇಕು. ಇಲ್ಲಿ 8 ರಸಪ್ರಶ್ನೆಗಳನ್ನು ನೀಡಲಾಗಿದೆ. ಕೊನೆಗೆ ಉತ್ತರ ನೀಡಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರ
ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರ

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಸದಾ ಅಣಕು ಪರೀಕ್ಷೆ, ರಸಪ್ರಶ್ನೆಗಳ ಮೂಲಕ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಯುಪಿಎಸ್‌ಸಿ, ಎಸ್‌ಎಸ್‌ಸಿ, ಬ್ಯಾಂಕ್‌ ಪರೀಕ್ಷೆ, ರೈಲ್ವೆ ನೇಮಕಾತಿಗಳಿಗೆ ಸಿದ್ಧತೆ ನಡೆಸುವವರು ಪ್ರತಿನಿತ್ಯ ಪ್ರಚಲಿತ ವಿದ್ಯಮಾನಗಳ ಮೇಲೆ ಕಣ್ಣಿಟ್ಟಿರಬೇಕು. ಇದೇ ಸಮಯದಲ್ಲಿ ದೇಶ- ಅಂತಾರಾಷ್ಟ್ರೀಯ ಸಂಬಂಧಗಳ ಕುರಿತೂ ಜ್ಞಾನ ಹೊಂದಿರಬೇಕು. ಇತಿಹಾಸ, ವಿಜ್ಞಾನ, ರಾಜಕೀಯ, ಸಾಂಸ್ಕೃತಿಕ ಸಂಗತಿಗಳ ಕುರಿತು ಮಾಹಿತಿ ಹೊಂದಿರಬೇಕು. ನಿಮ್ಮ ಕಲಿಕಾ ಕೌಶಲ ಹೆಚ್ಚಿಸಲ ನೆರವಾಗುವ ಉದ್ದೇಶದಿಂದ ಇಲ್ಲಿ ಎಂಟು ಕ್ವಿಜ್‌ಗಳನ್ನು ನೀಡಲಾಗಿದೆ. ಈ ರಸಪ್ರಶ್ನೆಗಳಿಗೆ ಉತ್ತರ ಕೊನೆಗೆ ನೀಡಲಾಗಿದೆ. ಮೊದಲು ಉತ್ತರ ನೋಡದೆ ನೀವೇ ಯೋಚಿಸಿ ಉತ್ತರ ಕಂಡುಹಿಡಿಯಿರಿ.

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಕ್ವಿಜ್‌

1. 16 ನೇ ಬ್ರಿಕ್ಸ್ ಶೃಂಗಸಭೆಯು ಎಲ್ಲಿ ನಡೆಯಲಿದೆ?

ಎ) ರಷ್ಯಾ

ಬಿ) ಚೀನಾ

ಸಿ) ಶ್ರೀಲಂಕಾ

2. ಸ್ವಾವಲಂಬನ್ ಶಕ್ತಿ (Swavlamban Shakti exercise) ಕಸರತ್ತು ಯಾರು ನಡೆಸುತ್ತಾರೆ?

ವ್ಯಾಯಾಮವನ್ನು ಯಾವುದು

ಎ) ಭಾರತೀಯ ವಾಯುಪಡೆ

ಬಿ) ಭಾರತೀಯ ನೌಕಾಪಡೆ

ಸಿ) ಭಾರತೀಯ ಸೇನೆ

3. ಯಾವ ರಾಷ್ಟ್ರಕ್ಕೆ ಜಗತ್ತಿನ ಫ್ರೀಸ್ಟ್ ಎಕಾನಮಿ ಟೈಟಲ್‌ ನೀಡಲಾಗಿದೆ?

ಎ) ಸಿಂಗಾಪುರ

ಬಿ) ಹಾಂಗ್ ಕಾಂಗ್

ಸಿ) ಬೀಜಿಂಗ್

4. ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಯಾವುದಕ್ಕೆ ಪ್ರಸಿದ್ಧವಾಗಿದೆ?

ಎ) ಕಾಡೆಮ್ಮೆ

ಬಿ) ಭಾರತೀಯ ಒಂದು ಕೊಂಬಿನ ಘೇಂಡಾಮೃಗ

ಸಿ) ನೀಲಗಿರಿ ತಹರ್

5. ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ ಅಸೆಂಬ್ಲಿಯ ಏಳನೇ ಅಧಿವೇಶನ ಎಲ್ಲಿ ನಡೆಯಲಿದೆ?

ಎ) ನವದೆಹಲಿ

ಬಿ) ಚೆನ್ನೈ

ಸಿ) ಹೈದರಾಬಾದ್

6. ಜಾಗತಿಕ ಹಸಿವಿನ ಸೂಚ್ಯಂಕ 2024ರಲ್ಲಿ ಭಾರತ ಯಾವ ರಾಂಕ್‌ ಪಡೆದಿದೆ?

ಎ) 99

ಬಿ) 110

ಸಿ) 105

7. ಎಸ್‌. ಪರಮೇಶ್‌ ಪ್ರಧಾನ ನಿರ್ದೇಶಕರಾಗಿ ನೇಮಕಗೊಂಡಿರುವುದು ಯಾವುದಕ್ಕೆ?

ಎ. ಭಾರತೀಯ ಸೇನೆ

ಬಿ. ಭಾರತೀಯ ಕರಾವಳಿ ಪಡೆ

8. ಇಟಲಿ ದೇಶದ ಪ್ರಧಾನ ಮಂತ್ರಿ ಯಾರು?

ಎ) ಎಮ್ಯಾನುಯೆಲ್ ಮ್ಯಾಕ್ರನ್

ಬಿ) ಮೈಕೆಲ್ ಬಾರ್ನಿಯರ್

ಸಿ) ಜಾರ್ಜಿಯಾ ಮೆಲೋನಿ

ಈ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿದ್ದೀರಾ? ಹಾಗಾದರೆ, ಈ ಕೆಳಗೆ ನೀಡಲಾದ ಸರಿ ಉತ್ತರಗಳ ಜತೆ ನಿಮ್ಮ ಉತ್ತರವನ್ನು ತಾಳೆ ಮಾಡಿ.

ಸರಿ ಉತ್ತರಗಳು

1- ಎ: ರಷ್ಯಾ

2-ಸಿ: ಭಾರತೀಯ ಸೇನೆ

3- ಬಿ: ಹಾಂಗ್ ಕಾಂಗ್

4-ಬಿ: ಒಂದು ಕೊಂಬಿನ ಘೇಂಡಾಮೃಗ

5-ಎ: ನವದೆಹಲಿ

6-ಸಿ: 105ನೇ ಸ್ಥಾನ ಪಡೆದಿದೆ.

7-ಬಿ: ಭಾರತೀಯ ಕರಾವಳಿ ಪಡೆ

8-ಸಿ: ಜಾರ್ಜಿಯಾ ಮೆಲೋನಿ

Whats_app_banner